ಪ್ರೀತಿಯುಳ್ಳ ತಂದೆಯೇ, ನೀನೇ ಜೀವ ಸ್ವರೂಪನಾದ ದೇವರಾಗಿರುವುದರಿಂದ ನಾನು ನಿನ್ನನ್ನೇ ಆರಾಧಿಸುವೆನು. ನಿನ್ನ ಪರಿಶುದ್ಧ ವಾಕ್ಯಗಳನ್ನು ಓದಲು ಅಧ್ಯಯನಿಸಲು ಧ್ಯಾನಿಸಲು ನೀನು ಕೊಟ್ಟಿರುವ ಈ ಸೌಭಾಗ್ಯಕ್ಕಾಗಿ ನಿನಗೆ ವಂದನೆ ಸಲ್ಲಿಸುತ್ತೇನೆ. ನಿನ್ನ ಪರಿಶುದ್ಧಾತ್ಮನನ್ನು ನನ್ನ ಮೇಲೆ ಸುರಿಸು ಮತ್ತು ನಿನ್ನ ವಾಕ್ಯಗಳನ್ನು ಅರಿಯುವಂತೆ ಮಾಡು.
ಸರ್ವಶಕ್ತನಾದಂತಹ ಪರಿಶುದ್ದಾತ್ಮ ದೇವರೇ ಸಕಲ ಸತ್ಯಕ್ಕೆ ನನ್ನನ್ನು ನಡೆಸು. ನಿನ್ನ ಸೂಚನೆಗಳನ್ನು ಸ್ಪಷ್ಟವಾಗಿ ಕೇಳುವಂತೆ ನನ್ನ ಕಿವಿಗಳನ್ನು ಯೇಸುನಾಮದಲ್ಲಿ ತೆರೆ. ನಿನ್ನ ವಾಕ್ಯದ ಮೂಲಕ ನನ್ನೊಡನೆ ಮಾತನಾಡು ದೇವಾ.
ನಮ್ಮ ಕರ್ತನಾದ ಯೇಸುಕ್ರಿಸ್ತನ ದೇವರೇ, ಮಹಿಮೆಯ ತಂದೆಯೇ, ಪ್ರಕಟಣೆಯ ಜ್ಞಾನದ ಆತ್ಮವನ್ನು ನನಗೆ ಅನುಗ್ರಹಿಸು ಮತ್ತು ನಿನ್ನ ವಾಕ್ಯದಲ್ಲಿನ ಅದ್ಭುತವಾದ ಸಂಗತಿಯನ್ನು ಕಾಣುವಂತೆ ನನ್ನ ಮನೋ-ನೇತ್ರಗಳನ್ನು ಬೆಳಗಿಸು.
ನಿನ್ನ ವಾಕ್ಯವು ನನ್ನ ಜೀವನದ ಭಾಗವಾಗಿರಲಿ ಮತ್ತು ಕರ್ತನಾದ ಯೇಸು ಕ್ರಿಸ್ತನ ಸಾರುಪ್ಯವಾಗುವಂತೆ ನನ್ನ ಜೀವಿತವು ಮಾರ್ಪಡಲಿ
ನಿನ್ನ ವಾಕ್ಯಗಳು ನೂರರಷ್ಟು ಫಲ ಕೊಡದಂತೆ ತಡೆಯುತ್ತಿರುವಂತಹ ಯಾವುದೇ ಸಂಗತಿಗಳಾಗಲಿ ನನ್ನಲ್ಲಿಯಾಗಲೀ, ನನ್ನ ಕುಟುಂಬದಲ್ಲಿಯೇ ಆಗಲಿ ಅಥವಾ ನನ್ನ ಪರಿಸರದಲ್ಲಾಗಲೀ ಇದ್ದರೆ ಯೇಸು ನಾಮದಲ್ಲಿ ಅದು ನಿರ್ಮೂಲವಾಗಿ ಹೋಗಲಿ.
ನಿನ್ನ ವಾಕ್ಯವು ನನ್ನ ಹೃದಯದಲ್ಲಿ ನೆಲೆಗೊಂಡು ನಾನು ಪಾಪದ ಮೇಲೆಯೂ, ಲೋಕದ ಮೇಲೆಯೂ, ಸೈತಾನನ ಮೇಲೆಯೂ ಜಯ ಹೊಂದುವಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡಲಿ.
ನಿನ್ನ ಚಿತ್ತವೇ ನನ್ನ ಜೀವಿತದಲ್ಲಿ ನೆರವೇರಲಿ. ಕರ್ತನೇ ಮಾತನಾಡು ನಿನ್ನ ಸೇವಕನು/ಸೇವಕಿಯು ಆಗಿರುವ ನಾನು ಸಿದ್ದನಾಗಿದ್ದೇನೆ/ಸಿದ್ದಳಾಗಿದ್ದೇನೆ. ಯೇಸು ನಾಮದಲ್ಲಿ ಈ ಪ್ರಾರ್ಥನೆಯನ್ನು ಪ್ರಾರ್ಥಿಸುತ್ತೇನೆ ತಂದೆಯೇ, ಆಮೆನ್.
ಸಂಬಂದಿತ ವಾಕ್ಯಭಾಗ :
ಜ್ಞಾನೋಕ್ತಿ 1:23, ಯೋಹಾನ 16:13, ಪ್ರಕಟಣೆ 3:22, ಎಫಸ್ಸೆ 1:17-18, ರೋಮ 12:2, ಮತ್ತಾಯ 15:13, ಕೀರ್ತನೆ 119:11, ಲೂಕ 1:38, 1 ಸಮುವೇಲ 3:10
Join our WhatsApp Channel