ಅನುದಿನದ ಮನ್ನಾ
1
0
99
ನಿಮ್ಮ ಹೃದಯವನ್ನು ಪರೀಕ್ಷಿಸಿಕೊಳ್ಳಿ
Sunday, 27th of July 2025
Categories :
ಗುಣ(character)
ಮಾನವ ಹೃದಯ (Human Heart)
ನಿಮ್ಮ ಜೀವನದಲ್ಲಿ ಬದಲಾವಣೆ ತರಲು ನೀವು ನಿರ್ಧಾರ ತೆಗೆದುಕೊಂಡಿರುವುದು ಹಿಂದುಳಿದಿದೆಯೇ? ಇದು ನಿಜವಾಗಿಯೂ ತಾವು ಉತ್ತಮವಾಗಿ ಬದಲಾಗಬೇಕೆಂದು ಆಸೆ ಪಡುವ ಅನೇಕರಿಗೆ ಬಹಳಷ್ಟು ನಿರಾಶೆಯನ್ನು ಉಂಟುಮಾಡುತ್ತದೆ. ಈ ನಿಶ್ಚಲತೆಗೆ ಒಂದು ಕಾರಣವೆಂದರೆ, ಅನೇಕರು ಬಾಹ್ಯ ಬದಲಾವಣೆಗಳನ್ನು ಮಾಡುವತ್ತ ಮಾತ್ರ ಗಮನಹರಿಸುತ್ತಾರೆ.
ನೀವು ಶಾಶ್ವತ ಬದಲಾವಣೆಯನ್ನು ಬಯಸಿದರೆ, ನೀವು ಆಂತರಿಕವಾಗಿ ಕ್ರಮ ತೆಗೆದುಕೊಳ್ಳಬೇಕು - ನಿಮ್ಮ ಹೃದಯದ ವಿಚಾರವಾಗಿ ಕ್ರಮಕೈಗೊಳ್ಳ ಬೇಕು.
ನಂತರ ಆತನು(ಯೇಸು) ಹೀಗೆ ಹೇಳಿದನು: “ಇಗೋ, ಬಿತ್ತುವವನು ಬಿತ್ತಲು ಹೊರಟನು. ಅವನು ಬಿತ್ತಿದಾಗ, ಕೆಲವು ಬೀಜಗಳು ದಾರಿಯ ಪಕ್ಕದಲ್ಲಿ ಬಿದ್ದವು…. ಕೆಲವು ಕಲ್ಲಿನ ಸ್ಥಳಗಳಲ್ಲಿ ಬಿದ್ದವು…. ಕೆಲವು ಮುಳ್ಳುಗಳ ನಡುವೆ ಬಿದ್ದವು…. ಆದರೆ ಇನ್ನು ಕೆಲವು ಒಳ್ಳೆಯ ನೆಲದ ಮೇಲೆ ಬಿದ್ದವು. ಕಿವಿಯುಳ್ಳ ವನು ಕೇಳಲಿ!” (ಮತ್ತಾಯ 13:3-9)
ಕರ್ತನಾದ ಯೇಸು ಮಾನವ ಹೃದಯವನ್ನು ಮಣ್ಣು ಎಂದು ಹೇಳಿದನು. ಮೇಲಿನ ವಾಕ್ಯದಲ್ಲಿ, ಆತನು ನಾಲ್ಕು ವಿಧಗಳನ್ನು ಗುರುತಿಸಿ ಹೇಳಿದನು.
1. ದಾರಿಯ ಮಗ್ಗಲು
2. ಬಂಡೆಯ ಸ್ಥಳಗಳು
3. ಮುಳ್ಳುಗಳು
4. ಒಳ್ಳೆಯ ನೆಲ
ಈ ನಾಲ್ಕು ವಿಧದ ಮಣ್ಣು ಮಾನವ ಹೃದಯದ ನಾಲ್ಕು ಸ್ಥಿತಿಗಳನ್ನು ಸೂಚಿಸುತ್ತದೆ. ನಾವು ಅರ್ಥಮಾಡಿಕೊಳ್ಳಬೇಕಾದ ಮೊದಲ ತತ್ವವೆಂದರೆ ಮಣ್ಣಿನಲ್ಲಿ ಏನು ಬಿತ್ತಿದರೂ ಅದು ಒಂದು ನಿರ್ದಿಷ್ಟ ಮಟ್ಟಿಗೆ ಬೆಳೆಯುತ್ತದೆ.
ಮತ್ತು ಮಾನವ ಹೃದಯದ ವಿಷಯದಲ್ಲೂ ಅದು ಹಾಗೆಯೇ - ನಿಮ್ಮ ಹೃದಯ ಏನು ಬಿತ್ತಿದರೂ ಅದು ಬೆಳೆಯುತ್ತದೆ. ನೀವು ಅಶ್ಲೀಲತೆ ಮತ್ತು ಇತರ ಅಶುದ್ಧ ವಸ್ತುಗಳನ್ನು ಬಿತ್ತಿದರೆ, ಅವೇ ಬೆಳೆಯುತ್ತವೆ. ನೀವು ನಕಾರಾತ್ಮಕತೆ ಮತ್ತು ಕಹಿಯನ್ನು ಬಿತ್ತಿದರೆ, ಅದುವೇ ನಿಮಗೆ ಸಿಗುವ ಬೆಳೆಯಗಿರುತ್ತದೆ.
ಎರಡನೆಯದಾಗಿ, ನಾವು ನಮ್ಮ ಹೃದಯಗಳ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ನಾವು ಕರ್ತನಿಂದ ದೂರ ಹೋಗುತ್ತಿದ್ದೇವೆ ಎಂದು ತೋರಿದಾಗ, ನೆಟ್ಟ ಒಳ್ಳೆಯ ಬೀಜ ವ್ಯರ್ಥವಾಗದಂತೆ ನೋಡಿಕೊಳ್ಳಲು ನಮ್ಮ ಹೃದಯದ ಪರಿಸ್ಥಿತಿಗಳನ್ನು ನಿಭಾಯಿಸಲು ನಾವು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಇಂದು,"ನಾನು ಯಾವ ರೀತಿಯ ಮಣ್ಣಾಗಿದ್ದೇನೆ?"ಎನ್ನುವ ಈ ಪ್ರಶ್ನೆಗೆ ನಿಮಗಾಗಿ ನಿಮ್ಮನ್ನು ಹೊರತುಪಡಿಸಿ- ಬೇರೆ ಯಾರೂ ಉತ್ತರಿಸಲು ಸಾಧ್ಯವಿಲ್ಲ !
ಪ್ರಾರ್ಥನೆಗಳು
ತಂದೆಯೇ, ಯೇಸುವಿನ ಹೆಸರಿನಲ್ಲಿ, ನನ್ನ ಆತ್ಮದಲ್ಲಿ ಸರಿಯಾದ ವಿಷಯಗಳನ್ನು ಬಿತ್ತಲು ನನಗೆ ವಿವೇಚನೆಯನ್ನು ಕೊಡು. ತಂದೆಯೇ, ನಿಮ್ಮ ವಾಕ್ಯವು ಹೇಳುತ್ತದೆ, "ಯೆಹೋವನ ಆತ್ಮವು ಅತಿರೇಂದ್ರೀಯ ವಿಷಯಗಳನ್ನು ಪರಿಶೋಧಿಸುತ್ತದೆ"ಎಂದು. ಆದರಿಂದ ನನ್ನ ಹೃದಯವನ್ನು ಪರಿಶೋಧಿಸು ಮತ್ತು ನಿಮ್ಮನ್ನು ಅಸಮಾಧಾನಗೊಳಿಸುವ ಎಲ್ಲವನ್ನೂ ಯೇಸುನಾಮದಲ್ಲಿ ಬೇರುಸಹಿತ ಕಿತ್ತುಹಾಕಿ. ಆಮೆನ್.
Join our WhatsApp Channel

Most Read
● ದಿನ 06:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● "ಆತನಿಗೆ ಎಲ್ಲವನ್ನೂ ತಿಳಿಸಿರಿ"
● ಕೃಪೆಯ ಉಡುಗೊರೆ
● ಈ ಒಂದು ಕೆಲಸ ಮಾಡಿ
● ಶುದ್ಧೀಕರಣದ ತೈಲ
● ಒತ್ತಡವನ್ನು ಓಡಿಸಲು ಇರುವ ಮೂರು ಶಕ್ತಿಯುತ ಮಾರ್ಗಗಳು
● ಹೊಸ ಒಡಂಬಡಿಕೆಯ ನಡೆದಾಡುವ ದೇವಾಲಯ.
ಅನಿಸಿಕೆಗಳು