ಅನುದಿನದ ಮನ್ನಾ
ನಿಮ್ಮ ಗತಿಯನ್ನು ಬದಲಾಯಿಸಿ
Saturday, 7th of September 2024
2
1
112
Categories :
ಕ್ರಿಸ್ತನಲ್ಲಿ ನಮ್ಮ ಗುರುತು (our identity in Christ)
"ನಾವು ಆತನ ನಿರ್ಮಾಣ; ಸತ್ಕಾರ್ಯಗಳನ್ನು ಮಾಡುವದಕ್ಕಾಗಿಯೇ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟೆವು. ನಾವು ಸತ್ಕಾರ್ಯಗಳನ್ನು ನಡಿಸುವವರಾಗಿ ಬದುಕಬೇಕೆಂದು ದೇವರು ನಮ್ಮನ್ನು ಮೊದಲೇ ನೇವಿುಸಿದನು."(ಎಫೆಸದವರಿಗೆ 2:10)
ಇಲ್ಲಿ ಮಾಡುವುದಕ್ಕಾಗಿಯೇ, ನಿಯೋಜಿಸಿದಂತೆ, ಮುಂಚಿತವಾಗಿ ನೇಮಿಸಿದ್ದಾನೆ.ಎಂಬ ಪದಗಳನ್ನು ಎಚ್ಚರಿಕೆಯಿಂದ ಗಮನಿಸಿ.
ಜಕ್ಕಾಯನು ಕರ್ತನಾದ ಯೇಸು ಕ್ರಿಸ್ತನನ್ನು ಮುಖಾಮುಖಿಯಾಗಿ ನೋಡಬೇಕೆಂದು ಬಯಸಿದನು. ಆದ್ದರಿಂದಲೇ ಅವನು ಮುಂದಾಗಿ ಓಡಿ ಹೋಗಿ ಒಂದು ಮರವನ್ನು ಹತ್ತಿದನು. ಏಕೆಂದರೆ ಯೇಸು ಆ ಸ್ಥಳದಿಂದಲೇ ಮುಂದೆ ಹೋಗಬೇಕಿತ್ತು. ಆ ಸ್ಥಳಕ್ಕೆ ಬಂದಾಗ ಯೇಸು ತಲೆಯೆತ್ತಿ ನೋಡಿ ಅವನಿಗೆ "ಜಕ್ಕಾಯನೇ ಬೇಗ ಇಳಿದು ಬಾ ನಾನು ಈ ಹೊತ್ತು ನಿನ್ನ ಮನೆಯಲ್ಲಿಯೇ ಇಳಿದುಕೊಳ್ಳಬೇಕು" ಎಂದನು. (ಲೂಕ 19:45)
ಗಮನಿಸಿ, ಒಂದು ದಿನ ಜಕ್ಕಯನು ಕರ್ತನನ್ನು ನೋಡಲು ಬಯಸುತ್ತಾನೆ ಎಂದು ಕರ್ತನಿಗೆ ಮೊದಲೇ ತಿಳಿದಿತ್ತು. ಪ್ರಾಯಶಃ ಆದ್ದರಿಂದಲೇ ಜಕ್ಕಾಯನು ಏರಬೇಕಿದ್ದ ಮರವನ್ನು ಆಗಲೇ ಕರ್ತನು ಬೆಳೆಸಿಟ್ಟಿದ್ದನು.
ಇಲ್ಲಿ ಭವಿಷ್ಯತ್ವದ ಕುರಿತು ವಿವರಿಸಲು ಎರಡು ಪದಗಳನ್ನು ಬಳಸಲಾಗುತ್ತದೆ.
ವಿಧಿ: ನಿಮಗಿಷ್ಟ ಇದ್ದರೂ ಇಲ್ಲದಿದ್ದರೂ ಸಂಭವಿಸುವ ಮುಂಬರುವ ಘಟನೆಗಳು. ಇದು ನಿಮ್ಮ ಜೀವಿತದ ಬಹಳಷ್ಟು ಸಂಗತಿಗಳನ್ನು ಸೂಚಿಸಿದರೂ ಅದನ್ನು ಬದಲಾಯಿಸಲು ನಿಮಗೆ ಯಾವುದೇ ಮಾರ್ಗ ಇರುವುದಿಲ್ಲ ಎಂದೇ ಅನೇಕ ವಿಶ್ವ ತತ್ವಶಾಸ್ತ್ರಗಳು ತಮ್ಮ ಅನುಯಾಯಿಗಳಿಗೆ ಕಲಿಸುತ್ತವೆ.
ಗತಿ: ಎಂದರೆ ನಿಮ್ಮ ಉತ್ತಮ ಜೀವಿತಕ್ಕಾಗಿರುವ ದೇವರ ಯೋಜನೆಯಾಗಿದೆ.
ಇದು ಪೂರ್ವ ನಿಯೋಜಿತವಾಗಿದ್ದರೂ ನಿಮ್ಮ ಗತಿಯನ್ನು ನೀವು ಅನುಸರಿಸಬಹುದು ಇಲ್ಲವೇ ಅದರಿಂದ ವಿಮುಖರಾಗಿ ನಿಮ್ಮ ದಾರಿಯನ್ನು ಬದಲಿಸಬಹುದು. ಆಯ್ಕೆ ನಿಮ್ಮದು.!
ಸತ್ಯವೇದವು ಎಂದಿಗೂ ಅದೃಷ್ಟದ ಕುರಿತು ಎಂದಿಗೂ ಬೋಧಿಸುವುದಿಲ್ಲ.ನಮ್ಮ ಜೀವಿತದಲ್ಲಿ ನಡೆಯುವ ಯಾವುದೇ ಘಟನೆಗಳ ಮೇಲೆ ನಾವು ಪ್ರಭಾವ ಬೀರಲು ಸಾಧ್ಯವಿಲ್ಲದಿದ್ದರೆ ಜೀವನದ ಏಳಿಗೆಗಾಗಿ ಅಥವಾ ಉತ್ತಮತ್ವಕ್ಕಾಗಿ ಹೇಗೆ ನಡೆಯಬೇಕೆಂದು ದೇವರ ಬಳಿ ಸೂಚನೆಗಳನ್ನು ಏಕೆ ಕೇಳಬೇಕು? ನಮ್ಮ ಜೀವಿತವು ಪೂರ್ವ ನಿರ್ಧರಿತವಾಗಿದ್ದರೆ ಸೂಚನೆಗಳ ಅಗತ್ಯ ನಮಗಿಲ್ಲ. ಸತ್ಯವೇದ ವಿಧಿಯನ್ನು ಬೋಧಿಸುವುದಾದರೆ ಪ್ರಾರ್ಥನೆಯು ಒಂದು ವ್ಯರ್ಥ ಅಭ್ಯಾಸವಷ್ಟೇ.
ಆದ್ದರಿಂದ ನಂಬಿಕೆಯಿಂದ ಮಾಡಿದ ಪ್ರಾರ್ಥನೆಗಳು ನಮ್ಮ ಜೀವಿತದಲ್ಲಿರುವ ಪರ್ವತಗಳನ್ನು ಕದಲಿಸಬಲ್ಲವು ಎಂದು ಕರ್ತನಾದ ಯೇಸು ಸ್ವಾಮಿಯು ನಮಗೆ ಕಲಿಸಿಕೊಟ್ಟಿದ್ದಾನೆ. ಪ್ರಾಯಶಃ ನಾವು ಬದಲಿಸಬೇಕೆಂದು ಕೊಂಡ ರೀತಿ ಅಥವಾ ಬದಲಿಸಬೇಕಾದ ಸ್ಥಳಕ್ಕೆ ಅದು ಕದಲದೆ ಹೋದರೂ. ಅದು ಕದಲುತ್ತದೆ! ದೇವರು ಆ ಪರ್ವತದ ಮೇಲೆಯೂ ಅಥವಾ ಅದರ ಸುತ್ತಲೂ ನಾವು ಹೋಗುವಂತೆ ಅನುವು ಮಾಡಿಕೊಡಬಲ್ಲನು.
"ಅಹರ್ಹೇಲನು ಹಾರುಮನ ಮಗನು; ಯಾಬೇಚನು ತನ್ನ ಅಣ್ಣತಮ್ಮಂದಿರಲ್ಲಿ ಘನವಂತನಾಗಿದ್ದನು; ಇವನನ್ನು ಬಹುವೇದನೆಯಿಂದ ಹೆತ್ತೆನೆಂದು ಹೇಳಿ ಇವನ ತಾಯಿ ಇವನಿಗೆ ಯಾಬೇಚೆಂದು ಹೆಸರಿಟ್ಟಳು. ಯಾಬೇಚನು ಇಸ್ರಾಯೇಲ್ ದೇವರಿಗೆ - ನೀನು ನನ್ನನ್ನು ವಿಶೇಷವಾಗಿ ಆಶೀರ್ವದಿಸಿ ನನ್ನ ಪ್ರಾಂತವನ್ನು ವಿಸ್ತರಿಸಿ ನಿನ್ನ ಹಸ್ತದಿಂದ ನನ್ನನ್ನು ಹಿಡಿದು ಯಾವ ವೇದನೆಯೂ ಉಂಟಾಗದಂತೆ ನನ್ನನ್ನು ರಕ್ಷಿಸಬಾರದೇ ಎಂದು ಮೊರೆಯಿಡಲು ದೇವರು ಅವನ ಮೊರೆಯನ್ನು ಲಾಲಿಸಿದನು."(1 ಪೂರ್ವಕಾಲವೃತ್ತಾಂತ 4:9-10)
ಯಾಬೆಚನು ತನ್ನ ಜೀವಿತವನ್ನು ಶೋಚನೀಯ ಸ್ಥಿತಿಯಲ್ಲಿ ಆರಂಭಿಸಿದನು. ಅವನು ತನ್ನ ತಾಯಿಗೆ ದುಃಖದ ಮಗುವಾಗಿದ್ದನು. ತನ್ನ ಜೀವಿತವನ್ನು ಒಂದು ಕಳಂಕದಿಂದ ಪ್ರಾರಂಭಿಸಿದ್ದನು. ಅವನ ಭವಿಷ್ಯ ಕರುಣಾಜನಕವಾದ ದುಃಖಮಯವಾದಂತಹ ರೀತಿಯ ಜೀವನ ನಡೆಸುತ್ತಿದ್ದನು.
ಆದರೆ ತನ್ನ ಜೀವಿತ ಹೀಗೆಯೇ ಶೋಷಣೆಯವಾಗಿ ಮುಗಿಯಬಾರದು ಎಂದು ಅವನು ತನ್ನಲ್ಲಿ ನಿರ್ಧರಿಸಿಕೊಂಡನು. ಅದಕ್ಕಾಗಿ ತನಗೆ ಆಶೀರ್ವಾದ ಕರವಾದ ಉತ್ತಮ ಜೀವನದ ಅಗತ್ಯವಿದೆ ಎಂದೂ, ಅದಕ್ಕಾಗಿ ತನ್ನ ಗತಿಯನ್ನು ಬದಲಾಯಿಸಿಕೊಳ್ಳಲು ಬಯಸಿ ದೇವರ ಬಳಿಯಲ್ಲಿ ಅದಕ್ಕಾಗಿ ಪ್ರಾರ್ಥಿಸಿದನು. ದೇವರು ಅವನ ಪ್ರಾರ್ಥನೆಯನ್ನು ಕೇಳಿ ಅವನ ಗತಿಯನ್ನು ಬದಲಾಯಿಸಿದನು.
ದೇವರು ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಭವಿಷ್ಯವನ್ನು ಪ್ರವಾದನ ರೂಪದಲ್ಲಿ ಸಿದ್ಧಪಡಿಸಿದ್ದಾನೆ (ಎಫಸ್ಸೆ 2:10) ನಾವು ಆತನ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವುದಾದರೆ ನಾವು ನಮ್ಮ ಅತ್ಯುತ್ತಮ ಜೀವಿತವನ್ನು ನಡೆಸುವವರಾಗುತ್ತೇವೆ. ನಾವೇನಾದರೂ ಆತನ ನಿಗದಿಪಡಿಸಿದ ಮಾರ್ಗ ಬಿಟ್ಟು ದೂರ ಹೋಗುವುದಾದರೆ ನಾವೇ ಸೃಷ್ಟಿಸಿಕೊಂಡ ಅವ್ಯವಸ್ಥೆಗಳಿಂದ ನಮ್ಮನ್ನು ಹೊರತಂದು ರಕ್ಷಿಸಲು ಸಹ ಆತನು ಇನ್ನೂ ಕಾರ್ಯ ಮಾಡಬಲ್ಲನು. ಒಂದು ವಿಷಯವೆಂದರೆ ನಾವು ನಮ್ಮ ಜೀವಿತಕ್ಕಾಗಿರುವ ಆತನ ಅತ್ಯುತ್ತಮ ಯೋಜನೆಗಳನ್ನು ಹೊಂದಿಕೊಳ್ಳಲು ವಿಳಂಬ ಮಾಡಿಕೊಳ್ಳುತ್ತೇವೆ ಅಷ್ಟೇ.
ನಾವು ಆತನನ್ನು ತಿಳಿದುಕೊಳ್ಳುವುದಕ್ಕಿಂತ ಕರ್ತನು ನಮ್ಮನ್ನು ಇನ್ನು ಹೆಚ್ಚಾಗಿ ಅರಿತುಕೊಂಡಿದ್ದಾನೆ. ಹಾಗಾಗಿ ನೀವು ಏಕೆ ಆತನ ಯೋಜನೆಗಳಲ್ಲಿ ನೆಲೆಗೊಳ್ಳಬಾರದು.? ನಿಮ್ಮ ಕಿವಿಗಳನ್ನು ಆತನಿಗೆ ಸಮರ್ಪಿಸಿ. ಆಗ ಆತನು ನಿಮ್ಮನ್ನು ನಂಬಿಕೆಯಿಂದ -ನಂಬಿಕೆಗೆ ಮಹಿಮೆಯಿಂದ -ಮಹಿಮೆಗೆ ಕರೆದೊಯ್ಯುತ್ತಾನೆ.
ಪ್ರಾರ್ಥನೆಗಳು
ನನ್ನ ಪ್ರಗತಿ ಮತ್ತು ಯಶಸ್ಸು ಸಾಕ್ಷಿಗಳನ್ನು ವಿಳಂಬಗೊಳಿಸಲು ಶತ್ರುವು ಬಳಸುತ್ತಿರುವ ಎಲ್ಲ ಸಾಧನಗಳು ಯೇಸು ನಾಮದಲ್ಲಿ ಲಯ ಹೊಂದಲಿ.
ನನ್ನ ಜೀವಿತದ ಗತಿಯನ್ನು ನಿಶ್ಚಲಗೊಳಿಸಲು ಶತ್ರು ಬಳಸುತ್ತಿರುವ ಯಾವುದೇ ಸಾಧನಗಳಾಗಲಿ ಯೇಸು ನಾಮದಲ್ಲಿ ನಿರ್ಮೂಲವಾಗಿ ಹೋಗಲಿ..
ನನ್ನ ಜೀವಿತದ ಗತಿಯನ್ನು ನಿಶ್ಚಲಗೊಳಿಸಲು ಶತ್ರು ಬಳಸುತ್ತಿರುವ ಯಾವುದೇ ಸಾಧನಗಳಾಗಲಿ ಯೇಸು ನಾಮದಲ್ಲಿ ನಿರ್ಮೂಲವಾಗಿ ಹೋಗಲಿ..
Join our WhatsApp Channel
Most Read
● ಅನಂತವಾದ ಕೃಪೆ● ಕೃಪೆಯ ಉಡುಗೊರೆ
● ಕೃಪೆಯ ಮೇಲೆ ಕೃಪೆ
● ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ
● ದೇವದೂತರ ಸಹಾಯವನ್ನು ಸಕ್ರಿಯಗೊಳಿಸುವುದು ಹೇಗೆ
● ಕರ್ತನನ್ನು ಮೆಚ್ಚಿಸಲಿರುವ ಖಚಿತವಾದ ಮಾರ್ಗ.
● ದೇವರ ಕೃಪೆಯನ್ನು ಸೇದುವುದು
ಅನಿಸಿಕೆಗಳು