ಅನುದಿನದ ಮನ್ನಾ
1
1
62
ಆತ್ಮನ ಫಲವನ್ನು ಹೇಗೆ ಬೆಳೆಸಿಕೊಳ್ಳುವುದು -2
Monday, 15th of September 2025
Categories :
ಆತ್ಮನ ಫಲ (Fruit of the Spirit)
ನಾವು ನಕ್ಷತ್ರಗಳು ಮತ್ತು ದೀಪಗಳನ್ನು ಹೊಂದಿರುವ ಕ್ರಿಸ್‌ಮಸ್ ಮರಗಳಲ್ಲ! ನಿಜವಾದ ಮತ್ತು ಶಾಶ್ವತವಾದ ಫಲವನ್ನು ಹೊರಪಡಿಸಲು ನಾವು ಕರೆಯಲ್ಪಟ್ಟಿದ್ದೇವೆ. ಬೇರಿನ ಆರೈಕೆ ಮಾಡದೆ ಹೋದರೆ ಇದು ಸಾಧ್ಯವಾಗುವುದಿಲ್ಲ. ನಮ್ಮ ಹೃದಯಗಳು ಗೋಚರಿಸುವ ಫಲವನ್ನು ತರುವ ಕಾಣದ ಬೇರುಗಳಾಗಿವೆ. ಫಲ ನೀಡುವುದನ್ನು ತಡೆಯುವ ವಿಷಯಗಳು ಹೃದಯದಲ್ಲಿ ಹುಟ್ಟಿಕೊಳ್ಳುತ್ತವೆ.
ಅದಕ್ಕಾಗಿಯೇ ಹೃದಯದ ಮೇಲೆ ನಿರಂತರವಾಗಿ ನಿಗಾ ಇಡಬೇಕೆಂದು ನಮಗೆ ಸೂಚಿಸಲಾಗಿದೆ.
ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು.(ಜ್ಞಾನೋಕ್ತಿ 4:23).
ಸತ್ಯವೇದವು ಹೃದಯದ ಕುರಿತು ಮಾತನಾಡುವಾಗ, ಅದು ಭೌತಿಕ ಮಾನವ ಹೃದಯದ ಬಗ್ಗೆ ಅಲ್ಲ, ಆದರೆ ಮನುಷ್ಯನ ಆತ್ಮದ ಕುರಿತು ಮಾತನಾಡುವಂತದ್ದಾಗಿದೆ ಎಂದು ನಾನು ಪದೇ ಪದೇ ಹೇಳುತ್ತಿರುತ್ತೇನೆ.
ಜೀವನದಲ್ಲಿ ಪ್ರತಿಯೊಂದು ವೈಫಲ್ಯಕ್ಕೂ, ಒಂದು ಮೂಲ ಕಾರಣವಿದೆ. "ಬೇರಿಗೆ ಕೊಡಲಿಯನ್ನು ಹಾಕದ ಹೊರತು" ಸ್ವಸ್ಥತೆ ಮತ್ತು ಪುನಃಸ್ಥಾಪನೆ ಬರುವುದಿಲ್ಲ!ಈ ಪ್ರಕ್ರಿಯೆಯು ನಿಧಾನ ಮತ್ತು ನೋವಿನಿಂದ ಕೂಡಿರಬಹುದು, ಆದರೆ ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಖಾಸಗಿ ಮತ್ತು ಸಾರ್ವಜನಿಕ ಎರಡರಲ್ಲೂ ನಾವು ಹೀಗೆ ಫಲ ನೀಡಬಹುದು. ಬಹಳ ಕಡಿಮೆ ಜನರು ರಾತ್ರೋರಾತ್ರಿ ಈ ಆನಂದವನ್ನು ಪಡೆಯುತ್ತಾರೆ.
ಆದರೆ ನಮ್ಮ ಕಣ್ಣುಗಳಿಂದ ಮಾಪಕಗಳು ಒಂದೊಂದಾಗಿ ಉದುರಿಹೋಗಿ ನಂತರ ನಾವು ನಿಜವಾದ ಚಿತ್ರಣವನ್ನು ನೋಡಲು ಪ್ರಾರಂಭಿಸುತ್ತೇವೆ.
ಈ ಕೆಳಗಿನವುಗಳನ್ನು ಬಹಳ ಎಚ್ಚರಿಕೆಯಿಂದ ಓದಿ:
" ಭಕ್ತಿಹೀನರ ಆಲೋಚನೆಯಂತೆ ನಡೆಯದೇ, ಪಾಪಿಗಳ ಮಾರ್ಗದಲ್ಲಿ ನಿಲ್ಲದೇ, ಮತ್ತು ಧರ್ಮನಿಂಧನೆ ಮಾಡುವವರ ಜೊತೆಯಲ್ಲಿ ಕುಳಿತುಕೊಳ್ಳದೇ ಇರುವ ಮನುಷ್ಯನು ಧನ್ಯನು; 2 ಆದರೆ ಅವನು ಕರ್ತನ ಧರ್ಮಶಾಸ್ತ್ರದಲ್ಲಿ ಆನಂದಪಡುತ್ತಾನೆ ಮತ್ತು ದೇವರ ನಿಯಮಗಳನ್ನು ಹಗಲಿರುಳು ಧ್ಯಾನಿಸುತ್ತಾನೆ. 3 ಇಂಥವನು ನೀರಿನ ನದಿಗಳ ಬಳಿಯಲ್ಲಿ ನೆಟ್ಟ ಮರದಂತೆ ಇರುವನು, ಅದು ತನ್ನ ಕಾಲದಲ್ಲಿ ತನ್ನ ಫಲವನ್ನು ನೀಡುತ್ತದೆಯಲ್ಲಾ, ಅದರ ಎಲೆಗಳು ಸಹ ಒಣಗುವುದಿಲ್ಲ; ಹಾಗೆಯೇ ಇಂಥವನು ಮಾಡುವ ಎಲ್ಲಾ ಕೆಲಸಗಳು ಸಫಲವಾಗುತ್ತದೆ. (ಕೀರ್ತನೆ 1:1-3)
ಧನ್ಯನಾದ ಮನುಷ್ಯನು ಮಾಡದ ಕೆಲಸಗಳು, ಅವನು ಮಾಡುವ ಕೆಲಸಗಳು ಮತ್ತು ಅದರ ಫಲಿತಾಂಶಗಳನ್ನು ಕೆಳಗೆ ಗಮನಿಸಿ.
1. ಧನ್ಯ ಮನುಷ್ಯನು ಮಾಡದಂತ ಕೆಲಸಗಳು.
ಭಕ್ತಿಹೀನರ (ದುಷ್ಟರ) ಸಲಹೆಯನ್ನು ತೆಗೆದುಕೊಳ್ಳುವಂತದ್ದು (ಸಲಹೆಯನ್ನು ಅನುಸರಿಸುವುದು) ... ಪಾಪಿಗಳ ಹಾದಿಯಲ್ಲಿ ನಿಂತುಕೊಳ್ಳುವುದು ... ಧರ್ಮ ನಿಂಧನೆ ಮಾಡುವವರ (ಅಪಹಾಸ್ಯ ಮಾಡುವವರ) ಜೊತೆಯಲ್ಲಿ ಕುಳಿತುಕೊಳ್ಳುವುದು (ಸೇರಿಕೊಳ್ಳುವುದು)
2. ಧನ್ಯ ಮನುಷ್ಯನು ಮಾಡುವ ಕೆಲಸಗಳು ...
ಕರ್ತನ ಧರ್ಮಶಾಸ್ತ್ರದಲ್ಲಿ ಸಂತೋಷಪಡುತ್ತಾನೆ ... ಹಗಲಿರುಳು ವಾಕ್ಯವನ್ನು ಧ್ಯಾನಿಸುತ್ತಾನೆ (ಚಿಂತಿಸುತ್ತಾನೆ, ಯೋಚಿಸುತ್ತಾನೆ)
3. ಅದರ ಫಲಿತಾಂಶಗಳು ... ನೀರಿನ ನದಿಗಳ (ಹೊಳೆಗಳ) ಬಳಿ (ದೃಢವಾಗಿ) ನೆಡಲ್ಪಟ್ಟ ಮರದಂತಿರುತ್ತಾನೆ ... ಅದರ ಕಾಲದಲ್ಲಿ (ತಪ್ಪದೆ) ಫಲ ನೀಡುತ್ತದೆ (ಫಲ ನೀಡುತ್ತದೆ) ... ಅದರ ಎಲೆಗಳು ಒಣಗುವುದಿಲ್ಲ.
...ಅವನು ಏನೇ ಮಾಡಿದರೂ ಅದು ಸಫಲವಾಗುವುದು (ಯಶಸ್ವಿಯಾಗುತ್ತದೆ) – ಯಶಸ್ಸು ಒಂದು ಆಯ್ಕೆ ಅಥವಾ ಅನಿಶ್ಚಿತತೆಯಲ್ಲ ಆದರೆ ದೈವಿಕ ತತ್ವಗಳನ್ನು ಅನುಸರಿಸಿದಾಗ ಅದು ಖಾತರಿಯಾಗಿರುತ್ತದೆ. ದೇವರ ಮಹಿಮೆಗಾಗಿ ನೀವು ಫಲ ನೀಡುವುದು ಹೀಗೆ.
Bible Reading: Ezekiel 38-39
ಪ್ರಾರ್ಥನೆಗಳು
1.ದೇವರ ವಾಕ್ಯವನ್ನು ಪ್ರತಿದಿನ ಧ್ಯಾನಿಸುವ ಮೂಲಕ ನನ್ನ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನಾನು ಫಲಪ್ರದ ಮತ್ತು ಸಮೃದ್ಧನಾಗಿದ್ದೇನೆ.
2.ಪವಿತ್ರಾತ್ಮನು ದೇವರ ವಾಕ್ಯವನ್ನು ಆಚರಣೆಗೆ ತರಲು ನನಗೆ ಅಧಿಕಾರ ನೀಡುತ್ತಿರುವುದರಿಂದ ನಾನು ಆಶೀರ್ವದಿಸಲ್ಪಟ್ಟಿದ್ದೇನೆ. ನನ್ನ ಆತ್ಮದಲ್ಲಿರುವ ದೇವರ ವಾಕ್ಯವು ಜೀವವನ್ನು ನೀಡುತ್ತಿದೆ.
Join our WhatsApp Channel

Most Read
● ಸ್ತುತಿಯು ಸಮೃದ್ಧಿಯನ್ನುಂಟುಮಾಡುತ್ತದೆ● ಸ್ವಸ್ಥ ಚಿತ್ತತೆ ಎಂಬುದು ಒಂದು ವರ
● ಮೂರು ಆಯಾಮಗಳು
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿಕೊಳ್ಳುವುದು ಹೇಗೆ-2
● ಯೇಸು ಕುಡಿದ ದ್ರಾಕ್ಷಾರಸ
● ವಾಕ್ಯದಿಂದ ಬೆಳಕು ಬರುತ್ತದೆ
ಅನಿಸಿಕೆಗಳು