ಪರಲೋಕದ ತಂದೆಯೇ,
ನಿಮ್ಮ ಅದ್ಭುತವಾದ ಪ್ರಸನ್ನತೆಗಾಗಿ ಸ್ತೋತ್ರ. ಓದಿದಂತ ಈ ಎಲ್ಲ ನಿನ್ನವಾಕ್ಯಗಳು ನನ್ನಾತ್ಮದಲ್ಲಿ ಆಳವಾಗಿ ನೆಲೆಯೂರಲಿ. ನಾನು ಕೇವಲ ವಾಕ್ಯಗಳನ್ನು ಕೇಳಿ ಮರೆತು ಹೋಗವಂತವರಾಗದೆ ಕೇಳಿದಂತ ನಿನ್ನ ವಾಕ್ಯಗಳನ್ನು ಕೈಗೊಂಡು ನಡೆಯುವವರಂತೆ ಆಗುವಂತೆ ಸಹಾಯ ಮಾಡು ಮತ್ತು ಅಷ್ಟೇ ಅಲ್ಲದೆ,ನಿನ್ನ ವಾಕ್ಯವನ್ನು ಸದಾ ಧ್ಯಾನಿಸುತ್ತಾ ನಿನ್ನ ಸತ್ಯವೆಂಬ ಬಂಡೆಯ ಮೇಲೆ ನನ್ನ ಜೀವಿತವನ್ನು ಕಟ್ಟಿಕೊಳ್ಳಲು ಸಹಾಯ ಮಾಡು.
ನಾನು ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ, ತಕ್ಕಕಾಲದಲ್ಲಿ ಫಲಕೊಡುವ ಮರದಹಾಗಿರಬೇಕು. ಅದರ ಎಲೆಗಳು ಬಾಡುವುದಿಲ್ಲವಲ್ಲ, ಹಾಗೆಯೇ ನಾನು ಕೈಹಾಕಿದ ಕೆಲಸಗಳೆಲ್ಲಾ ಸಫಲವಾಗಲೆಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ. ಆಮೆನ
Join our WhatsApp Channel