english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಸ್ತುತಿಯು ಸಮೃದ್ಧಿಯನ್ನುಂಟುಮಾಡುತ್ತದೆ
ಅನುದಿನದ ಮನ್ನಾ

ಸ್ತುತಿಯು ಸಮೃದ್ಧಿಯನ್ನುಂಟುಮಾಡುತ್ತದೆ

Saturday, 25th of January 2025
5 2 126
Categories : ಹೊಗಳುತ್ತಾರೆ (Praise)
"ದೇವರೇ, ಜನಾಂಗಗಳು ನಿನ್ನನ್ನು ಕೀರ್ತಿಸಲಿ; 
ಸರ್ವಜನಾಂಗಗಳು ನಿನ್ನನ್ನು ಕೀರ್ತಿಸಲಿ. 
ಭೂವಿುಯು ಒಳ್ಳೇ ಬೆಳೆಯನ್ನು ಕೊಟ್ಟಿರುತ್ತದೆ. 
ದೇವರು, ನಮ್ಮ ದೇವರೇ ನಮ್ಮನ್ನು ಆಶೀರ್ವದಿಸುವನು; (ಕೀರ್ತನೆ 67:5-6) 

'ದೇವ ಜನರು ದೇವರನ್ನು ಸ್ತುತಿಸುವಾಗ' ಎನ್ನುವುದನ್ನು ಎಚ್ಚರಿಕೆಯಿಂದ ಗಮನಿಸಿ, ಆಗ ಮಾತ್ರ ಭೂಮಿಯು ಸಮೃದ್ಧಿಯನ್ನು ತರಲು ಸಾಧ್ಯ. ನಮಗೆ ಸಮೃದ್ಧಿಯಾಗುವವರೆಗೂ ನಾವು ದೇವರನ್ನು ಸ್ತುತಿಸಲು ಕಾಯಬಾರದು.
 ಬನ್ನಿ; ಬದಲಾಗಿ, ಅದಕ್ಕಿಂತ ಮುಂಚೆಯೇ ನಾವು ಆತನನ್ನು ಸ್ತುತಿಸೋಣ. ಸ್ತುತಿಯು ಸಮೃದ್ಧಿಯನ್ನು ಉಂಟು ಮಾಡುತ್ತದೆ ಎಂಬುದನ್ನು ಸ್ವತಃ ಅನುಭವಿಸೋಣ.

ಯಾರು ಯಾವಾಗಲೂ  ಗೊಣಗುಡುತ್ತಲೇ ಇರುತ್ತಾರೋ ಅವರು  ಕರ್ತನಿಂದ  ಬರುವ ಈ ಸಮೃದ್ಧಿಯನ್ನು  ಅನುಭವಿಸಲು  ಸಾಧ್ಯವಿಲ್ಲ. ಗೊಣಗುಟ್ಟುವುದು ಮತ್ತು ದೂರುವುದು ಸಮೃದ್ಧಿ ಹೊಂದಲಿಕ್ಕೆ ಅಡ್ಡಿಯಾಗಿದೆ. ದೈವಿಕ ನಿಬಂಧನೆಯು ಯಾವಾಗಲೂ ದೇವ ಜನರ ಸ್ತುತಿಗೆ ಪ್ರತಿಕ್ರಿಯಿಸುತ್ತದೆ . ಯೇಸು ತಂದೆಯನ್ನು ಸ್ತುತಿಸಿ, ಕೃತಜ್ಞತೆ ಸಲ್ಲಿಸಿದಾಗ ರೊಟ್ಟಿಗಳು ಮತ್ತು ಮೀನುಗಳು  ಆಶೀರ್ವದಿಸಲ್ಪಟ್ಟವು. ಆಗ ಸಾವಿರಾರು ಜನರಿಗೆ ಅದನ್ನು  ಆಹಾರವಾಗಿ  ನೀಡುವಂತ ಮಹತ್ಕಾರ್ಯ ಉಂಟಾಯಿತು.

"ಆಗ ಆತನು ಜನರ ಗುಂಪಿಗೆ - ನೆಲದ ಮೇಲೆ ಕೂತುಕೊಳ್ಳಿರಿ ಎಂದು ಅಪ್ಪಣೆಕೊಟ್ಟು ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅವುಗಳನ್ನು ಮುರಿದು ಹಂಚುವದಕ್ಕೆ ತನ್ನ ಶಿಷ್ಯರ ಕೈಗೆ ಕೊಟ್ಟನು; ಅವರು ಗುಂಪಿನವರಿಗೆ ಹಂಚಿಕೊಟ್ಟರು. ಇದಲ್ಲದೆ ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು; ಅವುಗಳನ್ನು ಆತನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ - ಇವುಗಳನ್ನೂ ಹಂಚಿಕೊಡಿರಿ ಅಂದನು. ಅವರು ಊಟಮಾಡಿ ತೃಪ್ತರಾದರು. ವಿುಕ್ಕ ತುಂಡುಗಳನ್ನು ಕೂಡಿಸಲಾಗಿ ಏಳು ಹೆಡಿಗೆ ಆದವು. (ಮಾರ್ಕ್ 8:6-8)

ಅಂತೆಯೇ, ನಾವು ನಮ್ಮ ಜೀವಿತದಲ್ಲಿ ಸಮೃದ್ಧಿಯನ್ನು ಅಥವಾ ಹೆಚ್ಚಳವನ್ನು ನೋಡಲು ಬಯಸಿದರೆ ನಮ್ಮ ಜೀವನದಲ್ಲಿ, ನಾವು  ಈಗಾಗಲೇ ಹೊಂದಿರುವುದ್ದಕ್ಕಾಗಿ ದೇವರನ್ನು ಸ್ತುತಿಸುವುದನ್ನೂ  ಮತ್ತು ಕೃತಜ್ಞತೆ ಸಲ್ಲಿಸುವುದನ್ನೂ ಕಲಿಯಬೇಕು  

"ನೀನು ಪ್ರಜೆಗಳನ್ನು ವೃದ್ಧಿಗೊಳಿಸಿದ್ದೀ, ಅವರಿಗೆ ಸಂತೋಷವನ್ನು ಹೆಚ್ಚಿಸಿದ್ದೀ; ಸುಗ್ಗಿಕಾಲದಲ್ಲಿ ಜನರು ಹರ್ಷಿಸುವ ಹಾಗೂ ಕೊಳ್ಳೆಯನ್ನು ಹಂಚಿಕೊಳ್ಳುವವರು ಹೆಚ್ಚಳಪಡುವ ಹಾಗೂ ನಿನ್ನ ಮುಂದೆ ಆನಂದಿಸುತ್ತಾರೆ.  (ಯೆಶಾಯ 9:3). 

ಸ್ತುತಿ  ಮತ್ತು ಆನಂದ ಯಾವಾಗಲೂ ಜೊತೆಯಾಗಿ ಹೋಗುತ್ತದೆ. ಆದ್ದರಿಂದ, ಸ್ತುತಿಯು ಒಂದು ಕುಡಗೋಲಿನಂತೆ  ಅದನ್ನು ಕೊಯ್ಲು ಮಾಡಲು ಬಳಸಲಾಗುತ್ತದೆ. ಇಂದಿನಿಂದ, ಈ ಪ್ರಕಟಣೆಯೊಂದಿಗೆ ದೇವರನ್ನು ಸ್ತುತಿಸಿ ಮತ್ತು ಅದ್ಭುತ ಫಲಿತಾಂಶಗಳನ್ನು ಪಡೆಯಿರಿ. 

Bible Reading: Exodus 21-22
ಅರಿಕೆಗಳು
ಕರ್ತನೇ  ನನ್ನ ಕುರುಬನು. ಆತನು ನನ್ನನ್ನು ಮುನ್ನಡೆಸುವವನು. ಆದ್ದರಿಂದ ನನ್ನ ಸಂಪತ್ತು ಹೆಚ್ಚಳವಾಗುವಂತ  ಎಲ್ಲಾ ಮಾರ್ಗಗಳು ಇಂದು ಯೇಸುನಾಮದಲ್ಲಿ ನನಗೆ ತೆರೆಯಲ್ಪಟ್ಟಿದೆ. 
ಕರ್ತನೇ , ನೀನೇ ನನ್ನ ದೇವರು. ಆದ್ದರಿಂದ, ಬೆಳವಣಿಗೆಯನ್ನು ತರುವ ದೈವಿಕ ಪ್ರೇರಿತವಾದ ಸಕಲ ವಿಚಾರಗಳು ಮತ್ತು ಸಮೃದ್ಧಿಯೂ ಈಗ ಯೇಸುನಾಮದಲ್ಲಿ  ನನ್ನ ಬಳಿಗೆ ಬರಲಿ.

Join our WhatsApp Channel


Most Read
● ಸ್ವಸ್ಥ ಬೋಧನೆಯ ಪ್ರಾಮುಖ್ಯತೆ
● ದುಷ್ಟ ಮಾದರಿಗಳಿಂದ ಹೊರಬರುವುದು.
● ಆಳವಾದ ನೀರಿನೊಳಗೆ
● ಸರ್ವಬೀಗದ ಕೈ
● ಮೂರು ಆಯಾಮಗಳು
● ನಿಮ್ಮ ಮನೆಯಲ್ಲಿನ ವಾತಾವರಣವನ್ನು ಬದಲಾಯಿಸುವುದು -1
● ಅವರೊಳಗೆ ಪುಟ್ಟ ಪುಟ್ಟ ರಕ್ಷಕರಿದ್ದಾರೆ.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್