ಅನುದಿನದ ಮನ್ನಾ
3
3
44
ಕೋಪವನ್ನು ನಿಭಾಯಿಸುವುದು
Wednesday, 11th of February 2026
Categories :
ಗುಣ(character)
ಭಾವನೆ (Emotion)
ನಾವು ಕೋಪದೊಂದಿಗೆ ಹೇಗೆ ವ್ಯವಹರಿಸಬೇಕು?
ಕೋಪವನ್ನು ನಿಭಾಯಿಸುವಾಗ ಅರ್ಥಮಾಡಿಕೊಳ್ಳಬೇಕಾದ ಮೂರು ಪ್ರಮುಖ ಅಂಶಗಳಿವೆ. (ಅದರಲ್ಲಿ ಇಂದು, ನಾವು ಮೊದಲ ಎರಡನ್ನು ನೋಡೋಣ.)
ಎ. ನೀವು ಕೋಪವನ್ನು ಹೇಗೆ ವ್ಯಕ್ತಪಡಿಸುತ್ತೀರಿ ಎಂಬುದನ್ನು ಕಲಿಯ ಬೇಕಾಗುತ್ತದೆ.
ಮೊದಲನೆಯದಾಗಿ, ನೀವು ಕೋಪವನ್ನು ವ್ಯಕ್ತಪಡಿಸುವ ವಿಧಾನವು ಕಾಲಗಳಿಂದ ನೀವು ಕಲಿಯುವ ವಿಷಯವಾಗಿರುತ್ತದೆ. ನಾವು ಅದನ್ನು ನಮ್ಮ ಸುತ್ತಮುತ್ತಲಿನ ಜನರು ಮತ್ತು ಪರಿಸರದಿಂದ - ಅಂದರೆ ನಮ್ಮ ಮನೆಗಳು, ಸಂಬಂಧಗಳು, ಕೆಲಸದ ಸ್ಥಳಗಳು ಮತ್ತು ಸಂಸ್ಕೃತಿಯಿಂದ - ಹೆಚ್ಚಾಗಿ ತೆಗೆದುಕೊಳ್ಳುತ್ತೇವೆ. ನಾವೆಲ್ಲರೂ ಪಾಪ ಸ್ವಭಾವವನ್ನು ಹೊಂದಿರುವುದರಿಂದ, ಕೋಪವನ್ನು ನಿಭಾಯಿಸುವ ಅನಾರೋಗ್ಯಕರ ವಿಧಾನಗಳನ್ನು ನಾವು ಸ್ವಾಭಾವಿಕವಾಗಿ ಹೀರಿಕೊಂಡು, ಅದೇ ಮಾದರಿಯಾಗುವುದನ್ನು ನಾವು ನೋಡುತ್ತೇವೆ.
ನಾವು ಈ ಮಾದರಿಯನ್ನು ಕಲಿಯಬಾರದು ಎಂದು ಸತ್ಯವೇದ ಹೇಳುತ್ತದೆ.
ಎಫೆಸ 4:31–32
"ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವದಕ್ಕೆ ಆಸಕ್ತರಾಗಿರಿ. ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರು, ಒಬ್ಬನೇ ಆತ್ಮನನ್ನು ಹೊಂದಿದವರು,.. "
ದೇವರು ನಮಗೆ ಪಾಪದ ಕೋಪವನ್ನು ತೆಗೆದುಹಾಕಲು ಮಾತ್ರ ಹೇಳುವುದಿಲ್ಲ - ಅದನ್ನು ದಯೆ, ಕರುಣೆ ಮತ್ತು ಕ್ಷಮೆ. ಬದಲಾಯಿಸಬೇಕೆಂದು ಆತನು ನಮಗೆ ಹೇಳುತ್ತಾನೆ.
ಎಳೆಯ ಮರ
ದೊಡ್ಡ ತೋಟದಲ್ಲಿ ಬೆಳೆಯುವ ಎಳೆಯ ಮರವನ್ನು ಕಲ್ಪಿಸಿಕೊಳ್ಳಿ. ಅದರ ಸುತ್ತಲಿನ ಎಲ್ಲಾ ಹಳೆಯ ಮರಗಳು ವರ್ಷಗಳು ಕಳೆದಂತೆ ಬಲವಾದ ಗಾಳಿಯಿಂದಾಗಿ ಬಾಗಿ ತಿರುಚಲ್ಪಡುತ್ತವೆ. ಸ್ವಾಭಾವಿಕವಾಗಿ, ಎಳೆಯ ಮರವೂ ವಕ್ರವಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಆದರೆ ಒಬ್ಬ ತೋಟಗಾರನು ಬಂದು ಮರವನ್ನು ರಕ್ಷಿಸಿದಾಗ, ಅದಕ್ಕೆ ಬೆಂಬಲ ನೀಡಿ ಅದನ್ನು ನೋಡಿಕೊಳ್ಳುವಾಗ, ಮರವು ನಿಧಾನವಾಗಿ ನೇರವಾಗಿ ಮತ್ತು ಬಲವಾಗಿ ಬೆಳೆಯಲು ಪ್ರಾರಂಭಿಸುತ್ತದೆ.
ಅದೇ ರೀತಿಯಲ್ಲಿ, ನಾವು ಬೆಳೆದ ಪರಿಸರದ ಕಾರಣದಿಂದಾಗಿ ನಮ್ಮಲ್ಲಿ ಅನೇಕರು ಕೋಪವನ್ನು ವ್ಯಕ್ತಪಡಿಸುವ ಅನಾರೋಗ್ಯಕರ ವಿಧಾನಗಳನ್ನು ಕಲಿತಿರುತ್ತೇವೆ. ಆದರೆ ನಮ್ಮ ದೇವರು - ಮಾಸ್ಟರ್ ಗಾರ್ಡನರ್ - ಆತನನ್ನು ನಮ್ಮಲ್ಲಿ ಕೆಲಸ ಮಾಡಲು ನಾವು ಅನುಮತಿಸುವಾಗ, ಆತನು ಬಾಗಿರುವುದನ್ನು ಸರಿಪಡಿಸಬಹುದು ಮತ್ತು ಆರೋಗ್ಯಕರ ರೀತಿಯಲ್ಲಿ ಬೆಳೆಯಲು ನಮಗೆ ಸಹಾಯ ಮಾಡಬಹುದು.
ದೇವರು ನಾವು ಪ್ರತಿಕ್ರಿಯಿಸುವ ರೀತಿಯನ್ನು ಬದಲಾಯಿಸಬಲ್ಲನು.
ಒಳ್ಳೆಯ ಸುದ್ದಿ ಏನೆಂದರೆ ನಾವು ಪ್ರತಿಕ್ರಿಯಿಸಲು ಕಲಿತ ರೀತಿಯಲ್ಲಿಯೇ ಸಿಲುಕಿಕೊಂಡಿಲ್ಲ.
(ರೋಮನ್ನರು 12:2)
"ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ."
ದೇವರ ವಾಕ್ಯದ ಮೂಲಕ ನಮ್ಮ ಮನಸ್ಸುಗಳು ನವೀಕರಿಸಲ್ಪಡುವಾಗ, ನಾವು ಪಾಪಪೂರ್ಣ ಕೋಪವನ್ನು ತೊಡೆದುಹಾಕಬಹುದು ಮತ್ತು ದೇವರನ್ನು ಮೆಚ್ಚಿಸುವ ರೀತಿಯಲ್ಲಿ ಪ್ರತಿಕ್ರಿಯಿಸಲು ಕಲಿಯಬಹುದು.
ಬಿ. ಕೋಪವನ್ನು ಹೇಗೆ ವ್ಯಕ್ತಪಡಿಸುತ್ತೀರಿ ಎಂಬುದು ನಿಮ್ಮ ಆಯ್ಕೆಯಾಗಿದೆ.
ಎರಡನೆಯದಾಗಿ, ನೀವು ಕೋಪವನ್ನು ಹೇಗೆ ವ್ಯಕ್ತಪಡಿಸುತ್ತೀರಿ ಎಂಬುದು ನಿಮ್ಮ ಆಯ್ಕೆಯಾಗಿದೆ. ಯಾರೂ ನಿಮ್ಮನ್ನು ಕೋಪ ಮಾಡಿಕೊಳ್ಳುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ಪ್ರತಿ ಕ್ಷಣದಲ್ಲೂ, ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದನ್ನು ಆಯ್ಕೆ ಮಾಡುವ ಸಾಮರ್ಥ್ಯ ನಿಮಗಿದೆ.
“ಹಲೋ, ನಾನು ಟೋನಿ. ನಾನು ನಿಮಗೆ ಹೇಗೆ ಸಹಾಯ ಮಾಡಬಹುದು?” ಎಂಬ ಧ್ವನಿ ಕೇಳಿದಾಗ ನೀವು ಎಷ್ಟು ಬಾರಿ ಕೋಪಗೊಂಡು ಇದ್ದಕ್ಕಿದ್ದಂತೆ ಫೋನ್ ಕರೆಗೆ ನಯವಾಗಿ ಉತ್ತರಿಸಿದ್ದೀರಿ? ಎನ್ನುವುದರ ಬಗ್ಗೆ ಯೋಚಿಸಿ: ಆ ಕ್ಷಣವು ಮುಖ್ಯವಾದದ್ದನ್ನು ಸಾಬೀತುಪಡಿಸುತ್ತದೆ -ಅಂದರೆ ನೀವು ಬಯಸಿದಾಗ ನಿಮ್ಮ ಕೋಪವನ್ನು ನಿಯಂತ್ರಿಸಬಹುದು. ನಿಜವಾದ ಸಮಸ್ಯೆ ಸಾಮರ್ಥ್ಯವಲ್ಲ; ಅದು ಬಯಕೆ. ಆದರೆ ಸಾಮಾನ್ಯವಾಗಿ, ನಾವು ಅದನ್ನು ನಿಯಂತ್ರಿಸಬಾರದು ಎಂಬುದನ್ನೇ ಆಯ್ಕೆ ಮಾಡುತ್ತೇವೆ.
ದೇವರ ಸೂಚನೆ ಸ್ಪಷ್ಟವಾಗಿದೆ.
ಯಾಕೋಬ 1:19
ನನ್ನ ಪ್ರಿಯ ಸಹೋದರರೇ, ನೀವು ಬಲ್ಲವರು. ಆದರೆ ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ. ಕೋಪಿಸುವದರಲ್ಲಿಯೂ ನಿಧಾನವಾಗಿರಲಿ;”
ಇದು ಸಲಹೆಯಲ್ಲ—ಇದು ದೇವರ ಆಜ್ಞೆ.
ಜ್ಞಾನೋಕ್ತಿ 13:3
ಬಾಯ ಫಲವಾಗಿ ಮನುಷ್ಯನು ಸುಖವನ್ನನುಭವಿಸುವನು; ಬಲಾತ್ಕಾರವೇ ದ್ರೋಹಿಗಳ ಕೋರಿಕೆ.
ಜ್ಞಾನೋಕ್ತಿ 29:20
ದುಡುಕಿ ಮಾತಾಡುವವನನ್ನು ನೋಡು; ಅಂಥವನಿಗಿಂತಲೂ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯನ್ನಿಡಬಹುದು.
ತುಂಬಾ ಆತುರವಾಗಿ ಮಾತನಾಡುವುದರ ಬಗ್ಗೆ ಸತ್ಯವೇದ ನಮಗೆ ಪದೇ ಪದೇ ಎಚ್ಚರಿಕೆ ನೀಡುತ್ತದೆ.
ಮೊದಲು ಆಲಿಸುವುದು ಮತ್ತು ಮಾತನಾಡುವ ಮೊದಲು ಯೋಚಿಸುವುದು ಬುದ್ಧಿವಂತಿಕೆಯ ಕ್ರಿಯೆ.
ನೆನಪಿಡಬೇಕಾದ ಸರಳ ನಿಯಮ ಏನೆಂದರೆ ದೇವರು ನಿಮಗೆ ಎರಡು ಕಿವಿಗಳು ಮತ್ತು ಒಂದು ಬಾಯಿಯನ್ನು ಒಂದು ಕಾರಣಕ್ಕಾಗಿ ಕೊಟ್ಟಿದ್ದಾನೆ - ಹಾಗಾಗಿ ನೀವು ಮಾತನಾಡುವುದಕ್ಕಿಂತ ಹೆಚ್ಚು ಆಲಿಸಿ. ನಿಮಗೆ ಖಚಿತವಿಲ್ಲದಿದ್ದಾಗ, ವಿರಾಮಗೊಳಿಸಿ.
ನೀವು ಯಾವಾಗಲೂ ನಂತರ ಮಾತನಾಡಬಹುದು, ಆದರೆ ಒಮ್ಮೆ ಮಾತುಗಳನ್ನು ಮಾತನಾಡಿದ ನಂತರ ನೀವು ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರಿಂದ ನೀವು ಎಚ್ಚರಿಕೆಯಿಂದ ಕೇಳಿಸಿಕೊಳ್ಳುವುದನ್ನು ಮತ್ತು ನಿಧಾನವಾಗಿ ಮಾತನಾಡುವುದನ್ನು ಆರಿಸಿಕೊಳ್ಳುವಾಗ ನೀವು ನಿಮ್ಮ ಕೋಪವನ್ನು ನಿಯಂತ್ರಿಸುವುದು ತುಂಬಾ ಸುಲಭವಾಗುತ್ತದೆ.
ಕೋಪಕ್ಕೆ ನಿಧಾನವಾಗಿರಲು ಕಲಿಯಿರಿ
ದೇವರೇ ಸ್ವತಃ ನಮ್ಮ ಮಾದರಿ.
ಕೀರ್ತನೆ 103:8 ಯೆಹೋವನು ಕನಿಕರವೂ ದಯೆಯೂ ದೀರ್ಘಶಾಂತಿಯೂ ಪೂರ್ಣಪ್ರೀತಿಯೂ ಉಳ್ಳವನು."
ದೇವರು ಬೇಗನೆ ಕೋಪ ಮಾಡಿಕೊಂಡಿದ್ದರೆ, ಇಂದು ನಮ್ಮಲ್ಲಿ ಯಾರೂ ಜೀವಂತವಾಗಿರುತ್ತಿರಲಿಲ್ಲ. ದೇವರು ಕೋಪಕ್ಕೆ ನಿಧಾನವಾಗಿರುವಂತೆ, ತನ್ನ ಮಕ್ಕಳು ಅದೇ ರೀತಿಯಲ್ಲಿ ಬೆಳೆಯಬೇಕೆಂದು ಅವನು ನಿರೀಕ್ಷಿಸುತ್ತಾನೆ.
ಜ್ಞಾನೋಕ್ತಿ 19:11
"ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ; [ಪರರ] ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ"
(ಪ್ರಸಂಗಿ 7:9)
ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ.
ಕೋಪವು ಬಲವನ್ನು ತೋರಿಸುವುದಿಲ್ಲ.ಆದರೆ ಸ್ವನಿಯಂತ್ರಣವು ಬಲವನ್ನು ತರುತ್ತದೆ. ಜ್ಞಾನವು ತಾಳ್ಮೆಯನ್ನು ತರುತ್ತದೆ ಮತ್ತು ತಾಳ್ಮೆಯು ಗೌರವವನ್ನು ತರುತ್ತದೆ.
Bible Reading Leviticus- 24-25
ಪ್ರಾರ್ಥನೆಗಳು
ಪರಲೋಕದ ತಂದೆಯೇ, ಕೋಪದ ಹಾನಿಕಾರಕ ಅಭಿವ್ಯಕ್ತಿಗಳನ್ನು ಬಿಟ್ಟುಬಿಡಲು ಮತ್ತು ನಿಮ್ಮ ತಾಳ್ಮೆ ಮತ್ತು ದಯೆಯ ಮಾರ್ಗಗಳನ್ನು ಅಳವಡಿಸಿಕೊಳ್ಳಲು ನಮಗೆ ವಿವೇಕವನ್ನು ದಯಪಾಲಿಸು. ಜನರೊಂದಿಗಿನ ನಮ್ಮ ಎಲ್ಲಾ ಸಂವಹನಗಳಲ್ಲಿ ನಿಮ್ಮ ಕೃಪೆ ಮತ್ತು ಪ್ರೀತಿಯನ್ನು ಪ್ರತಿಬಿಂಬಿಸುವ ಮೂಲಕ ನಮ್ಮ ಪ್ರತಿಕ್ರಿಯೆಗಳನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡುವಂತೆ ಯೇಸುನಾಮದಲ್ಲಿ ನಮಗೆ ಸಹಾಯ ಮಾಡಿ, ಆಮೆನ್.
Join our WhatsApp Channel
Most Read
● ನೀವು ಯಾರೊಂದಿಗೆ ನಡೆಯುತ್ತಿದ್ದೀರಿ?● ನಿಮ್ಮನ್ನು ಅಡ್ಡಿಪಡಿಸುವ ನಂಬಿಕೆಗಳನ್ನು ಸೀಮಿತಗೊಳಿಸುವುದು
● ದಿನ 24:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು -4
● ಚಿಕ್ಕ ಸಂಗತಿಗಳೂ ಸಹ ಮಹತ್ತರ ಉದ್ದೇಶಗಳನ್ನು ಪೂರೈಸಬಲ್ಲವು.
● ದೈನಂದಿನ ಮನ್ನಾ
● ಪ್ರೀತಿಯ ಹುಡುಕಾಟ
ಅನಿಸಿಕೆಗಳು
