english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಶೀರ್ಷಿಕೆ: 2026 ರ ಆರಂಭಕ್ಕಾಗಿ ಒಂದು ದೈವಿಕ ನೀಲನಕ್ಷೆ.
ಅನುದಿನದ ಮನ್ನಾ

ಶೀರ್ಷಿಕೆ: 2026 ರ ಆರಂಭಕ್ಕಾಗಿ ಒಂದು ದೈವಿಕ ನೀಲನಕ್ಷೆ.

Thursday, 1st of January 2026
2 2 130
ಮೋಶೆಯ ಮೂಲಕ ಕಟ್ಟಲ್ಪಟ್ಟ ಗುಡಾರದ ಕುರಿತು ಬೈಬಲ್ ನಮಗೆ ಗಮನಾರ್ಹವಾದ ಮತ್ತು ಸುಲಭವಾಗಿ ಮೇಲ್ನೋಟಕ್ಕೆ ಸಿಗುವಂತ ಒಂದು ವಿವರವನ್ನು ಹೇಳುತ್ತದೆ:

 “ಮೊದಲನೆಯ ತಿಂಗಳಿನ ಪ್ರಥಮದಿನದಲ್ಲಿ ನೀನು ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸಬೇಕು.” (ವಿಮೋಚನಕಾಂಡ 40:2).
 “ಎರಡನೆಯ ವರುಷದ ಮೊದಲನೆಯ ತಿಂಗಳಿನ ಪ್ರಥಮ ದಿನದಲ್ಲಿ ಮೋಶೆ ಗುಡಾರವನ್ನು ಎತ್ತಿ ನಿಲ್ಲಿಸಿದನು.” (ವಿಮೋಚನಕಾಂಡ 40:17).

ಬೇರೆ ರೀತಿಯಲ್ಲಿ ಹೇಳುವುದಾದರೆ, ಇಸ್ರೇಲ್ ಜನರ ಮಧ್ಯದಲ್ಲಿ ತನ್ನ ವಾಸಸ್ಥಳವನ್ನು ಸ್ಥಾಪಿಸಿದ ಕ್ಷಣವನ್ನು ದೇವರು ಹೊಸ ವರ್ಷದ ದಿನವಾಗಿರಬೇಕೆಂದು ಆರಿಸಿಕೊಂಡನು. ಇದು ಆಕಸ್ಮಿಕವಲ್ಲ. ನಾವು ಜನವರಿ 1, 2026 ಕ್ಕೆ ಕಾಲಿಡುತ್ತಿರುವಾಗ ಅದು ನಮಗೆ ಉದ್ದೇಶಪೂರ್ವಕವಾಗಿ, ಪ್ರವಾದನಾ ರೀತಿಯಲ್ಲಿ ಮತ್ತು ಆಳವಾದ ಬೋಧಪ್ರದವಾಗಿದೆ.

ದೇವರು ತನ್ನ ಪ್ರಸನ್ನತೆಯಿಂದ ಪ್ರಾರಂಭಿಸ ಬಯಸುತ್ತಾನೆ.

ಗುಡಾರವು ಕೇವಲ ಒಂದು ಸಾಮಾನ್ಯ ರಚನೆಯಾಗಿರಲಿಲ್ಲ -ಬದಲಾಗಿ ಅದು ತನ್ನ ಜನರೊಂದಿಗೆ ನಿವಾಸಿಸುವ ದೇವರ ಸಾನಿಧ್ಯದ ಗೋಚರ ಸಂಕೇತವಾಗಿತ್ತು. ಇಸ್ರೇಲ್ ಜನಾಂಗವು ವಿಜಯ, ವಸಾಹತು ಅಥವಾ ವಿಸ್ತರಣೆಯಲ್ಲಿ ಮುಂದುವರಿಯುವ ಮೊದಲು, ದೇವರು ತನ್ನ ಸಾನಿಧ್ಯವು ಅಲ್ಲಿ ಪ್ರಪ್ರಥಮವಾಗಿ ಸ್ಥಾಪಿಸಲ್ಪಟ್ಟಿದೆಯೊ ಎಂಬುದನ್ನು ಖಚಿತಪಡಿಸಿಕೊಂಡನು. 

ಇದು ಬಹಳ ಪ್ರಬಲವಾದ ತತ್ವವನ್ನು ಪ್ರಕಟಪಡಿಸುತ್ತದೆ:
ದೇವರು ವರ್ಷಗಳನ್ನು ಯಾವುದೋ ಒಂದು ಚಟುವಟಿಕೆಯಿಂದ ಪ್ರಾರಂಭಿಸುವುದಿಲ್ಲ; ಆತನು ಅವುಗಳನ್ನು ತನ್ನ ಪ್ರಸನ್ನತೆಯಿಂದ ಪ್ರಾರಂಭಿಸ ಬಯಸುತ್ತಾನೆ. ಶತಮಾನಗಳ ನಂತರ ಕರ್ತನಾದ ಯೇಸು ಇದೇ ಮಾದರಿಯನ್ನು ನಮಗೆ ಬೋದಿಸುತ್ತಾ,

"ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು." (ಮತ್ತಾಯ 6:33). ಎಂದನು.

ಆಶೀರ್ವಾದ ವರ್ಷವು ಕೇವಲ ಯೋಜನೆಗಳೊಂದಿಗೆ ಪ್ರಾರಂಭವಾಗದೆ, ದೇವರು ನಿಮ್ಮ ಜೀವನದ ಮುಖ್ಯ ಕೇಂದ್ರಸ್ಥಾನದಲ್ಲಿ ಸಿಂಹಾಸನಾರೋಹಣ ಆಗುವುದರೊಂದಿಗೆ ಪ್ರಾರಂಭವಾಗುವ ವರ್ಷವಾಗಿರಬೇಕು.

 ಪವಿತ್ರ ಮರುಹೊಂದಿಕೆ 

ಮೊದಲ ತಿಂಗಳು ಇಸ್ರೇಲ್‌ಗೆ ಹೊಸ ಚಕ್ರವನ್ನು ಗುರುತಿಸಿಕೊಟ್ಟಿತು. ಆ ದಿನದಂದು ಗುಡಾರವನ್ನು ಎತ್ತಿನಿಲ್ಲಿಸಬೇಕೆಂದು ಆಜ್ಞಾಪಿಸುವ ಮೂಲಕ, ಪ್ರತಿಯೊಂದು ಹೊಸ ಆರಂಭವು ಪವಿತ್ರಗೊಳಿಸಬೇಕು ಎಂಬುದನ್ನು ದೇವರು ಅವರಿಗೆ ಕಲಿಸಿಕೊಟ್ಟನು.

ಅಪೊಸ್ತಲನಾದ ಪೌಲನು ಹೊಸ ಒಡಂಬಡಿಕೆಯಲ್ಲಿ ಇದೇ  ಸತ್ಯವನ್ನು ಸೆರೆಹಿಡಿಯುತ್ತಾನೆ, 

“ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನಸೃಷ್ಟಿಯಾದನು. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು." (2 ಕೊರಿಂಥ 5:17). 

ಹೊಸ ವರ್ಷವೆಂದರೆ ಕೇವಲ ಕ್ಯಾಲೆಂಡರನ್ನು ಬದಲಾಯಿಸುವುದಲ್ಲ - ಬದಲಾಗಿ ಇದು ದೇವರ ಉದ್ದೇಶಗಳೊಂದಿಗೆ ನಮ್ಮ ಜೀವನವನ್ನು ಸರಿಯಾಗಿ ಮರು ಹೊಂದಿಸಿಕೊಳ್ಳಲು ದೊರಕುವ ಆಹ್ವಾನವಾಗಿದೆ. ನಾವು ಮೊದಲು ಏನು ಸಮರ್ಪಿಸುತ್ತೇವೆ ಎಂಬುದೇ ಮುಂದೆ  ನಾವು ಏನಾಗಲಿದ್ದೇವೆ ಎಂಬುದನ್ನು ನಿರ್ಧರಿಸುತ್ತದೆ.

ರಚನೆಯು ಮಹಿಮೆಗೆ ಮುನ್ನಡೆಸುತ್ತದೆ.

ಕರ್ತನ ಮಹಿಮೆಯು ಗುಡಾರವನ್ನು ತುಂಬುವ ಮೊದಲು (ವಿಮೋಚನಕಾಂಡ 40:34), ಮೋಶೆಯು ದೇವರ ಸೂಚನೆಗಳನ್ನು ಎಚ್ಚರಿಕೆಯಿಂದ ಅನುಸರಿಸಿದ್ದನು.

ಗುಡಾರದಲ್ಲಿ ಪ್ರತಿಯೊಂದು ಪರದೆ, ಕುಳಿ, ಬಲಿಪೀಠ ಮತ್ತು ಪೀಠೋಪಕರಣಗಳನ್ನು ಎಲ್ಲವನ್ನು ಸಹ ದೈವಿಕ ಕ್ರಮದ ಪ್ರಕಾರ ಇರಿಸಲಾಗಿತ್ತು. 

ದೇವರ ಮಹಿಮೆಯು ಆತನ ಆದೇಶವನ್ನು ಗೌರವಿಸುವ ಸ್ಥಳದಲ್ಲಿ ನೆಲೆಗೊಂಡಿದೆ ಎಂಬುದನ್ನು ಇದು ನಮಗೆ ಕಲಿಸುತ್ತದೆ. 

ಅಪೊಸ್ತಲ ಪೌಲನು ಕ್ರೈಸ್ತರಾದ ನಮಗೆ "ಎಲ್ಲವೂ ಸಭ್ಯವಾಗಿಯೂ ಕ್ರಮವಾಗಿಯೂ ನಡೆಯಲಿ" ಎಂದು ನೆನಪಿಸುತ್ತಾನೆ(1 ಕೊರಿಂಥ 14:40).

ನೀವು 2026 ಕ್ಕೆ ಪ್ರವೇಶಿಸುತ್ತಿದ್ದಂತೆ, ದೇವರು ನಿಮ್ಮ ಪ್ರಾರ್ಥನೆಗಳಲ್ಲಿ ಮಾತ್ರವಲ್ಲ, ನಿಮ್ಮ ನಿರ್ಧಾರಗಳು, ಶಿಸ್ತುಗಳು ಮತ್ತು ದೈನಂದಿನ ವಿಧೇಯತೆಯಲ್ಲೂ ಆಸಕ್ತಿ ಹೊಂದಿದ್ದಾನೆಎಂಬುದನ್ನು ತಿಳಿದವರಾಗಿರ್ರಿ ಯಾವಾಗಲೂ ಒಂದನ್ನು ನೆನಪಿಡಿ, ರಚನೆಯು ಮಹಿಮೆಗೆ ಜಾಗವನ್ನು ಸೃಷ್ಟಿಸುತ್ತದೆ.

ನಿಮ್ಮ ಗುಡಾರದಿಂದ ದೇವಾಲಯಕ್ಕೆ..

ಗುಡಾರವು ತಾತ್ಕಾಲಿಕವಾಗಿದ್ದಾಗಿದ್ದು, ದೇವಾಲಯವು ಶಾಶ್ವತವಾಗಿತ್ತು - ಆದರೆ ಇಂದು, ಇನ್ನೂ ಹೆಚ್ಚು ವಾಸ್ತವವಾದದ್ದಾಗಿದೆ: 

"ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ? " (1 ಕೊರಿಂಥ 3:16). 

ವರ್ಷದ ಈ ಮೊದಲ ದಿನದಂದು, ದೇವರು ನೀವು ಬಟ್ಟೆ ಮತ್ತು ಕಂಬಗಳ ಮೂಲಕ ಗುಡಾರವನ್ನು ನಿರ್ಮಿಸಬೇಕೆಂದು ಕೇಳುತ್ತಿಲ್ಲ. ಬದಲಾಗಿ ನಿಮ್ಮ ಜೀವನವನ್ನು ತನ್ನ ವಾಸಸ್ಥಳವಾಗಿ ಹೊಸದಾಗಿ ಪ್ರಸ್ತುತಪಡಿಸಬೇಕೆಂದು ಆತನು ನಿಮ್ಮನ್ನು ಆಹ್ವಾನಿಸುತ್ತಿದ್ದಾನೆ.

"ಆದದರಿಂದ ಸಹೋದರರೇ, ದೇವರ ಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುವದೇನಂದರೆ - ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ; ಇದೇ ನಿಮ್ಮ ವಿವೇಕಪೂರ್ವಕವಾದ ಆರಾಧನೆಯು."(ರೋಮನ್ನರು 12:1).

2026ಕ್ಕೆ  ಪ್ರವಾದನಾ ಪೂರ್ವಕ ಆಹ್ವಾನ

ದೇವರೊಂದಿಗೆ ವರ್ಷವನ್ನು ಪ್ರಾರಂಭಿಸಿ—ಆಗ ವರ್ಷವು ನಿಮಗಾಗಿ ಏನನ್ನು ಹೊಂದಿದೆಯೋ ಅದನ್ನು ನೀವು ಬೆನ್ನಟ್ಟಬೇಕಾಗಿರುವುದಿಲ್ಲ. ದೇವರ ಪ್ರಸನ್ನತೆಯು ಮೊದಲು ಬಂದಾಗ, ಮಾರ್ಗದರ್ಶನ, ಒದಗಿಸುವಿಕೆ ಮತ್ತು ಗೆಲುವು ಇವೇ ನಿಮ್ಮನ್ನು ಹಿಂಬಾಲಿಸುತ್ತದೆ. 

“ಕರ್ತನು ನಿಮ್ಮ ಮುಂದೆ ಹೋಗುವನು, ಮತ್ತು ಇಸ್ರೇಲ್‌ನ ದೇವರು ಈ ವರ್ಷವಿಡೀ ನಿಮ್ಮ ಹಿಂಬದಿಯಲ್ಲಿ ಕಾವಲುಗಾರನಾಗಿರುವನು "ಎಂದು ಯೇಸುವಿನ ಹೆಸರಿನಲ್ಲಿ, ನಾನು ಪ್ರವಾದಿಸುತ್ತೇನೆ.

ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
ಪ್ರಾರ್ಥನೆಗಳು
ತಂದೆಯೇ, ಹೊಸ ವರ್ಷದ ದಿನದಂದು ಪ್ರವಾದಿಯಾದ ಮೋಶೆ ಗುಡಾರವನ್ನು ಎತ್ತಿದಂತೆಯೇ, ನಾನು ಇಂದು ನನ್ನ ಹೃದಯದಲ್ಲಿ, ನನ್ನ ಮನೆಯಲ್ಲಿ ನಿನಗಾಗಿ ಒಂದು ಬಲಿಪೀಠವನ್ನು ಎತ್ತಿನಿಲ್ಲಿಸುತ್ತೇನೆ. ನನ್ನ ಜೀವನದಲ್ಲಿ ನಾನು ನಿಮಗೇ ಮೊದಲ ಸ್ಥಾನವನ್ನು ನೀಡುತ್ತೇನೆ. ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ. ಆಮೆನ್!!

Join our WhatsApp Channel


Most Read
● ಪ್ರಾರ್ಥನಾ ಜೀವಿತ ಜೀವಿಸಲು ಕೆಲವು ಪ್ರಾಯೋಗಿಕ ಸಲಹೆಗಳು.
● ಶರಣಾಗತಿಯ ಸ್ಥಳ
● ಈ ಹೊತ್ತು ನಿಮ್ಮನ್ನು ನೀವು ಶುದ್ದೀರಿಕರಿಸಿಕೊಳ್ಳಿ, ಕರ್ತನು ನಾಳೆ ಅದ್ಭುತಗಳನ್ನು ಮಾಡುವನು.
● ಕುಟುಂಬಕ್ಕಾಗಿ ಇರುವ ಗುಣಮಟ್ಟದ ಸಮಯ
● ಸರ್ವಶಕ್ತನಾದ ದೇವರ ಅದ್ಬುತ ಸಮಾಗಮ.
● ಪ್ರವಾದನಾ ಕೀರ್ತನೆ.
● ಯೇಸುವಿನ ಹೆಸರು.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್