english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಕರ್ತನನ್ನು ಮೆಚ್ಚಿಸಲಿರುವ ಖಚಿತವಾದ ಮಾರ್ಗ.
ಅನುದಿನದ ಮನ್ನಾ

ಕರ್ತನನ್ನು ಮೆಚ್ಚಿಸಲಿರುವ ಖಚಿತವಾದ ಮಾರ್ಗ.

Monday, 8th of July 2024
2 1 552
Categories : ನಂಬಿಕೆ (Faith)
"ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ."(ಇಬ್ರಿಯರಿಗೆ‬ ‭11:6‬)

ನಂಬಿಕೆಯು ಪತನದ ನಂತರ ಮನುಷ್ಯನ ಮುರಿದು ಹೋದ ಆತ್ಮದ ತುಣುಕುಗಳನ್ನು ಒಟ್ಟುಗೂಡಿಸುವಂತಹ ಒಂದು ಅಂಟಾಗಿದೆ. ಇದು ದೇವರಿಗೆ ಸಂಬಂಧಿಸಿದ ಎಲ್ಲದಕ್ಕೂ ಸಂಬಂಧ ಕಲ್ಪಿಸುವ ಮಾರ್ಗವಾಗಿದೆ! ನಂಬಿಕೆಯ ಅಡಿಪಾಯವನ್ನು ಎಚ್ಚರಿಕೆಯಿಂದ ಹಾಕದೇ ಯಾವುದೇ ಕ್ರಿಸ್ತೀಯ ಜೀವನ ಸಾಗಲು ಸಾಧ್ಯವಿಲ್ಲ (ಎಫಸ್ಸೆ 2:8)

ಹೇಗೆ ಮನುಷ್ಯನು ತನ್ನ ಸಾಂಗತ್ಯದಲ್ಲಿ ಸಂತೋಷಪಡುವ ಭರವಸೆ ಇಡುವ ವ್ಯಕ್ತಿಗಳೊಂದಿಗೆ ಪ್ರಯಾಣ ಮಾಡಲು ಯೋಚಿಸುತ್ತಾನೆಯೋ ಹಾಗೆಯೇ ದೇವರು ಸಹ ಆತನ ಮೇಲೆ ಭರವಸೆ ಇಡುವವರಿಗೆ ಮಾತ್ರ ಲಭ್ಯವಾಗುತ್ತಾನೆ. ನಂಬಿಕೆ ಇಲ್ಲದೆ ನಾವು ಏನೇ ಮಾಡಿದರೂ ಅದು ಹೃದಯದಿಂದ ಬಂದದ್ದಲ್ಲ! ಅದು ನೋಡುವುದಕ್ಕೆ ಮಾತ್ರ ವಿಶ್ವಾಸಿಸುವಂತೆ ಕಾಣುತ್ತದೆ ಅಥವಾ ಅದು ಕೇವಲ ನೋಟಕ್ಕೆ ಸೀಮಿತವಾದದಷ್ಟೇ. ಹೃದಯದಿಂದ ಬರುವ ನಂಬಿಕೆಯು ಬಹು ಬಲವುಳ್ಳದ್ದು. 

ನಾನು ಭಾರತ ದೇಶದ ಒಂದು ನಿರ್ದಿಷ್ಟ ರಾಜ್ಯದಲ್ಲಿ ಸುವಾರ್ತೆ ಪ್ರಚಾರ ಸೇವೆಗಾಗಿ ಹೋಗಿದ್ದೆ. ನಾನು ಅಲ್ಲಿದ್ದ ನೂರಾರು ಜನರಿಗಾಗಿ ವೈಯಕ್ತಿಕವಾಗಿ ಪ್ರಾರ್ಥಿಸುವಷ್ಟರಲ್ಲಿ ನಾನು ಶಾರೀರಿಕವಾಗಿ ಬಹಳ ಬಳಲಿ ಹೋಗಿದ್ದೆನು. ಪ್ರಾರ್ಥನೆ ಮುಗಿದ ಮೇಲೆ ನಾನು ಹೊರಟು ಇನ್ನೇನು ನನ್ನ ಕಾರನ್ನು ಹತ್ತಿ ಕೂರಬೇಕು ಅಷ್ಟರಲ್ಲಿ ಒಬ್ಬ ಸ್ತ್ರೀಯು ತನ್ನ  ಮಗಳನ್ನು ಪ್ರಾರ್ಥನೆಗಾಗಿ ಕರೆತಂದಳು. ತನ್ನ ಮನೆಯಲ್ಲಿನ ಕೆಲ ಸಮಸ್ಯೆಗಳ ಕಾರಣದಿಂದಾಗಿ ಸೇವಾ ಸಮಯದಲ್ಲಿ ಆಕೆ ಪ್ರಾರ್ಥನೆಯಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಆಕೆಯೂ ತನ್ನ ಮಗಳ ಎಲ್ಲಾ ವೈದ್ಯಕೀಯ ವರದಿಗಳನ್ನು ನನ್ನ ಗುಂಪಿನ ಸದಸ್ಯರಿಗೆ ತೋರಿಸುತ್ತಿದ್ದಳು. ನೋಡಲು ಆ ವರದಿಯಲ್ಲಿ ಯಾವುದೇ ಸಮಸ್ಯೆ ಕಾಣುತ್ತಿರಲಿಲ್ಲ. ಆದರೆ ಆಕೆಯ ಮಗಳ ಹೊಟ್ಟೆಯಲ್ಲಿ ಸಹಿಸಲಾರದಂತ ನೋವಿನ ಶೂಲವು ಅನೇಕ ತಿಂಗಳುಗಳಿಂದ ಆ ಹುಡುಗಿಯನ್ನು  ಬಾದಿಸುತಿತ್ತು.

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನ್ನ ಶಾರೀರಿಕ ಬಳಲಿಕೆ  ಕಾರಣದಿಂದಾಗಿ ಆಕೆಯ ಚಿಕ್ಕಮಗಳಿಗಾಗಿ ನಾನು ಅಷ್ಟೇನೂ ನಂಬಿಕೆಯಿಂದ ಪ್ರಾರ್ಥಿಸಲಾಗದಿದ್ದರೂ ಆತ್ಮನು ನನ್ನ ಕಿವಿಗಳಲ್ಲಿ "ಮಗನೇ, ನಿನಗೆ ಏನನಿಸುತ್ತಿದೆಯೋ ಅದರ ಮೇಲೆ ಆಧಾರಗೊಳ್ಳದೆ ನನ್ನೊಂದಿಗೆ ನಿನಗೆ ಇರುವ ಬಾಂಧವ್ಯದ ಮೇಲೆ ಭರವಸೆ ಇಟ್ಟು ದೇವರ ಬಲವನ್ನು ಸೆಳೆ" ಎಂದನು.

ಹಾಗಾಗಿ, ನಾನು ನನ್ನ ಕಣ್ಣುಗಳನ್ನು ಮುಚ್ಚಿ ಸರಳವಾಗಿ "ತಂದೆಯೇ, ಈ ಚಿಕ್ಕ ಮಗಳಿಗೆ ಸಹಾಯ ಮಾಡು. ಆಕೆಗೆ ನಿನ್ನ ಸ್ಪರ್ಶದ ಅಗತ್ಯವಿದೆ ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ" ಎಂದಷ್ಟೇ ಪ್ರಾರ್ಥಿಸಿದೆ.  ಆ ಚಿಕ್ಕ ಹುಡುಗಿಯು ಆ ಅಭಿಷೇಕದ ಭಾರದಿಂದಾಗಿ ಕೆಳಗೆ ಬಿದ್ದಳು. ಅಷ್ಟೇ. ನಿಜ ಹೇಳಬೇಕೆಂದರೆ ನಾನು ಅದನ್ನು ನಿರೀಕ್ಷಿಸಿಯೇ  ಇರಲಿಲ್ಲ. ಆ ಹುಡುಗಿಯು ತನ್ನ ತಾಯಿಗೆ ತನ್ನ ದೇಹದಲ್ಲೆಲ್ಲಾ ವಿದ್ಯುತ್ ಸಂಚಾರವಾದಂತ ಅನುಭವವನ್ನು ನಾನು ಅನುಭವಿಸಿದೆ ಎಂದು ಹೇಳುತ್ತಿದ್ದಳು.

ಆ ತಿಂಗಳು ಕಳೆದ ಮೇಲೆ ನಾನು ಆ ಪ್ರದೇಶಕ್ಕೆ ಮತ್ತೆ ಹೋದಾಗ ತಾಯಿ ಮತ್ತು ಮಗಳಿಬ್ಬರು ವೇದಿಕೆ ಮೇಲೆ ಬಂದು ಕರ್ತನು ಹೇಗೆ ದಯಾಪೂರ್ವಕವಾಗಿ ಅವರನ್ನು ಸಂಧಿಸಿದನೆಂದು ಸಾಕ್ಷಿ ಹೇಳಿದರು. ಆ ಚಿಕ್ಕ ಹುಡುಗಿಗೆ  ಸಂಪೂರ್ಣವಾದ ಸ್ವಸ್ತತೆ ಸಿಕ್ಕಿತ್ತು. ಅನೇಕ ತಿಂಗಳಿಗಳಿಂದ ಆ ಮಗಳನ್ನು ಬಾಧಿಸುತ್ತಿದ್ದ ಉದರ ಶೂಲವು ಅವಳನ್ನು  ಬಿಟ್ಟು ಹೋಗಿ, ತಿರುಗಿ ಎಂದಿಗೂ ಬಂದಿರಲಿಲ್ಲ.

ಹಾಗಾಗಿ ನೀವು ಕರ್ತನೊಂದಿಗೆ ನಿಮ್ಮ ವೈಯಕ್ತಿಕ ಬಾಂದವ್ಯವನ್ನು ಬೆಳೆಸಿಕೊಳ್ಳಬೇಕೆಂದು ನಿಮ್ಮನ್ನು ನಾನು ಉತ್ತೇಜಿಸುತ್ತೇನೆ. ನೀವು ಹೀಗೆ ಮಾಡುವಾಗ ನೀವು ಈ ಮೊದಲಿದ್ದ ನಂಬಿಕೆಗಿಂತಲೂ ಇನ್ನು ಹೆಚ್ಚಿನ ನಂಬಿಕೆಗೆ ನೀವು ಹೆಜ್ಜೆ ಇಡುವಿರಿ. ಏಕೆ? ಏಕೆಂದರೆ ನೀವೀಗ ನೀವು ನಂಬಿದಾತನನ್ನು ತಿಳಿದುಕೊಂಡಿದ್ದೀರಿ. (2ತಿಮೋತಿ 1:12 ಓದಿರಿ) ನೀವೀಗ ಆತನೊಂದಿಗೆ ವೈಯಕ್ತಿಕವಾದ ಬಾಂಧವ್ಯ ಹೊಂದಿದ್ದೀರಿ. ಹಾಗಾಗಿ ಇನ್ನು ನಿಮಗೆ ಸಮಸ್ಯೆ ಇಲ್ಲ.
ಪ್ರಾರ್ಥನೆಗಳು
ತಂದೆಯೇ, ನೀನು ನಿಜವಾಗಿ ಏನಾಗಿದೆಯೋ ಆ ಒಂದು ಪ್ರಕಟಣೆಯು ನನ್ನಲ್ಲಿ ಇರುವಂತಹ ಎಲ್ಲಾ ಅಪನಂಬಿಕೆಗಳನ್ನು ಯೇಸು ನಾಮದಲ್ಲಿ ನುಂಗಿಬಿಡಲಿ. ಆಮೆನ್.

Join our WhatsApp Channel


Most Read
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಬೆಟ್ಟಗಳ ಮತ್ತು ತಗ್ಗಿನ ದೇವರು.
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವರು ನಿಮ್ಮನ್ನು ಉಪಯೋಗಿಸಲು ಬಯಸುತ್ತಾನೆ.
● ಭೂಮಿಗೆ ಉಪ್ಪಾಗಿದ್ದೀರಿ
● ದಿನ 39 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 04:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್