1. ತಂದೆಯೇ, ನಾನು (ನನ್ನ ಕುಟುಂಬ) ಪರಾತ್ಪರನ ಮರೆಹೊಕ್ಕಿರುವವನಾಗಿ ಆತನ ಆಶ್ರಯದಲ್ಲಿ ಸುರಕ್ಷಿತನಾಗಿರುವೆನು ಎಂದು ನಾನು ನಿಮಗೆ ಧನ್ಯವಾದಗಳನ್ನು ಹೇಳುತ್ತೇನೆ.
2. ನಾನು ಕರ್ತನ ಕುರಿತು ಧೈರ್ಯದಿಂದ ಹೇಳುತ್ತೇನೆ, “ಅತನು ನನ್ನ ಶರಣನು ಮತ್ತು ನನ್ನ ದುರ್ಗವು; ನನ್ನ ದೇವರೇ, ನಾನು ಭಾರವಸೇವಿಟ್ಟಿರುವ ದೇವರು ಎಂದು ನಂಬುತ್ತೇನೆ. ”
3. ನಿಶ್ಚಯವಾಗಿಯೂ ಆತನು ನನ್ನನ್ನು ಬೇಟೆಗಾರನ ಬಲೆಯಿಂದ ಮತ್ತು ಮರಣಕರವಾದ ವ್ಯಾಧಿಯಿಂದ ತಪ್ಪಿಸುವನು.
4. ಆತನು ತನ್ನ ರೆಕ್ಕೆಗಳಿಂದ ನನ್ನನ್ನು ಹೊದಿಸುವನು, ಮತ್ತು ಆತನ ರೆಕ್ಕೆಗಳ ಕೆಳಗೆ ನಾನು ಆಶ್ರಯ ಪಡೆಯುವೆನು; ಅತನ ಸತ್ಯವು ನನ್ನ ಗುರಾಣಿ ಮತ್ತು ಖೇಡ್ಯವೂ ಆಗಿದೆ.
5-6. ನಾನು ರಾತ್ರಿಯಲ್ಲಿ ಭಯಪಡುವದಿಲ್ಲ, ಅಥವಾ ಹಗಲಿನಲ್ಲಿ ಹಾರುವ ಬಾಣಕ್ಕೆ ಅಥವಾ ಕತ್ತಲೆಯಲ್ಲಿ ಸಂಚರಿಸುವ ವಿಪತ್ತಿಗೂ ಅಥವಾ ಮಧ್ಯಾಹ್ನದ ಸಮಯದಲ್ಲಿ ನಾಶಪಡಿಸುವ ವಿನಾಶಕ್ಕೆ ಹೆದರುವುದಿಲ್ಲ.
7-8. ನನ್ನ ಬದಿಯಲ್ಲಿ ಸಾವಿರವೂ ಜನರು ನನ್ನ ಬಲಗಡೆಯಲ್ಲಿ ಹತ್ತು ಸಾವಿರವೂ ಜನರು ಬೀಳಬಹುದು; ಆದರೆ ಅದು ನನ್ನ ಹತ್ತಿರ ಬರುವುದಿಲ್ಲ. ನನ್ನ ಕಣ್ಣುಗಳಿಂದ ಮಾತ್ರ ನಾನು ನೋಡುತ್ತೇನೆ ಮತ್ತು ದುಷ್ಟರ ಪ್ರತಿಫಲವನ್ನು ನೋಡುತ್ತೇನೆ.
9. ಯಾಕಂದರೆ ನಾನು ನನ್ನ ಆಶ್ರಯವಾಗಿರುವ ಕರ್ತನನ್ನು ನನ್ನ ವಾಸಸ್ಥಾನವಾಗಿ ಮಾಡಿದ್ದೇನೆ.
10. ಯಾವ ಕೇಡೂ ನನಗೆ ಆಗುವದಿಲ್ಲ;
11. ಯಾಕಂದರೆ ಆತನು ನನ್ನ ಎಲ್ಲಾ ಮಾರ್ಗಗಳಲ್ಲಿ ನನ್ನನ್ನು ಕಾಪಾಡುವಂತೆ ತನ್ನ ದೂತರಿಗೆ ನನ್ನ ಮೇಲೆ ಆಜ್ಞಾಪಿಸುತ್ತಾನೆ.
12. ನಾನು ನನ್ನ ಪಾದವನ್ನು ಕಲ್ಲಿಗೆ ಹೊಡೆಯದಂತೆ ಅವರು ತಮ್ಮ ಕೈಯಲ್ಲಿ ನನ್ನನ್ನು ಎತ್ತಿಕೊಳ್ಳುವರು.
13. ನಾನು ಸಿಂಹ ಮತ್ತು ಸರ್ಪಗಳ ಮೇಲೆ ನೆಡೆಯುವೇನು, ಪ್ರಾಯದ ಸಿಂಹ ಮತ್ತು ಸರ್ಪವನ್ನು ತುಳಿಯುವೆನು.
14. ನಾನು ಆತನ ಮೇಲೆ ನನ್ನ ಪ್ರೀತಿಯನ್ನು ಇಟ್ಟಿರುವುದರಿಂದ ಆತನು ನನ್ನನ್ನು ಬಿಡಿಸುವನು; ಆತನು ನನ್ನನ್ನು ಉನ್ನತ ಸ್ಥಾನಕ್ಕೇರಿಸುವನು, ಏಕೆಂದರೆ ನಾನು ಆತನ ಹೆಸರನ್ನು ತಿಳಿದಿದ್ದೇನೆ.
15. ನಾನು ಆತನನ್ನು ಕರೆಯುವೆನು, ಆತನು ನನಗೆ ಉತ್ತರ ಕೊಡುವನು; ಅತನು ತೊಂದರೆಯಲ್ಲಿ ನನ್ನೊಂದಿಗೆ ಇರುವನು; ಆತನು ನನ್ನನ್ನು ಬಿಡಿಸಿ ಗೌರವಿಸುವನು. ದೀರ್ಘಾಯುಷ್ಯದಿಂದ ಅತನು ನನ್ನನ್ನು ತೃಪ್ತಿಪಡಿಸುತ್ತಾನೆ ಮತ್ತು ಅತನ ವಿಷಶವಾದ ರಕ್ಷಣೆಯನ್ನು ನನಗೆ ತೋರಿಸುತ್ತಾನೆ.
Join our WhatsApp Channel