ಅನುದಿನದ ಮನ್ನಾ
ಕೃತಜ್ಞತಾ ಸ್ತೋತ್ರ ಸಲ್ಲಿಸುವುದರಲ್ಲಿರುವ ಬಲ
Monday, 4th of March 2024
1
0
225
Categories :
ಉಪಕಾರಸ್ತುತಿ (Thanksgiving)
"ಯಾವಾಗಲೂ ಸಂತೋಷಿಸಿರಿ; ಎಡೆಬಿಡದೆ ಪ್ರಾರ್ಥನೆಮಾಡಿರಿ; ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ; ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿ ಬಂದ ದೇವರ ಚಿತ್ತ." (1ಥೆಸಲೋನಿಕದವರಿಗೆ 5:16-18)
ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸುವಂಥದ್ದು ಯಾವಾಗಲೂ ಸುಲಭವಾದ ಕಾರ್ಯವಾಗಿರುವುದಿಲ್ಲ. ಆದರೆ ನಮ್ಮ ಜೀವಿತದಲ್ಲಿ ದೇವರ ಚಿತ್ತವನ್ನು ಪೂರೈಸುವ ನಿಟ್ಟಿನಲ್ಲಿ ನಾವು ಈ ಕಾರ್ಯವನ್ನು ಮಾಡಲೇಬೇಕು. ಈ ರೀತಿಯಲ್ಲಿಯೇ ನಾವು ಉನ್ನತವಾದ ನಂಬಿಕೆಯ ಸ್ತರಕ್ಕೆ ಸಾಗಲು ಸಾಧ್ಯ.
ಕೃತಜ್ಞತಾ ಪೂರ್ವಕವಾದ ಹೃದಯವು ಅನೇಕ ಅದ್ಬುತವಾದ ಪರಿಣಾಮಗಳನ್ನು ನಮ್ಮ ಜೀವನದಲ್ಲಿ ಉಂಟು ಮಾಡುತ್ತದೆ. ಅದು ನಮಗೆ ನಂಬಿಕೆಯಲ್ಲಿ ಬೆಳೆಯಲಷ್ಟೇ ಸಹಾಯ ಮಾಡದೆ ಮುಂದೆ ಕೊರತೆಯಾಗಿ ಬಿಡಬಹುದೇನೋ ಎಂಬ ಭಯದಿಂದ ನಮ್ಮನ್ನು ಮುಕ್ತಗೊಳಿಸುತ್ತದೆ. ಕೃತಜ್ಞತಾ ಪೂರಕವಾದ ನಡವಳಿಕೆಯೇ ನಮ್ಮ ಜೀವಿತವನ್ನು ಪ್ರತಿಬಿಂಬಿಸುತ್ತದೆ.ಅದು ನಮ್ಮ ಜೀವಿತದಲ್ಲಿರುವ ಚಿಂತೆಯನೆಲ್ಲ ಓಡಿಸಿ ದೈವೀಕ ಸಮಾಧಾನದಿಂದ ಆ ಜಾಗವನ್ನು ತುಂಬಿಸುತ್ತದೆ.
ನೋಡಿರಿ,ಸಮಸ್ಯೆಗಳನ್ನು ಹುಡುಕುವಂಥದ್ದು ಬಹಳ ಸುಲಭ. ವಿರೋಧಿಯಾದ ಸೈತಾನನು ಯಾವಾಗಲೂ ನಮ್ಮನ್ನು ಸಮಸ್ಯೆಗಳ ಮೇಲೆ ನಮ್ಮ ಮನಸ್ಸನ್ನು ನಾವು ಕೇಂದ್ರೀಕರಿಸುವಂತೆ ಮಾಡಿ ನಾವು ದೂರು ಹೇಳುವಂತೆಯೂ ಗುಣಗುಟ್ಟುವಂತೆಯೂ ಹಾಗೂ ಕೇವಲ ನಕಾರಾತ್ಮಕ ವಿಚಾರಗಳನ್ನು ಚಿಂತಿಸುವಂತೆಯೂ ಮಾಡಲು ಕಾರ್ಯ ಮಾಡುತ್ತಿರುತ್ತಾನೆ.ಆ ಸಮಯದಲ್ಲಿ ನಾವು ಕೇವಲ ಸಮಸ್ಯೆಗಳನ್ನೇ ನೋಡುವವರಾಗಿ ನಮ್ಮ ಸುತ್ತಲಿನ ಜನರು ನಮ್ಮನ್ನು ನೋಡಿ ನಮ್ಮ ಆಪ್ತರೆಲ್ಲಾ ಬೇಸರಗೊಂಡು ನಮ್ಮನ್ನು ಬಿಟ್ಟು ದೂರ ಓಡಿ ಹೋಗುವಂತೆ ಆಗುತ್ತದೆ.
ಆದರೆ ನಾವು ಕೃತಜ್ಞತೆಯನ್ನು ಸಲ್ಲಿಸುವ ಅಭ್ಯಾಸವನ್ನು ಇಟ್ಟುಕೊಂಡಾಗ ಕೃತಜ್ಞತಾ ಪೂರ್ವಕ ನಡವಳಿಕೆಯೇ ಆಕರ್ಷಿಸುವ ನಡವಳಿಕೆಯಾಗಿ ಬದಲಾಗುತ್ತದೆ.
ವಾಸ್ತವೇನೆಂದರೆ, ಕೃತಜ್ಞತಾ ಪೂರ್ವಕ ಸಂಸ್ಕೃತಿಯು ಇನ್ನೊಬ್ಬರಲ್ಲಿ ತಪ್ಪು ಹುಡುಕುವುದಿಲ್ಲ ಸಮಸ್ಯೆಗೆ ಇನ್ನೊಬ್ಬರನ್ನು ಹೊಣೆ ಮಾಡುವುದಿಲ್ಲ. ಇದು ನಮ್ಮ ಮನೆಗಳಲ್ಲಿ, ನಮ್ಮ ವ್ಯವಹಾರಗಳಲ್ಲಿ ಸಭೆಗಳಲ್ಲಿ ಇರುವ ಸಂಬಂಧಗಳನ್ನು ಸ್ವಸ್ತವಾಗಿರಿಸಿ ಅವುಗಳನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತದೆ.
ನೀವು ಅಪೋಸ್ತಲ ಕೃತ್ಯ16 :16-34 ರವರೆಗೆ ಓದಿ ನೋಡುವುದಾದರೆ ಅಲ್ಲಿ ಪೌಲ ಮತ್ತು ಸೀಲರು ಬಂದಿಖಾನೆಯಲ್ಲಿ ಬಂಧಿಸಲ್ಪಟ್ಟಿದ್ದರು. ಅವರಿಗೆ ಗಾಯಗಳಾಗಿ ರಕ್ತ ಸೋರುತಿತ್ತು. ಅವರ ಕೈಕಾಲುಗಳನ್ನು ಸರಪಳಿಗಳಿಂದ ಬಿಗಿದಿದ್ದರು.ಇದಕ್ಕಿಂತ ಕೆಟ್ಟ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ ಆದರೆ ಅವರು ತಮ್ಮ ಈ ಪರಿಸ್ಥಿತಿಗೆ ಗುಣಗುಟ್ಟದೆ ದೂರು ಹೇಳದೆ ದೇವರನ್ನು ಸ್ತುತಿ ಪದಗಳಿಂದ ಸ್ತುತಿಸಲು ಆರಂಭಿಸಿದರು
ಅವರ ಈ ನಡುವಳಿಕೆಯೇ ಅವರ ಪರವಾಗಿ ಅಲ್ಲಿ ದೇವರ ಅದ್ಭುತವಾದ ಬಲವು ಬಿಡುಗಡೆಯಾಗುವಂತೆ ಮಾಡಿತು
ಆಗ "ಅಕಸ್ಮಾತ್ತಾಗಿ ಮಹಾಭೂಕಂಪವುಂಟಾಯಿತು; ಸೆರೆಮನೆಯ ಅಸ್ತಿವಾರಗಳು ಕದಲಿದವು. ಅದೇ ಕ್ಷಣದಲ್ಲಿ ಕದಗಳೆಲ್ಲಾ ತೆರೆದವು, ಎಲ್ಲರ ಬೇಡಿಗಳು ಕಳಚಿಬಿದ್ದವು. "(ಅಪೊಸ್ತಲರ ಕೃತ್ಯಗಳು 16:26)
ಈಗ ನೀವು ನಿಮಗಿರುವ ರೋಗಗಳಿಗಾಗಿ, ಬಡತನಕ್ಕಾಗಿ, ಸಮಸ್ಯೆಗಳಿಗಾಗಿ ದೇವರಿಗೆ ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸುವ ಅಗತ್ಯವಿಲ್ಲ. ಆದರೆ ಇವೆಲ್ಲದರ ಮಧ್ಯದೊಳಗೆ ಆತನನ್ನು ಆತನೇನಾಗಿದ್ದಾನೋ ಅದಕ್ಕಾಗಿ ನಿರಂತರವಾಗಿ ಸ್ತೋತ್ರ ಸಲ್ಲಿಸುವ ಆಯ್ಕೆ ನಿಮ್ಮದಾಗಿರಲಿ.
"ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು."(ಫಿಲಿಪ್ಪಿಯವರಿಗೆ 4:7)
ಅರಿಕೆಗಳು
"ನನ್ನ ರಕ್ಷಕನೂ ಒಡೆಯನೂ ಆದ ಕ್ರಿಸ್ತ ಯೇಸುವಿನ ಮೂಲಕವಾಗಿಯೇ ದೇವರಿಗೆ ಸ್ತೋತ್ರಯಜ್ಞವನ್ನು ಎಡೆಬಿಡದೆ ಸಮರ್ಪಿಸುವೆನು. ಆತನೇ ಕರ್ತನೆಂದು ಬಾಯಿಂದ ಪ್ರತಿಜ್ಞೆಮಾಡಿ ಯಜ್ಞವನ್ನು ಪ್ರತಿದಿನವೂ ಸಮರ್ಪಿಸುವೆನು ."(ಇಬ್ರಿಯರಿಗೆ 13:15)
Join our WhatsApp Channel
Most Read
● ಕೆಲವು ನಾಯಕರು ಪಾಪದಲ್ಲಿ ಬಿದ್ದು ಹೋದದರಿಂದ ನಾವು ಸಹ ನಂಬಿಕೆಯನ್ನು ತ್ಯಜಿಸಬೇಕೆ?● ನೆಪ ಹೇಳುವ ಕಲೆ
● ಭಕ್ತಿವೃದ್ಧಿಮಾಡುವ ಅಭ್ಯಾಸಗಳು.
● ವಾಕ್ಯದಿಂದ ಬೆಳಕು ಬರುತ್ತದೆ
● ದೇವರಿಂದ ಒದಗಿದ ಕನಸು
● ಯೇಸುವನ್ನು ನೋಡುವ ಬಯಕೆ
● ಮೊಗ್ಗು ಬಿಟ್ಟಂತಹ ಕೋಲು
ಅನಿಸಿಕೆಗಳು