english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ದೇವರ ಮನಸ್ಸನ್ನು ತಿಳಿದುಕೊಳ್ಳಲು ಬಯಸುವ ಹೃದಯ.
ಅನುದಿನದ ಮನ್ನಾ

ದೇವರ ಮನಸ್ಸನ್ನು ತಿಳಿದುಕೊಳ್ಳಲು ಬಯಸುವ ಹೃದಯ.

Friday, 30th of January 2026
2 2 61
Categories : ಭಾವನೆ (Emotion)
ದಾವೀದನು ಕೀರ್ತನೆ 27 ರಲ್ಲಿ ಒಂದು ಪ್ರಬಲವಾದ ಹೇಳಿಕೆಯನ್ನು ನೀಡುತ್ತಾನೆ. ಅವನು ದೇವರ ಬಳಿ ಎಲ್ಲಕ್ಕಿಂತ ಮೊದಲು ಗೆಲುವು, ರಕ್ಷಣೆ ಅಥವಾ ಸಂಪತ್ತನ್ನು ಕೇಳುವುದಿಲ್ಲ.ಬದಲಾಗಿ ಅವನು ಆತನ ಸಾಮೀಪ್ಯ ಮತ್ತು ಆತನ ಕುರಿತಾದ ತಿಳುವಳಿಕೆಯನ್ನು ಅನುಗ್ರಹಿಸಬೇಕೆಂದು ಕೇಳುತ್ತಾನೆ. 
"ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ, ಆತನ ಪ್ರಸನ್ನತೆಯನ್ನು ನೋಡುವುದಕ್ಕೂ, ಆತನ ಮಂದಿರದಲ್ಲಿ ಧ್ಯಾನ ಮಾಡುವುದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರು ನೋಡುತ್ತಿರುವೆನು."
 ಕೀರ್ತನೆ 27:4 

ದೇವರಿಗೆ ಎಲ್ಲವೂ ತಿಳಿದಿದೆ ಎಂಬುದು ದಾವೀದನಿಗೆ ತಿಳಿದಿತ್ತು. ಆದರೆ ಅವನನ್ನು ಆಶ್ಚರ್ಯಗೊಳಿಸಿದ್ದು  ದೇವರು ತನ್ನನ್ನು ಹುಡುಕುವವರೊಂದಿಗೆ ತನ್ನ ಜ್ಞಾನವನ್ನು ಹಂಚಿಕೊಳ್ಳಲು ಸಿದ್ಧನಿದ್ದಾನೆ ಎನ್ನುವ ಸತ್ಯ. ದೇವರು ತನ್ನ ಚಿತ್ತವನ್ನು ಮರೆಮಾಡುವುದಿಲ್ಲ. ಆತನು ನಾವು ಆತನಲ್ಲಿ ಅದನ್ನು ಕೇಳ ಬೇಕೆಂದು ಆಹ್ವಾನಿಸುತ್ತಾನೆ.

ಭಾವನೆಗಳು ಹೆಚ್ಚಾದಾಗ 
ದಾವೀದನು ಈ ಪಾಠವನ್ನು ಬಹಳ ನೋವಿನಿಂದ ಕಲಿತನು. ಒಂದು ದಿನ, ಅವನು ಮತ್ತು ಅವನ ಜನರು ತಮ್ಮ ಪಟ್ಟಣವಾದ ಜಿಕ್ಲಾಗ್‌ಗೆ ಹಿಂತಿರುಗಿ ಬಂದಾಗ, ಎಲ್ಲವೂ ನಾಶವಾಗಿದ್ದನ್ನು ಕಂಡುಕೊಂಡರು.

"ದಾವೀದನೂ ಅವನ ಜನರೂ ಮೂರನೆಯ ದಿನ ಚಿಕ್ಲಗ್ ಊರನ್ನು ಮುಟ್ಟಿದರು. ಅಷ್ಟರೊಳಗೆ ಅಮಾಲೇಕ್ಯರು ದಂಡೆತ್ತಿ ದಕ್ಷಿಣ ಪ್ರಾಂತ್ಯಕ್ಕೂ ಚಿಕ್ಲಗ್ ಊರಿಗೂ ಬಂದು ಚಿಕ್ಲಗ್ ಊರನ್ನು ಸುಟ್ಟು ಹಾಳುಮಾಡಿ, ಆ ಊರಿನಲ್ಲಿದ್ದ ಎಲ್ಲಾ ಹೆಂಗಸರನ್ನೂ ಚಿಕ್ಕವರನ್ನೂ ದೊಡ್ಡವರನ್ನೂ ಸೆರೆಹಿಡಿದುಕೊಂಡು ಹೋಗಿದ್ದರು.  ಆದರೆ ಯಾರನ್ನೂ ಕೊಂದಿರಲಿಲ್ಲ. ದಾವೀದನೂ ಅವನ ಜನರೂ ತಮ್ಮ ಊರಿಗೆ ಬಂದಾಗ ಅದು ಸುಡಲ್ಪಟ್ಟಿರುವುದನ್ನೂ, ತಮ್ಮ ಹೆಂಡತಿಯರೂ ಗಂಡುಮಕ್ಕಳೂ ಸೆರೆಯಾಗಿ ಒಯ್ಯಲ್ಪಟ್ಟಿರುವುದನ್ನೂ ಕಂಡುಅವರು ತಮ್ಮಿಂದಾಗುವಷ್ಟು ಕಾಲ ಅತ್ತರು."1 ಸಮುವೇಲ 30:1–3 

ತಮ್ಮ ಹೆಂಡತಿಯರು, ಮಕ್ಕಳು, ಆಸ್ತಿಪಾಸ್ತಿಗಳು - ಎಲ್ಲವೂ ಕಣ್ಮರೆಯಾಗತ್ತು. ಭಾವನೆಗಳು ಹುಚ್ಚುಚ್ಚಾಗಿ ಓಡುತ್ತಿದ್ದವು. ಭಯ, ಕೋಪ, ದುಃಖ ಮತ್ತು ಆಘಾತವು ಇಡೀ ಪಾಳೆಯವನ್ನು ತುಂಬಿತು.

“ಇದಲ್ಲದೆ ಜನರು ತಮ್ಮ ಗಂಡು ಹೆಣ್ಣು ಮಕ್ಕಳಿಗಾಗಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡು, ದಾವೀದನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದುದರಿಂದ ಅವನು ಬಲು ಇಕ್ಕಟ್ಟಿನಲ್ಲಿ ಬಿದ್ದನು. ಆದರೂ ಅವನು ತನ್ನ ದೇವರಾದ ಯೆಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡು..” 1 ಸಮುವೇಲ 30:6 

ಇಲ್ಲಿಯೇ ಅನೇಕ ಜನರು ವಿಫಲರಾಗುತ್ತಾರೆ. ಭಾವನೆಗಳು ಉತ್ತುಂಗಕ್ಕೇರಿದಾಗ, ಜನರು ತೀವ್ರವಾಗಿ ವರ್ತಿಸಿ ನಂತರ ವಿಷಾದಿಸುತ್ತಾರೆ. ಆದರೆ ದಾವೀದನು ವಿಭಿನ್ನವಾಗಿ ನಡೆದುಕೊಂಡನು. ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ಬದಲು, ದಾವೀದನು ನಿಲ್ಲಿಸಿ ದೇವರ ಬಳಿ ವಿಚಾರಿಸಿದನು.
 “ಆಗ ದಾವೀದನು ಯೆಹೋವನನ್ನು, “ನಾನು ಆ ಗುಂಪನ್ನು ಹಿಂದಟ್ಟಬಹುದೋ, ಅದು ನನಗೆ ಸಿಕ್ಕುವುದೋ?” ಎಂದು ಕೇಳಲು ಆತನು, “ಹಿಂದಟ್ಟು, ಅದು ನಿನಗೆ ಸಿಕ್ಕುವುದು, ನೀನು ಎಲ್ಲರನ್ನೂ ಬಿಡಿಸಿಕೊಂಡು ಬರುವಿ” ಎಂದು ಉತ್ತರಕೊಟ್ಟನು.”
 1 ಸಮುವೇಲ 30:8 

ದಾವೀದನು ಯೋಚಿಸಲಿಲ್ಲ. ಅವನು ಆತುರಪಡಲಿಲ್ಲ. ಅವನು ಕರ್ತನ ಬಳಿ ವಿಚಾರಿಸಿದನು. ಅವನು ಹಾಗೆ ಮಾಡಿದ ಕಾರಣ, ಅವನಿಗೆ ಸ್ಪಷ್ಟ ನಿರ್ದೇಶನದ ಜೊತೆಗೆ ಸಂಪೂರ್ಣ ಗೆಲುವು ಸಿಕ್ಕಿತು. ಕರ್ತನನ್ನು ವಿಚಾರಿಸುವುದು ಎಂದರೆ ನಿರ್ಧಾರ ತೆಗೆದುಕೊಳ್ಳುವ ಮೊದಲು ದೇವರ ಚಿತ್ತವೇನೆಂದು ಕೇಳುವುದು.

ಇಂದಿನ ದಿನಮಾನಕ್ಕೆ ಈ ತತ್ವ
ನೀವು ನಿಮ್ಮ ಜೀವಮಾನದ ಉಳಿತಾಯವನ್ನು ವ್ಯಾಪಾರ ಅವಕಾಶದಲ್ಲಿ ಹೂಡಿಕೆ ಮಾಡಲದ್ದೀರಿ ಎಂದಿಟ್ಟುಕೊಳ್ಳಿ. ಅದು ಕೇಳುವುದಕ್ಕೆ ಎಲ್ಲವೂ ಚೆನ್ನಾಗಿಯೇ ಇದೆ . ಮಾರಾಟದ ಮಾತು ಪ್ರಭಾವಶಾಲಿಯಾಗಿದೆ. ನೀವು ಯಾವುದಕ್ಕೂ ಸಹಿ ಹಾಕುವ ಮೊದಲು - ಕರ್ತನನ್ನು ವಿಚಾರಿಸಿ. 

ನೀವು ನೋಡಲಾಗದದನ್ನು ದೇವರು ನೋಡುತ್ತಾನೆ. ನೀವು ಸಾಮಾಜಿಕ ಮಾಧ್ಯಮದಲ್ಲಿ ಯಾರೊಬ್ಬರ ಫೋಟೋಗಳನ್ನು ನೋಡುತ್ತೀರಿ ಮತ್ತು ತಕ್ಷಣವೇ ಪ್ರೀತಿಯಲ್ಲಿ ಬೀಳುತ್ತೀರಿ. ಎಲ್ಲವೂ ಪರಿಪೂರ್ಣವಾಗಿ ಕಾಣುತ್ತದೆ. ಆದರೆ ನೀವು ಕರ್ತನನ್ನು ವಿಚಾರಿಸಲು ಸಮಯ ತೆಗೆದುಕೊಂಡಾಗ, ಆತನು ಫೋಟೋ ಹಿಂದಿನ ಸತ್ಯವನ್ನು ಬಹಿರಂಗಪಡಿಸುತ್ತಾನೆ.

ಇದ್ದಕ್ಕಿದ್ದಂತೆ, ರೋಮಾಂಚನಕಾರಿಯಾಗಿ ಕಾಣುತ್ತಿದ್ದದ್ದು ಇನ್ನು ಮುಂದೆ ಸರಿಯಾಗಿ ಅನಿಸುವುದಿಲ್ಲ. ಕರ್ತನನ್ನು ವಿಚಾರಿಸುವುದು ಅನೇಕ ವರ್ಷಗಳು ವಿಷಾದ ಪಡುವುದರಿಂದ ನಮ್ಮನ್ನು ರಕ್ಷಿಸುತ್ತದೆ.

 ದೇವರು ಮಾರ್ಗದರ್ಶನ ನೀಡುವುದಾಗಿ ಭರವಸೆ ನೀಡುತ್ತಾನೆ.
ದೇವರು ತನ್ನ ಮಕ್ಕಳನ್ನು ಗೊಂದಲದಲ್ಲಿ ಬಿಡುವುದಿಲ್ಲ.

"ಯೆಹೋವನು, “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆ ಹೇಳುವೆನು” ಎಂದು ಅನ್ನುತ್ತಾನಲ್ಲಾ. ಆದುದರಿಂದ ನೀವು ವಿವೇಕಹೀನರಾಗಿ ಕುದುರೆಯಂತಾಗಲಿ ಅಥವಾ ಹೇಸರಗತ್ತೆಯಂತಾಗಲಿ ಇರಬೇಡಿರಿ; ಅವುಗಳು ಬಾರು ಕಡಿವಾಣಗಳಿಲ್ಲದೆ ಸ್ವಾಧೀನವಾಗುವುದಿಲ್ಲ."ಕೀರ್ತನೆ 32:8–9 

ದೇವರು ಸ್ವಇಚ್ಛೆಯಿಂದ ತೋರುವ ವಿಧೇಯತೆಯನ್ನು ಬಯಸುತ್ತಾನೆ, ಹೊರತು ಬಲವಂತದ ತಿದ್ದುಪಡಿಯಲ್ಲ. ನಾವು ವಿಚಾರಿಸಬೇಕೆಂದು, ಕೇಳಬೇಕೆಂದು ಮತ್ತು ಅನುಸರಿಸಬೇಕೆಂದು ಆತನು ಬಯಸುತ್ತಾನೆ.

ಕರ್ತನನ್ನು ವಿಚಾರಿಸುವುದು ಎಂದರೆ ಆತನ ಚಿತ್ತವನ್ನು ಹುಡುಕುವುದಾಗಿದೆ -ಹೊರತು ನಮ್ಮ ಸ್ವಂತ ಯೋಜನೆಗಳನ್ನು ಆತನ ಮುಂದಕ್ಕೆ ತಳ್ಳಿ ಆದನ್ನು  ಆಶೀರ್ವದಿಸುವಂತೆ ಕೇಳಿಕೊಳ್ಳುವುದು ಅಲ್ಲ. 

ವಿಚಾರಿಸುವವರು ಸ್ಪಷ್ಟತೆಯಲ್ಲಿ ನಡೆಯುತ್ತಾರೆ. ಆತುರಪಡುವವರು ಗೊಂದಲದಲ್ಲಿ ನಡೆಯುತ್ತಾರೆ. ಕರ್ತನನ್ನು ವಿಚಾರಿಸುವುದೇ ಬಹುತೇಕ ವೈಫಲ್ಯ ಮತ್ತು ಗೆಲುವಿನ ನಡುವಿನ ವ್ಯತ್ಯಾಸವಾಗಿದೆ. 

Bible Reading: Exodus 33-35
ಪ್ರಾರ್ಥನೆಗಳು
1. ಸರ್ವಶಕ್ತ ತಂದೆಯೇ, ಯೇಸುವಿನ ಹೆಸರಿನಲ್ಲಿ, ನಾನು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸನ್ನಿವೇಶಗಳ ಹಿಂದಿನ ರಹಸ್ಯಗಳನ್ನು ನನಗೆ ಪ್ರಕಟಿಸಿ. 

2. ತಂದೆಯೇ, ಯೇಸುವಿನ ಹೆಸರಿನಲ್ಲಿ, ನನಗೆ ಸೂಚನೆ ನೀಡಿ ಮತ್ತು ನಾನು ತೆಗೆದುಕೊಳ್ಳಬೇಕಾದ ರೀತಿಯನ್ನು ನನಗೆ ಬೋದಿಸಿ. 

3. ಕರ್ತನೇ, ನನಗೆ ಮಾರ್ಗದರ್ಶನ ನೀಡಿ ಮತ್ತು ನನ್ನನ್ನು ಫಲಪ್ರದವಾಗಿಸಿ. 

4. ತಂದೆಯೇ, ಪಾಸ್ಟರ್ ಮೈಕೆಲ್, ಅವರ ಕುಟುಂಬ ಮತ್ತು ತಂಡದ ಸದಸ್ಯರು ದೇವರ ವಾಕ್ಯ ಮತ್ತು ಪ್ರಾರ್ಥನೆಯಲ್ಲಿ ಆಳವಾದ ಆನಂದವನ್ನು ಹೊಂದುವಂತೆ ಯೇಸುನಾಮದಲ್ಲಿ ಮಾಡಿ. . 

5. ತಂದೆಯೇ, ಪಾಸ್ಟರ್ ಮೈಕೆಲ್, ಅವರ ಕುಟುಂಬ ಮತ್ತು ತಂಡದ ಸದಸ್ಯರು ನಿರಂತರವಾಗಿ ಆತ್ಮನ ಮೂಲಕ ನಡೆಯುವಂತೆ ಮಾಡಿ  ಆತ್ಮನ ಫಲವನ್ನು ಪ್ರದರ್ಶಿಸುವಂತೆ ಯೇಸುನಾಮದಲ್ಲಿ ಮಾಡಿ.. 

6. ತಂದೆಯೇ, ನಮ್ಮ ರಾಷ್ಟ್ರದ ಎಲ್ಲಾ ನಾಯಕರು ನಿಮ್ಮನ್ನು ತಿಳಿದುಕೊಂಡು ನಿಮ್ಮ ಸೇವೆ ಮಾಡಲಿ ಎಂದು ನಾವು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇವೆ.

7. ತಂದೆಯೇ, ನಮ್ಮ ರಾಷ್ಟ್ರದ ಎಲ್ಲಾ ನಾಯಕರಿಗೂ ನಿನ್ನ ಜ್ಞಾನವನ್ನು ಕೊಟ್ಟು ಅವರನ್ನು ಯೇಸುನಾಮದಲ್ಲಿ ದೈವಿಕ ಸಲಹೆಗಾರರ ಮಧ್ಯದಲ್ಲಿರಿಸು.

Join our WhatsApp Channel


Most Read
● ಅಂತ್ಯಕಾಲದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು : #1
● ಗೊಂದಲದ ಬಿರುಗಾಳಿಯ ನಡುವೆಯೂ ಇರಬೇಕಾದ ಧೃಡತೆ.
● ಜೀವಬಾದ್ಯರ ಪುಸ್ತಕ
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.
● ನಮ್ಮ ಹಿಂದಿರುವ ಉರಿಯುವ ಸೇತುವೆಗಳು
● ಹಣವು ಚಾರಿತ್ರ್ಯವನ್ನು ವಿವರಿಸುತ್ತದೆ
● ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್