ಕೀರ್ತನೆ 1:1-3
1. ನಾನು ಆಶೀರ್ವಾದದ ಮನುಷ್ಯ
ಯಾವನು ದುಷ್ಟರ ಆಲೋಚನೆಯಂತೆ ನಡೆಯದೆ
ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ
ಧರ್ಮನಿಂದಕರೊಡನೆ ಕೂತುಕೊಳ್ಳದೆ
2 ನಾನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದ ಪಡುವವನಾಗಿ
ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ನಾನು
ಎಷ್ಟೋ ಧನ್ಯನು.
3 ನಾನು ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು.
ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ.
ಅದರಂತೆ ನನ್ನ ಕಾರ್ಯವೆಲ್ಲವೂ ಸಫಲವಾಗುವದು.
ಗಮನಿಸಿ: ನೀವು ಮಹಿಳೆಯಾಗಿದ್ದರೆ ವಾಕ್ಯಗಳನ್ನು ಬದಲಿಸಿ
Join our WhatsApp Channel