1.ಪಾಸ್ಟರ್ ಮೈಕೆಲ್ ರವರು ಇನ್ನಷ್ಟು ವಾಕ್ಯದಲ್ಲಿಯೂ ಪ್ರಾರ್ಥನೆಯಲ್ಲಿಯೂ ಬೆಳೆಯಲಿ ಎಂದು,ಪ್ರವಾದನಾ ವರದಲ್ಲಿಯೂ ಸ್ವಸ್ಥತೆಯನ್ನುಂಟು ಮಾಡುವ ವರದಲ್ಲಿಯೂ ದೆವ್ವಬಿಡಿಸುವ ವರದಲ್ಲಿಯೂ ಅದ್ಭುತ ಕಾರ್ಯಗಳನ್ನುಮಾಡುವದರಲ್ಲಿಯೂ ಇನ್ನಷ್ಟು ಅಭಿವೃದ್ಧಿ ಯಾಗುವಂತೆ ಪ್ರಾರ್ಥಿಸಿರಿ . ಪಾಸ್ಟರ್ ಮತ್ತು ಅವರ ಕುಟುಂಬದವರ ಮೇಲೆ ದೈವೀಕ ಸಂರಕ್ಷಣೆಯೂ ಉಂಟಾಗಲಿ ಅವರ ಆರೋಗ್ಯವು ಉತ್ತಮವಾಗಿರಲೆಂದು ಪ್ರಾರ್ಥಿಸಿರಿ .ಪಾಸ್ಟರ್ ಮೈಕೆಲ್ ರವರು ಸುಗುಣ ಸಂಪನ್ನರಾದ ವಿವೇಕಿಯಾದ ದೇವರ ಮನುಷ್ಯರಾಗಲೆಂದು ಪ್ರಾರ್ಥಿಸಿರಿ
2.ksm ನ ಎಲ್ಲಾ ಪಾಸ್ಟರ್ ಗಳಿಗಾಗಿ, ಗುಂಪಿನ ಮೇಲ್ವಿಚಾರಕರಿಗಾಗಿ, J -12 ನಾಯಕರಿಗಾಗಿ ಮತ್ತು ಆರಾಧನೆಯ ತಂಡದವರಿಗಾಗಿ ವಾಕ್ಯದಲ್ಲಿಯೂ ಪ್ರಾರ್ಥನೆಯಲ್ಲಿಯೂ ಅವರುಗಳು ಬೆಳೆಯಲಿ ಎಂದು ಪ್ರಾರ್ಥಿಸಿರಿ. ಅವರೆಲ್ಲರಿಗೂ ದೈವೀಕವಾದ ಸಂರಕ್ಷಣೆ, ಸ್ವಸ್ಥತೆ ಮತ್ತು ಸಂವೃದ್ಧಿ ಉಂಟಾಗಲೆಂದು ಪ್ರಾರ್ಥಿಸಿರಿ. KSM ನಲ್ಲಿ ಯೇಸುವಿನ ಸೇವಾ ಆಯೋಗವನ್ನು ಸತ್ಯದಿಂದಲೂ ಆತ್ಮದಿಂದಲೂ ನಡೆಸಿಕೊಂಡು ಹೋಗಲು ನಾಯಕರ ನಡುವೆ ಐಕ್ಯತೆಯನ್ನು ತಿಳುವಳಿಕೆಯನ್ನೂ ಕರ್ತನು ಅನುಗ್ರಹಿಸಲಿ ಎಂದು ಪ್ರಾರ್ಥಿಸಿರಿ.
3.ಇನ್ನೂ ಹೆಚ್ಚು ಹೆಚ್ಚಾಗಿ ಆತ್ಮಗಳು KSM ಸಭೆಗೆ ಕೂಡಿ ಬರಲೆಂದು ಪ್ರಾರ್ಥಿಸಿರಿ. KSM ಸಭೆಗೆ ಸೇರುವವರೆಲ್ಲರೂ ದೇವರ ವಾಕ್ಯದಲ್ಲಿಯೂ ಪ್ರಾರ್ಥನೆಯಲ್ಲಿಯೂ ಬೆಳೆದು ಅಭಿವೃದ್ಧಿ ಹೊಂದಲೆಂದು ಪ್ರಾರ್ಥಿಸಿರಿ. ಅವರೂ ಸಹ ಆತ್ಮಗಳನ್ನು ಆಧಾಯ ಮಾಡುವವರಾಗಲೆಂದು ಅವರ ಕುಟುಂಬದವರೂ ರಕ್ಷಣೆ ಹೊಂದಿಕೊಳ್ಳಲೆಂದು ಪ್ರಾರ್ಥಿಸಿರಿ.
4.ಪ್ರಾರ್ಥನಾ ಕೂಟದ ನೇರ ಪ್ರಸಾರಗಳಲ್ಲಿ ಪಾಸ್ಟರ್ ಮೈಕಲ್ ರವರು ಸರಿಯಾದ ವಾಕ್ಯಗಳನ್ನು ಹೇಳುವಂತೆಯೂ ಪಾಸ್ಟರ್ ರವಿಯವರು ಸರಿಯಾಗಿ ಅದನ್ನು ಅನುವಾದ ಮಾಡಲೆಂದು,ಓಂ ಪ್ರಕಾಶ್ ಮತ್ತು ಪ್ರತಿಯೊಬ್ಬರೂ ನೇರ ಪ್ರಸಾರವು ಅಚ್ಚುಕಟ್ಟಾಗಿ ಬರಲು ಸಹಾಯ ಮಾಡಲೆಂದು ಪ್ರಾರ್ಥಿಸಿರಿ.ಮಾಧ್ಯಮದ ಎಲ್ಲಾ ಉಪಕರಣಗಳು ಸರಿಯಾಗಿ ಕಾರ್ಯ ನಿರ್ವಹಿಸಲಿ. ಯಾವುದೇ ಸಾವಾಕಾಶ ಮಾಡದೇ ನೇರ ಪ್ರಸಾರವು ಆನ್ಲೈನ್ ಮಧ್ಯಸ್ಥಿಕೆ ಪ್ರಾರ್ಥನೆಗಳು ಸರಿಯಾದ ಸಮಯಕ್ಕೆ ಆರಂಭವಾಗಿ ಸರಿಯಾದ ಸಮಯಕ್ಕೆ ಮುಗಿಯಲಿ ಎಂದು ಪ್ರಾರ್ಥಿಸಿರಿ.
5.ತಂದೆಯೇ,ನಾವು ನಿನ್ನ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ನೀನು ನಮ್ಮ ವಿಜ್ಞಾಪನೆಯನ್ನು ಕೇಳುತ್ತೀಯ ಎಂಬ ಧೈರ್ಯವು ನಿನ್ನ ವಿಷಯವಾಗಿ ನಮಗುಂಟು.ತಂದೆಯೇ ಯೇಸುನಾಮದಲ್ಲಿ ಈ ಕರೋನ ವೈರಸ್ ಎನ್ನುವ ಮಾರಿಯನ್ನು ಸಂಪೂರ್ಣ ವಾಗಿ ತುಳಿದು ನಾಶ ಮಾಡು "(1ಯೋಹಾನನು 5:14)
6.ತಂದೆಯೇ, ನೀನು ನಮಗೆ ಆಶ್ರಯದುರ್ಗವಾಗಿದ್ದೀಯ ನೀನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನಾಗಿದ್ದೀಯ. ಯಾರ್ಯಾರು ಈ ವೈರಸ್ ನಿಂದಾಗಿ ಬಳಲುತ್ತಿದ್ದಾರೋ ಅವರೆಲ್ಲಾರೂ ಸಂಪೂರ್ಣ ಸ್ವಸ್ಥತೆ ಯನ್ನು ಮತ್ತು ಅವರಿಗಿರುವ ಎಲ್ಲಾ ವ್ಯಾದಿಯ ಲಕ್ಷಣಗಳಿಂದಲೂ ಅವರಿಗೆ ಬಿಡುಗಡೆಯು ಉಂಟಾಗಲೆಂದು ಯೇಸುನಾಮದಲ್ಲಿ ನಾವು ಘೋಷಿಸುತ್ತಿದ್ದೇವೆ. ಕ್ವಾರಂಟೈನ್ ನಲ್ಲಿರುವ ಪ್ರತಿಯೊಬ್ಬರ ಮೇಲೆಯೂ ಯೇಸುನಾಮದಲ್ಲಿ ಜೀವವನ್ನು ಸಮಾಧಾನವನ್ನು ನಾವು ನುಡಿಯುತ್ತೇವೆ. ಕರುಣಾಮಯನಾದ ತಂದೆಯೇ ಯೇಸುನಾಮದಲ್ಲಿ ಅಗತ್ಯದಲ್ಲಿರುವವರಿಗೆ ಅಗತ್ಯವಾದ ವೈದ್ಯಕೀಯ ಸೌಲಭ್ಯಗಳು ಲಭ್ಯವಾಗಲೆಂದು ಬೇಡಿಕೊಳ್ಳುತ್ತೇವೆ.(ಕೀರ್ತನೆಗಳು 46:1)
7.ತಂದೆಯೇ,ಈ ಒಂದು ಬಿಕ್ಕಟ್ಟಿನ ಮಧ್ಯದಲ್ಲಿ ಆಳ್ವಿಕೆ ಮಾಡುತ್ತಿರುವ ನಮ್ಮ ದೇಶದ ಎಲ್ಲಾ ಅಧಿಕಾರಿಗಳಿಗಾಗಿಯೂ ಹಾಗೂ ನಿರ್ಣಯ ಕೈಗೊಳ್ಳುವವರಿಗೋಸ್ಕರ ನಾವು ಪ್ರಾರ್ಥಿಸುತ್ತೇವೆ. ನಿನ್ನ ದೈವೀಕ ಜ್ಞಾನ -ವಿವೇಕವು ಸಂರಕ್ಷಣೆಯು ಅವರಿಗೂ ಅವರ ಕುಟುಂಬದವರಿಗೂ ದೊರಕಲಿ. ಯೇಸುನಾಮದಲ್ಲಿ ಅವರು ಅವರ ದೇಶಕ್ಕೂ ಜಾಗತಿಕ ಸಮುದಾಯಕ್ಕೂ ಒಳಿತಾಗುವಂತ ಪೂರ್ವಭಾವಿ ನಿರ್ಣಯಗಳನ್ನು ತೆಗೆದುಕೊಳ್ಳಲಿ.
8.ತಂದೆಯೇ "... ಪರಾತ್ಪರನಾದ ದೇವರು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅವರ ಮೇಲೆ ತನಗೆ ಬೇಕಾದವರನ್ನು ನೇವಿುಸುತ್ತಾನೆ.. "(ದಾನಿಯೇಲ 5:21)ಎಂದು ನಿನ್ನ ವಾಕ್ಯ ಹೇಳುತ್ತದಲ್ಲಾ. ಹಾಗಾಗಿ ನಮ್ಮ ದೇಶದ ನಾಯಕರ ಹಾಗೂ ಅವರ ಕುಟುಂಬದವರ ರಕ್ಷಣೆ ಗಾಗಿ ನಾವು ಪ್ರಾರ್ಥಿಸುತ್ತೇವೆ. ಅವರು ಯೇಸುಕ್ರಿಸ್ತನನ್ನು ಅವರ ಸ್ವಂತ ರಕ್ಷಕನೂ ಕರ್ತನು ಎಂದು ಅಂಗೀಕರಿಸಿಕೊಳ್ಳಲಿ.
9.KSM ನ ಪ್ರಾರ್ಥನಾ ಕೂಟದ ನೇರಪ್ರಸಾರಕ್ಕೆ ಮತ್ತು ಆನ್ಲೈನ್ ಮಧ್ಯಸ್ಥಿಕೆ ಪ್ರಾರ್ಥನೆಗೆ ಅಡ್ಡಿಪಡಿಸುವ ಎಲ್ಲಾ ಅಂಧಕಾರದ ಶಕ್ತಿಗಳು ಅಡಚಣೆಗಳು ಯೇಸುನಾಮದಲ್ಲಿ ಲಯವಾಗಿ ಹೋಗಲಿ. ಪ್ರತೀ ಪ್ರಾರ್ಥನೆಯ ಕೂಟದ ನೇರಪ್ರಸಾರವನ್ನೂ ಆನ್ಲೈನ್ ಮಧ್ಯಸ್ಥಿಕೆ ಪ್ರಾರ್ಥನೆಯನ್ನು ಆರಂಭದಿಂದ ಅಂತ್ಯದವರೆಗೂ ಯೇಸುವಿನ ಪರಿಶುದ್ಧ ರಕ್ತದಲ್ಲಿ ಮರೆಮಾಚುತ್ತೇವೆ. ಪ್ರಾರ್ಥನಾ ಕೂಟದ ನೇರಪ್ರಸಾರದಲ್ಲಿಯೂ ಆನ್ಲೈನ್ ಮಧ್ಯಸ್ಥಿಕೆ ಪ್ರಾರ್ಥನೆಯಲ್ಲಿಯೂ ಭಾಗವಹಿಸುವ ಪ್ರತಿಯೊಬ್ಬರ ಜೀವಿತದಲ್ಲೂ ಅದ್ಬುತಗಳು ಬಿಡುಗಡೆಯು ಸ್ವಸ್ತತೆಯೂ ಸೂಚಕ ಕಾರ್ಯಗಳು ಉಂಟಾಗುತ್ತವೆ. ಭಾಗವಹಿಸುವ ಪ್ರತಿಯೊಬೊಬ್ಬರ ಮೇಲೂ ದೇವರ ಶಕ್ತಿಯು ಇಳಿದು ಬರಲೆಂದು ಪ್ರಾರ್ಥಿಸಿರಿ.
10.ಕರುಣಾ ಸಾಧನ್ ಮಿನಿಸ್ಟರಿಗೆ ಸಂಬಂಧಪಟ್ಟ ಪ್ರತಿಯೊಬ್ಬರೂ ಸಂಬಳದಲ್ಲಿ ಬಡ್ತಿಯನ್ನೂ, ಕೆಲಸದಲ್ಲಿ ಬಡ್ತಿಯನ್ನೂ ಅದ್ಭುತವಾದ ಉದ್ಯೋಗವಕಾಶವನ್ನೂ ಅಲೌಖಿಕವಾದ ದಯೆಯನ್ನು ಮತ್ತು ಅದ್ಭುತವಾದ ಸಂವೃದ್ದಿಯನ್ನು ಕಾಣಲಿ. ಕರುಣಾ ಸಾಧನ್ ಮಿನಿಸ್ಟರಿ ಗೆ ಸಂಬಂಧ ಪಟ್ಟ ಯಾರಿಗೆ ಆಗಲಿ ಇರುವ ಎಲ್ಲಾ ಬಂಧನಗಳು ಶಾಪಗಳು ಮುರಿಯಲ್ಪಡಲಿ.
11.ಬಹು ಜನರು KSM ನ ಲ್ಲಿ ಆರ್ಥಿಕವಾಗಿ ತಮ್ಮ ಬೀಜವನ್ನು ಬಿತ್ತುತ್ತಾರೆ (ನೇರ ಪ್ರಸಾರದ ಸಮಯದಲ್ಲೂ ಸಹ ). ಅವರು ಅಸ್ವಾಭಾವಿಕವಾದ ದೇವರ ಕೃಪೆಯನ್ನು ಹೊಂದಲಿ. ಅವರು ತಮ್ಮೆಲ್ಲ ಸಾಲಗಳು ತೀರಿಸಲ್ಪಟ್ಟಿದ್ದನ್ನು ಕೋರ್ಟ್ ಕೇಸ್ ಗಳು ಅವರ ಪರವಾಗಿದ್ದನ್ನು ಅವರ ಸ್ವಂತ ಮನೆಯನ್ನು ವಾಹನಗಳನ್ನು ಹೊಂದಿ ಕೊಳ್ಳುವಂತದ್ದನ್ನು ಯೇಸುನಾಮದಲ್ಲಿ ಅನುಭವಿಸಲಿ.
12.ಇನ್ನೂ ಹೆಚ್ಚು ಹೆಚ್ಚಾಗಿ ಜನರು ಪ್ರಾರ್ಥನಾ ಕೂಟದ ನೇರಪ್ರಸಾರದಲ್ಲಿ ಮತ್ತು ಮಧ್ಯಸ್ಥಿಕೆ ಪ್ರಾರ್ಥನೆಯಲ್ಲಿ ಭಾಗಿಯಾಗಲಿ. ಹೀಗೆ ಭಾಗಿಯಾಗಲು ಅವರನ್ನು ಅಡ್ಡಿ ಪಡಿಸುವ ಎಲ್ಲಾ ಆಲಸ್ಯತನವೂ ಎಲ್ಲಾ ಅಡಚಣೆಗಳು ಯೇಸುನಾಮದಲ್ಲಿ ನಿರ್ಮೂಲ ವಾಗಲಿ.
ಪ್ರಾರ್ಥನಾ ಕೂಟದ ನೇರಪ್ರಸಾರದಲ್ಲಿ ಮತ್ತು ಮಧ್ಯಸ್ಥಿಕೆ ಪ್ರಾರ್ಥನೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರ ಜೀವಿತವು ಸಂಪೂರ್ಣವಾಗಿ ಮಾರ್ಪಡಲಿ.
13.ಇನ್ನೂ ಹೆಚ್ಚು ಹೆಚ್ಚು ಜನರು ನೋಹ ಆಪ್ ಗೆ ಸೇರ್ಪಡೆಯಾಗಿ ಅದರಲ್ಲಿರುವ ವಸ್ತುವಿಷಯಗಳಾದ ದೈನಂದಿನ ಮನ್ನಾ, ವಿದ್ಯುನ್ಮಾನ ಪುಸ್ತಕಗಳು ಪ್ರಾರ್ಥನಾ ಮನವಿಗಳು ಇವುಗಳನ್ನೆಲ್ಲಾ ಉಪಯೋಗಿಸಿಕೊಂಡು ಅವರ ಜ್ಞಾನವು ಇನ್ನಷ್ಟು ಪ್ರಕಾಶಿಸಲಿ ಅವರ ಜೀವಿತಗಳು ಮಾರ್ಪಡಲಿ.ಯೂಟ್ಯೂಬ್ ಚಾನೆಲ್ ಗೆ ಹೆಚ್ಚು ಜನರು ಚಂದಾದಾರರಾಗಲಿ.
14.ಯಾರ್ಯಾರು KSM ನ ಸಭೆಯ ಪ್ರಾರ್ಥನಾ ಕೂಟದಲ್ಲಿ ಇಲ್ಲವೇ ಯಾವುದೇ Ksm ಮಾಧ್ಯಮದ ಮೂಲಕ ತಮ್ಮ ಸಾಕ್ಷಿಯನ್ನು ಹೇಳುತ್ತಾರೋ ಅವರ ಸಾಕ್ಷಿಯನ್ನು ನಾನು ಯೇಸುವಿನ ರಕ್ತದ ಮೂಲಕ ಮರೆ ಮಾಚುತ್ತೇನೆ. ಅವರ ಸಾಕ್ಷಿಯು ದಿನದಿಂದ ದಿನಕ್ಕೆ ಬಲವಾಗಿ ಬೆಳೆಯುತ್ತಾ ಹೋಗಲೆಂದು ಪ್ರಾರ್ಥಿಸುತ್ತೇನೆ. ಕರ್ತನೇ ನೀನು
ಅವರ ಜೀವಿತದಲ್ಲಿ ಇನ್ನೂ ಹೆಚ್ಚು ಹೆಚ್ಚಾಗಿ ಅದ್ಬುತ ಗಳನ್ನು ಯೇಸುನಾಮದಲ್ಲಿ ಮಾಡುತ್ತೀಯ ಆಮೆನ್.
15.ಎಲ್ಲಾ KSM ಸಿಬ್ಬಂದಿಗಳಿಗಾಗಿ ಅವರು ದಕ್ಷತೆಯಿಂದಲೂ ಜ್ಞಾನ ವಿವೇಕ ದಿಂದಲೂ ಆರೋಗ್ಯದಿಂದಲೂ ಕರುಣಾ ಸಾಧನ್ ಮಿನಿಸ್ಟರಿ ಯಲ್ಲಿ ಕಾರ್ಯನಿರ್ವಹಿಸುವಂತೆ ಪ್ರಾರ್ಥಿಸಿ.
16.ತಂದೆಯೇ, ನಮ್ಮ ದೇಶದಲ್ಲೂ ಮತ್ತು ಇತರ ದೇಶಗಳೊಂದಿಗೂ ಶಾಂತಿಯು ಉಂಟಾಗಲಿ. ನಾವು ಇಸ್ರಾಯೇಲ್ ದೇಶವನ್ನು ಆಶೀರ್ವದಿಸುತ್ತೇವೆ ಮತ್ತು ನಿನ್ನ ಶಾಂತಿಯು ಅದರಲ್ಲಿ ಹರಿದು ಬರಲೆಂದು ಅಲ್ಲಿ ಯಾವುದೇ ಯುದ್ಧಗಳು ಉಂಟಾಗ ಬಾರದೆಂದು ಪ್ರಾರ್ಥಿಸುತ್ತೇವೆ.
17.ತಂದೆಯೇ, ಮುಂಚಿಗಿಂತಲೂ ಉತ್ತಮವಾದ ಆರ್ಥಿಕತೆಯು ಅದ್ಭುತವಾಗಿ ಯೇಸುನಾಮದಲ್ಲಿ ಪುನರ್ ಸ್ಥಾಪಿಸಲ್ಪಡಲಿ.
18.ತಂದೆಯೇ, ಎಲ್ಲಾ KSM ಸೇವೆಗಳಲ್ಲಿ ಪ್ರತಿ ಭಾನುವಾರ ನಡೆಯುವ KSM ಮಕ್ಕಳ ಸೆವೆಗೆ ಅನೇಕ ಮಕ್ಕಳು ಸೇರಬೇಕೆಂದು ನಾವು ಪ್ರಾರ್ಥಿಸುತ್ತೇವೆ. ಅವರು ನಿನ್ನನ್ನು ನೋಡುವಂತೆ ಅವರ ಕಣ್ಣುಗಳನ್ನು ತೆರೆಯಿರಿ ಮತ್ತು ನಿಮ್ಮನ್ನು ಕರ್ತನು ಮತ್ತು ರಕ್ಷಕ ಎಂದು ತಿಳಿಯಲಿ. ಅವರ ಹೃದಯಗಳು ಮತ್ತು ತುಟಿಗಳು ನಿನ್ನ ವಾಕ್ಯದಿಂದ ತುಂಬಿರಲಿ. ಕರ್ತನು ಈ ಮಕ್ಕಳ ಸೇವೆಯ ಮೂಲಕ ಡೇನಿಯಲ್ ಮತ್ತು ಎಸ್ತರ್ ಅವರನ್ನು ಬೆಳೆಸುತ್ತಾನೆ.
19.KSM ನ ಮಕ್ಕಳ ಸೇವೆಯಲ್ಲಿರುವ ಪ್ರತಿಯೊಬ್ಬ ಶಿಕ್ಷಕರಿಗೂ ನಿಮ್ಮ ಮಾರ್ಗಗಳ ಪ್ರಕಾರ ಮಕ್ಕಳನ್ನು ಮುನ್ನಡೆಸಲು ನಿಮ್ಮ ಜ್ಞಾನವನ್ನು ತುಂಬುವಂತೆ ನಾವು ಪ್ರಾರ್ಥಿಸುತ್ತೇವೆ. ಯೇಸುವಿನ ಹೆಸರಿನಲ್ಲಿ ಈ ಮಕ್ಕಳಿಗೆ ಸರಿಯಾದ ದಿಕ್ಕಿನಲ್ಲಿ ಸೇವೆ ಸಲ್ಲಿಸಲು ಈ ಶಿಕ್ಷಕರು ಅಭಿಷೇಕದಲ್ಲಿ ಬೆಳೆಯಬೇಕೆಂದು ನಾವು ಪ್ರಾರ್ಥಿಸುತ್ತೇವೆ.
Join our WhatsApp Channel