ಅನುದಿನದ ಮನ್ನಾ
ಇನ್ನು ಸಾವಕಾಶವಿಲ್ಲ.
Monday, 5th of February 2024
4
3
565
Categories :
ಸಂಬಂಧಗಳು (Relationships)
ನಾನು ಚಿಕ್ಕ ಹುಡುಗನಾಗಿದ್ದಾಗ ನಮ್ಮಮ್ಮ ಯಾವಾಗಲೂ ನನಗೆ 'ನೀನು ಶಾಲೆಯಲ್ಲಿಯಾಗಲೀ ಅಥವಾ ಇಲ್ಲೇ ಆಟವಾಡುವಾಗ ಆಗಲೀ ಒಳ್ಳೆಯ ಸ್ನೇಹಿತರೊಂದಿಗೆ ಸೇರಬೇಕು' ಎಂದು ಹೇಳುತ್ತಿದ್ದರು. ನಾನು 20 ವರ್ಷ ದವನಾಗುವವರೆಗೂ ನಮ್ಮಮ್ಮ ನನಗೆ ಏಕೆ ಹೀಗೆ ಹೇಳುತ್ತಿದ್ದರು ಎಂಬುದು ನನಗೆ ಅರ್ಥವೇ ಆಗಿರಲಿಲ್ಲ.
"ಮೋಸ ಹೋಗಬೇಡಿರಿ, ದುಸ್ಸಹಾವಾಸವು ಸದಾಚಾರವನ್ನು ಕೆಡಿಸುತ್ತದೆ"(1ಕೊರಿಯಂತೆ 15:33)
ನೀವು ಕಾಲ ಕಳೆಯುವುದಕ್ಕಾಗಿ ಯಾವಾಗಲೂ ನಿಮ್ಮ ಸುತ್ತಲೂ ಒಳ್ಳೆಯ ಜನರೇ ಇರುವಂತೆ ಆಯ್ಕೆ ಮಾಡಿಕೊಳ್ಳುವಂತದ್ದು ನೀವು ನಿಮ್ಮ ಜೀವನದಲ್ಲಿ ತೆಗೆದುಕೊಳ್ಳಬಹುದಾದ ಬಹುಮುಖ್ಯ ನಿರ್ಧಾರವಾಗಿದೆ. ಮತ್ತದು ನಿಮ್ಮ ಜೀವಿತದಲ್ಲಿ ದೇವರ ಸ್ವರವನ್ನು ಮತ್ತು ನಿಮಗಾಗಿ ಇರುವ ಆತನ ಚಿತ್ತವನ್ನು ವಿವೇಚಿಸಲು ನೀವು ಇಡಬಹುದಾದ ಪ್ರಾಯೋಗಿಕ ಹೆಜ್ಜೆಯಾಗಿದೆ
"ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು." ಎಂದು ಜ್ಞಾನೋಕ್ತಿಗಳು 13:20 ಹೇಳುತ್ತದೆ
ಸ್ನೇಹಿತರಿಂದ ಹಿಡಿದು ವ್ಯವಹಾರದ ಸಹೋದ್ಯೋಗಿಗಳವರೆಗೂ ಅಲ್ಲಿಂದ ಬಾಳ ಸಂಗಾತಿಯವರೆಗೂ ಯಾರನ್ನೇ ನೀವು ನಿಮ್ಮ ಜೀವನದೊಳಗೆ ಬರಮಾಡಿ ಕೊಳ್ಳುವಾಗ ಅದರಲ್ಲಿ ಯೋಗ್ಯ ಜನರನ್ನು ನೀವು ವಿವೇಕಯುತವಾಗಿ ಆಯ್ಕೆ ಮಾಡಿಕೊಳ್ಳಲು ದೇವರು ನಿಮಗೆ ಸಹಾಯ ಮಾಡಲು ಬಯಸುತ್ತಾನೆ. ನಿಮ್ಮ ಜೀವಿತಕ್ಕೆ ದೇವರ ಚಿತ್ತವೇನೆಂಬುದನ್ನು ನಿರ್ಧರಿಸುವುದಕ್ಕಾಗಿ ಯೋಗ್ಯರಾದ ಜನರನ್ನು ನೀವು ಕಂಡುಕೊಳ್ಳುವುದು ನಿಮ್ಮ ಜೀವನದ ಪ್ರಮುಖ ಭಾಗವಾಗಿದೆ.
ದೇವರು ನಮ್ಮ ಜೀವನದಲ್ಲಿ ಒಂದು ಮಹತ್ತರ ಕಾರ್ಯ ಮಾಡುವಾಗಲೆಲ್ಲಾ,ನಮ್ಮ ಜೀವಿತದಲ್ಲಿ ದೇವರ ಉದ್ದೇಶವನ್ನು ಪೂರೈಸುವುದಕ್ಕೆ ಸಹಕಾರಿಯಾಗಿರುವಂತಹ ಹೊಸ ವ್ಯಕ್ತಿಗಳನ್ನು ಆತನು ನಮಗೆ ಪರಿಚಯಿಸುತ್ತಾನೆ. ದೇವರ ಸ್ವರವನ್ನು ಕೇಳಿ ಆತನ ಹೆಜ್ಜೆಯ ಜಾಡಿನಲ್ಲಿ ನಡೆಯುವುದನ್ನು ನಾವು ಕಲಿಯುವಂತದ್ದು ನಮ್ಮನ್ನು ದುಸ್ಸಹವಾಸಗಳಿಂದ ಬಿಡಿಸಿ ಯೋಗ್ಯರಾದ ಜನರೊಂದಿಗೆ ಬೆರೆಯುವಂತೆ ಮಾಡುತ್ತದೆ
ನೀವು ಎಂತಹ ಜನರೊಂದಿಗೆ ಹೆಚ್ಚಾದ ಸಮಯವನ್ನು ಕಳೆಯುತ್ತಿರುತ್ತೀರೋ ಅವರೇ ನಿಮ್ಮ ಏಳಿಗೆಗಾಗಲೀ ಪತನಕ್ಕಾಗಲೀ ಕಾರಣವಾಗಿರುತ್ತಾರೆ. ಆದುದರಿಂದ ನೀವು ಯೋಗ್ಯರಾದ ಜನರೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಬೇಕು
ನೀವು ಯೋಗ್ಯರಾದ ಜನರನ್ನು ಹೊಂದಲು ಇರುವ ಎರಡು ಮಾರ್ಗಗಳು:-
ಮೊದಲನೇಯದಾಗಿ, ನೀವು ಇಂಥ ಜನರನ್ನು ಹುಡುಕುವಾಗ ಅವರಲ್ಲಿ ನೋಡಬೇಕಾದ ಗುಣಯಾವುದೆಂದರೆ, ನೀವು ಯಾವುದಕ್ಕೆ ಮೌಲ್ಯ ಕೊಡುತ್ತೀರೋ ಅದಕ್ಕೆ ಅವರು ಸಹ ಮೌಲ್ಯ ಕೊಡುವ ಜನರಾಗಿರಬೇಕು.ನೀವು ಪ್ರಾರ್ಥನೆಗೆ ಆದ್ಯತೆ ಕೊಡುವ ಜನರನ್ನು ಹುಡುಕಿರಿ. ನೀವು ಪ್ರಾರ್ಥನೆಗೆ ಆದ್ಯತೆ ನೀಡುವವರಾದರೆ ಪ್ರಾರ್ಥನೆಗೆ ಆದ್ಯತೆ ನೀಡುವ ಜನರೊಂದಿಗೆ ಸಂಪರ್ಕವನ್ನು ಸಾಧಿಸಿರಿ. ಹೀಗೆ ಪಟ್ಟಿಯು ಬೆಳೆಯುತ್ತಾ ಹೋಗುತ್ತದೆ.ನಾನು ಏನನ್ನು ಹೇಳಲು ಬಯಸುತ್ತಿದ್ದೇನೆ ಎಂಬುದನ್ನು ನೀವು ಗ್ರಹಿಸಿದ್ದೀರಿ ಎಂದು ನಾನು ನೆನೆಸುತ್ತೇನೆ
ಎರಡನೆಯದಾಗಿ "ಕರ್ತನೇ ಯೋಗ್ಯರಾದ ವ್ಯಕ್ತಿಗಳನ್ನು ಬರಮಾಡಿ ಸರಿಯಾದ ಜನರೊಂದಿಗೆ ನಾನು ಸಂಪರ್ಕದಲ್ಲಿರುವಂತೆ ಸಹಾಯ ಮಾಡು" ಎಂದು ಅತ್ಯಾಸಕ್ತಿಯಿಂದ ಪ್ರಾರ್ಥಿಸಿರಿ. ಮರುಭೂಮಿಯಲ್ಲಿ ಲಾವಕ್ಕಿಗಳನ್ನು ಬರಮಾಡಿದ ಅದೇ ಕರ್ತನು ಖಂಡಿತವಾಗಿಯೂ ನಿಮ್ಮ ಸುತ್ತಲೂ ಯೋಗ್ಯರಾದ ಜನರನ್ನು ಬಂದು ಸೇರುವಂತೆ ಸಹಾಯ ಮಾಡುತ್ತಾನೆ
ಈ ಒಂದು ಪ್ರವಾದನೆಯ ಮಾತುಗಳಂತೆ ನಡೆಯಿರಿ ಇದರಿಂದ ನಿಮ್ಮ ಜೀವನದ ಮಟ್ಟವು ಮುಂದಿನ ಹಂತಕ್ಕೆ ತಲುಪುವುದನ್ನು ನೀವು ಕಾಣುತ್ತೀರಿ
ಪ್ರಾರ್ಥನೆಗಳು
ತಂದೆಯೇ, ನನ್ನ ಜೀವಿತದಲ್ಲಿ ವಿವೇಚನಾ ಆತ್ಮದ ವರವನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸಿ. ಜನರಲ್ಲಿ ಒಳ್ಳೆಯವರಾರು ಎಂದು ಅರಿತುಕೊಳ್ಳುವಂತೆ ಸಹಾಯ ಮಾಡಿರಿ. ನಾನು ನಿಮ್ಮ ರಾಜ್ಯದ ಕಾರ್ಯ ಮಾಡಲು ಸಹಾಯವಾಗುವಂತಹ ಯೋಗ್ಯ ಜನರೊಂದಿಗೆ ಸೇರುವಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡಿ. ಆಮೆನ್
Join our WhatsApp Channel
Most Read
● ಮೊಗ್ಗು ಬಿಟ್ಟಂತಹ ಕೋಲು● ದಿನ 02 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕರ್ತನ ಸೇವೆ ಮಾಡುವುದು ಎಂದರೇನು II
● ಸಮಯದ ಸೂಚನೆಗಳ ವಿವೇಚನೆ.
● ಇತರರಿಗಾಗಿ ಪ್ರಾರ್ಥಿಸುವುದು
● ಪ್ರತಿಫಲಿಸಲು ಸಮಯ ತೆಗೆದುಕೊಳ್ಳುವುದು.
● ಯೇಸುವಿನ ಕರ್ತತ್ವವನ್ನು ಅರಿಕೆ ಮಾಡುವುದು
ಅನಿಸಿಕೆಗಳು