ಅನುದಿನದ ಮನ್ನಾ
3
0
112
ಜೀವನದ ದೊಡ್ಡ ಬಂಡೆಗಳನ್ನು ಗುರುತಿಸುವುದು ಮತ್ತು ಆದ್ಯತೆ ನೀಡುವುದು
Monday, 7th of April 2025
Categories :
ಸೇವೆ (Serving)
ಸಮಯ ನಿರ್ವಹಣಾ ತಜ್ಞರು ಸಾಮಾನ್ಯವಾಗಿ 'ಜಾಡಿಯಲ್ಲಿನ ದೊಡ್ಡ ಕಲ್ಲುಗಳು ' ಎಂಬ ಪರಿಕಲ್ಪನೆಯನ್ನು ಉಪಯೋಗಿಸಿ ವ್ಯಕ್ತಿಗಳು ತಮ್ಮ ಜೀವನದಲ್ಲಿ ಆದ್ಯತೆ ನೀಡಬೇಕಾದ ವಿಚಾರಗಳನ್ನು ಅರಿತುಕೊಳ್ಳಲು ಸಹಾಯ ಮಾಡುತ್ತಾರೆ. ಆ ಶಿಕ್ಷಕರು ತಮ್ಮ ತತ್ವಶಾಸ್ತ್ರದ ತರಗತಿಯಲ್ಲಿ ಈ ಪಾಠ ಕಲಿಸಲು ಗಾಜಿನ ಜಾಡಿಯನ್ನು ಬಳಸುವ ಕಲ್ಪನೆಯನ್ನು ಪ್ರದರ್ಶಿಸುತ್ತಾರೆ. ಗಾಜಿನ ಜಾಡಿಗಳನ್ನು ಮೊದಲು ದೊಡ್ಡ ಕಲ್ಲುಗಳಿಂದ ತುಂಬಿಸುವ ಮೂಲಕ ಪ್ರಾರಂಭಿಸುತ್ತಾ ಜಾಡಿ ತುಂಬಿದೆಯೇ ಎಂದು ತರಗತಿಯನ್ನು ಕೇಳುತ್ತಾರೆ. ವಿದ್ಯಾರ್ಥಿಗಳು ಒಪ್ಪುತ್ತಾರೆಯಾದರೂ, ಅದು ನಿಜವಾಗಿಯೂ ಇನ್ನೂ ಹೇಗೆ ತುಂಬಿಲ್ಲ ಎಂದು ವಿವರಿಸಿ ಹೇಳುತ್ತಾ ಅವರು ಆ ಜಾಡಿಯೊಳಗೆ ಸಣ್ಣ ಸಣ್ಣ ಬೆಣಚುಕಲ್ಲುಗಳನ್ನು ಸೇರಿಸಿ ಅದನ್ನು ಅಲ್ಲಾಡಿಸಿ, ದೊಡ್ಡ ಕಲ್ಲುಗಳ ನಡುವಿನ ಜಾಗವನ್ನು ತುಂಬಲು ಅವಕಾಶ ಮಾಡಿಕೊಡುತ್ತಾ ಅದು ಈಗ ತುಂಬಿದೆಯೇ ಎಂದು ಮತ್ತೆ ಕೇಳುತ್ತಾರೆ. ತರಗತಿಯು ಅದು ಈಗ ತುಂಬಿದೆ ಎಂದು ಒಪ್ಪುತ್ತದೆ, ಆದರೆ ಶಿಕ್ಷಕರು ಅದು ಇನ್ನೂ ತುಂಬಿಲ್ಲ ಎಂದು ಹೇಳಿ ನಂತರ , ಅವರು ಆ ಜಾಡಿಗೆ ಮರಳನ್ನು ಸೇರಿಸುತ್ತಾ ಅದನ್ನು ಅಂಚಿನವರೆಗೆ ತುಂಬುತ್ತಾರೆ.ಈಗ ಅದು ತುಂಬಿದೆಯೇ ಎಂದು ಮತ್ತೆ ಕೇಳುತ್ತಾರೆ. ಆದರೆ ಈಗ ಆ ವಿದ್ಯಾರ್ಥಿಗಳು ಪ್ರತಿಕ್ರಿಯಿಸಲು ಹಿಂಜರಿಯುತ್ತಾರೆ. ಅಂತಿಮವಾಗಿ, ಶಿಕ್ಷಕರು ಜಾಡಿಗೆ ನೀರನ್ನು ಸುರಿದು, ಅದನ್ನು ಸಂಪೂರ್ಣವಾಗಿ ತುಂಬುತ್ತಾರೆ ಮತ್ತು ಅದು ಈಗ ತುಂಬಿದೆಯೇ ಎಂದು ಕೇಳುತ್ತಾರೆ.
ಗಾಜಿನ ಜಾಡಿಯ ವಿವರಣೆಯು ಜೀವನದಲ್ಲಿ ನಾವು ಆದ್ಯತೆ ನೀಡುವ ಸಂಗತಿಗಳ ಕುರಿತು ಒಂದು ಅಮೂಲ್ಯವಾದ ಪಾಠವನ್ನು ನಮಗೆ ಕಲಿಸುತ್ತದೆ. ಮೊದಲು ಸಣ್ಣ ವಸ್ತುಗಳಿಂದ ಜಾಡಿಯನ್ನು ತುಂಬುವುದರಿಂದ, ದೊಡ್ಡ ಕಲ್ಲುಗಳು ಹೊಂದಿಕೊಳ್ಳಲು ಸಾಕಷ್ಟು ಸ್ಥಳಾವಕಾಶವಿರುವುದಿಲ್ಲ. ಆದ್ದರಿಂದ, ಜೀವನದಲ್ಲಿ ದೊಡ್ಡ, ಅಗತ್ಯವಾದ ವಿಷಯಗಳಿಗೆ ಆದ್ಯತೆ ನೀಡುವ ಮಹತ್ವವನ್ನು ಈ ಕಥೆ ಎತ್ತಿ ತೋರಿಸುತ್ತದೆ. ಸಣ್ಣ ವಿಷಯಗಳಿಗೆ ಅವುಗಳ ಸ್ಥಾನವಿದ್ದರೂ, ನಮ್ಮ ಜೀವನವನ್ನು ಅವುಗಳಿಂದ ಅತಿಯಾಗಿ ತುಂಬುವುದರಿಂದ ನಾವು ಸಾಧಿಸಬೇಕಾದ ನಿರ್ಣಾಯಕ ವಿಷಯಗಳಿಗೆ ಯಾವುದೇ ಸ್ಥಳಾವಕಾಶವಿಲ್ಲ. ಆದ್ದರಿಂದ, ನಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಮತ್ತು ನಮ್ಮ ಗುರಿಗಳನ್ನು ಸಾಧಿಸಲು ಸಣ್ಣ ವಿಷಯಗಳನ್ನು ಸಮತೋಲನಗೊಳಿಸುವುದು ಮತ್ತು ಜೀವನದಲ್ಲಿ ದೊಡ್ಡ ವಿಷಯಗಳಿಗೆ ಆದ್ಯತೆ ನೀಡುವುದು ಬಹಳ ಮುಖ್ಯವಾದದ್ದು.
ನಮ್ಮ ಜೀವನದಲ್ಲಿ ಯಾವುದು ಮುಖ್ಯವಾದವುಗಳಾಗಿವೆ ಎಂಬುದಕ್ಕೆ ಆದ್ಯತೆ ನೀಡುವುದು ಮತ್ತು ಅದನ್ನು ನಿರ್ಧರಿಸುವುದೇ ಅತ್ಯಗತ್ಯ. ದೊಡ್ಡ ಕಲ್ಲುಗಳುಗಳೆಂದರೆ , ನಾವು ಹೊಂದಿರಬೇಕಾದ ಅಥವಾ ಮಾಡಬೇಕಾದ ಕೆಲಸಗಳಿಗೆ ಆರಂಭದಿಂದಲೇ ಆದ್ಯತೆ ನೀಡಬೇಕು ಎನ್ನುವುದಾಗಿದೆ. ಅತ್ಯಲ್ಪ ವಿಷಯಗಳಲ್ಲಿ ನಮ್ಮ ಸಮಯವನ್ನು ವ್ಯರ್ಥ ಮಾಡುವುದು ನಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುವುದಿಲ್ಲ.
ಈ ತತ್ವವು ನಮ್ಮ ಆತ್ಮೀಕ ಜೀವನಕ್ಕೂ ಅನ್ವಯಿಸುತ್ತದೆ. ಪ್ರಾರ್ಥನೆ, ದೇವರ ವಾಕ್ಯವನ್ನು ಓದುವುದು, ಆರಾಧನೆ , ಚರ್ಚ್‌ಗೆ ಹಾಜರಾಗುವುದು ಮತ್ತು ಕ್ರಿಸ್ತನಿಗೆ ಸಾಕ್ಷಿಯಾಗುವುದು ಮುಂತಾದ ಕೆಲವು ಮಹತ್ವದ ಆದ್ಯತೆಗಳನ್ನು ನಾವು ಪೂರೈಸಬೇಕಾಗಿದೆ. ಆದಾಗ್ಯೂ, ನಮ್ಮ ಜೀವನವನ್ನು ಕ್ಷುಲ್ಲಕ ವಿಷಯಗಳಿಂದ ತುಂಬಿಸುವಂತದ್ದು ಅಗತ್ಯ ಆತ್ಮೀಕ ಚಟುವಟಿಕೆಗಳಿಗೆ ಅವಕಾಶವನ್ನು ನೀಡುವುದಕ್ಕೆ ಬಿಡುವುದಿಲ್ಲ. ಆದ್ದರಿಂದ, ಸಮತೋಲನವನ್ನು ಸಾಧಿಸುವುದು ಮುಖ್ಯ ಹಾಗೂ ಯಾವುದೇ ಒಳ್ಳೆಯ ವಿಷಯಗಳು ಜೀವನದ ಅತ್ಯುತ್ತಮ ವಿಷಯಗಳಿಂದ ನಮ್ಮನ್ನು ಬೇರೆಡೆಗೆ ಸೆಳೆಯಲು ನಾವು ಅವಕಾಶ ಕೊಡಬಾರದು. ಜೀವನದ ಪ್ರಮುಖ ಅಂಶಗಳಿಗೆ ಆದ್ಯತೆ ನೀಡುವ ಮೂಲಕ, ನಾವು ನಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಬಹುದು ಮತ್ತು ನಮ್ಮ ಜೀವನದ ಉದ್ದೇಶವನ್ನು ಪೂರೈಸಬಹುದು.
2 ತಿಮೊಥೆಯ 4:13 ರಲ್ಲಿ, ಪೌಲನು ಸೆರೆಮನೆಯಲ್ಲಿರುವಾಗ ಸಭಾ ನಾಯಕನಾದ ತಿಮೋತಿಯನು ತನ್ನನ್ನು ಭೇಟಿ ಮಾಡಬೇಕೆಂದು ವಿನಂತಿಸುತ್ತಾನೆ. ತನ್ನ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು, ಪೌಲನು ತನ್ನ ವಿನಂತಿಯನ್ನು ಮೂರು ಅಗತ್ಯ ವಸ್ತುಗಳಿಗೆ ಸಂಕುಚಿತಗೊಳಿಸಬೇಕಾಯಿತು. ಅವನು ಮೊದಲು ತ್ರೋವದಲ್ಲಿ ಕಾರ್ಪಸ್‌ನೊಂದಿಗೆ ಬಿಟ್ಟುಹೋಗಿದ್ದ ತನ್ನ ಮೇಲಂಗಿಯನ್ನು ಕೇಳುತ್ತಾನೆ, ಜೊತೆಗೆ ಅವನ ಪುಸ್ತಕಗಳು, ವಿಶೇಷವಾಗಿ ಚರ್ಮಕಾಗದಗಳನ್ನು ತರಬೇಕೆಂದು ಕೇಳಿಕೊಳ್ಳುತ್ತಾನೆ . ಆ ಪುಸ್ತಕಗಳು ಮತ್ತು ಚರ್ಮಕಾಗದಗಳ ನಿರ್ದಿಷ್ಟ ವಿಷಯ ನಮಗೆ ತಿಳಿದಿಲ್ಲವಾದರೂ, ಪೌಲನ ಜೀವನದ ಆ ಕ್ಷಣದಲ್ಲಿ ಅವು ಅವನಿಗೆ ನಿರ್ಣಾಯಕವಾಗಿದ್ದವು ಎಂದು ನಮಗೆ ತಿಳಿದಿದೆ. ಈ ಮೂರು ವಸ್ತುಗಳು ಅವನ ಸೆರೆವಾಸದ ಸಮಯದಲ್ಲಿ ಅವನ ಜಾಡಿಯಲ್ಲಿ ತುಂಬಿಸ ಬಯಸಿದ ದೊಡ್ಡ ಕಲ್ಲುಗಳಾಗಿದ್ದವು.
ಪೌಲನ ಆದ್ಯತೆಗಳ ಬಗ್ಗೆ ನಾವು ಆಲೋಚಿಸುವಾಗ , ನಮ್ಮ ಜೀವನದಲ್ಲಿ ಇರಬೇಕಾದ ದೊಡ್ಡ ಕಲ್ಲುಗಳನ್ನು ನಾವು ಪರಿಗಣಿಸಬೇಕು. ನಮ್ಮ ಜೀವನದಲ್ಲಿ ನಾವು ಆದ್ಯತೆ ನೀಡಬೇಕಾದ ನಿರ್ಣಾಯಕ ವಿಷಯಗಳು ಯಾವುವು? ಅದು ನಮ್ಮ ಕುಟುಂಬವೊ, ಆರೋಗ್ಯವೊ , ವೃತ್ತಿಯೋ , ಶಿಕ್ಷಣವೊ , ಆತ್ಮೀಕತೆಯೋ ಅಥವಾ ಜೀವನದ ಯಾವುದೇ ಇತರ ಕ್ಷೇತ್ರವೊ ನಮ್ಮ ಜೀವನದಲ್ಲಿ ಗಮನಾರ್ಹ ಪ್ರಾಮುಖ್ಯತೆಯನ್ನು ಹೊಂದಿರಬಹುದು. ನಮ್ಮ ಆ ದೊಡ್ಡ ಕಲ್ಲುಗಳನ್ನು ಗುರುತಿಸಿ ಅವುಗಳನ್ನು ಮೊದಲು ನಮ್ಮ ಜಾಡಿಯಲ್ಲಿ ಇರಿಸುವ ಮೂಲಕ, ನಾವು ನಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಬಹುದು ಮತ್ತು ನಮ್ಮ ಗುರಿಗಳನ್ನು ಸಾಧಿಸಬಹುದು. ನಮ್ಮ ಆದ್ಯತೆಗಳನ್ನು ನಿರ್ಧರಿಸುವುದು ಮತ್ತು ತೃಪ್ತಿಕರ ಜೀವನವನ್ನು ನಡೆಸಲು ಅಗತ್ಯವಾದವುಗಳ ಮೇಲೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವುದು ಅತ್ಯಗತ್ಯ.
Bible Reading: 1 Samuel 17-19
ಪ್ರಾರ್ಥನೆಗಳು
ಪ್ರೀತಿಯ ತಂದೆಯೇ, ನನ್ನ ಜೀವನದಲ್ಲಿ ದೊಡ್ಡ ಕಲ್ಲುಗಳಿಗೆ ಆದ್ಯತೆ ನೀಡಲು ನಾನು ಪ್ರಯತ್ನಿಸುತ್ತಿರುವಾಗ ಇಂದು ನಾನು ನಿನ್ನಿಂದ ತಿಳುವಳಿಕೆ ಮತ್ತು ಮಾರ್ಗದರ್ಶನವನ್ನು ಪಡೆಯಲು ಬರುತ್ತಿದ್ದೇನೆ. ನಿಜವಾಗಿಯೂ ಪ್ರಾಮುಖ್ಯವಾದುದನ್ನು ಗ್ರಹಿಸಲು ಮತ್ತು ಆ ಆದ್ಯತೆಗಳನ್ನು ಪೂರೈಸುವಲ್ಲಿ ನನ್ನ ಸಮಯ ಮತ್ತು ಶಕ್ತಿಯ ಮೇಲೆ ನನ್ನ ದೃಷ್ಟಿಯನ್ನು ಕೇಂದ್ರೀಕರಿಸಲು ನನಗೆ ಯೇಸು ನಾಮದಲ್ಲಿ ಸಹಾಯ ಮಾಡಿ. ಆಮೆನ್.
Join our WhatsApp Channel

Most Read
● ನೀವು ದೇವರನ್ನು ಎದುರಿಸುತ್ತಿದ್ದೀರಾ?● ಓಟವನ್ನು ಗೆಲ್ಲಲು ಇರುವ ದೀರ್ಘ ತಾಳ್ಮೆ ಮತ್ತು ದೀರ್ಘ ಪ್ರಯತ್ನ ಎಂಬ ಎರಡು ಪದಗಳು.
● ಮರೆಯಾದ ಸ್ಥಳವನ್ನು ಆಶ್ರಯಿಸಿಕೊಳ್ಳುವುದು.
● "ಆತನಿಗೆ ಎಲ್ಲವನ್ನೂ ತಿಳಿಸಿರಿ"
● ಆತ್ಮೀಕ ಬಾಗಿಲುಗಳನ್ನು ಮುಚ್ಚುವುದು
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು