ಕೀರ್ತನೆ 23:1-6
1 ಯೆಹೋವನು ನನ್ನ ಕುರುಬನು;
ನಾನು ಕೊರತೆಪಡೆನು.
2 ಅತನು ನನ್ನನ್ನು ಹಸಿರು ಹುಲ್ಲುಗಾವಲುಗಳಲ್ಲಿ ತಂಗಿಸುತ್ತಾನೆ;
ಅತನು ನನ್ನನ್ನು ವಿಶ್ರಾಂತಿಕರವಾದ ನೀರಿನ ಬಳಿಗೆ ಬರಮಾಡುತ್ತಾನೆ.
3 ಆತನು ನನ್ನ ಪ್ರಾಣವನ್ನು ಉಜ್ಜೀವಿಸಮಾಡುತ್ತಾನೆ;
ತನ್ನ ಹೆಸರಿಗೆ ತಕ್ಕಂತೆ ಆತನು ನನ್ನನ್ನು ನೀತಿಯ ಮಾರ್ಗಗಳಲ್ಲಿ ನಡೆಸುತ್ತಾನೆ.
4 ಹೌದು, ನಾನು ಕಾರ್ಗತ್ತಲಿನ ನೆರಳಿನ ಕಣಿವೆಯಲ್ಲಿ ನಡೆದರೂ,
ನಾನು ಕೆಟ್ಟದ್ದಕ್ಕೆ ಹೆದರುವುದಿಲ್ಲ;
ಯಾಕಂದರೆ ನೀನು ನನ್ನೊಂದಿಗಿರುವೆ;
ನಿನ್ನ ದೊಣ್ಣೆ ಮತ್ತು ನಿನ್ನ ಕೋಲು, ಅವು ನನ್ನನ್ನು ದೈರ್ಯಗೊಳಿಸುತ್ತವೆ.
5 ನನ್ನ ಶತ್ರುಗಳ ಸಮ್ಮುಖದಲ್ಲಿ ನೀನು ನನಗೋಸ್ಕರ ಔತಣವನ್ನು ಸಿದ್ಧಪಡಿಸುತ್ತೀ;
ನೀನು ನನ್ನ ತಲೆಯನ್ನು ಎಣ್ಣೆಯಿಂದ ಹಚ್ಚಿಸುತ್ತಿ:
ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ.
6 ಖಂಡಿತವಾಗಿ ನನ್ನ ಜೀವಮಾನದಲ್ಲೇಲ್ಲಾ ಶುಭವು ಕೃಪೆಯೂ ನನ್ನನ್ನು ಹಿಂಬಾಲಿಸುತ್ತವೆ;
ಮತ್ತು ನಾನು ಸದಾಕಾಲವೂ ಯೆಹೋವನ ಮಂದಿರದಲ್ಲಿ ಯಾವಾಗಲೂ ವಾಸಿಸುವೆನು.
Join our WhatsApp Channel