ಅನುದಿನದ ಮನ್ನಾ
2
1
111
ಹೆಚ್ಚು ಪರಿಣಾಮಕಾರಿಯಾಗಿರುವ ಜನರ 9 ಅಭ್ಯಾಸಗಳು ಅಭ್ಯಾಸ ಸಂಖ್ಯೆ 3
Monday, 12th of January 2026
“ಯಜ್ಞವನ್ನರ್ಪಿಸುವದಕ್ಕಿಂತ ಮಾತು ಕೇಳುವದು ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತ್ವವು ವಿಶೇಷವಾಗಿದೆ.(1 ಸಮುವೇಲ 15:22)
ಹೆಚ್ಚು ಪರಿಣಾಮಕಾರಿ ಜನರು ಎಂದರೆ ಒಳ್ಳೆಯ ಉದ್ದೇಶಗಳು ಅಥವಾ ದೊಡ್ಡ ಯೋಜನೆಗಳನ್ನು ಹೊಂದಿರುವವರು ಅನ್ನುವುದು ಮಾತ್ರವಲ್ಲ. ಅವರು ನಿಜವಾಗಿಯೂ ವಿಧೇಯರಾಗುವ ಜನರಾಗಿರುತ್ತಾರೆ. ಸತ್ಯವೇದವು ನಮಗೆ ಸವಾಲುಗಳನ್ನೂ ಮತ್ತು ಅದರಿಂದ ಮುಕ್ತಗೊಳಿಸುವ ಪ್ರಬಲ ಸತ್ಯವನ್ನು ಬೋದಿಸುತ್ತದೆ.
ದೇವರು ಕಠಿಣ ಪರಿಶ್ರಮಕ್ಕಿಂತ ವಿಧೇಯತೆಯನ್ನು ಹೆಚ್ಚು ಗೌರವಿಸುತ್ತಾನೆ. ಅನೇಕ ಜನರು ತಮ್ಮ ಪ್ರಯಾಣವನ್ನು ಉತ್ಸಾಹ, ಉಮ್ಮಸ್ಸು ಮತ್ತು ಸ್ಪಷ್ಟ ದರ್ಶನದಿಂದಲೇ ಪ್ರಾರಂಭಿಸುತ್ತಾರೆ. ಅವರು ಪ್ರಾರ್ಥಿಸುವವರಾಗಿರುತ್ತಾರೆ, ಕನಸು ಕಾಣುತ್ತಾರೆ ಮತ್ತು ಚೆನ್ನಾಗಿ ಯೋಜಿಸುತ್ತಾರೆ. ಆದರೆ ಸಮಯ ಕಳೆಯುತ್ತಾ ಹೋದಂತೆ, ಸವಾಲುಗಳು ಎದುರಾಗುತ್ತವೆ, ಒತ್ತಡ ಹೆಚ್ಚಾಗುತ್ತದೆ ಮತ್ತು ವಿಧೇಯತೆ ತೋರಲು ಅವರಿಗೆ ಅನಾನುಕೂಲವಾಗುತ್ತದೆ. ಅಲ್ಲಿಯೇ ಅನೇಕರು ತಮ್ಮ ಧೈರ್ಯವನ್ನು ಬಿಟ್ಟು ಹಿಂಜಾರುತ್ತಾರೆ ಅಥವಾ ತಮ್ಮ ಗಮನವನ್ನು ಕಳೆದುಕೊಳ್ಳುತ್ತಾರೆ.
ನಿಜವಾಗಿಯೂ ಬಲಶಾಲಿಯಾಗಿರುವವರು ಯಾವಾಗಲೂ ಅತ್ಯಂತ ಪ್ರತಿಭಾನ್ವಿತರು ಅಥವಾ ಶಕ್ತಿಯುತರು ಆಗಿರುವುದಿಲ್ಲ. ಅವರು ಕಷ್ಟ ಬಂದರ, ತಡವಾದರೂ ಅಥವಾ ತಮ್ಮ ಮುಂದಿನ ಸ್ಥಿತಿ ಅದೃಶ್ಯವಾಗಿದ್ದರೂ ಸಹ ದೇವರಿಗೆ ವಿಧೇಯರಾಗುತ್ತಲೇ ಇರುವವರಾಗಿರುವವರಾಗಿದ್ದಾರೆ. ವಿಧೇಯತೆಯು ಅವರನ್ನು ದೇವರ ಚಿತ್ತದೊಂದಿಗೆ ಹೊಂದಿಕೆಯಲ್ಲಿರಿಸುತ್ತದೆ - ಮತ್ತು ಆ ಹೊಂದಾಣಿಕೆಯು ಶಾಶ್ವತವಾದ ಫಲ ಮತ್ತು ನಿಜವಾದ ಯಶಸ್ಸನ್ನು ತರುತ್ತದೆ.
ವಿಧೇಯತೆಯು ಪ್ರಕಟಣೆ ಮತ್ತು ಫಲಿತಾಂಶಗಳ ನಡುವೆ ಇರುವ ಸೇತುವೆಯಾಗಿದೆ.
1. ವಿಧೇಯತೆಯು ನಂಬಿಕೆಕೆ ಪುರಾವೆಯಾಗಿದೆ
ಬೈಬಲ್‌ನಲ್ಲಿ, ವಿಧೇಯತೆಯನ್ನು ಎಂದಿಗೂ ಕಾನೂನುಬದ್ಧತೆ ಎಂದು ಚಿತ್ರಿಸಲಾಗಿಲ್ಲ - ಅದನ್ನು ಒಂದು ಸಂಬಂಧವಾಗಿ ಚಿತ್ರಿಸಲಾಗಿದೆ.
"ನೀವು ನನ್ನನ್ನು ಪ್ರೀತಿಸಿದರೆ, ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವಿರಿ" ಎಂದು ಕರ್ತನಾದ ಯೇಸು ಸ್ಪಷ್ಟವಾಗಿ ಹೇಳಿದನು(ಯೋಹಾನ 14:15).
ವಿಧೇಯತೆಯು ನಾವು ಯಾರನ್ನು ನಂಬುತ್ತಿದ್ದೇವೆ ಎಂಬುದನ್ನು ಪ್ರಕಟಪಡಿಸುತ್ತದೆ. ವಿಧೇಯತೆ ವಿಳಂಬವಾದಾಗ, ಭಾಗಶಃ ಅಥವಾ ಷರತ್ತುಬದ್ಧವಾದಾಗ, ಅದು ವಿಭಜಿತ ನಿಷ್ಠೆಯನ್ನು ಪ್ರಕಟ ಪಡಿಸುತ್ತದೆ. ಸೌಲನು ರಾಜ್ಯವನ್ನು ಕಳೆದುಕೊಂದದ್ದು ಆರಾಧನೆ ಮಾಡಲು ವಿಫಲವಾದ ಕಾರಣದಿಂದಲ್ಲ, ಆದರೆ ಅವನು ಭಾಗಶಃ ಮಾತ್ರ ಆಜ್ಞೆಯನ್ನು ಪಾಲಿಸಿದ ಕಾರಣದಿಂದ ತನ್ನ ರಾಜ್ಯವನ್ನು ಕಳೆದುಕೊಂಡನು (1 ಸಮುವೇಲ 15).
ಅವನ ಉದ್ದೇಶಗಳು ಆತ್ಮೀಕಾವಾಗಿಯೇ ತೋರುತ್ತದೆ, ಆದರೂ ಅವನ ಅವಿಧೇಯತೆಯು ಅವನಿಗೆ ಅಧಿಕಾರವನ್ನು ಕಳೆದುಕೊಳುವಂತೆ ಮಾಡಿತು.
ಉನ್ನತ ಕ್ಷಮತೆವುಳ್ಳ ಜನರು ತಡಮಾಡಿ ತೋರಿಸುವ ವಿಧೇಯತೆಯು ಅವಿಧೇಯತೆಯಾಗಿದೆ ಮತ್ತು ಭಾಗಶಃವಾಗಿ ತೋರುವ ವಿಧೇಯತೆ ಎಂದರೆ ನೆಪವನ್ನು ಧರಿಸಿಕೊಂಡಿರುವ ದಂಗೆಯಾಗಿದೆ ಎನ್ನುವ ಈ ತತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ.
2. ವಿಧೇಯತೆ ಹೆಚ್ಚಾಗಿ ತಿಳುವಳಿಕೆಗಿಂತ ಮುಂದಾಗಿ ಹೊರಡುತ್ತದೆ.
ವಿಧೇಯತೆ ತೋರುವ ಮೊದಲು ಸ್ಪಷ್ಟತೆ ಬರುತ್ತದೆ ಎಂಬುದು ಒಂದು ದೊಡ್ಡ ಕಂತೆ ಪುರಾಣ. ಆದರೆ ದೇವರವಾಕ್ಯವು ಇದಕ್ಕೆ ವಿರುದ್ಧವಾಗಿ ಬೋದಿಸುತ್ತದೆ. ತಾನು ತಲುಪ ಬೇಕಾದ ಗಮ್ಯಸ್ಥಾನವನ್ನು ತಿಳಿಸದೆ ಅಬ್ರಹಾಮನನ್ನು ಹೊರಡಬೇಕೆಂದು ಕರೆಯಲಾಯಿತು (ಆದಿಕಾಂಡ 12:1–4; ಇಬ್ರಿಯ 11:8). ವಿಧೇಯತೆಯ ನಂತರ ತಿಳುವಳಿಕೆ ಬರುವಂತದ್ದಾಗಿದೆ.
ಆತನ ಚಿತ್ತದಂತೆ ನಡೆಯುವದಕ್ಕೆ ಯಾರಿಗೆ ಮನಸ್ಸದೆಯೋ ಅವರಿಗೆ ಈ ಬೋಧನೆಯು ದೇವರಿಂದ ಬಂದದ್ದೋ ನಾನೇ ಕಲ್ಪಿಸಿ ಹೇಳಿದ್ದೋ ಗೊತ್ತಾಗುವದು
"ಎಂದು ಹೇಳುವ ಮೂಲಕ ಕರ್ತನಾದ ಯೇಸು ಈ ಆತ್ಮೀಕ ಕ್ರಮವನ್ನು ದೃಢಪಡಿಸಿದನು (ಯೋಹಾನ 7:17).
ಪ್ರಕಟಣೆಯು ವಿಧೇಯತೆಯನ್ನು ಅನುಸರಿಸುತ್ತದೆ, ಹೊರತು ಚರ್ಚೆಯನ್ನಲ್ಲ. ಅನೇಕರು ದೃಢೀಕರಣ, ಭಾವನೆಗಳು ಅಥವಾ ಅನುಕೂಲಕ್ಕಾಗಿ ಕಾಯುತ್ತಿದ್ದಾರೆ - ಆದರೆ ದೇವರು ಶರಣಾಗತಿಗಾಗಿ ಕಾಯುತ್ತಿದ್ದಾನೆ.
ದೇವರು ಮಾತನಾಡಿದಾಗ ಉನ್ನತ ಕ್ಷಮತೆಯ ಜನರು ನಂಬಿಕೆಯ ಮೇಲೆ ಚಲಿಸುತ್ತಾರೆ,ಹೊರತು ಅವರಿಗೆ ಸಂದರ್ಭಗಳು ಆರಾಮದಾಯಕವಾದಾಗ ಅಲ್ಲ.
3. ವಿಧೇಯತೆಯು ದೈವಿಕ ಬೆಂಬಲವನ್ನು ಪ್ರಕಟ ಪಡಿಸುತ್ತದೆ.
ಧರ್ಮಗ್ರಂಥದಾದ್ಯಂತ, ದೈವಿಕ ಶಕ್ತಿಯು ವಿಧೇಯತೆಯನ್ನು ಅನುಸರಿಸುವುದನ್ನು ನೋಡಬಹುದು. ಕೆಂಪು ಸಮುದ್ರದಲ್ಲಿ, ಮೋಶೆಯು ಕೋಲನ್ನು ಚಾಚಿದ ನಂತರವೇ ಸಮುದ್ರ ಇಬ್ಬಾಗ ವಾಯಿತು(ವಿಮೋಚನಕಾಂಡ 14:15–16). ಜೆರಿಕೊದಲ್ಲಿ, ವಿಚಿತ್ರ ಸೂಚನೆಗಳಿಗೆ ಶಿಸ್ತುಬದ್ಧ ವಿಧೇಯತೆ ತೋರಿದ ನಂತರ ಗೆಲುವು ಬಂದಿತು (ಯೆಹೋಶುವ 6).
ದೇವರು ತಾನು ಆಜ್ಞಾಪಿಸಿದ್ದಕ್ಕೆ ಬೆಂಬಲ ನೀಡುತ್ತಾನೆ.
ವೈಫಲ್ಯದ ರಾತ್ರಿಯ ನಂತರ (ಲೂಕ 5:4–6) ಪೇತ್ರನಿಗೆ ಮತ್ತೆ ಬಲೆಯನ್ನು ಎಸೆಯಲು ಹೇಳಿದಾಗ ಕರ್ತನಾದ ಯೇಸು ಈ ಮಾದರಿಯನ್ನು ಪ್ರದರ್ಶಿಸಿದನು.
ಪ್ರಯತ್ನ ವಿಫಲವಾದಾಗ ವಿಧೇಯತೆಯು ಸಮೃದ್ಧಿಯನ್ನು ಪ್ರಕಟಿಸಿತು. ಹೆಚ್ಚು ಪರಿಣಾಮಕಾರಿ ಜನರು ತರ್ಕವನ್ನು ಮಾತ್ರ ಅವಲಂಬಿಸುವುದಿಲ್ಲ; ಅವರು ದೈವಿಕ ಸೂಚನೆಯನ್ನು ಮಾತ್ರ ಅವಲಂಬಿಸುತ್ತಾರೆ. ನೆರವೇರಿಸಿದ ಒಂದು ವಾಕ್ಯದಿಂದಾಗುವ ಪರಿಣಾಮವು ವರ್ಷಗಳ ಪರ್ಯಂತ ಮಾಡಿದ ಮಾನವ ಪ್ರಯತ್ನವನ್ನು ಮೀರಿಸುತ್ತದೆ ಎಂಬುದು ಅವರಿಗೆ ತಿಳಿದೇ ಇದೆ.
4. ವಿಧೇಯತೆಯು ದೀರ್ಘಕಾಲೀನ ಪರಿಣಾಮಕಾರಿತ್ವವನ್ನು ಉಳಿಸಿಕೊಳ್ಳುತ್ತದೆ.
ಅನೇಕರು ಪ್ರತಿಭೆ, ವರ್ಚಸ್ಸು ಅಥವಾ ಸಂಪರ್ಕಗಳ ಮೂಲಕ ಅಲ್ಪಾವಧಿಯಲ್ಲೇ ಯಶಸ್ವಿಯಾಗುತ್ತಾರೆ. ಆದರೆ ವಿಧೇಯತೆಯು ದೀರ್ಘಾಯುಷ್ಯವನ್ನು ಉಳಿಸಿಕೊಳ್ಳುತ್ತದೆ ಎಂದು ಧರ್ಮಗ್ರಂಥವು ಬೋದಿಸುತ್ತದೆ. ಕರ್ತನಾದ ಯೇಸು ಸ್ವತಃ ತಾನು ಅನುಭವಿಸಿದ ಬಾದೆಗಳ ಮೂಲಕವೇ ವಿಧೇಯತೆಯನ್ನು ಕಲಿತನು (ಇಬ್ರಿಯ 5:8)ಆತನಿಗೇ ಪವಿತ್ರತೆಯ ಕೊರತೆಯಿದ್ದ ಕಾರಣದಿಂದಲ್ಲ, ಆದರೆ ವಿಧೇಯತೆಯು ಅಧಿಕಾರವನ್ನು ಪಕ್ವಗೊಳಿಸುತ್ತದೆ.
"ಆದರೆ ನೀವು ಮುಂಚೆ ಪಾಪಕ್ಕೆ ದಾಸರಾಗಿದ್ದರೂ ನಿಮಗೆ ಕಲಿಸಲ್ಪಟ್ಟ ಬೋಧನೆಗೆ ನೀವು ಮನಃಪೂರ್ವಕವಾಗಿ ಅಧೀನರಾದದರಿಂದಲೂ " (ರೋಮನ್ನರು 6:17)
ಎಂದು ಬರೆಯುವಾಗ ಅಪೊಸ್ತಲ ಪೌಲನು ಅದೇ ವಿಷಯವನ್ನು ಹೇಳುತ್ತಾನೆ. ನಿಜವಾದ ವಿಧೇಯತೆ ಬಾಹ್ಯ ಅನುಸರಣೆಯಲ್ಲ - ಅದು ಹೃದಯ ಮಟ್ಟದಲ್ಲಿ ಆಗುವ ಸಲ್ಲಿಕೆ.
ಹೆಚ್ಚು ಪರಿಣಾಮಕಾರಿ ಜನರು ದೇವರಾಡಿದ ಮಾತುಗಳ ಹಾಗೇ ಕಾಣದಿದ್ದರೂ, ಪ್ರತಿಫಲವಿಲ್ಲದಿದ್ದರೂ ಮತ್ತು ಅನಾನುಕೂಲವಾಗಿದ್ದರೂ ಅದನ್ನು ಪಾಲಿಸುತ್ತಾರೆ. ಅವರು ಯಾರಿಗೂ ಕಾಣಿಸದಂತೆ ಗುಪ್ತವಾಗಿ ಪಾಲಿಸುತ್ತಾರೆ ಆದರೆ ದೇವರು ಅವರನ್ನು ಬಹಿರಂಗವಾಗಿ ಗೌರವಿಸುತ್ತಾನೆ. ಅನುಕೂಲತೆಯು ಸೌಕರ್ಯವನ್ನು ನಿರ್ಮಿಸುತ್ತದೆ; ವಿಧೇಯತೆ ಕರೆಯನ್ನು ನಿರ್ಮಿಸುತ್ತದೆ. ಎಂಬುದು ಅವರಿಗೆ ತಿಳಿದಿದೆ
5. ವಿಧೇಯತೆಯೇ ಪರಲೋಕವು ಪ್ರತಿಕ್ರಿಯಿಸುವ ಭಾಷೆಯಾಗಿದೆ.
ಪರಲೋಕವು ಯಜ್ಞ, ಶಬ್ದ ಅಥವಾ ಯಾವುದೊ ಚಟುವಟಿಕೆಗಿಂತ ವೇಗವಾಗಿ ವಿಧೇಯತೆಗೆ ಪ್ರತಿಕ್ರಿಯಿಸುತ್ತದೆ ಎಂದು ಧರ್ಮಗ್ರಂಥವು ಪದೇ ಪದೇ ತೋರಿಸುತ್ತದೆ. ಎಲೀಯನು ದೇವರ ಆದೇಶದ ಪ್ರಕಾರ ಬಲಿಪೀಠವನ್ನು ಪುನರ್ನಿರ್ಮಿಸಿದಾಗ, ಅಲ್ಲಿ ಬೆಂಕಿ ಬಿದ್ದಿತು (1 ಅರಸುಗಳು 18).
ದೇವರ ರಾಜ್ಯದಲ್ಲಿ ಪರಿಣಾಮಕಾರಿತ್ವವು ಏನನ್ನೋ ಹೆಚ್ಚಿನದನ್ನು ಮಾಡುವುದರ ಕುರಿತಾಗಿ ಅಲ್ಲ - ಅದು ದೇವರು ಹೇಳಿದ್ದನ್ನು ಹೇಳಿದ ಹಾಗೆ ಮಾಡುವುದರ ಕುರಿತಾಗಿದೆ..
ಅದಕ್ಕಾಗಿಯೇ ಕರ್ತನಾದ ಯೇಸು ಇದಲ್ಲದೆ ನೀವು ನನ್ನನ್ನು ಸ್ವಾಮೀ ಸ್ವಾಮೀ ಅಂತ ಕರೆದು ನಾನು ಹೇಳುವದನ್ನು ನಡಿಸದೆ ಇರುವದೇಕೆ? " ಎನ್ನುವ ಎಚ್ಚರಿಕೆ ಮತ್ತು ವಾಗ್ದಾನದೊಂದಿಗೆ ಮುಕ್ತಾಯಗೊಳಿಸಿದನು. (ಲೂಕ 6:46).
ಹೆಚ್ಚು ಪರಿಣಾಮಕಾರಿ ಜನರು ದೇವರು ಫಲವನ್ನು ನಿಭಾಯಿಸಲಿ ಎಂದು ದೇವರಿಂದ ಬಂದ ಸೂಚನೆಯೊಂದಿಗೆ ವಾದಿಸುವುದಿಲ್ಲ, ಅವರು ಅದನ್ನು ಪಾಲಿಸುತ್ತಾರೆ.
ಇದು ಅಭ್ಯಾಸ ಸಂಖ್ಯೆ 3. ವಿಧೇಯತೆ ಸ್ಥಿರವಾಗಿರುವಲ್ಲಿ, ಪರಿಣಾಮಕಾರಿತ್ವವು ಅನಿವಾರ್ಯವಾಗುತ್ತದೆ.
Bible Reading:Genesis 34-36
ಪ್ರಾರ್ಥನೆಗಳು
ತಂದೆಯೇ, ನಿಮಗೆ ಸಂಪೂರ್ಣವಾಗಿ ಮತ್ತು ಹಿಂಜರಿಕೆಯಿಲ್ಲದೆ ವಿಧೇಯರಾಗಲು ನನಗೆ ಅನುಗ್ರಹವನ್ನು ನೀಡಬೇಕೆಂದು ನಾನು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ. ನನಗೆ ಸುಲಭ ಅಥವಾ ಆರಾಮದಾಯಕವಾದದ್ದನ್ನು ನಾನು ಆರಿಸಿಕೊಳ್ಳದಂತೆ ನನಗೆ ಸಹಾಯ ಮಾಡಿ. ನಾನು ನನ್ನ ಸ್ವಂತ ಇಚ್ಛೆಯನ್ನು ನಿಮಗೆ ಒಪ್ಪಿಸುತ್ತೇನೆ ಮತ್ತು ನಿಮ್ಮ ಸ್ವರಕ್ಕೆ ವಿಧೇಯನಾಗಬೇಕೆಂದು ಬಯಸುತ್ತೇನೆ. ನನ್ನ ವಿಧೇಯತೆ ಬಾಗಿಲುಗಳು ತೆರೆಯಲ್ಪಡಲಿ, ದೈವಿಕ ವೇಗವನ್ನು ತರಲಿ ಮತ್ತು ನಿಮ್ಮ ಮಹಿಮೆಗಾಗಿ ಶಾಶ್ವತವಾದ ಪರಿಣಾಮವನ್ನು ಉಂಟುಮಾಡಲಿ. ಯೇಸುವಿನ ಹೆಸರಿನಲ್ಲಿ. ಆಮೆನ್!!
Join our WhatsApp Channel
Most Read
● ಅವರೊಳಗೆ ಪುಟ್ಟ ಪುಟ್ಟ ರಕ್ಷಕರಿದ್ದಾರೆ.● ಪುರುಷರು ಯಾಕೆ ಪತನಗೊಳ್ಳುವರು -2
● ಆ ಸುಳ್ಳುಗಳನ್ನು ಬಯಲಿಗೆಳೆಯಿರಿ.
● ವಾಗ್ದತ್ತ ದೇಶವನ್ನು ಸುತ್ತುವರೆದಿರುವ ಕೋಟೆಗಳೊಂದಿಗೆ ವ್ಯವಹರಿಸುವುದು.
● ಶುಭ ಸುದ್ದಿಯನ್ನು ಸಾರುವವರು
● ನೀವಿನ್ನೂ ತಡಮಾಡುತ್ತಿರುವುದೇಕೆ?
● ನರಕ ಎನ್ನುವುದು ನಿಜವಾಗಿ ಇರುವಂಥ ಸ್ಥಳ
ಅನಿಸಿಕೆಗಳು
