ಅನುದಿನದ ಮನ್ನಾ
ನಾವು ಸಭೆಯಾಗಿ ನೇರವಾಗಿ ಕೂಡಿಕೊಳ್ಳದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಸಭೆಯ ಆರಾಧನೆಯಲ್ಲಿ ಭಾಗವಹಿಸಬಹುದೇ?
Friday, 1st of November 2024
2
0
59
ಕೋವಿಡ್ ಲಾಕ್‌ಡೌನ್ ಸಮಯದಲ್ಲಿ, ಆನ್‌ಲೈನ್ ಸೇವೆಗಳು ಸಾವಿರಾರು ಜನರಿಗೆ ಆಶೀರ್ವಾದಕರವಾಗಿತ್ತು. ಆದಾಗ್ಯೂ, ಲಾಕ್‌ಡೌನ್ ನಿರ್ಬಂಧಗಳನ್ನು ಅಧಿಕಾರಿಗಳು ತೆಗೆದುಹಾಕಿದ್ದರೂ, ಅನೇಕರು ಇನ್ನೂ ಲಾಕ್‌ಡೌನ್ ಮನಸ್ಥಿತಿಯಲ್ಲಿಯೇ ಇದ್ದಾರೆ - ಅವರು ಇನ್ನೂ ಆನ್‌ಲೈನ್‌ನಲ್ಲಿ ಮಾತ್ರವೇ ಚರ್ಚ್ ಸೇವೆಗಳಿಗೆ ಹಾಜರಾಗುತ್ತಿದ್ದಾರೆ.
ಚರ್ಚ್ ಸೇವೆಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವಂತದ್ದು ಖಂಡಿತವಾಗಿಯೂ ಕೆಲವು ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ಕಠಿಣ ಆರೋಗ್ಯ ಸಮಸ್ಯೆಗಳಿರುವ ಬಳಳುತ್ತಿರುವವರಿಗೂ ಮತ್ತು ಪ್ರಯಾಣಿಸಲು ಸಾಧ್ಯವಾಗದವರಿಗೂ, ನೇರವಾಗಿ ಸಭೆಗೆ ಹೋಗಲು ಸಾಧ್ಯವೇ ಇಲ್ಲ ಎನ್ನುವಂತವರಿಗೆ ಹೀಗೆ ಮಾಡಬಹುದೇನೋ. ಆದರೆ ಸಾಧ್ಯವಾದರೂ ನೇರವಾಗಿ ಸಭೆಯಾಗಿ ಕೂಡಿಬರದೇ ಹೋಗುವ ಮೂಲಕ ವ್ಯಕ್ತಿಯು ತನ್ನ ಆಶೀರ್ವಾದವನ್ನು ಕಳೆದುಕೊಳ್ಳುತ್ತಾನೆ.
ಸತ್ಯವೇದದಲ್ಲಿನ ಇಬ್ರಿಯ ಗ್ರಂಥ 10:25 ರ ವಾಕ್ಯವು , "ಸಭೆಯಾಗಿ ಸೇರುವ ರೂಢಿಯನ್ನು ಕೆಲವರು ಬಿಟ್ಟಂತೆ ನಾವು ಬಿಟ್ಟು ಬಿಡದೆ, ಆ ದಿನವು ಸಮೀಪಿಸುತ್ತಾ ಬರುತ್ತದೆಂದು ನೀವು ತಿಳಿದುಕೊಂಡಿರುವುದರಿಂದ ಒಬ್ಬರನ್ನೊಬ್ಬರು ಮತ್ತಷ್ಟು ಹೆಚ್ಚಾಗಿಯೇ ಪ್ರೋತ್ಸಾಹಿಸುತ್ತಿರೋಣ".ಎಂದು ನಮ್ಮನ್ನು ಎಚ್ಚರಿಸುತ್ತದೆ
ನೀವು ಸ್ಥಳೀಯ ಚರ್ಚ್‌ನ ಭಾಗವಾಗಿರಲು ಮತ್ತು ವ್ಯಕ್ತಿಗತವಾಗಿ ಏಕೆ ಸಭೆಗೆ ಸದಸ್ಯರಾಗಿ ಕೂಡಿ ಬರಬೇಕು ಎಂಬುದಕ್ಕೆ ಕೆಲವು ಸತ್ಯವೇದದ ಕಾರಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಅನುಮತಿಸಿ.
ದೇವರು ಆಜ್ಞಾಪಿಸಿದಂತೆ ಸಭೆಯು ಕ್ರಿಸ್ತನಲ್ಲಿರುವ ವಿಶ್ವಾಸಿಗಳ ಸಮುದಾಯವಾಗಿದೆ, ನೀವು ಭೌತಿಕವಾಗಿ ಕೂಡಿ ಬರುವಾಗ ಇದು ಸಾಧ್ಯವಾಗುತ್ತದೆಯೇ ಹೊರತು ಆನ್‌ಲೈನ್‌ನಲ್ಲಿ ಭೇಟಿಯಾಗುವಾಗ ಈ ಸಮುದಾಯದ ಭಾಗವಾಗುವ ಅವಕಾಶವನ್ನು ಕಳೆದುಕೊಳ್ಳುತ್ತೀರಿ. ಜ್ಞಾನೋಕ್ತಿ 27:17 ರಲ್ಲಿ , "ಕಬ್ಬಿಣವು ಕಬ್ಬಿಣವನ್ನು ಹರಿತಗೊಳಿಸುತ್ತದೆ" ಎಂದು ಹೇಳುತ್ತದೆ. ನೀವು ನಿಜವಾಗಿಯೂ ವೈಯಕ್ತಿಕವಾಗಿ ಭೇಟಿಯಾದಾಗ, ಈ ನಿರ್ಣಾಯಕವಾದ ಹರಿತಗೊಳಿಸುವಿಕೆಯ ಪ್ರಕ್ರಿಯೆಯು ನಡೆಯುತ್ತದೆ. ಭೌತಿಕ ಮಟ್ಟದಲ್ಲಿ ಈ ಪ್ರಕ್ರಿಯೆಯು ಪ್ರಮುಖ ಗುಣಲಕ್ಷಣಗಳನ್ನು ಅಭಿವೃದ್ಧಿಪಡಿಸುತ್ತದೆ, ಅದನ್ನು ಆನ್‌ಲೈನ್‌ನಲ್ಲಿ ಸಭೆಯಾಗಿ ಭಾಗವಹಿಸುವ ಮೂಲಕ ಉಂಟುಮಾಡಲು ಸಾಧ್ಯವಿಲ್ಲ.
ಪ್ರಾಯಶಃ ನಿಮಗೆ ಹಿಂದೆ ಯಾರಾದರೂ ಮನ ನೋಯಿಸಿರಬಹುದು ಅಥವಾ ಕೆಲವು ಭಾವನಾತ್ಮಕ ಸಮಸ್ಯೆಗಳೊಂದಿಗೆ ನೀವು ವ್ಯವಹರಿಸುತ್ತಿರಬಹುದು (ನೀವು ಇತರರೊಂದಿಗೆ ಇದನ್ನು ಹಂಚಿಕೊಳ್ಳಲು ಸಾಧ್ಯವಿಲ್ಲದೇ ಇರಬಹುದು). ಆದಾಗ್ಯೂ, ವ್ಯಕ್ತಿಗತವಾಗಿ ಚರ್ಚ್‌ಗೆ ಹಾಜರಾಗದೇ ದೇವರ ಈ ಹರಿತಗೊಳಿಸುವ ಆಯಾಮದ ಅನುಭವದಿಂದ ನೀವು ವಂಚಿತಾರಾಗುವಂತೆ ನಿಮ್ಮನ್ನು ನೀವು ಬಿಟ್ಟುಕೊಡಬೇಡಿ. ನೀವು ಬಿಟ್ಟುಕೊಟ್ಟರೆ ನಿಮ್ಮ ಆತ್ಮೀಕ ಬೆಳವಣಿಗೆಯನ್ನು ನೀವು ತೀವ್ರವಾಗಿ ಅಡ್ಡಿಪಡಿಸುವವರಾಗುತ್ತೀರಿ. "ಪಂಚಾಶತ್ತಮ ದಿನದ ಹಬ್ಬವು ಬಂದಿರಲಾಗಿ ಅವರೆಲ್ಲರೂ ಒಮ್ಮಸ್ಸಿನಿಂದ ಒಂದೇ ಸ್ಥಳದಲ್ಲಿ ಕೂಡಿಬಂದಿದ್ದರು. "(. ಅ. ಕೃ. 2:1). ಪವಿತ್ರಾತ್ಮದ ಸುರಿಸುವಿಕೆಯನ್ನು ಸ್ವೀಕರಿಸುವುದಕ್ಕೆ ಇದು ಒಂದು ಕೀಲಿಯಾಗಿದೆ.
ಎರಡನೆಯದಾಗಿ, ಕರ್ತನಾದ ಯೇಸು ಹೇಳಿದ್ದೇನೆಂದರೆ "ಮನುಷ್ಯಕುಮಾರನು ಸೇವೆ ಮಾಡಲು ಬಂದನು" (ಮತ್ತಾಯ 20:28) ನೀವು ಆನ್‌ಲೈನ್‌ನಲ್ಲಿ ಚರ್ಚ್‌ಗೆ ಹಾಜರಾಗುತ್ತಿರುವಾಗ ಮತ್ತು ನೇರವಾಗಿ ಸಭೆಗೆ ಕೂಡಿ ಬರದೇ ಹೋಗುವಾಗ , ಇತರರಿಗೆ ಪ್ರಾಮಾಣಿಕವಾಗಿ ಸೇವೆ ಮಾಡುವ ಅವಕಾಶವನ್ನು ನೀವು ಕಳೆದುಕೊಳ್ಳುತ್ತೀರಿ. ಹೌದು, ಮನುಷ್ಯ ಆತ್ಮೀಕ ಜೀವಿ ಆದರೆ ಅದೇ ಸಮಯದಲ್ಲಿ ಅವನಿಗೆ ಆತ್ಮ ಮತ್ತು ದೇಹ ಎರಡೂ ಇದೆ ಎಂಬುದನ್ನು ಮರೆಯಬೇಡಿ. (1 ಥೆಸಲೊನೀಕ 5:23)
ಮೂರನೆಯದಾಗಿ, ಸಭೆಯ ಸೇವೆಯನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವುದಕ್ಕಿಂತ ಹೆಚ್ಚಾದ ಸಮಯವನ್ನು ಹೆಚ್ಚು ಶ್ರಮವನ್ನು ಅದಕ್ಕೆ ಸಿದ್ದವಾಗುವ ಮತ್ತು ಸಭೆಗೆ ಪ್ರಯಣಿಸುವಂತದ್ದು ತೆಗೆದುಕೊಳ್ಳುತ್ತದೆ ಎಂಬುದು ನಿಜವೇ. ಆದರೆ ನಿಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ನಿಮ್ಮ ಈ ಕಾರ್ಯಗಳಿಂದ ಅವರೂ ಸಹ ದೇವರ ಮಾರ್ಗಗಳನ್ನು ಕಲಿಯುತ್ತಿದ್ದಾರೆ ಎಂಬುದನ್ನು ಮಾತ್ರ ಮರೆಯಬೇಡಿ. ನಿಮ್ಮ ಸುತ್ತಲಿರುವ ನಂಬಿಕೆಯಿಲ್ಲದವರರೂ ಸಹ ನಿಮ್ಮ ಜೀವನದಲ್ಲಿ ನೀವು ಯಾವುದಕ್ಕೆ ಆದ್ಯತೆಯನ್ನು ನೀಡುತ್ತಿದ್ದೀರಿ ಎಂಬುದನ್ನು ಗಮನಿಸುತ್ತಿದ್ದಾರೆ:ಅದು ದೇವರ ಮನೆಗಾಗಿಯೋ ಅಥವಾ ನಿಮ್ಮ ಮನೆಗಾಗಿಯೋ? ಎಂಬುದನ್ನು ಅವರು ಗಮನಿಸುತ್ತಿದ್ದಾರೆ: ಇದುವೇ ಮಾದರಿ ಜೀವಿತದಿಂದ ಬೋದಿಸುವ ಸುವಾರ್ತೆಯಾಗಿದೆ.
ನೀವು ಅತ್ಯಂತ ವಿಲಕ್ಷಣ ಶೀರ್ಷಿಕೆಗಳೊಂದಿಗೆ ಆನ್‌ಲೈನ್‌ನಲ್ಲಿ ದೇವರ ಅತ್ಯಂತ ಅಭಿಷಿಕ್ತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಬಹುದು ಮತ್ತು ಅದಕ್ಕಾಗಿ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ. ಆದರೆ ನಾವು ಸಭೆಯಾಗಿ ಕೂಡಿ ಬರಬೇಕೆಂಬ ಅಂಶವು ದೇವರ ಆಜ್ಞೆಯಾಗಿದೆ. ಈ ವಿಷಯದಲ್ಲಿ ಯಾರೂ ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬೇಡಿ ಮತ್ತು ನಿಮ್ಮ ಆತ್ಮೀಕ ಆನುವಂಶಿಕತೆಯನ್ನು ಕಸಿದುಕೊಳ್ಳಬೇಡಿ.
ಪ್ರಾರ್ಥನೆಗಳು
ತಂದೆಯೇ, ನಿನ್ನ ಮಾತನ್ನು ಕೇಳದಿದ್ದಕ್ಕಾಗಿ ನನ್ನನ್ನು ಕ್ಷಮಿಸು. ನಿನ್ನ ಮಾತಿಗೆ ನಾನು ಯಾವಾಗಲೂ ‘ಹೌದು’ ಎನ್ನುತ್ತೇನೆ. ನಿನ್ನ ಆಲಯಕ್ಕೆ ಸಭೆಯಾಗಿ ನಿಯಮಿತವಾಗಿ ಕೂಡಿ ಬರಲು ನನಗೆ ಯೇಸುವಿನ ಹೆಸರಿನಲ್ಲಿ ಅನುಗ್ರಹವನ್ನು ನೀಡಿ. . ಆಮೆನ್
Join our WhatsApp Channel
Most Read
● ಸರ್ವಶಕ್ತನಾದ ದೇವರ ಅದ್ಬುತ ಸಮಾಗಮ.● ಜೀವಿಸುವವರಿಗಾಗಿ ಸತ್ತವನ ಪ್ರಾರ್ಥನೆ
● ಕರ್ತನಾದ ಯೇಸುವಿನ ಮುಖಾಂತರ ಕೃಪೆ
● ಯೇಸುವನ್ನು ನೋಡುವ ಬಯಕೆ
● ರಹಸ್ಯವಾದ ಆತ್ಮೀಕ ದ್ವಾರಗಳು
● ನಿಮ್ಮ ಆಶೀರ್ವಾದಗಳನ್ನು ಹೆಚ್ಚಿಸಿಕೊಳ್ಳುವ ಖಚಿತವಾದ ಮಾರ್ಗ
● ಕೃತಜ್ಞತಾ ಸ್ತೋತ್ರ ಸಲ್ಲಿಸುವುದರಲ್ಲಿರುವ ಬಲ
ಅನಿಸಿಕೆಗಳು