english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ನಿಮ್ಮ ಉದ್ದೇಶವೇನು?
ಅನುದಿನದ ಮನ್ನಾ

ನಿಮ್ಮ ಉದ್ದೇಶವೇನು?

Saturday, 14th of February 2026
2 1 32
Categories : ಉದ್ದೇಶಗಳು (purpose) ಕೊಡುವ (Giving) ಪ್ರೀತಿ (Love)
"ಒಂದು ದಿವಸ ಎಲೀಷನು ಅಲ್ಲಿಗೆ ಬಂದು ಆ ಕೋಣೆಯೊಳಗೆ ಪ್ರವೇಶಿಸಿ ದಣುವಾರಿಸಿಕೊಂಡನಂತರ  ಆ ಶೂನೇಮ್ಯಳನ್ನು ಕರೆಯಬೇಕೆಂದು ತನ್ನ ಸೇವಕನಾದ ಗೇಹಜಿಗೆ ಆಜ್ಞಾಪಿಸಿದನು. ಅವನು ಹೋಗಿ ಆಕೆಯನ್ನು ಕರೆಯಲು ಆಕೆಯು ಬಂದು ಮುಂದೆ ನಿಂತಳು. ಆಗ ಎಲೀಷನು ಗೇಹಜಿಯ ಮುಖಾಂತರವಾಗಿ ಆಕೆಯನ್ನು - ನೀನು ಕಷ್ಟಪಟ್ಟು ನಮಗೆ ಇಷ್ಟೆಲ್ಲಾ ಉಪಕಾರಮಾಡಿದಿ; ನಾನು ನಿನಗೆ ಯಾವ ಪ್ರತ್ಯುಪಕಾರ ಮಾಡಲಿ? ನಿನಗೋಸ್ಕರವಾಗಿ ಅರಸನ ಮುಂದಾಗಲಿ ಸೇನಾಪತಿಯ ಮುಂದಾಗಲಿ ಮಾತಾಡಬೇಕೋ ಎಂದು ಕೇಳಲು ಆಕೆಯು - ನಾನು ಸ್ವಕುಲದವರ ಮಧ್ಯದಲ್ಲಿ ಸುಖವಾಗಿದ್ದೇನೆ ಎಂದು ಉತ್ತರಕೊಟ್ಟಳು.(2 ಅರಸುಗಳು 4:11-13)

ಈ ಶೂನೇಮ್ಯ ಸ್ತ್ರೀಯು ತನ್ನ ಮನೆಯ ಮೇಲೆ ಹೆಚ್ಚುವರಿ ಕೋಣೆಯನ್ನು ನಿರ್ಮಿಸಿ ಅದನ್ನು ದೇವರ ಮನುಷ್ಯನಾದ ಪ್ರವಾದಿ ಎಲೀಷನಿಗಾಗಿ ಪ್ರತ್ಯೇಕವಾಗಿ ಸಜ್ಜುಗೊಳಿಸಿದ್ದಳು. ಶೂನೇಮ್ಯಳಾದ ಸ್ತ್ರೀಯು ತನಗಾಗಿ ಏನು ಮಾಡಿದ್ದಾಳೆಂದು ಅವನು ಅರಿತುಕೊಂಡಾಗ, ಅವನು ಅದರಿಂದ ತುಂಬಾ ಪ್ರಭಾವಿತನಾಗಿ ಅದಕ್ಕೆ ಪ್ರತಿಯಾಗಿ ಅವಳನ್ನು ಆಶೀರ್ವದಿಸಬೇಕೆಂದು ಬಯಸಿದನು. ಅವಳಿಗಾಗಿ ತಾನು ಏನು ಮಾಡಬಹುದು ಎಂದು ಅವಳನ್ನು ಕೇಳಿದಾಗ, ಯಾವುದೇ ಬೇಡಿಕೆಗಳು ಸಹ ಆಕೆಯಲ್ಲಿ ಇರಲಿಲ್ಲ. 

ಎಲೀಷನು ರಾಜ ಅಥವಾ ದೇಶದ ಉನ್ನತ ಅಧಿಕಾರಿಗಳ ಸಹಾಯವೇನಾದರೂ ಬೇಕೆಂದು ತಾನು ಅವರೊಡನೆ ಮಾತನಾಡಬೇಕೋ ಎಂದರೂ, ಅವಳು ಅದನ್ನು ಸ್ವೀಕರಿಸಲಿಲ್ಲ. ಅಂತಹ ಪ್ರಬಲ ಕೊಡುಗೆಗಳ ನಡುವೆಯೂ ಆ ಸ್ತ್ರೀಯಲ್ಲಿ ಯಾವುದೇ ವಿನಂತಿಗಳು ಇಲ್ಲದ್ದು ಅವಳ ಶುದ್ಧ ಉದ್ದೇಶಗಳು ಮತ್ತು ಅವಳ ಜೀವನದಲ್ಲಿದ್ದ ಸಂತೃಪ್ತಿಯನ್ನು ಪ್ರದರ್ಶಿಸುತ್ತದೆ.

ಈ ಸ್ತ್ರೀಯು ದೇವರಿಂದ ಏನನ್ನಾದರೂ ಪಡೆಯಬೇಕೆಂದು ಪ್ರವಾದಿ ಎಲೀಷನಿಗೆ ದಯೆ ತೋರಿಸಲಿಲ್ಲ. ಅವಳು ಏನನ್ನಾದರೂ ಹೊಂದಿಕೊಳ್ಳಬೇಕೆಂದು ಇದನ್ನೆಲ್ಲಾ ಮಾಡಲಿಲ್ಲ. ಆದಾಗ್ಯೂ, ಅವಳು ತುಂಬಾ ಧಾರ್ಮಿಕಳಾಗಿ ವರ್ತಿಸದೇ, ದೇವರು ಅವಳನ್ನು ಆಶೀರ್ವದಿಸಲು ಬಯಸಿದಾಗ, ಅವಳು ಸುಳ್ಳಾದ ನಮ್ರತೆಯಿಂದಲೋ ಅವನ ಆಶೀರ್ವಾದವನ್ನು ನಿರಾಕರಿಸಲಿಲ್ಲ. 

ಅವಳ ಕೊಡುಗೆಯ ಹಿಂದಿನ ಉದ್ದೇಶವು ಸಂಪೂರ್ಣವಾಗಿ ನಿಸ್ವಾರ್ಥವಾಗಿತ್ತು. ಅವಳು ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಕೊಟ್ಟಳು. ಇಲ್ಲಿ ನಮಗೆಲ್ಲರಿಗೂ ಒಂದು ಜೀವನ ಪಾಠವಿದೆ ಎಂದು ನಾನು ನಂಬುತ್ತೇನೆ.
ನಮ್ಮ ಕೊಡುವಿಕೆಯು ದೇವರ ಮೇಲೆ ಮತ್ತು ನಾವು ಯಾರಿಗೆ ಕೊಡುತ್ತೇವೋ ಅವರ ಮೇಲಿರುವ ಶುದ್ಧ ಹೃದಯದಿಂದ ಪ್ರೀತಿಯಿಂದ ಇರಬೇಕು. ಪ್ರತಿಯಾಗಿ ಏನನ್ನಾದರೂ ಪಡೆದುಕೊಳ್ಳಲು ನಾವು ಕೊಡಬಾರದು ಎಂದು ಬೈಬಲ್ ಹೇಳುತ್ತದೆ." ಯಾಕೆಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು (2 ಕೊರಿಂಥ 9:7). 
"ಆಗ ಮರಿಯಳು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲವನ್ನು ಒಂದು ಸೇರಷ್ಟು ತಂದು ಯೇಸುವಿನ ಪಾದಕ್ಕೆ ಹಚ್ಚಿ ತನ್ನ ತಲೇಕೂದಲಿನಿಂದ ಆತನ ಪಾದಗಳನ್ನು ಒರಸಿದಳು. ಆ ತೈಲದ ಪರಿಮಳವು ಮನೆಯಲ್ಲೆಲ್ಲಾ ತುಂಬಿಕೊಂಡಿತು." (ಯೋಹಾನ 12:3). 

ನಾರ್ಡ್ ಎಂಬುದು ಭಾರತದಲ್ಲಿ ಬೆಳೆದ ನಾರ್ಡ್ ಸಸ್ಯದ ಮೂಲದಿಂದ ತೆಗೆದ ಎಣ್ಣೆ. ಯೋಹಾನನು ಗಮನಿಸಿದಂತೆ ಅದು ತುಂಬಾ ದುಬಾರಿಯಾಗಿತ್ತು. ಯೂದನು ಎಣಿಸಿದಂತೆ ಒಂದು ಪೌಂಡ್ ನಾರ್ಡ್ 300 ದಿನಾರಿಗೆ ಸಮಾನವಾಗಿತ್ತು, ಅಂದರೆ ಅದು ಯೇಸುವಿನ ಕಾಲದಲ್ಲಿ ಕೆಲಸ ಮಾಡುವ ಮನುಷ್ಯನಿಗೆ ದೊರಕುವ ಒಂಬತ್ತು ತಿಂಗಳ ಸಂಬಳಕ್ಕೆ ಸಮಾನವಾಗಿತ್ತು. 

ಮರಿಯಳು ಯೇಸುವಿಗೆ ನೀಡಿದ ಉಡುಗೊರೆ ಎಷ್ಟು ದುಬಾರಿಯಾದದ್ದು ಮತ್ತು ಎಷ್ಟು ಆಮೂಲಾಗ್ರವಾಗಿತ್ತು ಎಂದರೆ ಆತನ ಉನ್ನತ ನಾಯಕರು ಸಹ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಇದು ಸಂಪೂರ್ಣವಾಗಿ ಕರ್ತನ ಮೇಲಿನ ಪ್ರೀತಿಯಿಂದ ಪ್ರೇರಿತವಾಗಿತ್ತು. ಪ್ರೀತಿಯಿಂದ ಪ್ರೇರಿತವಾದ ಮರಿಯಳ ಉಡುಗೊರೆ, ಪ್ರೀತಿಯಿಂದ ಪ್ರೇರಿತವಾಗಿ, ಯೇಸುವನ್ನು ಆತನ ಉತ್ತರಕ್ರಿಯೆಗೆ ಸಿದ್ಧಪಡಿಸುವ ಪ್ರವಾದನಾ ಸ್ವರೂಪದಲ್ಲಿ ಮಾರ್ಪಟ್ಟಿತು. 

ಈಗ, ನೀವು ಹಣಕಾಸಿನ ಬೀಜವನ್ನು ಬಿತ್ತಿದಾಗ ಕೊಯ್ಲನ್ನು ಬಯಸುವುದರಲ್ಲಿ ಮತ್ತು ನಿರೀಕ್ಷಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದಾಗ್ಯೂ, ನಮ್ಮಲ್ಲಿರುವ ಎಲ್ಲವೂ ದೇವರಿಂದ ಬಂದದ್ದೆ ಎಂದು ನಾವು ಗುರುತಿಸಿಕೊಂಡು ದೇವರು ತನ್ನ ರಾಜ್ಯದ ಕೆಲಸದಲ್ಲಿ ಹೂಡಿಕೆ ಮಾಡುವ ಮೂಲಕ ಮಾಡುತ್ತಿರುವ ಕಾರ್ಯದ ಶಾಶ್ವತ ಪ್ರತಿಫಲದಲ್ಲಿ ನಾವು ಪಾಲ್ಗೊಳ್ಳಲು ಬಯಸುವುದರಿಂದ ನಾವು ನೀಡುವವರಾಗಿದ್ದೇವೆ. ದೇವರು ನಮಗೆ ಹಾಗೆ ಮಾಡಲು ಆಜ್ಞಾಪಿಸಿರುವುದರಿಂದ ನಾವು ನೀಡುವವರಾಗಿದ್ದೇವೆ ಎನ್ನುವಂತ  ತಿಳುವಳಿಕೆಯ ಮಟ್ಟವನ್ನು ನಾವು ತಲುಪಬೇಕು.

ದೇವರೊಂದಿಗಿನ ನಿಮ್ಮ ನಡಿಗೆಯಲ್ಲಿ ನೀವು ಈ ಹಂತದ ಪರಿಪಕ್ವತೆಯನ್ನು ತಲುಪಿದಾಗ, ಕಷ್ಟವಾದಾಗಲೂ ನೀವು ನೀಡಲು ಪ್ರಾರಂಭಿಸುತ್ತೀರಿ ಏಕೆಂದರೆ ಈಗ ಪ್ರೇರಣೆ ಕರ್ತನ ಮೇಲಿನ ಶುದ್ಧ ಪ್ರೀತಿಯಾಗಿದೆ. ನಿಮ್ಮ ಜೀವನದಲ್ಲಿ, ಸೇವೆಯಲ್ಲಿ ಇತ್ಯಾದಿಗಳಲ್ಲಿ ನಿಜವಾದ ಉಕ್ಕಿ ಹರಿಯುವಿಕೆ ಪ್ರಾರಂಭವಾದಾಗ ಇದು ಸಂಭವಿಸುತ್ತದೆ. ನಿಮ್ಮ ಉದ್ದೇಶಗಳು ಶುದ್ಧವಾಗಿರುವುದರಿಂದ ದೇವರು ನಿಮಗೆ ದೊಡ್ಡ ವಿಷಯಗಳಲ್ಲೂ ನಂಬಿಕೆ ಯಿಟ್ಟು ಅನುಗ್ರಹಿಸಬಹುದಾದ ಸ್ಥಾನವನ್ನು ನೀವು ತಲುಪಿದ್ದೀರಿ ಎಂದರ್ಥ.

Bible Reading: Number 3
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಿಮ್ಮ ಮಗನಾದ ಯೇಸು ಕ್ರಿಸ್ತನ ಅಮೂಲ್ಯ ಕೊಡುಗೆಗಾಗಿ ನಾನು ಕೃತಜ್ಞನಾಗಿದ್ದೇನೆ. ನನ್ನಲ್ಲಿ ಪ್ರೀತಿ ಮತ್ತು ಔದಾರ್ಯದ ಹೃದಯವನ್ನು ತುಂಬಿರಿ. ನಿಮ್ಮ ಮೇಲಿನ ನನ್ನ ಪ್ರೀತಿ ಅರಳುತ್ತಿದ್ದಂತೆ, ಇತರರಿಗೆ ನಿಸ್ವಾರ್ಥವಾಗಿ ನೀಡುವುದಕ್ಕೆ ನನಗೆ ಮಾರ್ಗದರ್ಶನ ನೀಡಿ. ಯೇಸುವಿನ ಹೆಸರಿನಲ್ಲಿ, ಪ್ರಾರ್ಥಿಸುತ್ತೇನೆ. ಆಮೆನ್!


Join our WhatsApp Channel


Most Read
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ
● ಅಭಿಷೇಕಕ್ಕಿರುವ ಪ್ರಪ್ರಥಮ ಶತೃ
● ವಾಕ್ಯದಿಂದ ಬೆಳಕು ಬರುತ್ತದೆ
● ಕರ್ತನ ಸೇವೆ ಮಾಡುವುದು ಎಂದರೇನು-I
● ಪ್ರವಾದನಾ ವಾಕ್ಯವನ್ನು ಸ್ವೀಕರಿಸಿದ ನಂತರ ಏನು ಮಾಡಬೇಕು?
● ದೇವರ ಆಲಯದಲ್ಲಿರುವ ಸ್ತಂಭಗಳು
● ನಾವು ಸೇತುವೆಗಳನ್ನು ನಿರ್ಮಿಸಬೇಕೇ ವಿನಃ, ತಡೆಗೋಡೆಯನ್ನಲ್ಲ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್