ಅನುದಿನದ ಮನ್ನಾ
2
0
100
ಶುದ್ಧೀಕರಣದ ತೈಲ
Friday, 7th of February 2025
Categories :
ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
“.ಪ್ರಿಯರೇ, ಈಗ ದೇವರ ಮಕ್ಕಳಾಗಿದ್ದೇವೆ; ಮುಂದೆ ನಾವು ಏನಾಗುವೆವೋ ಅದು ಇನ್ನು ಪ್ರತ್ಯಕ್ಷವಾಗಲಿಲ್ಲ. ಕ್ರಿಸ್ತನು ಪ್ರತ್ಯಕ್ಷನಾಕುವಾಗ ನಾವು ಆತನ ಹಾಗಿರುವೆವೆಂದು ಬಲ್ಲೆವು; ಯಾಕಂದರೆ ಆತನಿರುವ ಪ್ರಕಾರವೇ ಆತನನ್ನು ನೋಡುವೆವು. ಆತನ ಮೇಲೆ ಈ ನಿರೀಕ್ಷೆಯನ್ನು ಇಟ್ಟಿರುವ ಪ್ರತಿಯೊಬ್ಬನು ಕ್ರಿಸ್ತನು ಶುದ್ಧನಾಗಿರುವಂತೆಯೇ ತನ್ನನ್ನು ಶುದ್ಧಮಾಡಿಕೊಳ್ಳುತ್ತಾನೆ."(1 ಯೋಹಾನ 3:2-3)
ಎಸ್ತರಳಿಗಾಗಿ ಹನ್ನೆರಡು ತಿಂಗಳು ಪೂರ್ತಿಯಾಗಿ ಇದ್ದ ಅನೇಕ ವಿಧಗಳ ಸಿದ್ಧತೆಗಳು ಮಹತ್ವವುಳ್ಳದ್ದಾಗಿತ್ತು. ಅಲ್ಲಿ ಅಂತಹ ಒಂದು ಶುದ್ಧೀಕರಣಕ್ಕೆ ಒತ್ತು ನೀಡಲಾಗಿತ್ತು. ಏಕೆಂದರೆ ಆ ಕನ್ಯೆಯರನ್ನು ವಿಧ ವಿಧವಾದ ಪ್ರದೇಶಗಳು ಮತ್ತು ಹಿನ್ನೆಲೆಗಳಿಂದ ಆಯ್ಕೆಮಾಡಲಾಗಿತ್ತು ಎಂಬುದನ್ನು ನೀವು ನೆನಪಿಡಿರಿ ಹಾಗಾಗಿಯೇ ಒಂದು ಉದ್ದೇಶಕ್ಕಾಗಿ ಅವರನ್ನು ಶುದ್ಧಕರಿಸುವ ಅವಶ್ಯಕತೆಯಿತ್ತು .
ಸಲಾಡ್ ತಯಾರು ಮಾಡುವುದನ್ನು ನೀವು ನೋಡಿದ್ದೀರಾ? ಸಲಾಡ್ ತಯಾರಿಸುವ ತರಕಾರಿಗಳು ಮತ್ತು ಹಣ್ಣುಗಳನ್ನು ವಿವಿಧ ಅಂಗಡಿಗಳಿಂದ ಆರಿಸಿ ತರಲಾಗುತ್ತದೆ ಆದರೆ ಅವು ಕೊಳಕಾಗಿರಬಹುದಾದರಿಂದ, ಅಷ್ಟೇ ಅಲ್ಲದೆ, ಈ ಪದಾರ್ಥಗಳನ್ನು ಬೇಯಿಸಲು ಸಾಧ್ಯವಿಲ್ಲದೇ ಇರುವುದರಿಂದಲು ನೀವು ಅವುಗಳನ್ನು ನಿಮ್ಮ ಹಾಗೆಯೇ ನಿಮ್ಮ ಅಡುಗೆಮನೆಗೆ ತೆಗೆದುಕೊಂಡು ಹೋಗಿ, ತುಂಡು ಮಾಡಿ ತಿನ್ನಲು ಕೊಡಲು ಸಾಧ್ಯವಿಲ್ಲ. ಆದ್ದರಿಂದಲೇ ಮೊದಲು ಅವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಆಗ ಮಾತ್ರ ನಿಮ್ಮ ಸಲಾಡ್ ಪ್ಲೇಟ್ನೊಂದಿಗೆ ಆಹ್ಲಾದಕರವಾಗಿದ್ದ ಕ್ಷಣವು ನಿಮ್ಮನ್ನು ಸೋಂಕಿಗೊಳಗಾಗಿ ಆಸ್ಪತ್ರೆ ಸೇರುವಂತೆ ಮಾಡುವುದಿಲ್ಲ.
ಎಸ್ತೇರಳ ಪುಸ್ತಕದಲ್ಲಿನ ಪ್ರಕರಣವು ಹೆಚ್ಚು ಕಡಿಮೆ ಹೀಗೆಯೇ ಇತ್ತು . ರಾಜನ ಮುಂದೆ ಕಾಣಿಸಿಕೊಳ್ಳುವ ಮೊದಲು ಕನ್ಯೆಯರು ಶುದ್ಧೀಕರಿಸಲ್ಪಟ್ಟಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಶೇಷ ನಿಬಂಧನೆಯನ್ನು ಮಾಡಲಾಗಿತ್ತು. ಎಸ್ತೇರಳು 2:12 ರಲ್ಲಿ ಸತ್ಯವೇದ ಹೇಳುವುದೇನೆಂದರೆ "ಕನ್ಯೆಯರ ಲೇಪನಕಾಲವು ಪೂರೈಸುವದಕ್ಕೆ ಗಂಧರಸಪ್ರಯೋಗದಲ್ಲಿ ಆರು ತಿಂಗಳೂ ಪರಿಮಳ ದ್ರವ್ಯ ಕಾಂತಿವರ್ಧಕ ದ್ರವ್ಯಗಳ ಪ್ರಯೋಗದಲ್ಲಿ ಆರು ತಿಂಗಳೂ ಅಂತೂ ಹನ್ನೆರಡು ತಿಂಗಳು ಕಳೆದವು. ಈ ಕಾಲ ಮುಗಿದನಂತರ ರಾಜಸ್ತ್ರೀಯರ ವಿಷಯವಾದ ನಿಯಮದ ಮೇರೆಗೆ ತನ್ನನ್ನು ಸಿದ್ಧಪಡಿಸಿಕೊಂಡ ಪ್ರತಿಯೊಬ್ಬ ಕನ್ಯೆಯು ಅರಸನಾದ ಅಹಷ್ವೇರೋಷನ ಬಳಿಗೆ ಹೋಗುವಳು ." ಎಂದು
ಈಗ, KJV ಯಲ್ಲಿನ ಈ ವಾಕ್ಯವನ್ನು ಪರಿಶೀಲಿಸೋಣ, ಸತ್ಯವೇದ ಹೇಳುತ್ತದೆ, “ಈಗ ಅಹಷ್ವೇರೋಷ ರಾಜನ ಬಳಿಗೆ ಹೋಗಲು ಪ್ರತಿ ದಾಸಿಯ ಸರದಿ ಬರಲು , ಅವಳು ಹನ್ನೆರಡು ತಿಂಗಳುಗಳನ್ನು ಕಾಯಬೇಕಿತ್ತು , ಆ ಸ್ತ್ರೀಯರ ಶುದ್ಧಿಕರಣ ವಿಧಾನದ ಪ್ರಕಾರ, (ಅವರ ಶುದ್ಧೀಕರಣದ ದಿನಗಳು,ಗಂಧರಸಪ್ರಯೋಗದಲ್ಲಿ ಆರು ತಿಂಗಳೂ ಪರಿಮಳ ದ್ರವ್ಯ ಕಾಂತಿವರ್ಧಕ ದ್ರವ್ಯಗಳ ಪ್ರಯೋಗದಲ್ಲಿ ಆರು ತಿಂಗಳೂ ನೆರವೇರಿದವು)."
ಎಸ್ತರ್ ತನ್ನ ವಾಸ್ತವ್ಯದ ಮೊದಲ ಆರು ತಿಂಗಳುಗಳನ್ನು ರಾಜನ ಅರಮನೆಯಲ್ಲಿ ಪರಿಮಳ ದ್ರವ್ಯ ಲೇಪನದಲ್ಲಿ ಕಳೆದಳು ಎಂದು ಸತ್ಯವೇದ ಹೇಳುತ್ತದೆ. ಕೆಜೆವಿಯ ವಾಕ್ಯವಿವರಣೆಯಿಂದ ತೈಲವನ್ನು ಬಳಸುವ ಪ್ರಾಥಮಿಕ ಉದ್ದೇಶವು ಶುದ್ಧೀಕರಣವಾಗಿದೆ ಮತ್ತು ಪ್ರತಿಯೊಂದು ಕಲ್ಮಶ ಮತ್ತು ದುರ್ಗಂಧದಿಂದ ದೇಹವನ್ನು ಸ್ವಚ್ಛಗೊಳಿಸಲು ಆರು ತಿಂಗಳ ಕಾಲ ಈ ಎಣ್ಣೆಯನ್ನು ಬಳಸಬೇಕೆಂದು ನೀವು ಊಹಿಸಬಹುದು. ಈ ತೈಲವು ದುಬಾರಿಯಾದದ್ದು ಎಂಬುದು ನನಗೆ ಖಾತ್ರಿಯಿದೆ, ಆದರೂ ಅರಸನ ಸನ್ನಿಧಿಗೆ ಬರುವವರು ತಾವು ಶುದ್ಧರಾಗಿದ್ದಾರೆಂದು ಖಚಿತಪಡಿಸಿಕೊಳ್ಳಲು ಅರಸನು ಆ ವೆಚ್ಚವನ್ನು ಭರಿಸುತ್ತಿದ್ದನು.
ನಿಮ್ಮನ್ನು ಎಷ್ಟು ದಿನಗಳ ಕಾಲ ಶುದ್ಧವಾಗಿಟ್ಟುಕೊಳ್ಳಲು ನೀವು ಸಿದ್ಧರಿದ್ದೀರಿ? ಕೆಲವು ಜನರು ಅವರ ಶುದ್ಧೀಕರಣಕ್ಕಾಗಿ ಪಾಸ್ಟರ್ ಹೇಳುವ ಸೂಚನೆಗಳನ್ನು ಅನುಸರಿಸುವುದನ್ನು ಬಿಡಿ, ಚರ್ಚ್‌ಗೆ ಬರುವುದಕ್ಕೆ ಸುಸ್ತು ಪಡುತ್ತಾರೆ. ಇತರರು ಶುದ್ಧತೆಯ ಜೀವನಶೈಲಿ ನಿಧಾನವಾಗಿ ಆಗುತ್ತದೆ ಎಂದು ಭಾವಿಸಿ ಈಗಾಗಲೇ ಪಾಪದೊಡನೆ ರಾಜಿ ಮಾಡಿಕೊಂಡು ಜೀವಿಸುತ್ತಿದ್ದಾರೆ.ಕೆಲವರು ಹಣವನ್ನು ವೇಗವಾಗಿ ಸಂಪಾದಿಸಲು ಪಾಪಕೃತ್ಯದಲ್ಲಿ ತೊಡಗುತ್ತಾರೆ.
ಎಸ್ತೇರಳು ತಾನು ಶುದ್ಧವಾಗಿರಲು ಆರು ತಿಂಗಳ ಕಾಲ ತೈಲ ಲೇಪನವನ್ನು ಬಳಸಬೇಕಾಗಿತ್ತು. ಆದರೆ ದೇವರ ಮಗುವಾಗಿ, ನಿಮ್ಮ ಶುದ್ಧತೆ ಶಾಶ್ವತವಾಗಿದೆ. ಇಂದಿನ ಅಧ್ಯಯನದಲ್ಲಿ ಅಪೋಸ್ತಲನಾದ ಯೋಹಾನನು ಹೇಳುವುದೇನೆಂದರೆ, ನೀವು ಒಂದು ದಿನ ರಾಜನ ಮುಂದೆ ಕಾಣಿಸಿಕೊಳ್ಳುತ್ತೇವೆ ಎಂಬ ನಿರೀಕ್ಷೆಯಲ್ಲಿದ್ದರೆ ನೀವು ಯಾವಾಗಲೂ ನಿಮ್ಮನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಗಮನಾರ್ಹವಾಗಿ, ಯೇಸುವಿನ ಜೀವನದಲ್ಲಿ ಕನಿಷ್ಠ ಐದು ಬಾರಿ ರಕ್ತಬೋಳ ಎನ್ನುವ ಪದ ಕಾಣಿಸಿಕೊಳ್ಳುತ್ತದೆ.
ಮೊದಲನೆಯದಾಗಿ “ಮತ್ತು ಆ ಮನೆಯೊಳಕ್ಕೆ ಹೋಗಿ ಆ ಕೂಸನ್ನು ಅದರ ತಾಯಿಯಾದ ಮರಿಯಳ ಬಳಿಯಲ್ಲಿ ಕಂಡು ಅದಕ್ಕೆ ಸಾಷ್ಟಾಂಗನಮಸ್ಕಾರ ಮಾಡಿ ತಮ್ಮ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ ಧೂಪ ರಕ್ತಬೋಳಗಳನ್ನು ಕಾಣಿಕೆಯಾಗಿ ಕೊಟ್ಟರು." (ಮತ್ತಾಯ 2:11)
ಎರಡನೆಯದಾಗಿ, ಯೇಸುವಿನ ಮೊದಲ ಅಭಿಷೇಕದಲ್ಲಿ, ಹೆಸರಿಸದ “ದುರಾಚಾರಿಯಾದ ಸ್ತ್ರೀಯು ” ಫರಿಸಾಯನಾದ ಸೀಮೋನನ ಮನೆಯಲ್ಲಿ ತನ್ನ ಕಣ್ಣೀರಿನಿಂದ ಯೇಸುವಿನ ಪಾದಗಳನ್ನು ಅತ್ಯಂತ ದುಬಾರಿಯಾದ ಅಚ್ಚ ಜಟಮಾಂಸಿ ತೈಲವನ್ನು ಹಚ್ಚಿ ತನ್ನ ತಲೆಕೂದಲಿನಿಂದ ಒರಸಲು ಉಪಯೋಗಿಸಿದಳು.
ಮೂರನೆಯದಾಗಿ, ಯೇಸುವಿನ ಎರಡನೇ ಅಭಿಷೇಕದಲ್ಲಿ, ಮಾರ್ಥಾಳ ಸಹೋದರಿ ಮರಿಯಳು , ಬೆಥಾನ್ಯದಲ್ಲಿ ಕುಷ್ಠರೋಗಿಯಾಗಿದ್ದ ಸೀಮೋನನ ಮನೆಯಲ್ಲಿ ಮತ್ತೊಮ್ಮೆ ಯೇಸುವನ್ನು ಅತ್ಯಂತ ದುಬಾರಿಯಾದ ಅಚ್ಚ ಜಟಮಾಂಸಿ ತೈಲದಿಂದ ಅಭಿಷೇಕಿಸಿದಳು, ಆದರೆ ಈ ಬಾರಿ ಅವನ ತಲೆಯನ್ನು ಅಭಿಷೇಕಿಸಿದಳು. ತನ್ನ ಉತ್ತರಕ್ರಿಯೆಗಾಗಿ ಮರಿಯಳು ತನ್ನನ್ನು ಅಭಿಷೇಕಿಸಿದ್ದಾಳೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು.
ನಾಲ್ಕನೆಯದಾಗಿ, ಯೇಸುವಿನ ಮರಣದ ಸಮಯದಲ್ಲಿ, ರೋಮನ್ ಸೈನಿಕರು ರಕ್ತಬೋಳವನ್ನು ಪಾನೀಯದಲ್ಲಿ ಬೆರೆಸಿ ಆತನು ಸಾಯುವ ಮೊದಲು ಶಿಲುಬೆಯ ಮೇಲೆ ಯೇಸುವಿಗೆ ಅರ್ಪಿಸಿದರು.
ಅಂತಿಮವಾಗಿ, ಯೇಸುವಿನ ಸಮಾಧಿಯ ಸಮಯದಲ್ಲಿ, ಅವನ ಮರಣದ ನಂತರ ಕರ್ತನ ದೇಹವನ್ನು ಸುತ್ತಲು ಬಳಸುವ ಸುಗಂಧ ಮತ್ತು ಧೂಪದ್ರವ್ಯಗಳಲ್ಲಿ ರಕ್ತಬೋಳ ಕೂಡ ಒಂದು. ರಕ್ತಬೋಳವು ಸೌಂದರ್ಯವರ್ಧಕ ಮತ್ತು ನೋವು ನಿವಾರಕವಾಗಿ ಎರಡೂ ರೀತಿಯಲ್ಲಿ ಬಳಸಲಾಗಿದೆ.
ಇದು ಶುದ್ದೀಕರಣದ ಸಮಯ. ರಾಜನು ತನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುವವರೆಗೆ ನಮ್ಮನ್ನು ಪವಿತ್ರ ಮತ್ತು ಶುದ್ಧೀಕರಿಸುವ ಕೆಲಸವನ್ನು ಮಾಡುವುದನ್ನು ಮುಂದುವರಿಸುವ ಸಮಯ ಇದು. ಇತರರು ರಾಜಿ ಮಾಡಿಕೊಳ್ಳಬಹುದು ಮತ್ತು ಕಲ್ಮಶದೊಂದಿಗೆ ಆಟವಾಡಬಹುದು, ಆದರೆ ನೀವು ಶುದ್ಧತೆಯ ತೈಲವನ್ನು ಲೆಪಿಸಿಕೊಳ್ಳುವುದರಲ್ಲಿ ಮುಂದುವರೆ ಯುತ್ತಿರಿ, ಆಗ ಆತನು ಕಾಣಿಸಿಕೊಂಡಾಗ ನೀವು ಅರಸನ ದಯೆಯನ್ನು ಆಕರ್ಷಿಸಬಹುದು ಎಂದು ನಿಮ್ಮ ಮನಸ್ಸು ಮಾಡಿ.
Bible Reading: Leviticus 14-15
ಪ್ರಾರ್ಥನೆಗಳು
ತಂದೆಯೇ, ನೀನು ಅನುಗ್ರಹಿಸಿದ ಈ ವಾಕ್ಯದ ವಿವರಣೆಗಾಗಿ ಯೇಸುನಾಮದಲ್ಲಿ ಸ್ತೋತ್ರ. ನೀನು ಬರುವ ವರೆಗೂ ನಾನು ಪರಿಶುದ್ಧವಾಗಿರಲು ನೀನೇ ನನಗೆ ಸಹಾಯ ಮಾಡಬೇಕೆಂದು ಯೇಸುನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ. ನಾನು ನನ್ನ ಹೃದಯವನ್ನು ನಿನಗೆ ಸಮರ್ಪಿಸುತ್ತೇನೆ ಹಾಗಾಗಿ ನೀನೇ ಎಂದಿಗೂ ನಾನು ಲೋಕದೊಡನೆ ಇಜ್ಜೋಡಾಗದೇ ಇರಲು ಸಹಾಯ ಮಾಡಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನೀನು ಕಾಣಿಸಿಕೊಂಡಾಗ ನಾನು ನಿರ್ಮಲನಾಗಿ ಕಾಣುತ್ತೇನೆ ಎಂದು ನಾನು ಯೇಸುನಾಮದಲ್ಲಿ ಘೋಷಿಸುತ್ತೇನೆ. ಆಮೆನ್.
Join our WhatsApp Channel

Most Read
● ದೇವರನ್ನು ಸ್ತುತಿಸಲು ಇರುವ ಸತ್ಯವೇದಕ್ಕನುಸಾರವಾದ ಕಾರಣಗಳು● ದಿನ 07:40 ದಿನಗಳು ಉಪವಾಸ ಹಾಗೂ ಪ್ರಾರ್ಥನೆ.
● ಪುರುಷರು ಯಾಕೆ ಪತನಗೊಳ್ಳುವರು -2
● ಚಾಡಿಮಾತು ಸಂಬಂಧಗಳನ್ನು ಹಾಳುಮಾಡುತ್ತದೆ
● ಕೊಡುವ ಕೃಪೆ - 1
● ಕೃತಜ್ಞತಾ ಸ್ತೋತ್ರ ಸಲ್ಲಿಸುವುದರಲ್ಲಿರುವ ಬಲ
● ಅಲೌಖಿಕತೆಯನ್ನು ಬೆಳೆಸಿಕೊಳ್ಳುವುದು
ಅನಿಸಿಕೆಗಳು