ಅನುದಿನದ ಮನ್ನಾ
ಏಳು ಪಟ್ಟು ಆಶೀರ್ವಾದ
Sunday, 19th of January 2025
3
0
27
Categories :
ಆಶೀರ್ವಾದ ( Blessing)
"ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. ನೀನು ಆಶೀರ್ವಾದನಿಧಿಯಾಗುವಿ. ನಿನ್ನನ್ನು ಹರಸುವವರನ್ನು ಹರಸುವೆನು; ನಿನ್ನನ್ನು ಶಪಿಸುವವರನ್ನು ಶಪಿಸುವೆನು. ನಿನ್ನ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು ಎಂದು ಹೇಳಿದನು".(ಆದಿಕಾಂಡ 12: 2-3)
ಅಬ್ರಹಾಮನು ತನ್ನ ತಂದೆಯ ಮನೆ, ಕುಟುಂಬ, ಮತ್ತು ಅವನ ಆರಾಮ ವಲಯವನ್ನು ಬಿಟ್ಟು ಹಾರಾನ್ ಮಾರ್ಗವಾಗಿ ಕಾನಾನಿಗೆ ಪ್ರಯಾಣಿಸುವ ಮೊದಲು ಅಬ್ರಾಮನು ಕಲ್ದಿಯರ ಊರ್‌ನಲ್ಲಿದ್ದಾಗ ದೇವರಿಂದ ಅವನಿಗೆ ದೊರೆತ ಏಳು ವಾಗ್ದಾನಗಳು;
1) ನಾನು ನಿನ್ನನ್ನು ದೊಡ್ಡ ಜನಾಂಗವನ್ನಾಗಿ ಮಾಡುತ್ತೇನೆ
2) ನಾನು ನಿನ್ನನ್ನು ಆಶೀರ್ವದಿಸುತ್ತೇನೆ.
"ನಾನು ನಿನ್ನನ್ನು ಹೇರಳವಾದ ಕೃಪೆಯಿಂದ ಆಶೀರ್ವದಿಸುತ್ತೇನೆ." ಎಂದು ಆಂಪ್ಲಿಫೈಡ್ ಬೈಬಲ್ ಹೇಳುತ್ತದೆ.
ಅಬ್ರಹಾಮನು ಸಮೃದ್ಧಿಯಿಂದ ಆಶೀರ್ವದಿಸಲ್ಪಟ್ಟನು. ಆದಿಕಾಂಡ 24:1 ವಾಸ್ತವವಾಗಿ ಅಬ್ರಹಾಮನು ಎಲ್ಲ ರೀತಿಯಲ್ಲೂ ಆಶೀರ್ವದಿಸಲ್ಪಟ್ಟನು ಎಂದು ಹೇಳುತ್ತದೆ.
3) "ನಾನು ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುತ್ತೇನೆ".
ನಾನು ನಿನ್ನ ಹೆಸರನ್ನು ಪ್ರಸಿದ್ಧಗೊಳಿಸಿ ಉನ್ನತ ಪಡಿಸುತ್ತೇನೆ."ಎಂದು ಆಂಪ್ಲಿಫೈಡ್ ಬೈಬಲ್ಆದಿಕಾಂಡ 12: 2 ರಲ್ಲಿ ಹೇಳುತ್ತದೆ. ಅಬ್ರಹಾಮನು ಹೋದಲ್ಲೆಲ್ಲಾ ಅವನು ಹೆಸರುವಾಸಿಯಾದನು. ಅವನ ಖ್ಯಾತಿಯು ಅವನು ಹೋದಲೆಲ್ಲಾ ಅವನನ್ನು ಹಿಂಬಾಲಿಸುತಿತ್ತು. ಅವನು ಬಲವುಳ್ಳ ದೊಡ್ಡ ಮನುಷ್ಯನ್ನಾಗಿದ್ದನು ಮತ್ತು ಅವನು ದೇವರಿಂದ ಮೆಚ್ಚುಗೆ ಪಡೆದವನಾಗಿದ್ದನು !
4) ನೀನು ಆಶೀರ್ವಾದ ನಿಧಿಯಾಗುವಿ.
"ನಾವು ಮತ್ತೊಬ್ಬರಿಗೆ ಆಶೀರ್ವಾದ ನಿಧಿಯಾಗಿರುವಂತೆ ಆಶೀರ್ವದಿಸಲ್ಪಟ್ಟಿದ್ದೇವೆ" ಎಂಬ ನುಡಿಗಟ್ಟು ಬಂದದ್ದು ಇಲ್ಲಿಂದಲೇ. ನಾವು ಸಾಕಷ್ಟು ಹೆಚ್ಚಳ ಹೊಂದಬೇಕೆಂದು ದೇವರು ಬಯಸುತ್ತಿರುವ ಒಂದು ಮುಖ್ಯ ಕಾರಣವೆಂದರೆ ಅದರಿಂದ ನಾವು ಇತರರಿಗೆ ಆಶೀರ್ವಾದವಾಗಿ ಸಹಾಯ ಮಾಡಬಹುದು ಎಂದೆ.
ಕ್ರೈಸ್ತರಾದ ನಾವು ''ನಿಮ್ಮ ಅನುಕೂಲತೆಗಳನ್ನು ಮಾತ್ರ ನೋಡಿಕೊಳ್ಳಿ 'ಎಂದು ಹೇಳುವ ಪ್ರಪಂಚದ ಮಾದರಿಯನ್ನು ಎಷ್ಟು ಮಾತ್ರಕ್ಕೂ ಅನುಸರಿಸಬಾರದು. ಬದಲಾಗಿ, ನಾವು ದೇವರ ಸಂಪನ್ಮೂಲಗಳನ್ನು ಆತನು ಉದ್ದೇಶಿಸಿದ್ದಕ್ಕಾಗಿ ಬಳಸಬೇಕು:
ನಮ್ಮ ಸುತ್ತಲಿನ ಪ್ರಪಂಚಕ್ಕೆ ದೇವರ ಮಹಿಮೆಯನ್ನು ತೋರಿಸಲು. ನಾವು ಉದಾರವಾಗಿರಬೇಕೆಂದು ದೇವರು ಬಯಸುತ್ತಾನೆ.
ನಾವು ಕಷ್ಟದಲ್ಲಿರುವವರಿಗೆ ಕೊಡುವಷ್ಟು ಆಶೀರ್ವಾದ ಪಡೆಯಬೇಕೆಂದು ಆತನು ಬಯಸುತ್ತಾನೆ. ನಾವು ನಮ್ಮ ಆಶೀರ್ವಾದಗಳನ್ನು ಹಂಚಿಕೊಳ್ಳಬೇಕೆಂದು ಆತನು ಬಯಸುತ್ತಾನೆ.
5) ನಿನ್ನನ್ನು ಆಶೀರ್ವದಿಸುವವರನ್ನು ನಾನು ಆಶೀರ್ವದಿಸುವೆನು.
ಜನರು ನಿಮ್ಮನ್ನು ಆಶೀರ್ವದಿಸಿ ನಿಮಗೆ ಸಹಾಯ ಮಾಡಿದಾಗ, ದೇವರು ಅವರನ್ನು ಆಶೀರ್ವದಿಸುತ್ತಾನೆ. ನಿಮ್ಮ ಮೇಲಿರುವ ಆತನ ದಯೆಯು ಅವರ ಮೇಲೂ ವಿಸ್ತರಿಸಲ್ಪಡುತ್ತದೆ . ನಿಮ್ಮ ಜೀವನದಲ್ಲಿ ಸಕಾರಾತ್ಮಕ ರೀತಿಯಲ್ಲಿ ಸ್ಪರ್ಶಿಸುವ ಪ್ರತಿಯೊಬ್ಬ ವ್ಯಕ್ತಿಯು ದೇವರಿಂದ ಸ್ಪರ್ಶವನ್ನು ಪಡೆಯುತ್ತಾನೆ; ನಾವು ಎಂಥಾ ಆಶೀರ್ವಾದ ಹೊಂದಿದ್ದೇವೆ ಅಲ್ಲವೇ.
6) ನಿನ್ನನ್ನು ಶಪಿಸುವವರನ್ನು ನಾನು ಶಪಿಸುತ್ತೇನೆ.
ನಿಮ್ಮ ವಿರುದ್ಧ ಹೋರಾಡುವ ಯಾರನ್ನೂ ಸಹ ದೇವರು ಆಶೀರ್ವದಿಸುವುದಿಲ್ಲ. ನಿಮ್ಮ ಶತ್ರುಗಳಿಗೆ ನಾನು ಶತ್ರುವಾಗಿದ್ದೇನೆ ಮತ್ತು ನಿಮ್ಮನ್ನು ವಿರೋಧಿಸುವವರನ್ನು ನಾನು ವಿರೋಧಿಸುತ್ತೇನೆ ಎಂದು ಆತನೇ ಹೇಳಿದ್ದಾನೆ.
"ನಿಮ್ಮ ಮೇಲೆ ಬರುವ ಶತ್ರುಗಳು ನಿಮ್ಮಿಂದ ಸೋತುಹೋಗುವಂತೆ ಯೆಹೋವನು ಮಾಡುವನು. ಅವರು ಒಂದೇ ದಾರಿಯಿಂದ ನಿಮ್ಮ ಮೇಲೆ ಬಂದರೂ ಏಳು ದಾರಿಗಳಿಂದ ಓಡಿಹೋಗುವರು."ಧರ್ಮೋಪದೇಶಕಾಂಡ 28:7 ಹೇಳುತ್ತದೆ.
7) ನಿನ್ನಿಂದ ಭೂಮಿಯ ಮೇಲಿನ ಎಲ್ಲಾ ಜನಾಂಗಗಳು ಆಶೀರ್ವದಿಸಲ್ಪಡುತ್ತವೆ.
"ನಾನು ಪ್ರಪಂಚದಾದ್ಯಂತ ಇರುವಂತ ಜನರನ್ನು ಹೇಗೆ ತಾನೇ ಆಶೀರ್ವದಿಸಬಹುದು?" ಎಂದು ನೀವು ಯೋಚಿಸುತ್ತಿರಬಹುದು.ನೀವು ದೇವರ ರಾಜ್ಯಕ್ಕಾಗಿ ಸೇವೆ ಸಲ್ಲಿಸುವಾಗ, ನೀವು ದೇವರ ಕಾರ್ಯಕ್ಕಾಗಿ ಶ್ರಮಿಸುವಾಗ , ನೀವು ಪ್ರಪಂಚದಾದ್ಯಂತ ಸುವಾರ್ತೆಯನ್ನು ಪ್ರಚಾರ ಮಾಡುವ ಕಾರ್ಯದ ಪ್ರಮುಖ ಭಾಗವಾಗುತ್ತೀರಿ.
ನಾವು ಅಬ್ರಹಾಮನೊಂದಿಗೆ ಆಶೀರ್ವದಿಸಲ್ಪಟ್ಟಿದ್ದೇವೆ ಎಂದು ಗಲಾತ್ಯ 3:9 ರಲ್ಲಿ ದೇವರು ಹೇಳುತ್ತಾನೆ. ಅಂದರೆ, ಅಬ್ರಹಾಮನು ಹೊಂದಿದ್ದ ಪ್ರತಿಯೊಂದು ಆಶೀರ್ವಾದವನ್ನು ನಾವು ಹೊಂದಬಹುದು.
Bible Reading: Exodus 4-6
ಅರಿಕೆಗಳು
"ಕ್ರಿಸ್ತನಲ್ಲಿ ಸೇರುವದಕ್ಕೆ ದೀಕ್ಷಾಸ್ನಾನಮಾಡಿಸಿಕೊಂಡಿರುವ ನಾನು ಕ್ರಿಸ್ತನನ್ನು ಧರಿಸಿಕೊಂಡಿದ್ದೇನೆ . ನಾನು ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ, ಆಳು ಒಡೆಯ ಎಂದೂ, ಗಂಡು ಹೆಣ್ಣು ಎಂದೂ ಭೇದವಿಲ್ಲ. ನಾನು ಕ್ರಿಸ್ತನವನಾಗಿದ್ದು ಅಬ್ರಹಾಮನ ಸಂತತಿಯೂ ವಾಗ್ದಾನಕ್ಕನುಸಾರವಾಗಿ ಬಾಧ್ಯನೂ ಆಗಿದ್ದೇನೆ.(ಗಲಾ 3:27-29). ಅಬ್ರಹಾಮನ ವಾಗ್ದಾನಗಳೆಲ್ಲ ಯೇಸು ನಾಮದಲ್ಲಿ ನನ್ನದು. ಆಮೆನ್
Join our WhatsApp Channel
Most Read
● ದೈವೀಕ ಅನುಕ್ರಮ -2● ಅನ್ಯಭಾಷೆಯನ್ನಾಡುವುದು ಪ್ರಗತಿಯನ್ನು ತರುತ್ತದೆ.
● ಅಶ್ಲೀಲತೆಯಿಂದ ಬಿಡುಗಡೆ ಕಡೆಗಿನ ಪಯಣ
● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
● ದಿನ 08:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೇವರು ಹೇಗೆ ಒದಗಿಸುತ್ತಾನೆ #1
● ಪುರುಷರು ಏಕೆ ಪತನಗೊಳ್ಳುವರು -1
ಅನಿಸಿಕೆಗಳು