ಅನುದಿನದ ಮನ್ನಾ
ದಿನ 03:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Wednesday, 13th of December 2023
2
2
519
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
"ನಾನು ಸಾಯುವದಿಲ್ಲ; ಜೀವದಿಂದಿದ್ದು ಯಾಹುವಿನ ಕ್ರಿಯೆಗಳನ್ನು ಸಾರುವೆನು." (ಕೀರ್ತನೆಗಳು 118:17)
ನಾವು ನಮಗೆ ದೇವರು ಕೊಟ್ಟ ಕರೆಯನ್ನು ಪೂರೈಸಬೇಕೆಂಬುದು ಮತ್ತು ವೃದ್ಧಾಪ್ಯದವರೆಗೂ ಸಂಪೂರ್ಣವಾಗಿ ಜೀವಿಸಿ ಸಾಯಬೇಕು ಎಂಬುದು ದೇವರ ಚಿತ್ತವಾಗಿದೆ. ಅಕಾಲಿಕ ಮರಣ, ಅನಾರೋಗ್ಯ, ನೋವು, ದುಷ್ಟತ್ವ ಮತ್ತು ರೋಗಗಳಿಂದ ತುಂಬಿದ ಜೀವನ ನಮ್ಮ ಜೀವಿತದಲ್ಲಿ ಉಂಟಾಗಬೇಕೆಂಬುದು ಆತನ ಚಿತ್ತದಲ್ಲಿಲ್ಲ.
ಮರಣ ಎಂದರೆ "ಪ್ರತ್ಯೇಕಿಸಲ್ಪಡುವಿಕೆ ಅಥವಾ ನಿವೃತ್ತಿ" ಸೈತಾನನು ಯಾವಾಗಲೂ ನಾವು ದೇವರಿಂದ ಪ್ರತ್ಯೇಕಗೊಳ್ಳಬೇಕೆಂದು ಬಯಸುತ್ತಾನೆ ಮತ್ತು ದೇವರು ನಮಗಾಗಿ ನೇಮಿಸಿದ ಕಾರ್ಯಗಳಿಂದ ನಮ್ಮನ್ನು ನಿವೃತ್ತಿಗೊಳಿಸಬೇಕೆಂಬುದೇ ಅವನ ಗುರಿಯಾಗಿದೆ. ಆದ್ದರಿಂದ ನಾವು ಅವನ ಈ ಉದ್ದೇಶದ ಮೇಲೆ ಗಮನವನ್ನು ಕೇಂದ್ರೀಕರಿಸಿ ಅದನ್ನು ಪ್ರತಿರೋಧಿಸಿ ಅವನ ಆಯುಧಗಳನ್ನು ನಾಶಪಡಿಸಬೇಕು.
ಮರಣದಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ.
1. ಆತ್ಮಿಕ ಮರಣ
ಮನುಷ್ಯನ ಆತ್ಮದಿಂದ ದೇವರ ಆತ್ಮವು ಪ್ರತ್ಯೇಕಗೊಂಡಾಗ ಆತ್ಮಿಕ ಮರಣ ಉಂಟಾಗುತ್ತದೆ. ಆದಾಮ ಹವ್ವರು ಮೊದಲು ಅನುಭವಿಸಿದ್ದು ಆತ್ಮಿಕ ಮರಣವನ್ನು.ಅವರಿಂದ ಮೊದಲು ದೇವರ ಆತ್ಮವು ತೆಗೆಯಲ್ಪಟ್ಟಿತು.(ಆದಿಕಾಂಡ 2:17)
2. ಭೌತಿಕ ಮರಣ.
ಭೌತಿಕವಾದ ದೇಹದಿಂದ ಪ್ರಾಣವು ಪ್ರತ್ಯೇಕಗೊಂಡಾಗ ಭೌತಿಕವಾದ ಮರಣ ಉಂಟಾಗುತ್ತದೆ. ಆದಾಮ ಹವ್ವರು ತಮ್ಮ ಭೌತಿಕ ಮರಣ ಅನುಭವಿಸುವುದಕ್ಕೆ 930 ವರ್ಷಗಳ ಮುಂಚಿತವಾಗಿ ಆತ್ಮಿಕ ಮರಣವನ್ನು ಅನುಭವಿಸಿದರು. ಆದರೆ ದೇವರ ಆಜ್ಞೆಗೆ ಅವಿಧೇಯರಾಗಿ ಆತ್ಮಿಕ ಮರಣ ಹೊಂದಿದ ಫಲವಾಗಿ ಅವರು ಭೌತಿಕ ಮರಣವನ್ನು ಹೊಂದಿದರು. (ಆದಿಕಾಂಡ 5: 5)
3. ನಿತ್ಯ ಮರಣ.
ಮಾನವನ ಆತ್ಮವು ದೇವರ ಆತ್ಮದಿಂದ ಯಾವುದೇ ಪರಿಹಾರವಿಲ್ಲದೆ ಶಾಶ್ವತವಾಗಿ ಪ್ರತ್ಯೇಕಗೊಂಡಾಗ ನಿತ್ಯ ಮರಣ ಸಂಭವಿಸುತ್ತದೆ.
"ಯಾವಾಗ ಕೊಡುವನಂದರೆ ಯೇಸು ಕರ್ತನು ತನ್ನ ಶಕ್ತಿಯನ್ನು ತೋರ್ಪಡಿಸುವ ದೇವದೂತರಿಂದ ಕೂಡಿದವನಾಗಿ ಉರಿಯುವ ಬೆಂಕಿಯಲ್ಲಿ ಆಕಾಶದಿಂದ ಪ್ರತ್ಯಕ್ಷನಾಗುವ ಕಾಲದಲ್ಲಿ ಅದನ್ನು ಕೊಡುವನು.
.. ಅಂಥವರು ಕರ್ತನ ಸಮ್ಮುಖಕ್ಕೂ ಆತನ ಪರಾಕ್ರಮದ ವೈಭವಕ್ಕೂ ದೂರವಾಗಿ ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು."
(2 ಥೆಸಲೋನಿಕದವರಿಗೆ 1:7,9)
ಇಲ್ಲಿ "ನಿತ್ಯ ನಾಶನ"ಎಂಬ ಪದ ಪ್ರಯೋಗವನ್ನು ಗಮನಿಸಿ
"ಆದರೆ ಹೇಡಿಗಳು, ನಂಬಿಕೆಯಿಲ್ಲದವರು, ಅಸಹ್ಯವಾದದ್ದರಲ್ಲಿ ಸೇರಿದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾರಾಧಕರು, ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳುರಿಯುವ ಕೆರೆಯೇ; ಅದು ಎರಡನೆಯ ಮರಣವು.." (ಪ್ರಕಟನೆ 21:8).
ಈ ಎರಡನೇ ಮರಣವೇ ನಿತ್ಯ ಮರಣ.
ಅವಧಿಗೆ ಮುಂಚಿತವಾಗಿಯೇ ಮರಣ ಹೊಂದಲು ಇರುವ ಕಾರಣಗಳು.
ಕೆಲವರು ತಮ್ಮ ಜೀವನದಲ್ಲಿ ದೇವರು ತಮಗಿಟ್ಟ ಗುರಿಯನ್ನು ತಲುಪುವ ಮೊದಲೇ ಸತ್ತು ಹೋಗುತ್ತಾರೆ. ಇನ್ನು ಕೆಲವರು ತಾವು ಕಷ್ಟಪಟ್ಟು ಸಂಪಾದಿಸಿದ್ದನ್ನು ಅನುಭವಿಸುವ ಹೊತ್ತಿಗೆ ಮರಣ ಹೊಂದುತ್ತಾರೆ. ಇವೆಲ್ಲವೂ ಸೈತಾನನ ಕಾರ್ಯಾಚರಣೆಯ ವಿಧವನ್ನು ವ್ಯಕ್ತಪಡಿಸುತ್ತದೆ. ( ಕದ್ದುಕೊಳ್ಳುವುದಕ್ಕೂ ಕೊಲ್ಲುವುದಕ್ಕೂ ನಾಶ ಮಾಡುವುದಕ್ಕೂ ಬರುತ್ತಾನೆ ಯೋಹಾನ 10:10)
1. ಪಾಪಮಯ ಜೀವನ ಶೈಲಿ.
"ಆಕಾನನು ಯೆಹೋಶುವನಿಗೆ - ನಾನು ಕೊಳ್ಳೆಯಲ್ಲಿ ಶಿನಾರ್ ದೇಶದ ಒಂದು ಉತ್ತಮವಾದ ನಿಲುವಂಗಿಯನ್ನೂ ಇನ್ನೂರು ರೂಪಾಯಿ ತೂಕದ ಬೆಳ್ಳಿಯನ್ನೂ ಐವತ್ತು ರೂಪಾಯಿ ತೂಕದ ಬಂಗಾರದ ಗಟ್ಟಿಯನ್ನೂ ಕಂಡು ಅದನ್ನು ಆಶೆಯಿಂದ ತೆಗೆದುಕೊಂಡೆನು. ಅವುಗಳನ್ನು ನನ್ನ ಗುಡಾರದ ಮಧ್ಯದಲ್ಲಿ ಹುಗಿದಿಟ್ಟಿದ್ದೇನೆ; ಬೆಳ್ಳಿಯು ಅಂಗಿಯ ಕೆಳಗಿರುತ್ತದೆ. ನಾನು ನಿಜವಾಗಿ ಇಂಥದನ್ನು ಮಾಡಿ ಇಸ್ರಾಯೇಲ್ ದೇವರಾದ ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ ಎಂದು ಉತ್ತರಕೊಟ್ಟನು."
"ಅಲ್ಲಿ ಯೆಹೋಶುವನು ಅವನಿಗೆ - ನೀನು ನಮ್ಮನ್ನು ಆಪತ್ತಿಗೆ ಗುರಿಮಾಡಿದ್ದೇಕೆ? ಈ ಹೊತ್ತು ಯೆಹೋವನು ನಿನ್ನ ಮೇಲೆ ಆಪತ್ತನ್ನು ಬರಮಾಡುವನು ಎಂದು ಹೇಳಿದ ಕೂಡಲೆ ಇಸ್ರಾಯೇಲ್ಯರೆಲ್ಲರೂ ಅವನನ್ನು ಕಲ್ಲೆಸೆದು ಕೊಂದರು. ಅವನಿಗಿದ್ದದ್ದೆಲ್ಲವನ್ನೂ ಕಲ್ಲೆಸೆದು ಬೆಂಕಿಯಿಂದ ಸುಟ್ಟುಬಿಟ್ಟರು.
ಅವನ ಮೇಲೆ ಕಲ್ಲುಗಳ ಒಂದು ದೊಡ್ಡ ಕುಪ್ಪೆಯನ್ನು ಹಾಕಿದರು. ಅದು ಇಂದಿನವರೆಗೂ ಅದೆ. ಆಗ ಯೆಹೋವನ ರೋಷಾಗ್ನಿಯು ಅಡಗಿಹೋಯಿತು. ಈ ಸಂಗತಿಯ ದೆಸೆಯಿಂದ ಆ ಸ್ಥಳಕ್ಕೆ ಇಂದಿನವರೆಗೂ ಆಕೋರಿನ ತಗ್ಗು ಎಂಬ ಹೆಸರಿರುತ್ತದೆ."
(ಯೆಹೋಶುವ 7:20-21,25-26 )
ಇಲ್ಲಿ ಆಕಾನನು ಅವಧಿಗೆ ಮುನ್ನವೇ ಸಮಾಧಿ ಸೇರಿದ್ದು ಅವನ ಪಾಪಮಯ ಜೀವನ ಶೈಲಿಯಿಂದ.
ನಿರಂತರವಾಗಿ ದೇವರ ವಾಕ್ಯಕ್ಕೆ ಅವಿಧೇಯರಾಗುವುದು ಮತ್ತು ಪಾಪಮಯವಾದ ಜೀವನ ಶೈಲಿಯೂ ಮರಣವನ್ನು ಆಕರ್ಷಿಸುತ್ತದೆ. ಇದು ಸಂಭವಿಸಲು ಸಮಯ ತೆಗೆದುಕೊಳ್ಳಬಹುದು ಆದರೆ ಸಂಭವಿಸುವುದು ನಿಶ್ಚಯ.
2. ಮನುಷ್ಯನ ದುಷ್ಟತ್ವದಿಂದ.
"ಅವರು ನಾಲಿಗೆಯೆಂಬ ಕತ್ತಿಯನ್ನು ಮಸೆದಿದ್ದಾರೆ; ವಿಷವಚನವೆಂಬ ಬಾಣವನ್ನು ಹೂಡಿ" (ಕೀರ್ತನೆಗಳು 64:3)
"ತರುವಾಯ ಕಾಯಿನನು ತನ್ನ ತಮ್ಮನಾದ ಹೇಬೆಲನಿಗೆ - ಅಡವಿಗೆ ಹೋಗೋಣ ಬಾ ಎಂದನು. ಅಡವಿಗೆ ಬಂದಾಗ ಕಾಯಿನನು ತನ್ನ ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು."
(ಆದಿಕಾಂಡ 4:8)
ಮನುಷ್ಯನ ಹೃದಯವು ಸ್ವಾರ್ಥ ಆಲೋಚನೆಗಳಿಂದಲೂ ದುಷ್ಟತ್ವದಿಂದಲೂ ತುಂಬಿದೆ ಮನುಷ್ಯನ ಹೃದಯದಲ್ಲಿರುವ ದುಷ್ಟತ್ವವು ಅವನು ಅವನ ಪ್ರೀತಿ ಪಾತ್ರರನ್ನು ಮತ್ತು ತನ್ನ ಸುತ್ತಲಿನ ಜನರನ್ನು ಕೊಲ್ಲುವಂತೆ ಮಾಡುತ್ತದೆ.
3.ಆತ್ಮಿಕ ಆಕ್ರಮಣ.
"ಆ ಸ್ತ್ರೀಯು ಗರ್ಭಿಣಿಯಾಗಿ ಎಲೀಷನು ಹೇಳಿದಂತೆ ಮುಂದಿನ ವರುಷ ಅದೇ ಕಾಲದಲ್ಲಿ ಒಬ್ಬ ಮಗನನ್ನು ಹೆತ್ತಳು....
..ಸೇವಕನು ಹುಡುಗನನ್ನು ಅವನ ತಾಯಿಗೆ ತಂದೊಪ್ಪಿಸಿದನು. ಹುಡುಗನು ಮಧ್ಯಾಹ್ನದವರೆಗೂ ತಾಯಿಯ ತೊಡೆಯ ಮೇಲೆಯೇ ಇದ್ದುಕೊಂಡು ಅನಂತರ ಸತ್ತನು." (2 ಅರಸುಗಳು 4:17)
ಈ ಒಂದು ವಾಕ್ಯ ಭಾಗದಲ್ಲಿ ನಾವು ಕಾಣುವ ಹುಡುಗನು ಯಾವುದೇ ಭೌತಿಕ ಕಾರಣವಿಲ್ಲದೆ ಸತ್ತನು. ಇದೊಂದು ಆ ಹುಡುಗನ ತಲೆಯ ಮತ್ತು ಆರೋಗ್ಯದ ಮೇಲೆ ಆದಂತಹ ಆತ್ಮಿಕ ದಾಳಿ. ಹಳೆಯ ಒಡಂಬಡಿಕೆಯಲ್ಲಿ ನಾವು ಸೈತಾನನ ಕಾರ್ಯಾಚರಣೆಗಳನ್ನು ಕಾಣಬಹುದು ಆದರೆ ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೊಸ ಒಡಂಬಡಿಕೆಯಲ್ಲಿ ಕ್ರಿಸ್ತನು ಗುಪ್ತವಾಗಿದ್ದ ಅಂಧಕಾರ ರಾಜ್ಯದ ಕಾರ್ಯಗಳನ್ನು ಬಯಲಿಗೆ ತಂದನು ಮತ್ತು ಆ ಎಲ್ಲಾ ದುಷ್ಟ ದುರಾತ್ಮನ ಬಲಗಳ ಮೇಲೆ ನಮಗೆ ಅಧಿಕಾರ ನೀಡಿದನು. (ಲೂಕ 10:19). ಆತ್ಮಿಕ ಬಾಣಗಳು ನಿತ್ಯವೂ ನಮ್ಮ ಮೇಲೆ ಹಾರಿ ಬರುತ್ತಲೇ ಇರುತ್ತವೆ. ದೇವರ ಸಹಾಯವಿಲ್ಲದಿದ್ದರೆ ಜನರು ಯಾವಾಗ ಬೇಕಾದರೂ ವಿಪತ್ತಿಗೆ ಒಳಗಾಗಬಹುದು.
"ಇರುಳಲ್ಲಿ ಭಯಹುಟ್ಟಿಸುವ ಯಾವದಕ್ಕೂ ಹಗಲಲ್ಲಿ ಹಾರಿಬರುವ ಬಾಣಕ್ಕೂ.. " (ಕೀರ್ತನೆಗಳು 91:5)
ಆತ್ಮಿಕವಾದದ್ದು ಭೌತಿಕವಾದದ್ದನ್ನು ನಿಯಂತ್ರಿಸುತ್ತದೆ. ಮತ್ತು ಭೌತಿಕ ಆಯಾಮದಲ್ಲಿ ಏನೇ ಜರಗುವುದಕ್ಕೆ ಮೊದಲು,ಅದು ಆತ್ಮಿಕ ಆಯಾಮದಲ್ಲಿ ತೀರ್ಮಾನವಾಗಿ ವ್ಯವಸ್ಥೆಗೊಂಡು ಮರಣ ಉಂಟು ಮಾಡಲು ಬಲಹೊಂದಿ ಬಂದೆರುಗುತ್ತದೆ. ದಾವಿದನು ಸೌಲನಿಂದ ಉಂಟಾದ ಮಾರಣಾಂತಿಕ ಆಕ್ರಮಣದಿಂದ ಅನೇಕ ಬಾರಿ ತಪ್ಪಿಸಿಕೊಂಡನು. ಆದರೆ ಮುಗ್ದನಾದ ಹೇಬೆಲನು ಅವನ ಸಹೋದರನಾದ ಕಾಯಿನನಿಂದ ಕೊಲ್ಲಲ್ಪಟ್ಟನು. (1 ಸಮುವೇಲ 18:12)
(ಆದಿಕಾಂಡ 4:8). ಮುಗ್ಧ ಜನರು ಬಲವಿಲ್ಲದವರಾದಾಗ ಇಲ್ಲವೇ ಉದಾಸೀನತೆದಿಂದ ಸಾವನ್ನಪ್ಪುತ್ತಾರೆ.
ಇಂದು ನಾವು ನಮ್ಮನ್ನು ಕೊಲ್ಲಲು ಸೈತಾನನು ರೂಪಿಸಿರುವ ಯೋಜನೆಗಳನ್ನು ನಾಶಪಡಿಸಲು ಪ್ರಾರ್ಥಿಸಲಿದ್ದೇವೆ. ನೀವು ಸಾಯುವುದಿಲ್ಲ ನೀವು ದೇವರ ಚಿತ್ತವನ್ನು ಯೇಸು ನಾಮದಲ್ಲಿ ಪೂರೈಸುತ್ತೀರಿ ಎಂದು ನಾನು ನಿಮ್ಮ ಜೀವಿತದ ಮೇಲೆ ಪ್ರವಾದನೆ ಹೇಳುತ್ತೇನೆ. ಯೇಸು ನಾಮದಲ್ಲಿ ನಿಮ್ಮ ಜೀವನದಲ್ಲಿರುವ ಯಾವುದು ಸಹ ಸಾಯದು.
ಪ್ರಾರ್ಥನೆಗಳು
ಪ್ರತಿ ಪ್ರಾರ್ಥನೆಯ ಕ್ಷಿಪಣಿಯು ನಿಮ್ಮ ಹೃದಯದಾಳದಿಂದ ಬರುವವರೆಗೂ ಪುನರಾವರ್ತಿಸಿ. ಆನಂತರವೇ ಮುಂದಿನ ಪ್ರಾರ್ಥನ ಕ್ಷಿಪಣಿಯ ಅಂಶಕ್ಕೆ ತೆರಳಿ
( ಪುನರಾವರ್ತಿಸಿ,ವ್ಯಕ್ತಿಗತವಾಗಿ ಮನನ ಮಾಡಿಕೊಳ್ಳಿ ಕನಿಷ್ಠ ಒಂದು ನಿಮಿಷವಾದರೂ ಪ್ರತಿ ಪ್ರಾರ್ಥನಾ ಅಂಶವನ್ನು ಪ್ರಾರ್ಥಿಸಿ ).
1. ನನ್ನ ತಂದೆಯೇ ನನ್ನ ನಿರ್ಮಾತೃವೇ ನೀನು ನನಗಾಗಿ ಕೊಟ್ಟ ಜೀವಕ್ಕಾಗಿ ನಿನ್ನನ್ನು ಸ್ತುತಿಸುತ್ತೇನೆ. ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ ಮತ್ತು ಕರ್ತನೆ ನಿನ್ನನ್ನೇ ಆರಾಧಿಸುತ್ತೇನೆ. ಕೀರ್ತನೆಗಳು (139 :14).
2. ತಂದೆಯೇ ನಾನು ಮತ್ತು ನನ್ನ ಕುಟುಂಬದವರು ನಿನ್ನ ಮಾರ್ಗದಲ್ಲೇ ನಡೆಯುವ ಮತ್ತು ನಿನ್ನ ಕಟ್ಟಳೆಗಳನ್ನು ಅನುಸರಿಸುವ ಕೃಪೆಯನ್ನು ಯೇಸು ನಾಮದಲ್ಲಿ ಅನುಗ್ರಹಿಸು ಜೀವಿತರ ದೇಶದಲ್ಲಿ ನಾವು ಬಹುಕಾಲ ಬಾಳುವಂತೆ ಆಶೀರ್ವದಿಸು. (ಧರ್ಮೋಪದೇಶಕಾಂಡ 5:33 ).
3. ಯೆಹೋವ ಎಬಿನೇಜರೇ ನಮ್ಮ ಜೀವಮಾನ ಕಾಲದಲ್ಲೆಲ್ಲಾ ನಿಮಗೆ ಭಯಪಟ್ಟು ಜೀವಿಸುವ ಹಾಗೆ ನನಗೂ ನನ್ನ ಕುಟುಂಬದವರಿಗೂ ಯೇಸು ನಾಮದಲ್ಲಿ ಕೃಪೆಯನ್ನು ಅನುಗ್ರಹಿಸು. (ಜ್ಞಾನೋಕ್ತಿ 9 :10)
4. ನನ್ನನ್ನು ಅಥವಾ ನನ್ನ ಕುಟುಂಬದವರನ್ನು ಕೊಲ್ಲಲು ಯೋಚಿಸಿರುವ ಪ್ರತಿ ರೋಗ ವ್ಯಾಧಿಗಳು ಯೇಸು ನಾಮದಲ್ಲಿ ನಾಶವಾಗಲಿ (ವಿಮೋಚನ ಕಾಂಡ 23 :25).
5. ನನ್ನನ್ನು ನನ್ನ ಜೀವಿತಾವಧಿಗೂ ಮುಂಚಿತವಾಗಿ ಕೊಲ್ಲಲು ರೂಪಿಸಿರುವ ನನ್ನ ದೇಹದಲ್ಲಿ ನಾಟಿರುವ ಯಾವುದೇ ದುಷ್ಟನ ಉಪಕರಣಗಳು ಪವಿತ್ರಾತ್ಮನ ಅಗ್ನಿಯಿಂದ ಸುಟ್ಟು ನಾಶವಾಗಲಿ( ಯೆಶಾಯ 54:17)
6. ನನ್ನ ಹಾಗೂ ನನ್ನ ಕುಟುಂಬದವರ ಜೀವಿತವನ್ನು ಮುಟಕುಗೊಳಿಸಲು ಏರ್ಪಟ್ಟ ಯಾವುದೇ ಅನಾಮಿಕ ಒಡಂಬಡಿಕೆಗಳು ಶಾಪಗಳು ಯೇಸುವಿನ ರಕ್ತದ ಮೂಲಕ ಲಯವಾಗಿ ಹೋಗಲಿ. ಗಲಾತ್ಯ (3:13)
7. ಯಾವುದೇ ಮರಣದ ಬಾಣವಾಗಲಿ, ರಾತ್ರಿಯಲ್ಲಿ ಅಲೆದಾಡುವ ಮಾರಿಯಾಗಲಿ ಯಾವುದು ಸಹ ನನ್ನ ಮತ್ತು ನನ್ನ ಪ್ರೀತಿ ಪಾತ್ರರ ಗುಡಾರದ ಸಮೀಪಕ್ಕೂ ಯೇಸು ನಾಮದಲ್ಲಿ ಬಾರದು. ( ಕೀರ್ತನೆಗಳು 91:5-6)
8." ನಾನು ಸಾಯುವದಿಲ್ಲ; ಜೀವದಿಂದಿದ್ದು ಯೇಸುನಾಮದಲ್ಲಿ ನನ್ನ ಕರ್ತನ ಕ್ರಿಯೆಗಳನ್ನು ಸಾರುವೆನು."(ಕೀರ್ತನೆಗಳು 118:17).
9.ಯೇಸು ನಾಮದಲ್ಲಿ ದೇವರ ಪುನರುತ್ಥಾನ ಶಕ್ತಿಯು ನನ್ನಲ್ಲಿ ನಿರ್ಜೀವಗೊಂಡ ಸದ್ಗುಣಗಳಿಗೆ ಜೀವವನ್ನು ತರುತ್ತದೆ (ರೋಮ 8:11 )
10. ನನ್ನ ಜೀವಿತದಲ್ಲಿ ನಿರ್ಜೀವಗೊಂಡ ಮತ್ತು ನಿರೀಕ್ಷೆಯಿಲ್ಲದ ಎಲ್ಲಾ ಪರಿಸ್ಥಿತಿಗಳ ಮೇಲೂ ಯೇಸು ನಾಮದಲ್ಲಿ ಜೀವವನ್ನು ನುಡಿಯುತ್ತೇನೆ ( ನಿಮ್ಮ ಹಣಕಾಸು ಮಕ್ಕಳು ವ್ಯವಹಾರ ಮುಂತಾದ ಯಾವುದರ ಮೇಲಾದರೂ ಹೀಗೆ ನುಡಿಯಿರಿ ) (ಯಹೆಚ್ಕೆಲ 37:5)
11. ನಿಮ್ಮ ಪ್ರಾರ್ಥನೆಗಳಿಗೆ ಉತ್ತರಿಸಿದ ದೇವರನ್ನು ಸ್ತುತಿಸಿರಿ. ( ಕೆಲ ಕಾಲ ಪ್ರಾರ್ಥನೆಯಲ್ಲಿ ಮೌನವಾಗಿ ಕಳೆಯಿರಿ )( ಫಿಲಿಪ್ಪಿ 4 :6)
12. ಪರಲೋಕದ ತಂದೆಯೇ ನನ್ನ ಜೀವಿತದ ಅನೇಕ ಸವಾಲುಗಳ ಮಧ್ಯದಲ್ಲಿಯೂ ನಾನು ನಿನ್ನ ಮೇಲೆ ನಂಬಿಕೆಯಿಂದಲೂ ಭರವಸದಿಂದಲೂ ಇರುವಂತೆ ನನ್ನನ್ನು ಬಲಗೊಳಿಸು. ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ನಿನ್ನನ್ನು ಪ್ರೀತಿಸುವವರ ಹಿತಕ್ಕಾಗಿ ನೀನು ಎಲ್ಲವನ್ನು ಅನುಕೂಲಕರವಾಗಿ ಮಾರ್ಪಡಿಸುವ ನಿನ್ನ ಕರಗಳನ್ನು ನಾನು ದೃಷ್ಟಿಸುವಂತೆ ಯೇಸು ನಾಮದಲ್ಲಿ ಸಹಾಯ ಮಾಡು. (ರೋಮ 8:28)

Join our WhatsApp Channel
Most Read
● ದೇವರ ಪ್ರೀತಿಯನ್ನು ಅನುಭವಿಸುವುದು● ಕೃಪೆಯ ವಾಹಕರಾಗಿ ಮಾರ್ಪಡುವುದು.
● ಸತ್ಯವೇದ ಆಧಾರಿತ ಸಮೃದ್ಧಿಯನ್ನು ಹೊಂದಲಿರುವ ರಹಸ್ಯ
● ವ್ಯರ್ಥವಾದದಕ್ಕೆ ಹಣ
● ದಿನ 32:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 33:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಿಮ್ಮ ಗತಿಯನ್ನು ಬದಲಾಯಿಸಿ
ಅನಿಸಿಕೆಗಳು