ಕ್ರಿಸ್ತನನ್ನೇ ಕರ್ತನೆಂದು ನಾವು ಹೃದಯದಿಂದ ನಂಬುವುದರ ಮೂಲಕ ಹಾಗೂ ಬಾಯಿಂದ ಅರಿಕೆ ಮಾಡುವ ಮೂಲಕ ನಾವು ದೇವರ ಮಕ್ಕಳಾಗುತ್ತೇವೆ ಎಂಬುದಾಗಿ ನಾವು ಅರಿತುಕೊಳ್ಳುವಂತೆ ಸತ್ಯವೇದವು ಹೇಳುತ್ತದೆ. (1ಯೋಹಾನ 5:1).
ಇದರಿಂದಲೇ ನಮ್ಮೊಳಗೆ ದೇವರ ಗುಣ ಸ್ವಭಾವವನ್ನು ನಾವು ಈಗಾಗಲೇ ಹೊಂದಿದ್ದೇವೆ ಮತ್ತು ನಾವು ದೇವರಿಂದ ಹುಟ್ಟಿದ ಕಾರಣ ನಾವು ದೇವರ- ರೀತಿಯ ಪ್ರೀತಿ ಸ್ವಭಾವವನ್ನು ಹೊಂದಿದ್ದೇವೆ. ಆದ್ದರಿಂದಲೇ ಹೇಗೆ ನಾಯಿ ಬೊಗಳುವಂಥದ್ದು ಎಷ್ಟು ಸಹಜವೋ ಹಾಗೆಯೇ ದೇವರ ಮಗುವು ಪ್ರೀತಿಸುವಂಥದ್ದು ಅಷ್ಟೇ ಸಹಜ. ಈಗ ಮುಖ್ಯ ವಿಷಯ ನಿಮಗೆ ಅರ್ಥವಾಯಿತು ಎನಿಸುತ್ತದೆ!
"ಈ ನಿರೀಕ್ಷೆಯು ನಮ್ಮ ಆಶೆಯನ್ನು ಭಂಗಪಡಿಸುವದಿಲ್ಲ; ನಮಗೆ ಕೊಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿರಸವು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿದದೆಯಲ್ಲಾ."(ರೋಮಾಪುರದವರಿಗೆ 5:5). ಇದು ಲೋಕದ ರೀತಿಯ ಪ್ರೀತಿ ಅಲ್ಲ.. ಇದು ದೈವೀಕ ಪ್ರೀತಿಯಾಗಿದೆ. ಸತ್ಯವೇದವು ಸ್ಪಷ್ಟವಾಗಿ 2ತಿಮೋತಿ 1:7ರಲ್ಲಿ ಹೇಳುವುದೇನೆಂದರೆ ಪ್ರೀತಿಯ ಆತ್ಮದ ಮೂಲಕ ಈ ರೀತಿಯ ಪ್ರೀತಿಯನ್ನು ಅನುಗ್ರಹಿಸುತ್ತದೆ ಎಂದು.
ಆದ್ದರಿಂದ ನಾವು ಕೇವಲ ಮನುಷ್ಯ ಜೀವಿಗಳಲ್ಲ, ನಾವು ಪ್ರೀತಿ ಜೀವಿಗಳಾಗಿದ್ದೇವೆ. ಪ್ರೀತಿ ನಮ್ಮ ಸ್ವಭಾವ. ಇದು ನಮ್ಮಲ್ಲಿ ಪೂರ್ವ ನಿಯೋಜಿತ ಪರಿವಿಡಿಯಾಗಿದೆ. ಆದ್ದರಿಂದಲೇ ನಮ್ಮೊಳಗೆ ದೇವರ ಗುಣ ಸ್ವಭಾವವು ಈಗಾಗಲೇ ಇರುವ ಕಾರಣ ನಾವು ಇತರರಿಗೆ ಪ್ರೀತಿಯನ್ನು ತೋರಿಸಲು ಸಾಧ್ಯವಾಗುತ್ತದೆ. ಹೌದು, ಜೀವಿತದಲ್ಲಿ ಕೆಲವರನ್ನು ಪ್ರೀತಿಸುವುದು ಅಷ್ಟು ಸುಲಭವಾದ ಮಾತಲ್ಲ. ನಮ್ಮನ್ನು ಅಷ್ಟರ ಮಟ್ಟಿಗೆ ಅದು ನಮ್ಮ ಹೃದಯದೊಳಗೆ ಆಳವಾದ ಗಾಯಗಳಾಗಿ ಉಳಿದ ಬಿಟ್ಟಿರುತ್ತದೆ. ಆದಾಗಿಯೂ, ಇದೆಲ್ಲದರ ಮಧ್ಯದಲ್ಲೂ, ಏನೇ ಆದರೂ, ಅವರನ್ನು ಪ್ರೀತಿಸಲು ದೇವರು ನಮಗೆ ಸಹಾಯ ಮಾಡುತ್ತಾನೆ. ಅದಕ್ಕಾಗಿ ಆತನು ಆತನ ಸ್ವಭಾವವನ್ನು ನಮಗೆ ಅನುಗ್ರಹಿಸಿ ನಮ್ಮ ಕೈಯಲ್ಲಿ ಸಾಧ್ಯವಿಲ್ಲದಂತಹ ಪ್ರೀತಿಯನ್ನು ನಾವು ತೋರಿಸುವಂತೆ ನಮ್ಮನ್ನು ಸಶಕ್ತರನ್ನಾಗಿ ಮಾಡುತ್ತಾನೆ.
ನೋಡಿರಿ, ಒಂದು ನಾಯಿ ಮರಿಯು ತನ್ನ ತಾಯಿ ನಾಯಿಯಂತೆ ಬೊಗಳುವ ಸಾಮರ್ಥ್ಯವನ್ನು ಹೊಂದಿದ್ದರೂ ಅದು ಹುಟ್ಟಿದ ತಕ್ಷಣವೇ ಹಾಗೆ ಬೊಗಳುವುದನ್ನು ಅದರಿಂದ ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಆದಾಗಿಯೂ ಆ ನಾಯಿ ಮರಿಯು ಬೆಳೆದು ಬಂದಾಗ ಆ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಇದೇ ರೀತಿಯಲ್ಲಿ ನಾವೂ ಸಹ ದೇವರು ಕೊಟ್ಟ ಪ್ರೀತಿಸುವ ಸಾಮರ್ಥ್ಯವನ್ನು ಪ್ರದರ್ಶಿಸುವವರಾಗುತ್ತೇವೆ. ನಾವು ಹೆಚ್ಚು ಹೆಚ್ಚು ಪ್ರಭುದ್ಧರಾದಂತೆ ದೇವರೊಂದಿಗೆ ಹೆಚ್ಚಾದ ಅನ್ಯೋನ್ಯತೆಯಲ್ಲಿ ನಡೆಯುವಾಗ ಅದು ಇನ್ನೂ ಹೆಚ್ಚಾಗಿ ಉತ್ತಮಗೊಳ್ಳುತ್ತಾ ಹೋಗುತ್ತದೆ.
ನಾವು ದೇವರ ಪ್ರೀತಿಯನ್ನು ಹೊಂದಿದ್ದರಷ್ಟೇ ಸಾಲದು. ಆ ಭಾರವನ್ನು ಪ್ರದರ್ಶಿಸುವ ಮೂಲಕ ಆ ಪ್ರೀತಿಯನ್ನು ಹೊರಪಡಿಸಬೇಕು. ನಿಮ್ಮೊಳಗಿರುವ ದೇವರ ರೀತಿಯ ಪ್ರೀತಿಯನ್ನು ಕಾರ್ಯ ರೂಪದಲ್ಲಿ ಹೊರಪಡಿಸಬೇಕೆಂಬುದನ್ನು ನೀವು ಎಂದಿಗೂ ಮರೆಯಬೇಡಿರಿ ಎಂದು ನಾನು ನಿಮ್ಮನ್ನು ಉತ್ತೇಜಿಸುತ್ತೇನೆ. ನೀವು ದೇವರ -ರೀತಿಯ ಪ್ರೀತಿಯನ್ನು ಪ್ರಕಟಿಸುವುದರಿಂದ ಇತರರು ಆಶೀರ್ವದಿಸಲ್ಪಡಲೀ. ನೀವು ತಕ್ಷಣವೇ ಈ ಪ್ರೀತಿಯಲ್ಲಿ ಪರಿಪೂರ್ಣತೆ ಸಾಧಿಸಲಾಗದು ಎಂಬುದು ನಿಜವೇ. ಆದರೆ, " ಸಾವಿರ ಮೈಲಿಯ ಪ್ರಯಾಣವು ಒಂದು ಹೆಜ್ಜೆಯಿಂದ ಆರಂಭವಾಗುತ್ತದೆ" ಎಂಬುದನ್ನು ನೆನಪಿನಲ್ಲಿಡಿರಿ. ನೀವು ಇಂದು ಎಲ್ಲಿದ್ದರೂ ಪರವಾಗಿಲ್ಲ, ಅಲ್ಲಿಂದಲೇ ಆರಂಭಿಸಿ. ದೇವರು ನಿಮಗೆ ಸಹಾಯ ಮಾಡುವನು.
"ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು ಅಂದನು."(ಯೋಹಾನ 13:35). ನೀವು ಎಲ್ಲೇ ಹೋದರೂ ನಿಮ್ಮ ಜೀವಿತವು ಅಲ್ಲಿ ಪರಿಣಾಮ ಬೀರುವುದರ ಕುರಿತು ಸ್ವಲ್ಪ ಯೋಚಿಸಿರಿ.
ಪ್ರಾರ್ಥನೆಗಳು
ತಂದೆಯೇ, ನಾನು ನಿನ್ನಿಂದ ಹುಟ್ಟಿದ್ದಕ್ಕಾಗಿ ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ನೀನು ನಿನ್ನ ಪ್ರೀತಿಯ ಸ್ವಭಾವವನ್ನು ನನಗೆ ಕೊಟ್ಟದ್ದಕ್ಕಾಗಿ ನಿನ್ನನ್ನು ಸ್ತುತಿಸುವೆನು. ನಾನು ಗರಿಷ್ಠ ಮಟ್ಟದಲ್ಲಿ ದೇವರ -ರೀತಿಯ ಪ್ರೀತಿಯನ್ನು ಕಾರ್ಯದಲ್ಲಿ ಹೊರಪಡಿಸುವಂತೆ ಸಹಾಯ ಮಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ನಿನ್ನ ನಾಮವು ನನ್ನ ಮೂಲಕ ಮಹತ್ತರವಾಗಿ ಮಹಿಮೆ ಹೊಂದುವ ಹಾಗೆ ನಾನು ಇತರರನ್ನು ಪ್ರೀತಿಸಲು ನನಗೆ ಸಹಾಯ ಮಾಡು ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ. ಆಮೆನ್.
Join our WhatsApp Channel
Most Read
● ದುರಾತ್ಮಗಳ ಪ್ರವೇಶವನ್ನು ಮುಚ್ಚುವ ಅಂಶಗಳು- I● ಉತ್ತಮವು ಅತ್ಯುತ್ತಮವಾದದಕ್ಕೆ ಶತೃ
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 08:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಹಣವು ಚಾರಿತ್ರ್ಯವನ್ನು ವಿವರಿಸುತ್ತದೆ
● ದ್ವಾರ ಪಾಲಕರು / ಕೋವರ ಕಾಯುವವರು
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು