ಅನುದಿನದ ಮನ್ನಾ
3
0
107
ಧಾರ್ಮಿಕತೆಯ ಆತ್ಮವನ್ನು ಗುರುತಿಸುವುದು
Thursday, 5th of June 2025
Categories :
ವಂಚನೆ (Deception)
ಧಾರ್ಮಿಕತೆಯ ಆತ್ಮವು ನಮ್ಮ ಜೀವನದಲ್ಲಿ ಪವಿತ್ರಾತ್ಮನ ಶಕ್ತಿಗೆ ಬದಲಾಗಿ ಧಾರ್ಮಿಕ ಚಟುವಟಿಕೆಗಳಾಗಿ ಬದಲಿಸಲು ಪ್ರಯತ್ನಿಸುವ ಒಂದು ದುರಾತ್ಮವಾಗಿದೆ.
ಧಾರ್ಮಿಕ ಚಟುವಟಿಕೆಯು ಕೇವಲ ಮನಸ್ಸನ್ನು ಮಾತ್ರ ತೃಪ್ತಿಪಡಿಸುತ್ತದೆಯೇ ಹೊರತು ವ್ಯಕ್ತಿಯ ಜೀವನದಲ್ಲಿ ಯಾವುದೇ ಸ್ಪಷ್ಟ ಬದಲಾವಣೆಯನ್ನು ತರುವುದಿಲ್ಲ. ಅದು ನಮ್ಮ ಸುತ್ತಲಿನ ಜನರಲ್ಲಿಯೂ ಬದಲಾವಣೆಯನ್ನು ತರುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ನೆನಪಿಡಿ.
ಮತ್ತೊಂದೆಡೆ, ಪವಿತ್ರಾತ್ಮನ ಶಕ್ತಿಯು ನಮ್ಮಲ್ಲಿ ಬದಲಾವಣೆಯನ್ನು ತಂದು ಅದು ನಮ್ಮ ಸುತ್ತಲಿನ ಜನರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಮಾಡುತ್ತದೆ. ಅದು ಅವರಲ್ಲಿಯೂ ಬದಲಾವಣೆಗಳನ್ನು ತರುತ್ತದೆ. ಧಾರ್ಮಿಕತೆಯ ಆತ್ಮದ ಪ್ರಾಥಮಿಕ ಉದ್ದೇಶವೆಂದರೆ ಸಭೆಯಲ್ಲಿ " ಭಕ್ತಿಯ ವೇಷವಿರುತ್ತದೆ ಆದರೆ ದೇವರ ಬಲವನ್ನು ಬೇಡವೆನ್ನುತ್ತಾರೆ ;..." (2 ತಿಮೊಥೆಯ 3:5).
ಈ ಧಾರ್ಮಿಕತೆಯ ಆತ್ಮವು "ಫರಿಸಾಯರು ಮತ್ತು ಸದ್ದುಕಾಯರ ಹುಳಿ" ಯಂತಿದ್ದು (ಮತ್ತಾಯ 16:6), ಅದರ ಬಗ್ಗೆ ಕರ್ತನು ತನ್ನ ಶಿಷ್ಯರಿಗೆ ಎಚ್ಚರದಿಂದಿರಲು ಎಚ್ಚರಿಸಿದನು.
ಈ ಧಾರ್ಮಿಕ ಮನೋಭಾವವು ನಿಮ್ಮ ಮೇಲೆ ಪ್ರಭಾವ ಬೀರುತ್ತಿದೆಯೇ ಎಂದು ನೀವು ತಿಳಿದುಕೊಳ್ಳುವುದು ಹೇಗೆ?:
1.ಬೈಬಲ್‌ನ ಹಲವು ಅಧ್ಯಾಯಗಳನ್ನು ಓದುವುದರಲ್ಲಿ ಬಹಳ ಹೆಮ್ಮೆಪಡುವ ಆದರೆ ಓದಿದ್ದನ್ನು ಎಂದಿಗೂ ಆಚರಣೆಗೆ ತರದ ವ್ಯಕ್ತಿಯಾಗಿರುವುದು. ವಾಸ್ತವವಾಗಿ ಅಂತಹ ವ್ಯಕ್ತಿಯು ಸ್ವಲ್ಪ ಸಮಯದ ನಂತರ ತಾನು ಓದಿದ್ದನ್ನು ಮರೆತೇ ಹೋಗಿರುತ್ತಾನೆ.
2.ಅನೇಕರು ದೇವರ ಅನೇಕ ಸೇವಕರಿಂದ ಸಂದೇಶಗಳನ್ನು ಕೇಳುತ್ತಾರೆ (ಅದರಲ್ಲಿ ಯಾವುದೇ ತಪ್ಪಿಲ್ಲ) ಆದರೆ ಕೇಳಿದ ಯಾವುದಕ್ಕೂ ಯಾವುದೇ ರೀತಿಯ ಕ್ರಮ ಅಥವಾ ಪ್ರತಿಕ್ರಿಯೆ ಅವರಲ್ಲಿ ಇರುವುದಿಲ್ಲ.
3.ದೇವರ ಅನೇಕ ಪುರುಷರು ಮತ್ತು ಮಹಿಳೆಯರ ಆತ್ಮೀಕ ಪುಸ್ತಕಗಳನ್ನು ಓದುವುದು, ನಿಯಮಿತವಾಗಿ ಅನೇಕ ಸಮ್ಮೇಳನಗಳಿಗೆ ಮತ್ತು ಸೇವೆಗಳಿಗೆ ಹಾಜರಾಗುವುದು. ಇದೆಲ್ಲದರಲ್ಲೂ ತಪ್ಪಿಲ್ಲ. ಆದರೆ ಕಲಿತದ್ದನ್ನು ಅನುಷ್ಠಾನಗೊಳಿಸುವುದು ಎಲ್ಲಿದೆ?
4.(ಅತ್ಯುತ್ತಮವಾದದ್ದು) ಧಾರ್ಮಿಕತೆ ಮನೋಭಾವದಿಂದ ಪ್ರಭಾವಿತನಾದ ವ್ಯಕ್ತಿಯು ಎಲ್ಲಾ ಖಂಡನೆಗಳು, ಉಪದೇಶಗಳು ಮತ್ತು ತಿದ್ದುಪಡಿಗಳ ಮಾತುಗಳನ್ನು ಕೇಳಿ "ಅವನು (ಅವಳು) ಅಲ್ಲಿರಬೇಕಿತ್ತು ಮತ್ತು ಅವನಿಗೆ(ಅವಳಿಗೆ) ಹಾಗೇ ಆಗಿರಬೇಕಿತ್ತು ಎಂದು ಬಯಸುತ್ತೇನೆ. ಇದು ಅವನಿಗಾಗಿಯೇ ( ಅವಳಿಗಾಗಿಯೇ) ಇದ್ದ ಸಂದೇಶವಾಗಿದೆ" ಎಂದು ಸಾಮಾನ್ಯವಾಗಿ ಹೇಳುತ್ತಾರೆ.
ಧಾರ್ಮಿಕ ಮನೋಭಾವವು ಬ್ರೆಡ್‌ನಲ್ಲಿರುವ ಈಸ್ಟ್ ನಂತೆ ಕಾರ್ಯನಿರ್ವಹಿಸುತ್ತದೆ. ಇದು ಬ್ರೆಡ್‌ಗೆ ಯಾವುದೇ ರೀತಿ ರುಚಿ ಅಥವಾ ಪೌಷ್ಟಿಕಾಂಶದ ಮೌಲ್ಯವನ್ನು ಸೇರಿಸುವುದಿಲ್ಲ,ಆದರೆ ಅದು ಅದನ್ನು ಉಬ್ಬಿಸುತ್ತದೆ ಅಷ್ಟೇ. ಹಾಗೆಯೇ ಧಾರ್ಮಿಕತೆಯ ಮನೋಭಾವವು ಉಪಉತ್ಪನ್ನವಾಗಿದ್ದು
ಇದು ಚರ್ಚ್‌ನ ಜೀವನ ಮತ್ತು ಶಕ್ತಿಯನ್ನು ಹೆಚ್ಚಿಸುವುದಿಲ್ಲ, ಆದರೆ ಈಡನ್ ಉದ್ಯಾನದಲ್ಲಿ ಮನುಷ್ಯನ ಪತನಕ್ಕೆ ಕಾರಣವಾದ ಮನುಷ್ಯನ ಹೆಮ್ಮೆಯನ್ನು ಮಾತ್ರ ಪೋಷಿಸುತ್ತದೆ.
Bible Reading: Ezra 3-5
ಪ್ರಾರ್ಥನೆಗಳು
ನಾನು ಕರ್ತನ ಮಾರ್ಗಗಳಲ್ಲಿ ಬೆಳೆಯುತ್ತಿದ್ದೇನೆ ಎಂದು ಯೇಸುನಾಮದಲ್ಲಿ ಆಜ್ಞಾಪಿಸುತ್ತೇನೆ. ನನ್ನ ವಿರುದ್ಧ ರೂಪುಗೊಂಡ ಯಾವುದೇ ಆಯುಧವು ಯೇಸುನಾಮದಲ್ಲಿ ಸಫಲವಾಗುವುದಿಲ್ಲ
Join our WhatsApp Channel

Most Read
● ಯಜಮಾನನ ಬಯಕೆ● ಆರಂಭಿಕ ಹಂತದಲ್ಲಿಯೇ ಕರ್ತನನ್ನು ಕೊಂಡಾಡಿರಿ
● ನಾವು ದೇವದೂತರಿಗೆ ಪ್ರಾರ್ಥನೆ ಮಾಡಬಹುದೇ
● ಯೇಸುವನ್ನು ನೋಡುವ ಬಯಕೆ
● ದೇವರು ಹೇಗೆ ಒದಗಿಸುತ್ತಾನೆ #1
● ಅಲೌಖಿಕತೆಯನ್ನು ಬೆಳೆಸಿಕೊಳ್ಳುವುದು
● ದೇವರು ತಾಯಂದಿರನ್ನು ವಿಶೇಷವಾಗಿ ಇರಿಸಿದ್ದಾನೆ
ಅನಿಸಿಕೆಗಳು