ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮಗಾಗಿ ತನ್ನನ್ನು ತಾನೇ ಅರ್ಪಿಸಿಕೊಂಡಂತೆ ಕ್ರೈಸ್ತರಾದ ನಾವು ಸಹ ಇತರರ ಸೇವೆ ಮಾಡಲೆಂದೂ ಮತ್ತು ಪ್ರೀತಿಸಲೆಂದೂ ಕರೆಯಲ್ಪಟ್ಟಿದ್ದೇವೆ, . ಆದಾಗ್ಯೂ, ನಾವು ನಮ್ಮ ಸೇವೆಯ ಮಧ್ಯದಲ್ಲಿ, ನಮಗಾಗಿ ಸಿಗಬೇಕೆನ್ನುವ ಮನ್ನಣೆ ಮತ್ತು ಬಡ್ತಿಯನ್ನು ಎದುರುನೋಡುವ ಬಲೆಗೆ ಬೀಳಬಹುದು. ವಿಶೇಷವಾಗಿ ಯಶಸ್ಸು ಮತ್ತು ಮನ್ನಣೆಯನ್ನು ಹೆಚ್ಚು ಮೌಲ್ಯಯುತವಾಗಿ ಪರಿಗಣಿಸುವ ಈ ಜಗತ್ತಿನಲ್ಲಿ, ಬಿರುದುಗಳು ಮತ್ತು ಪುರಸ್ಕಾರಗಳನ್ನು ಬಯಸುವುದು ಪ್ರಲೋಭನಕಾರಿಯಾಗಬಹುದು. ಆದರೆ ಕೀರ್ತನೆ 115:1
ನಮಗೆ ನೆನಪಿಸುವಂತೆ: "ನಮ್ಮನ್ನಲ್ಲ, ಯೆಹೋವನೇ, ನಮ್ಮನ್ನಲ್ಲ, ನಿನ್ನ ಪ್ರೀತಿಸತ್ಯತೆಗಳ ನಿವಿುತ್ತವಾಗಿ ನಿನ್ನ ಹೆಸರನ್ನೇ ಘನಪಡಿಸು." (ಕೀರ್ತನೆ 115:1)
ಇಲ್ಲಿ ನಮ್ಮನ್ನಲ್ಲ -ನಮ್ಮನ್ನಲ್ಲ ಎಂದು ಎರಡು ಬಾರಿ ಇದನ್ನು ಉಲ್ಲೇಖಿಸಲಾಗಿದೆ. ಈ ಪುನರಾವರ್ತನೆಯ ಉದ್ದೇಶ ಯಾವ ಮಹಿಮೆಯಾದರೂ ಅದು ನಮಗೆ ಸಲ್ಲದೇ, ಕರ್ತನಿಗೆ ಸೇರಿದಂತದ್ದಾಗಿದೆ ಎನ್ನುವ ಪ್ರಬಲ ಎಚ್ಚರಿಕೆ ಗಂಟೆಯಾಗಿ ಕಾರ್ಯನಿರ್ವಹಿಸುತ್ತದೆ.
ಪಾಸ್ಟರ್, ನಾಯಕರು ಮತ್ತು ಕರ್ತನ ಸೇವೆಮಾಡುವ ಯಾರೇ ಇದ್ದರೂ ದಯವಿಟ್ಟು ನಿಮ್ಮೊಂದಿಗೆ ಸ್ವಲ್ಪ ಮಾತನಾಡಲು ನನಗೆ ಅವಕಾಶ ಮಾಡಿಕೊಡಿ. ಸೇವೆಯಲ್ಲಿ, ಅನೇಕ ಬಾರಿ, ನಾವು ಇತರರಿಂದ ಯಾವ ಮೆಚ್ಚುಗೆಯೂ ಪಡೆದಿಲ್ಲ ಅಥವಾ ಗಮನಿಸಲ್ಪಟ್ಟಿಲ್ಲ ಎಂದು ನೀವು ಭಾವಿಸಬಹುದು. ನಮ್ಮ ಪ್ರಯತ್ನಗಳು ಯಾರಿಂದಲೂ ಗಮನಿಸದೆ ಹೋಗುತ್ತಿವೆ ಎಂದು ನಮಗೆ ಅನಿಸಬಹುದು ಅದರಿಂದ ಮನ್ನಣೆ ಪಡೆಯಲು ನಮ್ಮನ್ನು ನಾವೇ ಪ್ರಚಾರ ಮಾಡಿಕೊಳ್ಳುವಂತೆ ಪ್ರಚೋದಿಸಲ್ಪಡಬಹುದು.
ಆದರೆ ನಾವು ಮನುಷ್ಯರ ದೃಷ್ಟಿಗೆ ನಮ್ಮ ಎಲ್ಲಾ ಕಾರ್ಯಗಳು ಕಾಣಿಸಿಕೊಳ್ಳಲೇಬೇಕು ಎಂದು ಎಣಿಸದಂತೆ ಜಾಗರೂಕರಾಗಿರಬೇಕು. ನಮ್ಮ ಅಂತಿಮ ಉದ್ದೇಶ ಮಹಿಮೆ ಪಡಿಸಿಕೊಳ್ಳಬೇಕಾದದ್ದು ನಮ್ಮನ್ನಲ್ಲ, ಬದಲಾಗಿ ದೇವರ ಸೇವೆ ಮಾಡಬೇಕು ಆತನನ್ನೇ ಮಹಿಮೆಪಡಿಸಬೇಕು ಎಂಬುದನ್ನು ನಾವು ನೆನಪಿನಲ್ಲಿಡಬೇಕು.
ಮತ್ತಾಯ 5:16 ರಲ್ಲಿ, ಕರ್ತನಾದ ಯೇಸು ದೇವರಿಗೆ ಮಹಿಮೆ ಸಲ್ಲಿಸುವ ಮಹತ್ವವನ್ನು ಒತ್ತಿಹೇಳುತ್ತಾನೆ. "ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ, ಆಗ ಅವರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವರು." ಇಲ್ಲಿ, ನಾವು ಒಳ್ಳೆಯ ಕ್ರಿಯೆಗಳನ್ನು ಮಾಡುವಾಗ, ಅವುಗಳನ್ನು ನಮ್ಮ ಸ್ವಂತ ಗುರುತಿಸುವಿಕೆಗಾಗಿ ಅಲ್ಲ, ದೇವರ ಮಹಿಮೆಗಾಗಿ ಮಾಡಬೇಕು ಎಂದು ಯೇಸು ನಮಗೆ ಹೇಳುತ್ತಿದ್ದಾನೆ. ನಾವು ಮಾಡುವ ಒಳ್ಳೆಯ ಕಾರ್ಯಗಳನ್ನು ಇತರರು ನೋಡಿ ದೇವರಿಗೆ ಮಹಿಮೆ ಸಲ್ಲಿಸುವ ರೀತಿಯಲ್ಲಿ ನಾವು ನಮ್ಮ ಜೀವನವನ್ನು ನಡೆಸಬೇಕು.
ಜನರು ನೋಡಬೇಕೆಂದು ನಿಮ್ಮ ಕ್ರಿಯೆಗಳನ್ನು ಅವರ ಮುಂದೆ ಮಾಡಬಾರದು ಎಂದು ನಾವು ಎಚ್ಚರವಹಿಸಬೇಕು. ಇಲ್ಲದಿದ್ದರೆ, ಪರಲೋಕದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಯಾವುದೇ ಪ್ರತಿಫಲ ದೊರೆಯುವುದಿಲ್ಲ. (ಮತ್ತಾಯ 6:1)
ಇತರರು ನೋಡಬೇಕೆಂದು ಅವರ ಮುಂದೆ ಸ್ವ -ನೀತಿಯನ್ನು ಅಭ್ಯಾಸ ಮಾಡದಂತೆ ಯೇಸು ತನ್ನ ಶಿಷ್ಯರನ್ನು ಎಚ್ಚರಿಸಿದನು. ಪರಲೋಕದಲ್ಲಿರುವ ಅವರ ತಂದೆಯು ರಹಸ್ಯವಾಗಿ ಏನು ಮಾಡಲ್ಪಡುತ್ತಿದೆ ಎಂಬುದನ್ನು ನೋಡುತ್ತಾನೆ ಮತ್ತು ಅದಕ್ಕೆ ತಕ್ಕಂತೆ ಅವರಿಗೆ ಬಹಿರಂಗವಾಗಿ ಪ್ರತಿಫಲ ನೀಡುತ್ತಾನೆ ಎಂದು ಆತನು ಅವರಿಗೆ ನೆನಪಿಸಿದನು. (ಮತ್ತಾಯ 6:4). ನಮ್ಮ ನಿಜವಾದ ಪ್ರತಿಫಲವು ದೇವರಿಂದ ಬರುತ್ತದೆಯೇ ವಿನಃ, ಇತರರ ಗುರುತಿಸುವಿಕೆಯಿಂದಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು.
ನಮಗಾಗಿ ಬಿರುದುಗಳು ಮತ್ತು ಮನ್ನಣೆಯನ್ನು ಹುಡುಕುವ ಬದಲು, ಕ್ರಿಸ್ತನಂತೆ ನಾವು ದೀನ ಹೃದಯದಿಂದ ಇತರರಿಗೆ ಸೇವೆ ಸಲ್ಲಿಸುವತ್ತ ನಮ್ಮ ಗಮನಹರಿಸಬೇಕು. "ಆತನು ಹೆಚ್ಚಾಗಬೇಕು, ಆದರೆ ನಾನು ಕಡಿಮೆಯಾಗಬೇಕು " ಆತನು ವೃದ್ಧಿಯಾಗಬೇಕು; ನಾನು ಕಡಿಮೆಯಾಗಬೇಕು ಅಂದನು.ಎಂದು ಯೇಸುವಿನ ಬಗ್ಗೆ ಹೇಳಿದ ಯೋಹಾನನ ಮಾದರಿಯನ್ನು ನಾವು ಅನುಸರಿಸಬೇಕು (ಯೋಹಾನ 3:30).
ಯಾವುದೇ ಬಿರುದು ಅಥವಾ ಮನ್ನಣೆ ಇಲ್ಲದೆ ಸೇವೆ ಮಾಡುವುದಾದರೂ, ನಾವು ಮಾಡುವ ಎಲ್ಲದರಲ್ಲೂ ಆತನಿಗೆ ಮಹಿಮೆ ಮತ್ತು ಗೌರವವನ್ನು ಸಲ್ಲಿಸುವಂತದ್ದನ್ನು ನಾವು ಕಲಿಯಬೇಕು. ಸೇವೆಯಲ್ಲಿ ನಮ್ಮ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಳ್ಳೋಣ. ಅದು ನಮ್ಮನ್ನು ನಾವೇ ಪ್ರಚಾರ ಮಾಡಿಕೊಳ್ಳುವುದರ ಕುರಿತಾಗೀರದೇ, ಆತನನ್ನು ಮತ್ತು ಆತನ ರಾಜ್ಯವನ್ನು ಪ್ರಚಾರ ಮಾಡುವುದರ ಕುರಿತು ಎಂಬುದನ್ನು ನೆನಪಿನಲ್ಲಿಡೋಣ.
Bible Reading: 1 Samuel 25-26
ಪ್ರಾರ್ಥನೆಗಳು
ತಂದೆಯೇ, ನಾನು ನಿನ್ನ ಸೇವೆ ಮಾಡಲು ಪ್ರಯತ್ನಿಸುತ್ತಿರುವಾಗ, ನನ್ನ ಹೃದಯವನ್ನು ಪರೀಕ್ಷಿಸಿ ನನ್ನೊಳಗೆ ಅಡಗಿರುವ ಯಾವುದೇ ಸ್ವಾರ್ಥ ಉದ್ದೇಶಗಳಿದ್ದರೂ ಅದನ್ನು ಪ್ರಕಟ ಪಡಿಸಬೇಕೆಂದು ನಾನು ಬೇಡಿಕೊಳ್ಳುತ್ತೇನೆ. ನನ್ನ ಹೃದಯದ ಉದ್ದೇಶವು ನನ್ನನ್ನು ನಾನೇ ಪ್ರಚಾರ ಮಾಡಿಕೊಳ್ಳುವುದರ ಕುರಿತಾಗೀರದೇ, ನಿನ್ನನ್ನು ಮತ್ತು ನಿನ್ನ ರಾಜ್ಯವನ್ನು ಮಾತ್ರ ಪ್ರಚಾರ ಮಾಡುವುದರ ಕುರಿತೇ ಆಗಿರ ಬೇಕು ಎಂಬುದನ್ನು ನೆನಪಿಟ್ಟುಕೊಳ್ಳಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ. ಆಮೆನ್!
Join our WhatsApp Channel

Most Read
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಆತ್ಮಕ್ಕೆ ದೇವರ ಔಷಧಿ
● ಕೃಪೆಯಿಂದಲೇ ರಕ್ಷಣೆ
● ಆರಾಧನೆಗೆ ಬೇಕಾದ ಇಂಧನ
● ಕೃತಜ್ಞತಾ ಸ್ತೋತ್ರ ಸಲ್ಲಿಸುವುದರಲ್ಲಿರುವ ಬಲ
● ನಿಮ್ಮ ರೂಪಾಂತರವು ಶತ್ರುವಿಗೆ ಭಯತರುತ್ತದೆ.
ಅನಿಸಿಕೆಗಳು