english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. Moving from Grief to Grace
ಅನುದಿನದ ಮನ್ನಾ

Moving from Grief to Grace

Tuesday, 6th of June 2023
0 0 35
ನನ್ನ ತಾಯಿ ತೀರಿಕೊಂಡಾಗ, ನಾನು ಅವರಿಗೆ ಸರಿಯಾದ ರೀತಿಯಲ್ಲಿ ವಿದಾಯ ಹೇಳಲು ಸಹ ಅವಕಾಶ ಸಿಗಲಿಲ್ಲ ಮತ್ತು ಅದು ನನ್ನ ದುಃಖವನ್ನು ಇನ್ನಷ್ಟು ಅಸಹನೀಯವಾಗಿಸಿತು. ನನ್ನ ತಾಯಿಯ ಪ್ರಾರ್ಥನೆಗಳು ದೊಡ್ಡ ಪಾತ್ರವನ್ನು ವಹಿಸಿದ್ದ ನನ್ನ ಪ್ರಪಂಚವು ಒಂದು ಕ್ಷಣ ಅಲುಗಾಡಿತು. ಅವರ ಕೃಪೆಯ ಮೂಲಕವೇ ನಾನು ಇದನ್ನು ಸಾಧಿಸಿದ್ದೆ. ನಾನು ವಾಕ್ಯವನ್ನು ಧ್ಯಾನಿಸುತ್ತಿರುವಾಗ, ನನ್ನಂತಹ ಇನ್ನೂ ಅನೇಕರು ಅವರಿಗೆ ಅತೀ ಪ್ರಿಯರಾದವರನ್ನು ಕಳೆದುಕೊಂಡ ದುಃಖವನ್ನು ಜಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪವಿತ್ರಾತ್ಮನು ಹೇಳಿದನು. 

ಅನೇಕ ಬಾರಿ ವ್ಯಕ್ತಿಯ ಆರೋಗ್ಯವು ಕ್ರಮೇಣ ಕ್ಷೀಣಿಸುತ್ತಿರುವುದನ್ನು ನಾವು ನೋಡುವಾಗ, ವೈದ್ಯರಿಂದ ಮಾರಕ ಕಾಯಿಲೆಯ ಸುದ್ದಿಯನ್ನು ಕೇಳುವಾಗ ದುಃಖವು ಪ್ರಾರಂಭವಾಗುತ್ತದೆ. ನಮಗೆ ಅರಿವಿಲ್ಲದೆಯೂ ಸಹ, ಆ ಕ್ಷಣಗಳಲ್ಲಿ ವಿದಾಯ ಹೇಳುತ್ತೇವೆ ಮತ್ತು ನಂತರ ನಾವು ಅವರನ್ನು ಮತ್ತೆ ನೋಡಿದಾಗ, ನಾವು ಮತ್ತೊಮ್ಮೆ ವಿದಾಯ ಹೇಳುತ್ತೇವೆ. ಇದು ನಿಜವಾಗಿಯೂ ನೋವಿನ ಸಂಗತಿಯೇ!

ಕರ್ತನಾದ ಯೇಸು ಹೇಳಿದನು, “ದುಃಖಿಸುವವರು ಧನ್ಯರು: ಏಕೆಂದರೆ ಅವರಿಗೆ ಆದರಣೆ ದೊರೆಯುತ್ತದೆ " ಎಂದು . ಮತ್ತಾಯ 5:4 (KJV)

ದುಃಖಿಸುತ್ತಿರುವವರ ಕುರಿತು ಬೈಬಲ್ ಹಲವಾರು ಉಲ್ಲೇಖಗಳನ್ನು ಮಾಡುತ್ತದೆ. ಯೆರೆಮೀಯ 31:13 ರಲ್ಲಿ, ಕರ್ತನು ಪ್ರವಾದಿಯ ಮೂಲಕ ಹೀಗೆ ಹೇಳುತ್ತಾನೆ, 
"ಆಗ ಕನ್ನಿಕೆಯರೂ, ಪ್ರಾಯದವರೂ, ವೃದ್ಧರ ಸಹಿತವಾಗಿ ನಾಟ್ಯವಾಡುತ್ತಾ ಹರ್ಷಿಸುವರು. ಏಕೆಂದರೆ ನಾನು ಅವರ ದುಃಖವನ್ನು ಆನಂದಕ್ಕೆ ಬದಲಾಯಿಸುವೆನು. ನಾನು ಅವರನ್ನು ಆಧರಿಸಿ, ಅವರ ದುಃಖದಿಂದ ಬಿಡಿಸಿ, ಅವರಿಗೆ ಸಂತೋಷವನ್ನುಂಟು ಮಾಡುವೆನು." ಎಂದು.

ಈ ವಚನದಿಂದ ನಾವು ದುಃಖಿಸುವವರನ್ನು ಸಮಾಧಾನಪಡಿಸುವಂತದ್ದು ದೇವರ ಚಿತ್ತವಾಗಿದೆ ಎಂಬುದನ್ನು ನೋಡುತ್ತೇವೆ; ಆದ್ದರಿಂದ, ದುಃಖದ ನಂತರ ಸಾಂತ್ವನ ಬರುತ್ತದೆ ಎಂದು ನಾವು ನಿರ್ಧರಿಸಬಹುದು. ಸಮಾಧಾನವು ಎಂದಿಗೂ ಬರದಿದ್ದರೆ, ಏನೋ ತಪ್ಪಾಗಿರುತ್ತದೆ.

"ಆತನು ತಿರಸ್ಕೃತನೂ ಮಾನವಕುಲದಿಂದ ನಿರಾಕರಿಸಲಾದವನೂ, ದುಃಖಿತ ಮನುಷ್ಯನೂ, ನೋವನ್ನು ಅನುಭವಿಸಿದವನೂ ಆಗಿದ್ದನು. ನಾವು ನಮ್ಮ ಮುಖಗಳನ್ನು ಆತನಿಂದ ಮರೆಮಾಡಿಕೊಂಡೆವು. ಆತನು ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು. ನಾವು ಆತನನ್ನು ಅತ್ಯಲ್ಪವಾಗಿ ಎಣಿಸಿದೆವು." ಯೆಶಾಯ 53:3 

ಯೇಸು "ದುಃಖಿತ ಮನುಷ್ಯ " ಎಂದು ಹೇಳುವ ಯೆಶಾಯ 53:3ರ ವಾಕ್ಯದಿಂದ ನನಗೆ ಇತ್ತೀಚೆಗೆ ಆಘಾತವಾಯಿತು. ನಿಮ್ಮ ದುಃಖದ ಸಮಯದಲ್ಲಿ ನಿಮ್ಮನ್ನು ಅರ್ಥಮಾಡಿಕೊಳ್ಳಬಲ್ಲ ಯಾರಾದರೂ ಇದ್ದರೆ, ಅದು ಕರ್ತನಾದ ಯೇಸು ಮಾತ್ರವೇ ಆಗಿರುತ್ತಾನೆ. ಏಕೆಂದರೆ; ಆತನು ನಮಗಾಗಿ ಇದನ್ನೆಲ್ಲ ಈಗಾಗಲೇ ಅನುಭವಿಸಿದ್ದಾನೆ.

ನಾವು ದುಃಖದ ಸಮಯವನ್ನು ಹಾದುಹೋಗುತ್ತಿರುವಾಗ, ನಾವು ಇನ್ನೊಂದು ವಿಷಯದ ಕುರಿತು ಜಾಗರೂಕರಾಗಿರಬೇಕು. ನಮ್ಮ ಆತ್ಮೀಕ ಅಭ್ಯಾಸಗಳನ್ನು ನಿರ್ಲಕ್ಷಿಸಬಾರದು. ದುಃಖದ ಕ್ಷಣಗಳಲ್ಲಿ, ಪ್ರಾರ್ಥನೆಯು ಅರ್ಥಹೀನವೆಂದು ತೋರುತ್ತದೆ. ಬೈಬಲ್ ಓದಲು ತುಂಬಾ ದುರ್ಬಲವೆನಿಸಿ  ಭಾವನಾತ್ಮಕವಾಗಿ ವಿಚಲಿತರಾಗಬಹುದು. ಆದರೆ ದೇವರು ನಿಮ್ಮನ್ನು ಪ್ರಾರ್ಥನೆ ಮಾಡಬೇಕೆಂದು ವಾಕ್ಯ ಧ್ಯಾನಿಸಬೇಕೆಂದು ಮತ್ತು ಆರಾಧಿಸಬೇಕೆಂದು ಕರೆದಿದ್ದಾನೆಂದು ಅರ್ಥಮಾಡಿಕೊಳ್ಳಿರಿ.

ಏಕೆಂದರೆ ಈ ವಿಷಯಗಳು ನಿಮ್ಮನ್ನು ಪ್ರಬುದ್ಧಗೊಳಿಸುತ್ತವೆ ಮತ್ತು ಒಳಗಿನಿಂದ ಬಲಪಡಿಸುತ್ತವೆ. ಅವು ನಿಮ್ಮನ್ನು ದೇವರ ಮಗುವಿನ ನಿಮ್ಮ ಗುರುತಿಗೆ ಮತ್ತೆ ಸಂಪರ್ಕ ಏರ್ಪಡಿಸಿ ನೀವು ಸಹ ಶಾಶ್ವತತೆಯ ಮಡಿಲಲ್ಲಿ ಸಮಯ ಕಳೆಯುವ ಸಮಯ ಬರುತ್ತಿದೆ ಎಂಬುದನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. 
ಪ್ರಾರ್ಥನೆಗಳು
ತಂದೆಯೇ, ನಮ್ಮ ಕಣ್ಣೀರನ್ನೆಲ್ಲ ನೀವು ಒರೆಸಿಬಿಡುವಿರಿ ಮತ್ತು ಇನ್ನು ಮುಂದೆ ಮರಣವಾಗಲೀ ಅಥವಾ ದುಃಖವಾಗಲೀ ಅಥವಾ ಕಣ್ಣೀರಾಗಲೀ ಅಥವಾ ನೋವಾಗಲೀ ಇರುವುದಿಲ್ಲ ಎಂದು ಹೇಳುವ ನಿಮ್ಮ ವಾಗ್ದಾನಕ್ಕಾಗಿ ನಾನು ನಿಮಗೆ ಯೇಸುನಾಮದಲ್ಲಿ ಸ್ತೋತ್ರ ಸಲ್ಲಿಸುತ್ತೇನೆ. 


Join our WhatsApp Channel


Most Read
● ದೀನತೆ ಎಂಬುದು ಬಲಹೀನತೆ ಎನ್ನುವುದಕ್ಕೆ ಸಮನಾದುದಲ್ಲ.
● ಆರಾಧನೆಯ ಪರಿಮಳ
● ಆತನ ಬಲದ ಉದ್ದೇಶ.
● ಅಪನಂಬಿಕೆ
● ಪಂಚಶತ್ತಾಮ ದಿನದ ಉದ್ದೇಶ
● ಕೊಡುವ ಕೃಪೆ - 1
● ನಿಮ್ಮ ಹೃದಯವನ್ನು ಕಾಪಾಡಿಕೊಳ್ಳುವುದು ಹೇಗೆ?
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್