english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ದೇವರ ಬಲಿಷ್ಠ ಹಸ್ತದ ಮುಷ್ಟಿಯಲ್ಲಿ
ಅನುದಿನದ ಮನ್ನಾ

ದೇವರ ಬಲಿಷ್ಠ ಹಸ್ತದ ಮುಷ್ಟಿಯಲ್ಲಿ

Friday, 6th of February 2026
1 1 54
Categories : ನಂಬಿಕೆ (Faith) ಪ್ರಾರ್ಥನೆ (prayer) ಯಾಬೇಚನ ಪ್ರಾರ್ಥನೆ (Prayer of jabez)
ನಮ್ಮ ನಂಬಿಕೆಯ ಪ್ರಯಾಣದಲ್ಲಿ, ನಾವೆಲ್ಲರೂ ಒಮ್ಮೆ ನಿಂತು ದೇವರಿಗೆ ನಿಜವಾಗಿಯೂ ಎಷ್ಟು ಶಕ್ತಿಯಿದೆ ಎಂಬುದನ್ನು ಅರಿತುಕೊಳ್ಳಬೇಕಾದ ಕ್ಷಣಗಳನ್ನು ಎದುರಿಸುತ್ತೇವೆ. ಇದಕ್ಕೆ ಪ್ರಸಿದ್ಧ ಉದಾಹರಣೆಯೆಂದರೆ ಯಾಬೇಚ ಎಂಬ ವ್ಯಕ್ತಿಯ ಕಥೆ. ಅವನ ಜೀವನವು ಭಾರವಾದ ಹೊರೆಯಿಂದ ಪ್ರಾರಂಭವಾದರೂ, ಅದು ಪವಾಡದೊಂದಿಗೆ ಸುಖಾಂತ್ಯವಾಯಿತು. ಕಾರಣ ಅವನಿಗೆ ಯಾರಿಂದ ಸಹಾಯ ಕೇಳಬೇಕೆಂದು ತಿಳಿದಿತ್ತು. 

ವೇದನೆಯನ್ನು ಆಶೀರ್ವಾದವಾಗಿ ಪರಿವರ್ತಿಸುವ:ಯಾಬೇಚನ ಪ್ರಾರ್ಥನೆ

ಯಾಬೇಚನ ಕಥೆಯನ್ನು 1 ಪೂರ್ವಕಾಲವೃತ್ತಾಂತ 4:9-10 ರಲ್ಲಿ ನಾವು ಕಾಣಬಹುದು: 
"...ಯಾಬೇಚನು ತನ್ನ ಅಣ್ಣತಮ್ಮಂದಿರಲ್ಲಿ ಘನವಂತನಾಗಿದ್ದನು; ಇವನನ್ನು ಬಹುವೇದನೆಯಿಂದ ಹೆತ್ತೆನೆಂದು ಹೇಳಿ ಇವನ ತಾಯಿ ಇವನಿಗೆ ಯಾಬೇಚೆಂದು ಹೆಸರಿಟ್ಟಳು. ಯಾಬೇಚನು ಇಸ್ರಾಯೇಲ್ ದೇವರಿಗೆ - ನೀನು ನನ್ನನ್ನು ವಿಶೇಷವಾಗಿ ಆಶೀರ್ವದಿಸಿ ನನ್ನ ಪ್ರಾಂತವನ್ನು ವಿಸ್ತರಿಸಿ ನಿನ್ನ ಹಸ್ತದಿಂದ ನನ್ನನ್ನು ಹಿಡಿದು ಯಾವ ವೇದನೆಯೂ ಉಂಟಾಗದಂತೆ ನನ್ನನ್ನು ರಕ್ಷಿಸಬಾರದೇ ಎಂದು ಮೊರೆಯಿಡಲು ದೇವರು ಅವನ ಮೊರೆಯನ್ನು ಲಾಲಿಸಿದನು. "

ಆ ಕಾಲದಲ್ಲಿ, ಒಬ್ಬ ವ್ಯಕ್ತಿಯ ಹೆಸರನ್ನು ಹೆಚ್ಚಾಗಿ ಅದೇ ಅವರ ಹಣೆಬರಹವೆಂದು ನೋಡಲಾಗುತ್ತಿತ್ತು. "ವೇದನೆ" ಎಂದು ಹೆಸರಿಸಲ್ಪಟ್ಟಿರುವುದು ಜೀವಮಾನಕ್ಕೆಲ್ಲ ಇರುವ ಶಾಪಕ್ಕೆ ಮುದ್ರೆ ಹಾಕಿದಂತೆ. ಆದಾಗ್ಯೂ, ಯಾಬೇಚನು ತನ್ನ ಭೂತಕಾಲವಾಗಲೀ ಅಥವಾ ತನ್ನ ಹೆಸರಾಗಲೀ ತನ್ನ ಮುಂದಿನ ಭವಿಷ್ಯವನ್ನು ವ್ಯಾಖ್ಯಾನಿಸುವುದನ್ನು ನಿರಾಕರಿಸಿದನು.ಆದರಿಂದ ಅವನು ಕೇವಲ ಒಂದು ಸಣ್ಣ ಉಪಕಾರವನ್ನು ಬೇಡಲಿಲ್ಲ; ಅವನು "ಪ್ರದೇಶ" ವಿಸ್ತರಣೆಯನ್ನು ಕೇಳಿದನು - ಅಂದರೆ ಅವನು ತನ್ನ ಪ್ರಭಾವ ಮತ್ತು ತನ್ನ ಜೀವನದ ಎಲ್ಲಾ ಕ್ಷೇತ್ರಗಳ ಕಾರ್ಯಗಳೆಲ್ಲ ಬೆಳೆಯಬೇಕೆಂದು ಬಯಸಿದನು. ಮುಖ್ಯವಾಗಿ, ಅವನು ದೇವರ ಕೈ ತನ್ನೊಂದಿಗೆ ಇರಬೇಕೆಂದು ಬೇಡಿಕೊಂಡನು.ಏಕೆಂದರೆ ದೇವರ ಸ್ಪರ್ಶವಿಲ್ಲದೆ ಹೋದರೆ ಸಿಗುವ ಯಶಸ್ಸು ಬರಿದಾಗಿರುತ್ತದೆ ಅಥವಾ ಹೆಚ್ಚಿನ ದುಃಖಕ್ಕೆ ಕಾರಣವಾಗುತ್ತದೆ ಎಂಬುದು ಅವನಿಗೆ ತಿಳಿದಿತ್ತು.

ದೇವರು ಅಸಾಧ್ಯವಾದದ್ದನ್ನು ಸಾಧ್ಯವಾಗುವಂತೆ ಮಾಡುವಾಗ
"ಸ್ವಾಭಾವಿಕ" ಕ್ರಮವನ್ನು ಬದಲಾಯಿಸಲು ದೇವರು ಮಧ್ಯಪ್ರವೇಶಿಸಿದ ಕ್ಷಣಗಳಿಂದಲೇ ಬೈಬಲ್ ತುಂಬಿದೆ. ಇಸ್ರೇಲೀಯರು ಯೋರ್ದನ್ನದಿಯನ್ನು ದಾಟುವುದನ್ನು ಪರಿಗಣಿಸಿ ನೋಡಿ. 

ಯೆಹೋಶುವ 4:23-24 ರಲ್ಲಿ ದೇವರು ಅದನ್ನು ಏಕೆ ಮಾಡಿದನೆಂದು ನಾವು ನೋಡುತ್ತೇವೆ:
"ನಿಮ್ಮ ದೇವರಾದ ಯೆಹೋವನು ನಮ್ಮ ಮುಂದೆ ಕೆಂಪು ಸಮುದ್ರವನ್ನು ಬತ್ತಿಸಿ ನಮ್ಮನ್ನು ದಾಟಿಸಿದಂತೆ ಈಗ ನಿಮ್ಮ ಮುಂದೆ ಈ ಯೊರ್ದನನ್ನು ಬತ್ತಿಸಿ ನಿಮ್ಮನ್ನು ದಾಟಿಸಿದ್ದಾನೆ. ಇದರಿಂದ ಭೂನಿವಾಸಿಗಳೆಲ್ಲರೂ ಯೆಹೋವನ ಹಸ್ತವು ಪರಾಕ್ರಮವುಳ್ಳದ್ದೆಂದು ತಿಳಿದುಕೊಳ್ಳುವರು. ನಿಮ್ಮ ದೇವರಾದ ಯೆಹೋವನಿಗೆ ಯಾವಾಗಲೂ ಭಯಪಡುವರು ಅಂದನು."

ಅದು ಕೇವಲ ನದಿಯನ್ನು ದಾಟುವುದರ ಕುರಿತಾಗಿರದೆ, ಭೌತಿಕ ಮತ್ತು ಆತ್ಮೀಕ ಅಡೆತಡೆಗಳನ್ನು ಕದಲಿಸಬಲ್ಲ ಅಚಲನಾದವನು ನಮ್ಮ ದೇವರು ಎಂಬುದರ ಸಂಕೇತವಾಗಿತ್ತು. ಶಕ್ತಿಶಾಲಿ ಜನರ ಮನಸ್ಸುಗಳು ಸಹ ಆತನ ಕಾರ್ಯಕ್ಕೆ ಅಡ್ಡಿಪಡಿಸಲಾರವು ಎಂಬುದರ ಸಂಕೇತ ಅದಾಗಿತ್ತು.

ಎಂದು ಜ್ಞಾನೋಕ್ತಿ 21:1 ಹೇಳುತ್ತದೆ.
"ರಾಜನ ಸಂಕಲ್ಪಗಳು ಯೆಹೋವನ ಕೈಯಲ್ಲಿ ನೀರಿನ ಕಾಲುವೆಗಳಂತೆ ಇವೆ; ತನಗೆ ಬೇಕಾದ ಕಡೆಗೆ ತಿರುಗಿಸುತ್ತಾನೆ."

ಇದರರ್ಥ ನೀವು ಅಧಿಕಾರದಲ್ಲಿರುವ ಯಾರಾದರೂ ಸರಿಯೇ ನಿಮ್ಮನ್ನು ಹಿಡಿದಿಟ್ಟಿಕೊಂಡಿದ್ದಾರೆ ಅಥವಾ ಎಲ್ಲಾ ಬಾಗಿಲುಗಳು ಮುಚ್ಚಲ್ಪಟ್ಟಿವೆ ಎಂಬ ಸಮಸ್ಯೆವನ್ನು  ಎದುರಿಸುತ್ತಿದ್ದರೆ, ಒಬ್ಬ ರೈತ ಸಣ್ಣ ನೀರಿನ ತೊರೆಯನ್ನು ನಿರ್ದೇಶಿಸುವಂತೆ ದೇವರು ಸಹ ಅವರ ಹೃದಯವನ್ನು ಸುಲಭವಾಗಿ ಬದಲಾಯಿಸಬಹುದು.

ನಿಮ್ಮ ಗತಿಯಲ್ಲಿ ಬದಲಾವಣೆ 
ಇಂದು, ನಮ್ಮಲ್ಲಿ ಅನೇಕರಿಗೆ ಸಾಲ, ಆರೋಗ್ಯ ಸಮಸ್ಯೆಗಳು ಅಥವಾ ಕುಟುಂಬದ ಇತಿಹಾಸದ ಗೋಡೆಗಳ ಹಿಂದೆ ಸಿಲುಕಿಕೊಂಡಂತೆ ಭಾಸವಾಗುತ್ತಿರುತ್ತದೆ. ಆದರೆ ಸತ್ಯವೇದದ ಸತ್ಯವೆಂದರೆ ದೇವರ ಕೈ ನಿಮ್ಮ ವಾಸ್ತವವನ್ನು ನೀವು ಊಹಿಸಲಾಗದ ರೀತಿಯಲ್ಲಿ ಬದಲಾಯಿಸಬಹುದು. ಈ "ಬದಲಾವಣೆ" ಕೇವಲ ಹೆಚ್ಚಿನ ಹಣ ಅಥವಾ ಬಡ್ತಿಯನ್ನು ಪಡೆಯುವುದರ ಕುರಿತಾಗಿರದೆ; ಇದು ನಿಮ್ಮ ಹಾದಿಯಲ್ಲಿನ ಸಂಪೂರ್ಣ ಬದಲಾವಣೆಯ ಕುರಿತಾದ್ದಾಗಿರುತ್ತದೆ. ಇದು ಭಾವನಾತ್ಮಕ ಚಿಕಿತ್ಸೆ, ಉತ್ತಮ ಸಂಬಂಧಗಳು ಮತ್ತು ಸಮಾಧಾನವನ್ನು ಒಳಗೊಂಡಿರುತ್ತದೆ. 

ನಂಬಿಕೆಯಲ್ಲಿ ನಡೆಯುವುದು 
ದೇವರ ತ್ರಾಣವುಳ್ಳ ಹಸ್ತದ ಕೆಳಗೆ ಬದುಕಲು, ನಮಗೆ ಸಕ್ರಿಯ ನಂಬಿಕೆ ಬೇಕು. ಇದರರ್ಥ ಯಾಬೇಚನಂತೆ ಪ್ರಾರ್ಥಿಸುವುದಾಗಿದೆ ಆದರೆ ಅದೇ ಸಮಯದಲ್ಲಿ ಯೆಹೋಶುವನಂತೆ ಮುಂದೆ ನಡೆಯುವುದೂ ಆಗಿದೆ. ಇದುವೇ ಪಾಲುದಾರಿಕೆ. ನಮ್ಮ ಜೀವನದಲ್ಲಿ "ಸಾಮಾನ್ಯ" ಆಶೀರ್ವಾದಗಳು ಸಹ ವಾಸ್ತವವಾಗಿ ಆತನ ಕೈಕೆಲಸ ಎಂದು ಒಪ್ಪಿಕೊಳ್ಳುತ್ತಾ ನಾವು ಪ್ರತಿದಿನ ಆತನ ನಿರ್ದೇಶನವನ್ನು ಹುಡುಕುತ್ತೇವೆ. 

ನೀವು ಮುಂದುವರಿಯುತ್ತಿದ್ದಂತೆ, ದೇವರನ್ನು ಇನ್ನೂ ದೊಡ್ಡ ವಿಷಯಗಳಿಗಾಗಿ ಬೇಡುವ ಧೈರ್ಯವನ್ನು ಹೊಂದಿರಿ. ದೇವರ ಕೈ ನಿಮ್ಮ ಜೀವನದ ಮೇಲಿರುವಾಗ, ನಿಮ್ಮ ಮಿತಿಗಳು ಇನ್ನು ಮುಂದೆ ನಿಮ್ಮನ್ನು ವ್ಯಾಖ್ಯಾನಿಸುವುದಿಲ್ಲ - ಆತನ ಶಕ್ತಿ ಮಾಡುತ್ತದೆ ಅದನ್ನು ಸಾಧಿಸುತ್ತದೆ. 

Bible Reading: Leviticus-13
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಿಮ್ಮ ತ್ರಾಣ ವುಳ್ಳ ಹಸ್ತದ ಅಡಿಯಲ್ಲಿಯೇ, ನಾವು ಬಲವನ್ನೂ ಮತ್ತು ಭರವಸೆಯನ್ನೂ ಕಂಡುಕೊಳ್ಳುತ್ತೇವೆ. ನಮಗೆ ಮಾರ್ಗದರ್ಶನ ನೀಡಿ, ನಮ್ಮ ಸನ್ನಿವೇಶಗಳನ್ನು ಬದಲಾಯಿಸಿ, ಮತ್ತು ನೀವು ನಿಗದಿಪಡಿಸಿದ ಗಮ್ಯಸ್ಥಾನಕ್ಕೆ ನಮ್ಮನ್ನು ಕರೆದೊಯ್ಯಿರಿ. ನಮ್ಮ ಜೀವನದಲ್ಲಿ ನಿಮ್ಮ ಪ್ರಬಲ ಹಸ್ತವನ್ನು ಯೇಸುನಾಮದಲ್ಲಿ ನಾವು ಯಾವಾಗಲೂ ಗುರುತಿಸುವಂತಾಗಲಿ. ಆಮೆನ್.



Join our WhatsApp Channel


Most Read
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಮಾತಿನಲ್ಲಿರುವ ಶಕ್ತಿ
● ಮೋಸದ ಜಗತ್ತಿನಲ್ಲಿ ಸತ್ಯವನ್ನು ವಿವೇಚಿಸಿ ತಿಳಿಯುವುದು.
● ಹೆಚ್ಚು ಪರಿಣಾಮಕಾರಿ ಜನರ 9 ಅಭ್ಯಾಸಗಳು: ಅಭ್ಯಾಸ ಸಂಖ್ಯೆ 6
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-1
● ಮೊಗ್ಗು ಬಿಟ್ಟಂತಹ ಕೋಲು
● ದೈವೀಕ ಶಿಸ್ತಿನ ಸ್ವರೂಪ-1
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್