ಅನುದಿನದ ಮನ್ನಾ
ಯಾವುದೂ ಮರೆಯಾಗಿಲ್ಲ
Saturday, 18th of January 2025
4
1
81
Categories :
ಕೊಡುವ (Giving)
ಶಿಷ್ಯತ್ವ (Discipleship)
"ಈ ಪ್ರಕಾರ ಮಾಡಿದವರೊಳಗೆ ಕುಪ್ರದ್ವೀಪದಲ್ಲಿ ಹುಟ್ಟಿದ ಲೇವಿಯನಾಗಿದ್ದ ಯೋಸೇಫನೆಂಬವನು ಒಬ್ಬನು. ಅವನಿಗೆ ಅಪೊಸ್ತಲರು ಬಾರ್ನಬ ಎಂದು ಹೆಸರಿಟ್ಟಿದ್ದರು, ಅಂದರೆ ಧೈರ್ಯದಾಯಕ ಎಂದರ್ಥ.] ಅವನು ತನಗಿದ್ದ ಭೂಮಿಯನ್ನು ಮಾರಿ ಬಂದ ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಒಪ್ಪಿಸಿದನು." (ಅ. ಕೃ 4:36-37)
ಮೇಲಿನ ದೇವರವಾಕ್ಯದಲ್ಲಿ, ಬಾರ್ನಬ ಎಂಬ ವ್ಯಕ್ತಿಯು ತನ್ನ ಆಸ್ತಿಯನ್ನು ಮಾರಿ ಹಣವನ್ನು ಅಪೊಸ್ತಲರ ಬಳಿಗೆ ತಂದಿರುವುದನ್ನು ನಾವು ನೋಡುತ್ತೇವೆ. ಇದೊಂದು ನಿಷ್ಠೆ ಮತ್ತು ಔದಾರ್ಯದ ಕ್ರಿಯೆಯಾಗಿತ್ತು.
ಆದರೆ ಅನನೀಯನೆಂಬ ಒಬ್ಬ ಮನುಷ್ಯನು ತನ್ನ ಹೆಂಡತಿ ಸಪ್ಫೈರಳೊಂದಿಗೆ ತನ್ನ ಒಂದು ಭೂಮಿಯನ್ನು ಮಾರಿ ಹೆಂಡತಿಯ ಸಮ್ಮತಿಯಿಂದ ಅದರ ಕ್ರಯದಲ್ಲಿ ಒಂದು ಭಾಗವನ್ನು ಬಚ್ಚಿಟ್ಟುಕೊಂಡು ಉಳಿದ ಭಾಗವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು. (ಅ. ಕೃ 5:1-2)
ಸಾಂದರ್ಭಿಕವಾಗಿ ನೋಡುವವರಿಗೆ , ಅನನೀಯ ಮತ್ತು ಸಫೈರ ಕೂಡ ಬಾರ್ನಾಬನಂತೆಯೇ ಔದರ್ಯದ ಕೆಲಸವನ್ನು ಮಾಡಿದರು ಎನಿಸಬಹುದು. ಆದರೆ, ಅವರ ಹೃದಯದಲ್ಲಿ ಆಳವಾದ ಹಣದ ಪ್ರೀತಿಯು ಕಾರ್ಯ ಮಾಡಿತ್ತು. ಅವರಿಬ್ಬರೂ ಯಥಾರ್ಥವಾಗಿ ಉದಾರವಾಗಿರದೆ ಜನರ ಮುಂದೆ ತಮ್ಮ ದೊಡ್ಡಸ್ಥಿಕೆ ಚಿತ್ರಣವನ್ನು ತೋರಿಸ ಬಯಸಿದ್ದರು. ಸ್ಪಷ್ಟವಾಗಿ, ಅವರು ದೇವರಿಂದ ಬರುವ ಹೊಗಳಿಕೆಗಿಂತ ಹೆಚ್ಚಾಗಿ ಮನುಷ್ಯರಿಂದ ಬರುವಂತ ಹೊಗಳಿಕೆಯನ್ನು ಬಯಸಿದರು. (ಯೋಹಾನ 12:43)
ಜನರಲ್ಲಿ ಎರಡು ವರ್ಗಗಳಿವೆ:
ಮೊದಲನೆಯವರು ದೇವರನ್ನು ಮೆಚ್ಚಿಸಲು ಮತ್ತು ಆತನಿಂದ ಬರುವ ಪ್ರಶಂಸೆಯನ್ನು ಪಡೆಯುವ ಏಕೈಕ ಬಯಕೆಯಿಂದ ಕೆಲಸಗಳನ್ನು ಮಾಡುತ್ತಾರೆ. ದುರದೃಷ್ಟವಶಾತ್, ಈ ವರ್ಗವು ಅಲ್ಪಸಂಖ್ಯೆಯಲ್ಲಿದೆ.
ಇನ್ನೊಂದು ವರ್ಗದ ಜನರು ತಮ್ಮ ಸುತ್ತಲಿನ ಜನರೆಲ್ಲಾ ತಮ್ಮನ್ನು ನೋಡಬೇಕೆಂದು ಮತ್ತು ಪ್ರಶಂಸಿಸಬೇಕೆಂದು ಮಾತ್ರ ಅವರು ಮಾಡಬಹುದಾದ ಎಲ್ಲವನ್ನೂ ಮಾಡುತ್ತಾರೆ. ಅವರನ್ನು ಪ್ರಶಂಸಿಸದಿದ್ದರೆ, ಅವರು ಮನನೊಂದು ಕಹಿಯಾಗುತ್ತಾರೆ. ಆದ್ದರಿಂದ ನೋಡಿ, ಮೇಲ್ನೋಟಕ್ಕೆ ನಿಜವಾಗಿಯೂ ಉತ್ತಮವಾಗಿ ಕಾಣುವ ಆದರೆ ಸಂಪೂರ್ಣವಾಗಿ ತಪ್ಪು ಉದ್ದೇಶಗಳನ್ನಿಟ್ಟುಕೊಂಡು ಕೆಲಸಗಳನ್ನು ಮಾಡಲು ಸಹ ಸಾಧ್ಯವಿದೆ.
ಈ ಪ್ರಶ್ನೆಗಳ ಬೆಳಕಿನಡಿಯಲ್ಲಿ ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಿ:
ನಾನು ಕರ್ತನ ಸೇವೆ ಮಾಡುತ್ತಿರುವುದು ಇತರರಿಂದ ಗುರುತಿಸಿ ಕೊಳ್ಳಲ್ಪಡಲು ಮತ್ತು ಪ್ರಶಂಶಿಸಿಕೊಳ್ಳಲೋ?
ನಾನು ದೇವರಿಗೆ ಕಾಣಿಕೆ ಕೊಡುವಾಗ, ನಾನು ಮಾಡಿದ್ದನ್ನು ಘೋಷಿಸುವ ತುತ್ತೂರಿಯನ್ನು ಊದುತ್ತಿದ್ದೇಯೇ ?
ನಾವು ದೇವರ ಮುಂದೆ ಏಕಾಂತದಲ್ಲಿರುವಾಗ ಈ ರೀತಿಯ ಮೊನಚಾದ ಪ್ರಶ್ನೆಗಳನ್ನು ಕೇಳಿಕೊಳ್ಳುವುದರಿಂದ ನಾವು ಪಶ್ಚಾತ್ತಾಪ ಪಡುವವರಾಗುತ್ತೇವೆ ಮತ್ತು ಆತನ ಕೃಪೆಯಲ್ಲಿ ಇನ್ನೂ ಹೆಚ್ಚಾಗಿ ಬೆಳೆಯುವವರಾಗುತ್ತೇವೆ.
ದೇವರಿಗೆ ಮರೆಯಾದದ್ದು ಒಂದೂ ಇಲ್ಲ ಎನ್ನುವ ಒಂದು ವಿಷಯ ಮಾತ್ರ ಅನನೀಯ ಮತ್ತು ಸಫೈರ ಮರೆತುಬಿಟ್ಟರು.
"ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯದ ಮತ್ತು ಅಂತರಂಗದ ಸೌಂದರ್ಯ ನೋಡುವವನಾಗಿದ್ದಾನೆ” (1 ಸಮುವೇಲ 6:7).
ಲೋಕದೊಡನೆ ಹೊಂದಾಣಿಕೆ ಮಾಡಿಕೊಳ್ಳುವ ಥುವಥೈರ ಸಭೆಗೆ ಯೇಸು ಹೇಳಿದಂತೆ " ಆಗ ನಾನು ಮನುಷ್ಯರ ಅಂತರಿಂದ್ರಿಯಗಳನ್ನೂ, ಹೃದಯಗಳನ್ನೂ ಪರೀಕ್ಷಿಸುವವನಾಗಿದ್ದೇನೆಂಬುದು ಎಲ್ಲಾ ಸಭೆಗಳಿಗೆ ಗೊತ್ತಾಗುವುದು. ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಅವನವನ ಕ್ರಿಯೆಗಳಿಗೆ ತಕ್ಕ ಹಾಗೆ ಪ್ರತಿಫಲವನ್ನು ಕೊಡುವೆನು."(ಪ್ರಕಟಣೆ 2:23)
ಹಾಗಾಗಿ ಆತನು ಮನುಷ್ಯರ ಹೃದಯ ಮತ್ತು ಮನಸ್ಸನ್ನು ಶೋಧಿಸುವವನು ಎಂಬುದನ್ನು ನಾವು ಎಂದಿಗೂ ಮರೆಯದೇ ಇರೋಣ. ಆತನ ಕಣ್ಣುಗಳಿಂದ ಯಾವುದೂ ಮರೆಯಾಗಿಲ್ಲ. ಕರ್ತನು ನಿಜವಾಗಿಯೂ ಪರಿಗಣಿಸುವುದು ಬಾಹ್ಯ ಅನುಸರಣೆಯಲ್ಲ ಆದರೆ ಒಳ್ಳೆಯ ಉದ್ದೇಶದ ಮೂಲಕ ವ್ಯಕ್ತಪಡಿಸಿದ ಹೃದಯದ ಆಂತರ್ಯದ ಸೌಂಧರ್ಯವನ್ನು.
Bible Reading: Genesis 50; Exodus 1-3
ಅರಿಕೆಗಳು
ತಂದೆಯಾದ ಓ ದೇವರೇ , ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ, ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ತಿಳಿದುಕೋ.] ನನ್ನಲ್ಲಿ ಕೇಡಿನ ಮಾರ್ಗ ಇರುತ್ತದೋ ಏನೋ ನೋಡಿ, ಸನಾತನ ಮಾರ್ಗದಲ್ಲಿ ನನ್ನನ್ನು ನಡೆಸು. (ಕೀರ್ತನೆ 139:23-24)
Join our WhatsApp Channel
Most Read
● ದೈವೀಕ ಅನುಕ್ರಮ -2● ಪರಲೋಕದ ವಾಗ್ದಾನ
● ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕನಸುಗಳ ಕೊಲೆಪಾತಕರು
● ಕರ್ತನು ಎಂದಿಗೂ ಕೈ ಬಿಡುವುದಿಲ್ಲ
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 24:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು