ಅನುದಿನದ ಮನ್ನಾ
2
2
60
ಶಬ್ದಕ್ಕಿಂತ ಹೆಚ್ಚಾಗಿ ಕರುಣೆಗಾಗಿ ಕೂಗು
Thursday, 22nd of January 2026
Categories :
ರೂಪಾಂತರ(transformation)
ಎಲ್ಲಾ ಗದ್ದಲಗಳನ್ನು ಮೀರಿ ಕರುಣೆಗಾಗಿ ಯಾಚಿಸುವ ಕೂಗು
ಜೀವನವು -ಶಬ್ದ, ಒತ್ತಡ ಮತ್ತು ಗೊಂದಲಗಳಿಂದ ತುಂಬಿದ ಕಿಕ್ಕಿರಿದ ಬೀದಿಯಂತೆ ಭಾಸವಾಗಬಹುದು. ನಾವು ಸಾಮಾನ್ಯವಾಗಿ ನಾವು ನೋಡಬಹುದಾದ, ಅನುಭವಿಸಬಹುದಾದ ಅಥವಾ ತಕ್ಷಣ ಅರ್ಥಮಾಡಿಕೊಳ್ಳಬಹುದಾದ ವಿಷಯಗಳಿಂದ ಮಾರ್ಗದರ್ಶಿಸಲ್ಪಡುತ್ತೇವೆ. ಆದರೆ ದೇವರು ಹೆಚ್ಚಾಗಿ ಕಣ್ಣುಗಳು ನೋಡಬಹುದಾದದ್ದನ್ನು ಮೀರಿ ಕಾರ್ಯ ಮಾಡುವವನಾಗಿದ್ದಾನೆ ಎಂದು ಬೈಬಲ್ ನಮಗೆ ತೋರಿಸುತ್ತದೆ
ಲೂಕ 18:35–43 ರಲ್ಲಿ, ಯೆರಿಕೊ ಬಳಿ ದಾರಿಯ ಬದಿಯಲ್ಲಿ ಕುಳಿತಿದ್ದ ಕುರುಡನ ಬಗ್ಗೆ ನಾವು ಓದಿದ್ದೇವೆ. ಅವನಿಗೆ ಏನನ್ನೂ ನೋಡಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಈ ಮನುಷ್ಯನು ನಂಬಿಕೆಯ ಕುರಿತು ದೃಷ್ಟಿಯ ಮೇಲೆ ಅವಲಂಬಿತವಾಗದ ಆದರೆ ನಂಬಿಕೆಯ ಮೇಲೆ ಅವಲಂಬಿತವಾದ ಪ್ರಬಲ ಪಾಠವನ್ನು ನಮಗೆ ಕಲಿಸುತ್ತಾನೆ.
ನಂಬಿಕೆ ಕೇಳುವುದರಿಂದ ಪ್ರಾರಂಭವಾಗುತ್ತದೆ.
ಆ ಮನುಷ್ಯನು ಕುರುಡನಾಗಿದ್ದರೂ, ಅವನ ಶ್ರವಣ ಶಕ್ತಿ ತೀಕ್ಷ್ಣವಾಗಿತ್ತು. ಜನಸಮೂಹವು ಹಾದುಹೋಗುವುದನ್ನು ಅವನು ಕೇಳಿದಾಗ, ಅವನು ಏನು ನಡೆಯುತ್ತಿದೆ ಎಂದು ಕೇಳಿದನು. ಅವರು ಅವನಿಗೆ, "ನಜರೇತಿನ ಯೇಸು ಹಾದುಹೋಗುತ್ತಿದ್ದಾನೆ" ಎಂದು ಹೇಳಿದರು. ಬೈಬಲ್ ಹೇಳುತ್ತದೆ:
"ಆದಕಾರಣ ಸಾರಿದ ವಾರ್ತೆಯು ನಂಬಿಕೆಗೆ ಆಧಾರ, ಆ ವಾರ್ತೆಗೆ ಕ್ರಿಸ್ತನ ವಾಕ್ಯವೇ ಆಧಾರ." (ರೋಮ 10:17)
ಈ ಮನುಷ್ಯನು ಯೇಸುವನ್ನು ಎಂದಿಗೂ ನೋಡಿರಲಿಲ್ಲ, ಆದರೆ ಆತನ ಹೆಸರನ್ನು ಕೇಳಿದಾಗ ಅವನ ಹೃದಯದಲ್ಲಿ ಏನೋ ಕಲಕಿದಂತಾಯಿತು. ನಂಬಿಕೆಯು ನೋಡುವುದರಿಂದಲ್ಲ ಆದರೆ ಕೇಳುವುದರ ಮೂಲಕ ಹುಟ್ಟಿತು. ಕೆಲವೊಮ್ಮೆ ದೇವರು ಒಂದು ಇಂದ್ರಿಯವನ್ನು ಸೀಮಿತಗೊಳಿಸಲು ಅನುಮತಿಸಿ ಇನ್ನೊಂದು ಇಂದ್ರಿಯವನ್ನು ಬಲಪಡಿಸಬಹುದು. ನಾವು ದೇವರ ವಾಕ್ಯವನ್ನು ಎಚ್ಚರಿಕೆಯಿಂದ ಆಲಿಸಿದಾಗ, ಯಾವುದೇ ಬದಲಾವಣೆಯನ್ನು ನೋಡುವ ಮೊದಲೇ ನಂಬಿಕೆ ಹೆಚ್ಚಾಗಲು ಪ್ರಾರಂಭಿಸುತ್ತದೆ. ಅದಕ್ಕಾಗಿಯೇ ನೀವು ನಂಬಿಕೆಯಲ್ಲಿ ಬೆಳೆಯಲು ಪ್ರತಿದಿನ ದೇವರ ವಾಕ್ಯವನ್ನು ಓದಬೇಕು.
ಮೌನವಾಗಿರಲು ನಿರಾಕರಿಸುವುದು
ಕುರುಡನು “ಯೇಸುವೇ, ದಾವೀದನ ಕುಮಾರನೇ, ನನ್ನ ಮೇಲೆ ಕರುಣಿಸು” ಎಂದು ಕೂಗಲು ಪ್ರಾರಂಭಿಸಿದಾಗ, ಜನಸಮೂಹವು ಅವನಿಗೆ ಸುಮ್ಮನಿರಲು ಹೇಳಿತು. ಆದರೆ ಅವನು ನಿಲ್ಲಿಸುವ ಬದಲು, ಇನ್ನೂ ಜೋರಾಗಿ ಕೂಗಿದನು. ನೀವು ಜೀವನದಲ್ಲಿ ಸಾಗುತ್ತಿರುವಾಗ, ನಿಮ್ಮನ್ನು ಮುಚ್ಚಿಹಾಕಲು ಯಾವಾಗಲೂ ಯಾರಾದರೂ ಪ್ರಯತ್ನಿಸುತ್ತಿರುತ್ತಾರೆ.
ಆದರೆ ಬೈಬಲ್ ನಂಬಿಕೆಯನ್ನು ಈ ರೀತಿ ವಿವರಿಸುತ್ತದೆ:
“ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ. (ಇಬ್ರಿಯ 11:1)
ಈ ಮನುಷ್ಯನು ಗುಣಮುಖನಾಗುತ್ತಾನೆ ಎಂಬುದಕ್ಕೆ ಯಾವುದೇ ಭೌತಿಕ ಪುರಾವೆ ಇರಲಿಲ್ಲ. ಆದರೂ ಅವನ ನಂಬಿಕೆ ನಿಜವಾಗಿಯೂ ಮತ್ತು ಬಲವಾಗಿಯೂ ಇತ್ತು. ಇತರರು ನಮ್ಮನ್ನು ನಿರುತ್ಸಾಹಗೊಳಿಸಿದಾಗ ನಿಜವಾದ ನಂಬಿಕೆ ಬಿಟ್ಟುಕೊಡುವುದಿಲ್ಲ. ಒತ್ತಡದಲ್ಲಿಯೂ ಅದು ಬಲಗೊಳ್ಳುತ್ತದೆ. ಸಂದರ್ಭಗಳು “ಸುಮ್ಮನಿರು” ಎಂದು ಹೇಳಿದಾಗಲೂ ನಂಬಿಕೆ ಮಾತನಾಡುತ್ತದೆ.
ಆತನನ್ನು ದಾವೀದನ ಮಗ ಎಂದು ಕರೆದನು.
ಕುರುಡನು ಯೇಸುವನ್ನು "ದಾವೀದನ ಮಗ" ಎಂದು ಕರೆದನು. ಇದು ಕೇವಲ ಸಭ್ಯವಾದ ಬಿರುದಾಗಿರಲಿಲ್ಲ - ಬದಲಾಗಿ ಇದು ನಂಬಿಕೆಯ ಘೋಷಣೆಯಾಗಿತ್ತು. ಮೆಸ್ಸೀಯನು ದಾವೀದನ ವಂಶಾವಳಿಯಿಂದ ಬರುತ್ತಾನೆ ಎಂದು ಯಹೂದಿಗಳಿಗೆ ತಿಳಿದಿತ್ತು. ಈ ಬಿರುದನ್ನು ಬಳಸುವ ಮೂಲಕ, ಆ ಮನುಷ್ಯನು, "ನೀನು ವಾಗ್ದಾನ ಮಾಡಿದ ರಕ್ಷಕನೆಂದು ನಾನು ನಂಬುತ್ತೇನೆ" ಎಂದು ಹೇಳುತ್ತಿದ್ದನು.
ಮನುಷ್ಯರ ದೃಷ್ಟಿಯಲ್ಲಿ ಕುರುಡನಾಗಿದ್ದರೂ, ಅವನು ತನ್ನ ಆತ್ಮದಲ್ಲಿ ಸ್ಪಷ್ಟವಾದ ದೃಷ್ಟಿ ಹೊಂದಿದ್ದನು. ಈ ಲೋಕದ ಮನುಷ್ಯರು ಏನನ್ನು ಕಡೆಗಣಿಸುತ್ತಾರೋ ಅದನ್ನೇ ನಂಬಿಕೆಯು ಹೆಚ್ಚಾಗಿ ಗುರುತಿಸುತ್ತದೆ.
ಸರಳ ಆದರೆ ಶಕ್ತಿಯುತವಾದ ಪ್ರಾರ್ಥನೆ
“ನಾನು ನಿನಗಾಗಿ ಏನು ಮಾಡಬೇಕೆಂದು ನೀನು ಬಯಸುತ್ತೀಯ?” —ಲೂಕ 18:41 )
ಎಂದು ಕರ್ತನಾದ ಯೇಸು ನಿಂತು ಅವನಿಗೆ ಒಂದು ಪ್ರಮುಖ ಪ್ರಶ್ನೆಯನ್ನು ಕೇಳಿದನು ಆ ಮನುಷ್ಯನು ಅದಕ್ಕೆ ಸ್ಪಷ್ಟವಾಗಿ,
“ಕರ್ತನೇ, ನನಗೆ ದೃಷ್ಟಿ ಬರುವಂತೆ ಮಾಡು” ಎಂದು ಉತ್ತರಿಸಿದನು.
ಯೇಸು :
“ನಿನ್ನ ದೃಷ್ಟಿಯನ್ನು ಪಡೆ ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ.” ಎಂದನು —ಲೂಕ 18:42
ನಮ್ಮಲ್ಲಿ ನಂಬಿಕೆ ನಿರ್ದಿಷ್ಟವಾಗಿರಬೇಕು ಎಂಬ ಮುಖ್ಯವಾದ ವಿಷಯವನ್ನು ನಮಗೆ ತೋರಿಸುತ್ತದೆ: ಆ ಮನುಷ್ಯನು ಅಸ್ಪಷ್ಟವಾಗಿ ಏನೇನೋ ಮಾತನಾಡಲಿಲ್ಲ. ತನಗೆ ಏನು ಬೇಕು ಎಂದು ಅವನಿಗೆ ತಿಳಿದಿತ್ತು ಮತ್ತು ಅದಕ್ಕಾಗಿ ಯೇಸುವನ್ನು ಸಂಪೂರ್ಣವಾಗಿ ನಂಬಿದನು. ಕರ್ತನಾದ ಯೇಸು ಒಮ್ಮೆ :
“ನಂಬುವವನಿಗೆ ಎಲ್ಲವೂ ಸಾಧ್ಯ.” ಎಂದು ಹೇಳಿದನು
(ಮಾರ್ಕ 9:23)
ಅನೇಕರನ್ನು ಸ್ಪರ್ಶಿಸಿದ ಅದ್ಭುತ
ಆ ಮನುಷ್ಯನು ದೃಷ್ಟಿ ಪಡೆದಾಗ, ಅವನು ಸದ್ದಿಲ್ಲದೆ ಹೊರಟು ಹೋಗಲಿಲ್ಲ. ಅವನು ಯೇಸುವನ್ನು ಹಿಂಬಾಲಿಸಿ ದೇವರನ್ನು ಸ್ತುತಿಸಿದನು. ಇದನ್ನು ನೋಡಿದ ಜನರು ಸಹ ದೇವರನ್ನು ಸ್ತುತಿಸಿದರು ಎಂದು ಬೈಬಲ್ ಹೇಳುತ್ತದೆ.
ಕರ್ತನಾದ ಯೇಸು ನಮಗೆ ಬೋದಿಸುವುದೇನೆಂದರೆ:
“ನಿಮ್ಮ ಬೆಳಕು ಮನುಷ್ಯರ ಮುಂದೆ ಪ್ರಕಾಶಿಸಲಿ, ಆಗ ಅವರು ನಿಮ್ಮ ಒಳ್ಳೆಯ ಕಾರ್ಯಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವರು.” ಎಂದು —(ಮತ್ತಾಯ 5:16)
ಒಬ್ಬ ಮನುಷ್ಯನಿಗಾದ ಅದ್ಭುತವು ಅನೇಕ ಜನರಿಗೆ ಸಾಕ್ಷಿಯಾಯಿತು. ದೇವರು ನಮ್ಮ ಜೀವನವನ್ನು ಬದಲಾಯಿಸಿದಾಗ, ಅದು ಎಂದಿಗೂ ನಮ್ಮಲ್ಲೇ ಕಡೆಗೊಳ್ಳಬಾರದು. ಆದರಿಂದ ಕರ್ತನು ನಿಮ್ಮ ಜೀವನದಲ್ಲಿ ಏನು ಮಾಡಿದ್ದಾನೆಂದು ನೀವು ಸಾಕ್ಷಿ ಹೇಳುತ್ತೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನೋಡುವವರಾಗಿ ನಡೆಯದೆ ನಂಬುವವರಾಗಿ ನಡೆಯಬೇಕು.
ಕುರುಡನ ಜೀವಿತ ಪ್ರಯಾಣವು
"ನಾವು ನೋಡುವವರಾಗಿ ನಡೆಯದೆ ನಂಬುವವರಾಗಿ ನಡೆಯುವರಾಗಿದ್ದೇವೆ"—2 ಕೊರಿಂಥ 5:7
ಎನ್ನುವ ಆಳವಾದ ಸತ್ಯವನ್ನು ನಮಗೆ ನೆನಪಿಸುತ್ತದೆ. ಕರ್ತನಾದ ಯೇಸು ಅವನಿಗೆ ಭೌತಿಕ ದೃಷ್ಟಿಯನ್ನು ಪುನಃಸ್ಥಾಪಿಸುವುದಕ್ಕಿಂತ ಹೆಚ್ಚಿನದನ್ನು ಮಾಡಿದನು - ಆತನು ಅವನ ಆತ್ಮೀಕ ದೃಷ್ಟಿಯನ್ನೂ ತೆರೆದನು. ಯಾವುದೂ ಸ್ಪಷ್ಟವಾಗಿ ಕಾಣಿಸದಿದ್ದರೂ ದೇವರ ಕೈ ಕೆಲಸ ಮಾಡುವುದನ್ನು ನೋಡಲು ನಂಬಿಕೆ ಎನ್ನುವಂತದ್ದು ನಮಗೆ ಸಹಾಯ ಮಾಡುತ್ತದೆ.
ಯೆರಿಕೊ ಬಳಿಯ ಕುರುಡನು ನಂಬಿಕೆಗೆ ಪರಿಪೂರ್ಣ ಪರಿಸ್ಥಿತಿಗಳ ಅಗತ್ಯವಿಲ್ಲ -ಅದಕ್ಕೆ ಸಿದ್ಧ ಹೃದಯ ಮಾತ್ರ ಬೇಕು ಎಂಬುದನ್ನು ನಮಗೆ ಕಲಿಸುತ್ತಾನೆ. ದೌರ್ಬಲ್ಯದಲ್ಲಿ ಪ್ರಾರಂಭವಾಗುವ ಕೂಗು ಸಹ ಪರಲೋಕದ ಗಮನವನ್ನು ಸೆಳೆಯಬಹುದು.
ಜೀವನ ಎಷ್ಟೇ ಗದ್ದಲವಾಗಿದ್ದರೂ, ನಂಬಿಕೆಯ ಧ್ವನಿ ಅದಕ್ಕಿಂತಲೂ ಜೋರಾದದ್ದು. ನಂಬಿಕೆ ಮಾತನಾಡುವಾಗ, ಯೇಸು ಕೇಳುತ್ತಾನೆ ಮತ್ತು ಯೇಸು ಪ್ರತಿಕ್ರಿಯಿಸಿದಾಗ, ಎಲ್ಲವೂ ಬದಲಾಗಬಹುದು.
Bible Reading: Exodus 12-13
ಪ್ರಾರ್ಥನೆಗಳು
ತಂದೆಯೇ, ನಮ್ಮ ಜೀವನದಲ್ಲಿ ನಿನ್ನ ಕೈ ಕೆಲಸ ಮಾಡುವುದನ್ನು ನಾವು ನೋಡುವಂತೆಯೂ ಮತ್ತು ಗುಣಪಡಿಸುವ ಮತ್ತು ಪುನಃಸ್ಥಾಪಿಸುವ ನಿನ್ನ ಶಕ್ತಿಯಲ್ಲಿ ವಿಶ್ವಾಸ ಇಡುವಂತೆಯೂ ನಮಗೆ ನಂಬಿಕೆಯನ್ನು ಕೊಡು. ನಮ್ಮ ಭರವಸೆಯ ಕೂಗುಗಳು ಅನುಮಾನದ ಶಬ್ದವನ್ನು ಮೀರಿ, ನಮ್ಮನ್ನು ನಿನ್ನ ಸನ್ನಿಧಿಗೆ ಯೇಸುವಿನ ಹೆಸರಿನಲ್ಲಿ ಕರೆದೊಯ್ಯಲಿ. ಆಮೆನ್.
Join our WhatsApp Channel
Most Read
● ಪುರಾತನ ಮಾರ್ಗಗಳನ್ನು ವಿಚಾರಿಸಿ● ತಾತ್ಕಾಲಿಕವಾದದ್ದಕ್ಕಾಗಿ ಅಲ್ಲ, ನಿತ್ಯವಾದದ್ದಕ್ಕೆ ಹಾತೊರೆಯಿರಿ.
● ಉಪವಾಸದಲ್ಲಿರುವ ಜೀವನವನ್ನು ಬದಲಾಯಿಸುವ ಪ್ರಯೋಜನಗಳು
● ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ
● ನಿಮ್ಮ ಹೋರಾಟಗಳೇ ನಿಮ್ಮ ಗುರುತಾಗಲು ಬಿಡಬೇಡಿ -2
● ಆತ್ಮೀಕ ಹೆಮ್ಮೆಯ ಬಲೆ
● ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು
