english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಹುಡುಕಿ ಕಂಡುಕೊಳ್ಳುವ ಕಥೆ
ಅನುದಿನದ ಮನ್ನಾ

ಹುಡುಕಿ ಕಂಡುಕೊಳ್ಳುವ ಕಥೆ

Friday, 23rd of January 2026
2 2 68
Categories : ಮೋಕ್ಷ (Salvation) ಹೊಸ ಸ್ವಭಾವ ಕ್ರಿಸ್ತನಲ್ಲಿ ನಮ್ಮ ಗುರುತು (New Nature Our Identity in Christ)
ಹಣದಿಂದ ಖರೀದಿಸಲು ಸಾಧ್ಯವಾಗದ ವಿಷಯಗಳು ಲೂಕ 19:1–10 

ಯೆರಿಕೊ ಎಂಬ ಜನನಿಬಿಡ ನಗರದಲ್ಲಿ ಜಕ್ಕಾಯನೆಂಬ ಒಬ್ಬ ಶ್ರೀಮಂತ ವ್ಯಕ್ತಿ ವಾಸಿಸುತ್ತಿದ್ದನು. ಸತ್ಯವೇದ ಹೇಳುವಂತೆ ಅವನು ಒಬ್ಬ ಮುಖ್ಯ ತೆರಿಗೆ ವಸೂಲಿಗಾರನಾಗಿದ್ದನು. ಇದರರ್ಥ ಅವನು ರೋಮನ್ ಸರ್ಕಾರಕ್ಕಾಗಿ ತೆರಿಗೆಗಳನ್ನು ಸಂಗ್ರಹಿಸುತ್ತಿದ್ದವನಾಗಿದ್ದು ಸಾಮಾನ್ಯವಾಗಿ ಜನರಿಂದ ಅಗತ್ಯಕ್ಕಿಂತ ಹೆಚ್ಚಿನ ತೆರಿಗೆಯನ್ನೂ ವಿಧಿಸುತ್ತಿದ್ದನು. ಈ ಕಾರಣದಿಂದಾಗಿ, ಅವನು ತನ್ನ ಸ್ವಂತ ಜನರಿಗೆ ಇಷ್ಟವಾಗದವನಾಗಿ  ತಿರಸ್ಕರಿಸಲ್ಪಟ್ಟವನಾಗಿದ್ದನು. 

ಜಕ್ಕಾಯ ಹೆಸರಿನ ಅರ್ಥ "ಶುದ್ಧ", ಆದರೆ ಅವನ ಜೀವನಶೈಲಿ ಅದನ್ನು ಪ್ರತಿಬಿಂಬಿಸುತ್ತಿರಲಿಲ್ಲ. ಅವನಿಗೆ ಹಣ, ಸ್ಥಾನ ಮಾನ ಮತ್ತು ಅಧಿಕಾರವಿದ್ದರೂ, ಅವನೊಳಗೆ ಯಾವುದೋ ಒಂದು ಕೊರತೆಯಿತ್ತು. ಹಣವು ಅವನ ಜೇಬುಗಳನ್ನು ತುಂಬಿಸಿತ್ತೇ ಹೊರತು ಅವನ ಹೃದಯವನ್ನಲ್ಲ. ಅಂತರಂಗದಲ್ಲಿ, ಜಕ್ಕಾಯನು ಯಾವುದೇ ಸಂಪತ್ತಿನಿಂದಲೂ ಖರೀದಿಸಲು ಸಾಧ್ಯವಾಗದ ಸಂಗತಿಗಳಾದ ಕ್ಷಮೆ, ಜೀವನದ ಅರ್ಥ ಮತ್ತು ಶಾಂತಿಯನ್ನು ಹುಡುಕುತ್ತಿದ್ದನು.

ಯೇಸುವನ್ನು ಬಯಸಿದ ಹೃದಯ 
“ಅವನು ಯೇಸು ಯಾರೆಂದು ನೋಡಲು ಬಯಸಿದನು, ಆದರೆ ಅವನು ಕುಳ್ಳನಾಗಿದ್ದರಿಂದ ಜನಸಮೂಹದ ಮುಂದೆ ಅವನಿಗೆ ನೋಡಲು ಸಾಧ್ಯವಾಗಲಿಲ್ಲ.”  ಎಂದುಲೂಕ 19:3 ಹೇಳುತ್ತದೆ(NIV).ಈ ಒಂದು ಸಾಲು ಬಹಳಷ್ಟು ವಿಚಾರಗಳನ್ನು ಪ್ರಕಟ ಪಡಿಸುತ್ತದೆ. ಜಕ್ಕಾಯನು ಯೇಸುವನ್ನು ನೋಡಲು ಬಯಸಿದನು. ಅವನ ಆಸೆ ನಿಜವಾದದ್ದಾಗಿತ್ತು.

"ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ, ಮತ್ತು ನನ್ನನ್ನು ಆಸಕ್ತಿಯಿಂದ ಹುಡುಕುವವರು ನನ್ನನ್ನು ಕಂಡುಕೊಳ್ಳುತ್ತಾರೆ." (ಜ್ಞಾನೋಕ್ತಿ 8:17 (ESV) ಎಂದು ಸತ್ಯವೇದ ಭರವಸೆ ನೀಡುತ್ತದೆ.ಕರ್ತನು ಯಾವಾಗಲೂ ಯಥಾರ್ಥವಾದ ಹೃದಯಕ್ಕೆ ಪ್ರತಿಕ್ರಿಯಿಸುತ್ತಾನೆ. ಜಕ್ಕಾಯನು ಕೇವಲ ಕುತೂಹಲ ಹೊಂದಿದ ವ್ಯಕ್ತಿಯಾಗಿರದೇ ಅವನು ತನ್ನ ಪ್ರಸ್ತುತ ಜೀವನಕ್ಕಿಂತ ಹೆಚ್ಚಿನದಕ್ಕಾಗಿ ದಾಹ ವುಳ್ಳವನಾಗಿದ್ದನು.

ಮಿತಿಗಳನ್ನು ಮೀರಿ ಏರಿ ನಿಂತನು 
ಅವನು ಕುಳ್ಳನಾಗಿದ್ದರಿಂದ ಮತ್ತು ಜನಸಮೂಹವು ದೊಡ್ಡದಾಗಿದ್ದರಿಂದ, ಜಕ್ಕಾಯನು ಯೇಸುವನ್ನು ನೋಡಲು ಸಾಧ್ಯವಾಗಲಿಲ್ಲ. ಆದರೆ ತನ್ನ ಪ್ರಯತ್ನ ಬಿಟ್ಟುಕೊಡುವ ಬದಲು, ಅವನು ಮುಂದೆ ಓಡಿ ಹೋಗಿ ಒಂದು ಆಲದ ಮರವನ್ನು ಹತ್ತಿದನು. 
 “ ಆದಕಾರಣ ಆತನನ್ನು ನೋಡುವದಕ್ಕಾಗಿ ಮುಂದೆ ಓಡಿಹೋಗಿ ಆತನು ಬರುತ್ತಿರುವ ಮಾರ್ಗದಲ್ಲಿದ್ದ ಆಲದ ಮರವನ್ನು ಹತ್ತಿದನು. ಎಂದು ಲೂಕ 19:4 ಹೇಳುತ್ತದೆ. 

ದೌರ್ಬಲ್ಯದಂತೆ ಕಾಣುತ್ತಿದ್ದದ್ದು ಈಗ ಅದೇ ನಂಬಿಕೆಗೆ ದ್ವಾರವಾಯಿತು. ಅನೇಕ ಬಾರಿ, ನಮ್ಮ ಮಿತಿಗಳು ನಮ್ಮನ್ನು ದೇವರಿಂದ ದೂರ ತಳ್ಳುವ ಬದಲು ದೇವರ ಹತ್ತಿರಕ್ಕೆ ತಳ್ಳುತ್ತವೆ.  " ನೀವು ತಿರುಗಿಕೊಂಡು ಚಿಕ್ಕ ಮಕ್ಕಳಂತೆ ಆಗದೆ ಹೋದರೆ ನೀವು ಪರಲೋಕರಾಜ್ಯದಲ್ಲಿ ಸೇರುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ." (ಮತ್ತಾಯ 18:3)ಎಂದು ಹೇಳುತ್ತಾ ಮಗುವಿನಂತಹ ನಂಬಿಕೆಗಿರುವ ಮೌಲ್ಯವನ್ನು ಯೇಸು ನಮಗೆ ಬೋದಿಸುತ್ತಾನೆ.

ಚಿಕ್ಕ ಮಗುವಿನಂತೆ, ಜಕ್ಕಾಯನು ತನ್ನ ಅಂತಸ್ತಿನ ಕುರಿತಾಗಲೀ ಅಥವಾ ಸಾರ್ವಜನಿಕರ ಅಭಿಪ್ರಾಯದ ಕುರಿತಾಗಲೀ ಕಾಳಜಿ ವಹಿಸಲಿಲ್ಲ. ಬದಲಾಗಿ ಅವನು ಕರ್ತನಾದ ಯೇಸುವನ್ನು ನೋಡುವ ಬಗ್ಗೆ ಮಾತ್ರ ಕಾಳಜಿ ವಹಿಸಿದನು.

ದೇವರ ಪೂರೈಕೆ ಈಗಾಗಲೇ ಅಲ್ಲಿತ್ತು.
ಆ ಆಲದ ಮರವು ಆಕಸ್ಮಿಕವಾಗಿರಲಿಲ್ಲ. ಜಕ್ಕಾಯನು ಹುಟ್ಟುವ ಮೊದಲೇ ದೇವರು ಅದನ್ನು ಸಿದ್ಧಪಡಿಸಿರಬಹುದು. : “ ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಪಡಿಸಿರುವ ವಿಷಯಗಳು ಕುರಿತು ಕಣ್ಣು ಕಾಣಲಿಲ್ಲ, ಕಿವಿಯೂ ಕೇಳಲಿಲ್ಲ... .” 1 ಕೊರಿಂಥ 2:9 (NIV) ಎಂದು ದೇವರವಾಕ್ಯವು ನಮಗೆ ನೆನಪಿಸುತ್ತದೆ. 
ಸಾಮಾನ್ಯವಾಗಿ, ನಾವು ಪ್ರಾರ್ಥಿಸುವ ಮೊದಲೇ ದೇವರು ಉತ್ತರಗಳನ್ನು ಸಿದ್ಧಪಡಿಸಿರುತ್ತಾನೆ. ನಾವು ನಿಜವಾಗಿಯೂ ಆತನನ್ನು ಹುಡುಕುವಾಗ, ಆತನು ಈಗಾಗಲೇ ವ್ಯವಸ್ಥೆ ಮಾಡಿರುವ ವಿಷಯಗಳನ್ನು ಗೋಚರ ಪಡಿಸುತ್ತಾನೆ.

ಹೆಸರಿನಿಂದ ಕರೆಯಲ್ಪಟ್ಟು, ಕೃಪೆಯಿಂದ ಆಹ್ವಾನಿಸಲ್ಪಟ್ಟನು.
ಯೇಸು ಮರವನ್ನು ತಲುಪಿದಾಗ, ಅವನು ಮೇಲಕ್ಕೆ ನೋಡಿ, 
“ಜಕ್ಕಾಯನೇ, ತಟ್ಟನೇ ಕೆಳಗೆ ಬಾ. ನಾನು ಇಂದು ನಿನ್ನ ಮನೆಯಲ್ಲಿಯೇ ಇಳುಕೊಳ್ಳಬೇಕು.” (ಲೂಕ 19:5)
ಎಂದನು. ಯೇಸುವಿಗೆ ಅವನ ಹೆಸರು ತಿಳಿದಿತ್ತು.
 “ನಾನು ನಿನ್ನನ್ನು ಹೆಸರಿಡಿದು ಕರೆದಿದ್ದೇನೆ; ನೀನು ನನ್ನವನೇ ”ಯೆಶಾಯ 43:1 (NIV) 

ಎನ್ನುವ ದೇವರ ವಾಗ್ದಾನ ಎಷ್ಟು ಸತ್ಯ ಯೇಸು ಜಕ್ಕಾಯನ ಮನೆಗೆ ತನ್ನನ್ನು ಆಹ್ವಾನಿಸಿಕೊಳ್ಳುವುದು ಕೇವಲ ಒಂದು ಸಾಮಾನ್ಯ ಭೇಟಿಗಿಂತಲೂ ಹೆಚ್ಚಿನದಾಗಿತ್ತು - ಅದು ಅವನ ಹೃದಯಕ್ಕೆ  ನೀಡಿದ್ದ ಆಹ್ವಾನವಾಗಿತ್ತು. ಜನಸಮೂಹವು ದೂರುತ್ತಿದ್ದರೂ ಪರಲೋಕವು ಹರ್ಷಗೊಂಡಿತ್ತು.

ಸಂಪೂರ್ಣವಾಗಿ ಮಾರ್ಪಟ್ಟ ಒಂದು ಜೀವನ 
ಜಕ್ಕಾಯನು ಪಶ್ಚಾತ್ತಾಪ, ಔದಾರ್ಯ ಮತ್ತು ವಿಧೇಯತೆಯಿಂದ ಪ್ರತಿಕ್ರಿಯಿಸಿದನು. ಯೇಸುವಿನೊಂದಿಗಿನ ಅವನ ಭೇಟಿಯು ಅವನ ಹೃದಯವನ್ನು ಮಾತ್ರವಲ್ಲದೆ ಅವನ ಇಡೀ ಕುಟುಂಬವನ್ನೇ ಪರಿವರ್ತಿಸಿತು. 

ಜಕ್ಕಾಯನ ಕಥೆಯು ಯೇಸುವನ್ನು ಹುಡುಕುವಂತದ್ದು ಯಾವಾಗಲೂ ಮಾರ್ಪಟಿಗೆ ಕಾರಣವಾಗುತ್ತದೆ ಎಂಬುದನ್ನು ನಮಗೆ ನೆನಪಿಸುತ್ತದೆ. ನಾವು ನಮ್ಮ ಎಲ್ಲಾ ಮಿತಿಗಳನ್ನು ಮೀರಿ, ನಮ್ಮನ್ನು ತಗ್ಗಿಸಿಕೊಂಡು, ಆತನ ಕರೆಗೆ ಪ್ರತಿಕ್ರಿಯಿಸುವಾಗ ಸಿಗುವ ನಿಜವಾದ ಸಂಪತ್ತು ಬೇರೆ ಯಾವ ಇಹಲೋಕದ ಸಂಪತ್ತಿನಲ್ಲಿಯೂ ಸಿಕ್ಕುವುದಿಲ್ಲ - ಆದರೆ ಅದು ಕೃಪೆ, ಕ್ಷಮೆ ಮತ್ತು ಕರ್ತನೊಂದಿಗೆ ಪುನಃಸ್ಥಾಪಿಸಿದ ಸಂಬಂಧದಲ್ಲಿ ಮಾತ್ರವೇ ಕಂಡುಬರುತ್ತದೆ ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ.

Bible Reading: Exodus 14-16
ಪ್ರಾರ್ಥನೆಗಳು
ಕರ್ತನಾದ ಯೇಸುವೇ,  ರೂಪಾಂತರ ಪಡಿಸುವ ನಿನ್ನ ಕೃಪೆ ಮತ್ತು ಕರುಣೆಗಾಗಿ ಸ್ತೋತ್ರ. ನಮ್ಮ ಮಾತುಗಳು ಮತ್ತು ಕಾರ್ಯಗಳು ನಮ್ಮ ಜೀವನದಲ್ಲಿ ನಿನ್ನ ನಿರಂತರ ಕೆಲಸವನ್ನು ಸರಿಯಾಗಿ ಪ್ರತಿಬಿಂಬಿಸುವಂತೆ ನಮ್ಮನ್ನು ಆಂತರ್ಯದಿಂದ ಯೇಸುನಾಮದಲ್ಲಿ ಮಾರ್ಪಟಿಸು. ಆಮೆನ್.


Join our WhatsApp Channel


Most Read
● ಕರ್ತನ ಸೇವೆ ಮಾಡುವುದು ಎಂದರೇನು II
● ದೈನಂದಿನ ಮನ್ನಾ
● ದಿನ 04:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೇವರ ವಾಕ್ಯವನ್ನು ಹೊಂದಿಕೊಳ್ಳಿರಿ.
● ಆತನ ಮೇಲೆ ಆಧಾರಗೊಂಡು ನಿಮ್ಮ ಹೋರಾಟವನ್ನು ಎದುರಿಸಿ.
● ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೇವರ ಸ್ವಭಾವ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್