ಅನುದಿನದ ಮನ್ನಾ
ಕಾವಲುಗಾರನು
Sunday, 6th of October 2024
1
0
165
Categories :
ಪ್ರವಾದನ ವಾಕ್ಯ (Prophetic word)
"ನರಪುತ್ರನೇ, ನಿನ್ನ ಜನರು ಗೋಡೆಗಳ ನೆರಳಿನಲ್ಲಿಯೂ ಮನೆಯ ಬಾಗಿಲುಗಳಲ್ಲಿಯೂ ನಿನ್ನ ಪ್ರಸ್ತಾಪವನ್ನೆತ್ತಿ ಪರಸ್ಪರವಾಗಿ ಒಬ್ಬರಿಗೊಬ್ಬರು - ಯೆಹೋವನ ಬಾಯಿಂದ ಹೊರಟ ಮಾತೇನು ಕೇಳೋಣ ಬನ್ನಿರಿ ಎಂದು ಹೇಳಿಕೊಳ್ಳುತ್ತಿದ್ದಾರೆ. [ಪ್ರಶ್ನೆ ಕೇಳುವದಕ್ಕೆ] ಬರುವ ಜನರಂತೆ ಅವರು ನಿನ್ನ ಬಳಿಗೆ ಬಂದು ನನ್ನ ಭಕ್ತರಾಗಿ ನಿನ್ನ ಮುಂದೆ ಕೂತುಕೊಂಡು ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಕೈಕೊಳ್ಳುವದಿಲ್ಲ; ಬಾಯಿಂದ ಬಹುಪ್ರೀತಿಯನ್ನು ತೋರಿಸುತ್ತಾರೆ. ಅವರ ಮನಸ್ಸೇನೋ ತಾವು ದೋಚಿಕೊಂಡದರ ಮೇಲೆ ಹೋಗುತ್ತದೆ. ಇಗೋ, ನಿನ್ನ ಮಾತು ಅವರ ಎಣಿಕೆಯಲ್ಲಿ ಒಬ್ಬ ಸಂಗೀತಗಾರನು ವಾದ್ಯವನ್ನು ಜಾಣತನದಿಂದ ಬಾರಿಸಿ ಮಧುರಸ್ವರದಿಂದ ಹಾಡುವ ಪ್ರೇಮಗೀತಕ್ಕೆ ಸಮಾನವಾಗಿದೆ; ನಿನ್ನ ಮಾತುಗಳನ್ನು ಕೇಳುತ್ತಾರೆ ಆದರೆ ಕೈಕೊಳ್ಳುವದಿಲ್ಲ.ನೀನು ಮುಂತಿಳಿಸಿದ್ದು ಸಂಭವಿಸುವಾಗ [ಆಹಾ, ಸಂಭವಿಸಿತು] ತಮ್ಮ ಮಧ್ಯದಲ್ಲಿದ್ದವನು ಪ್ರವಾದಿಯೇ ಎಂದು ಅವರಿಗೆ ನಿಶ್ಚಿತವಾಗುವದು."(ಯೆಹೆಜ್ಕೇಲ 33:30-33)
ದೇವರು ಯೆಹೆಜ್ಕೇಲನನ್ನು ಇಸ್ರೇಲ್ ಜನಾಂಗಕ್ಕೆ ಕಾವಲುಗಾರನಾಗಿ ಕರೆದನು. ಅವನು ಜನರಿಗೆ ಮುಂದೆ ಬರಲಿರುವ ದೇವರ ನ್ಯಾಯ ತೀರ್ಪಿನ ಕುರಿತು ಎಚ್ಚರಿಸಿ ಅವರನ್ನು ದೇವರ ಕಡೆಗೆ ತಿರುಗಿಸಬೇಕಾದದ್ದು ಅವನ ಕರೆಯಾಗಿತ್ತು. ಅವನೇನೋ ದೇವರು ತನ್ನನ್ನು ಕರೆದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದರೂ ಇತರ ಜನರಿಗೆ ಅವನು ತಮ್ಮಂತೆ ಇರುವಂತಹ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದನು ಅಷ್ಟೇ. ಜನರು ಅವನ ಮಾತುಗಳನ್ನು ಕೇಳಿಸಿಕೊಂಡರೂ ಅದರ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ತೋರಿಸಲಿಲ್ಲ. ಅದರ ಬದಲು ಅವನ ಪ್ರವಾದನ ಸಂದೇಶವನ್ನು ಕೇವಲ ಒಂದು ಮನೋರಂಜನೆಯ ಮಾತುಗಳಾಗಿ ತೆಗೆದುಕೊಂಡರು.
ಈಗ ಪ್ರತಿ ವಾರವೂ ಸಹ ಸಭಾ ಸೇವೆಯು ಆನ್ಲೈನ್ ನಲ್ಲಿ ಜರುಗುತ್ತಲೇ ಇರುತ್ತದೆ. ಅನೇಕ ಪಾಸ್ಟರ್ ಗಳು ಸಭಾ ನಾಯಕರುಗಳು ಈ ಒಂದು ಸಭಾಸೇವೆಯಲ್ಲಿ ಪ್ರಾಮಾಣಿಕವಾಗಿಯೂ ನಿಖರವಾಗಿಯೂ ದೇವರ ವಾಕ್ಯವನ್ನು ಸಾರವಂತ ಕೆಲಸವನ್ನು ಮಾಡುತ್ತಲೇ ಇರುತ್ತಾರೆ.
ಬಹುತೇಕ ಜನರು ಅವರಿಗೆ ಬೋಧಿಸಲಾಗುವಂತಹ ದೇವರ ವಾಕ್ಯವನ್ನು ಕೇಳುತ್ತಾರೆ.ಇದೊಂದು ಮಹತ್ತರವಾದ ಪ್ರಸಂಗ ಎಂದು ಒಪ್ಪಿಕೊಳ್ಳುತ್ತಾರೆ. ಕೆಲವರು "ಆಮೆನ್" ಎಂದು ಕೂಗುತ್ತಾರೆ.ಪಾಸ್ಟರ್ಗಳನ್ನು ಉತ್ತೇಜಿಸುವಂತಹ ಕಾಮೆಂಟ್ ಗಳನ್ನು ಟೈಪ್ ಮಾಡುವ ಮೂಲಕ ಅವರ ಬೋಧನೆಗಳಿಗಾಗಿ ಅವರನ್ನು ಉರಿದುಂಬಿಸುತ್ತಾರೆ. ಅನೇಕರು ತಮ್ಮ ಸ್ನೇಹಿತರನ್ನು ಸಂಬಂಧಿಕರನ್ನು ತಮ್ಮ ಪಾಸ್ಟರ್ ಹೇಳುವ ಬೋಧನೆ ಕೇಳುವಂತೆ ಆಹ್ವಾನಿಸುತ್ತಾರೆ. ಇವೆಲ್ಲವುಗಳ ನಂತರ ಸಂದೇಶವು ಚೆನ್ನಾಗಿತ್ತು ಎನ್ನುತ್ತಾರೆ. ಆದಾಗಿಯೂ ಆ ಸಂದೇಶವನ್ನು ಕೇಳಿ ಅದರ ಕುರಿತು ಯಾವುದೇ ಹೆಜ್ಜೆಯನ್ನು ತೆಗೆದುಕೊಳ್ಳುವುದಿಲ್ಲ. ಇವೆಲ್ಲವೂ ಅವರಿಗೆ ಒಂದು ಮನೋರಂಜನ ಕಾರ್ಯಕ್ರಮವಾಗಿರುತ್ತದೆ ಅಷ್ಟೇ.
"ಇಗೋ, ನಿನ್ನ ಮಾತು ಅವರ ಎಣಿಕೆಯಲ್ಲಿ ಒಬ್ಬ ಸಂಗೀತಗಾರನು ವಾದ್ಯವನ್ನು ಜಾಣತನದಿಂದ ಬಾರಿಸಿ ಮಧುರಸ್ವರದಿಂದ ಹಾಡುವ ಪ್ರೇಮಗೀತಕ್ಕೆ ಸಮಾನವಾಗಿದೆ; ನಿನ್ನ ಮಾತುಗಳನ್ನು ಕೇಳುತ್ತಾರೆ ಆದರೆ ಕೈಕೊಳ್ಳುವದಿಲ್ಲ."(ಯೆಹೆಜ್ಕೇಲ 33:32)
ಇದು ಪ್ರತಿದಿನವೂ ದೇವರ ವಾಕ್ಯವನ್ನು ಓದುತ್ತಲೆ ಇರುವ ನಮಗೂ ಒಂದು ಪ್ರವಾದನಾ ಎಚ್ಚರಿಕೆಯಾಗಿದೆ. ನಾವು ಏನು ಮಾಡಬೇಕೆಂದು ದೇವರ ವಾಕ್ಯ ಹೇಳುತ್ತಿರುತ್ತದೆ. ಆದರೆ ನಾವು ಅದರಂತೆ ಮಾಡದೇ ನಿರಂತರವಾಗಿ ಹಾಗೆ ಉದಾಸೀನ ಮಾಡಿ ನಡೆಯುತ್ತಿದ್ದರೆ,ಅದು ಕೇವಲ ವ್ಯರ್ಥವಷ್ಟೇ.
ಕೆಲವು ದಿನಗಳ ಹಿಂದೆ ನಾನು ವೃತ್ತ ಪತ್ರಿಕೆಯನ್ನು ಓದುವಾಗ ಅದರಲ್ಲಿ ಒಬ್ಬ ಬೈಕ್ ಸವಾರನು ರಾತ್ರಿಯಲ್ಲಿ ತನ್ನ ಬೈಕನ್ನು ಓಡಿಸುತ್ತಿರುವಾಗ ಬಹಳ ಮಂಜು ಕವಿದ ವಾತಾವರಣದಿಂದಾಗಿ ರಸ್ತೆಯೇ ಕಾಣದೆ ಹೋಗಿ ರಸ್ತೆಯಲ್ಲಿ ಚೆಲ್ಲಿದ ತೈಲವನ್ನು ಸಹ ಕಾಣದೆ ಬೈಕ್ ಚಲಾಯಿಸಿದ. ಇದರಿಂದ ಅವನ ಬೈಕ್ ಬಿದ್ದು ನುಚ್ಚುನೂರಾಯಿತು. ಆದರೆ ಆಶ್ಚರ್ಯಕರವಾಗಿ ಅವನು ಯಾವುದೇ ಗಾಯಗಳಾಗದೇ ಉಳಿದುಕೊಂಡನು ಮತ್ತು ತಕ್ಷಣವೇ ಎದ್ದು ರಸ್ತೆಗೆ ಎದುರಾಗಿ ನಿಂತು ಬರುತ್ತಿರುವ ಇತರೆ ಬೈಕ್ ಸವಾರರಿಗೆ ಕೈಗಳನ್ನ ಆಡಿಸುತ್ತಾ ಎಚ್ಚರಿಸಿ ನಿಲ್ಲಿಸಿ ತೈಲ ಸೋರಿಕೆಯ ಕುರಿತು ಎಚ್ಚರಿಸಿದನು ಎಂದು ಓದಿದೆ.
ಅನೇಕರು ಅವನನ್ನು ನೋಡಿ ಅವನ ಮಾತುಗಳನ್ನು ಕೇಳಿ ತಮ್ಮನ್ನು ತಾವು ರಕ್ಷಿಸಿಕೊಂಡರು. ಆದರೆ ಕೆಲವರು ಇವನು ಯಾವನೋ ಹುಚ್ಚ ಕೈಯಾಡಿಸುತ್ತಾ ನಿಂತಿದ್ದಾನೆ ಎಂದು ಭಾವಿಸಿ ಮುಂದೆ ಹೋಗಿ ಬಿದ್ದುಬಿಟ್ಟರು. ಅದೇ ಪರಿಸ್ಥಿತಿ ಆತ್ಮಿಕತೆಯಲ್ಲಿಯೂ ಸತ್ಯ. ನಾವು ನೋಡುತ್ತೇವೆ ಮತ್ತು ಕೇಳುತ್ತೇವೆ ಆದರೆ ನಾವು ಸಹ ಅದರ ಕುರಿತು ತೆಗೆದುಕೊಳ್ಳಬೇಕಾದ ಜಾಗೃತ ಹೆಜ್ಜೆಯನ್ನು ತೆಗೆದುಕೊಳ್ಳುವುದಿಲ್ಲ.
ಪ್ರತಿಯೊಬ್ಬ ಮನುಷ್ಯನೂ ತನ್ನೊಂದಿಗೆ ಶಾಶ್ವತವಾಗಿ ಜೊತೆಗಿರಬೇಕೆಂದು ದೇವರ ಹೃದಯವು ಹಂಬಲಿಸುತ್ತದೆ. ಆದ್ದರಿಂದ ಆತನ ನಮ್ಮನ್ನು ಎಚ್ಚರಿಸಲು ಮತ್ತು ನಮ್ಮನ್ನು ಸರಿಪಡಿಸಲು ಜನರನ್ನು ಬೆಳೆಸಿದ್ದಾನೆ. ನಾವು ಅವರನ್ನು ಎಂದಿಗೂ ಸಹ ಲಘುವಾಗಿ ಪರಿಗಣಿಸಬಾರದು.
ಪ್ರಾರ್ಥನೆಗಳು
1. ತಂದೆಯೇ, ನಿಮ್ಮ ವಾಕ್ಯವು ನನ್ನ ಕಾಲಿಗೆ ದೀಪವು ನನ್ನ ದಾರಿಗೆ ಬೆಳಕು ಆಗಿದೆ. ಈ ನಿಮ್ಮ ವಾಕ್ಯಗಳನ್ನು ಯಾವಾಗಲೂ ಕಾರ್ಯರೂಪಕ್ಕೆ ತರಲು ಯೇಸು ನಾಮದಲ್ಲಿ ನನಗೆ ಸಹಾಯ ಮಾಡಿ.
2. ತಂದೆಯೇ, ನನ್ನ ಜೀವನದ ಕರೆಯನ್ನು ಪೂರೈಸಲು ನನಗೆ ಸಹಾಯ ಮಾಡಲೆಂದೆ ನೀವು ನನ್ನ ಜೀವನದಲ್ಲಿ ಇರಿಸಿರುವ ಮಾರ್ಗದರ್ಶಕರಿಗಾಗಿ ನಾನು ನಿಮಗೆ ಯೇಸು ನಾಮದಲ್ಲಿ ಸ್ತೋತ್ರ ಸಲ್ಲಿಸುತ್ತೇನೆ. ಅವರನ್ನು ನಾನು ಎಂದಿಗೂ ಲಘುವಾಗಿ ಪರಿಗಣಿಸದಂತೆ ಯೇಸು ನಾಮದಲ್ಲಿ ಸಹಾಯ ಮಾಡಿ.
3. ತಂದೆಯೇ, ಯೇಸು ನಾಮದಲ್ಲಿ ಈ ದಿನದಲ್ಲಿ ಮತ್ತು ಮುಂಬರುವ ದಿನಗಳಲ್ಲಿ ನಾನು ಭೇಟಿಯಾಗುವ ಪ್ರತಿಯೊಬ್ಬರಿಗೂ ನಿಮ್ಮ ಸತ್ಯವನ್ನು ಪ್ರೀತಿಯಿಂದ ತಲುಪಿಸುವಂತೆ ಕೃಪೆ ನೀಡಿರಿ, ಆಮೆನ್.
2. ತಂದೆಯೇ, ನನ್ನ ಜೀವನದ ಕರೆಯನ್ನು ಪೂರೈಸಲು ನನಗೆ ಸಹಾಯ ಮಾಡಲೆಂದೆ ನೀವು ನನ್ನ ಜೀವನದಲ್ಲಿ ಇರಿಸಿರುವ ಮಾರ್ಗದರ್ಶಕರಿಗಾಗಿ ನಾನು ನಿಮಗೆ ಯೇಸು ನಾಮದಲ್ಲಿ ಸ್ತೋತ್ರ ಸಲ್ಲಿಸುತ್ತೇನೆ. ಅವರನ್ನು ನಾನು ಎಂದಿಗೂ ಲಘುವಾಗಿ ಪರಿಗಣಿಸದಂತೆ ಯೇಸು ನಾಮದಲ್ಲಿ ಸಹಾಯ ಮಾಡಿ.
3. ತಂದೆಯೇ, ಯೇಸು ನಾಮದಲ್ಲಿ ಈ ದಿನದಲ್ಲಿ ಮತ್ತು ಮುಂಬರುವ ದಿನಗಳಲ್ಲಿ ನಾನು ಭೇಟಿಯಾಗುವ ಪ್ರತಿಯೊಬ್ಬರಿಗೂ ನಿಮ್ಮ ಸತ್ಯವನ್ನು ಪ್ರೀತಿಯಿಂದ ತಲುಪಿಸುವಂತೆ ಕೃಪೆ ನೀಡಿರಿ, ಆಮೆನ್.
Join our WhatsApp Channel
Most Read
● ನಿಮ್ಮ ದೌರ್ಬಲ್ಯಗಳನ್ನು ದೇವರಿಗೆ ಒಪ್ಪಿಸಿ● ಹೊಗಳಿಕೆವಂಚಿತ ನಾಯಕರು
● ಕರ್ತನು ಹೃದಯವನ್ನೇ ಶೋಧಿಸುವವನಾಗಿದ್ದಾನೆ.
● ನಿಮ್ಮನ್ನು ಅಡ್ಡಿಪಡಿಸುವ ನಂಬಿಕೆಗಳನ್ನು ಸೀಮಿತಗೊಳಿಸುವುದು
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 02 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?
ಅನಿಸಿಕೆಗಳು