ದೇವರು ನಿನ್ನನ್ನು ಪ್ರೀತಿಸುತ್ತಾನೆ - ನೀವು ಯಾರೇ ಆಗಿರಲಿ ಅಥವಾ ನಿಮ್ಮ ಹಿಂದಿನದು ಏನೇ ಆಗಿರಲಿ. ದೇವರು ನಿನ್ನನ್ನು ಎಷ್ಟು ಪ್ರೀತಿಸುತ್ತಾನೆಂದರೆ ಆತನು ತನ್ನ ಒಬ್ಬನೇ ಮಗನನ್ನು ನಿಮಗಾಗಿ ಕೊಟ್ಟನು. ಸತ್ಯವೇದ ನಮಗೆ ಹೇಳುತ್ತದೆ "..... ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು." (ಯೋಹನ 3:16NIV)
ಕರ್ತನಾದ ಯೇಸು ನಿನಗಾಗಿ ಮತ್ತು ನನಗಾಗಿ ತನ್ನ ಪ್ರಾಣವನ್ನು ಕೊಟ್ಟನು. ಅವರು ಮೂರು ದಿನಗಳ ನಂತರ ಮತ್ತೆ ಪುನರುತ್ತಾನ ಹೊಂದಿದರು, ಇದರಿಂದ ನಾವು ಆತನೊಂದಿಗೆ ಶಾಶ್ವತವಾಗಿ ನಿತ್ಯಜೀವನದಲ್ಲಿ ಕಳೆಯಬಹುದು ಮತ್ತು ಭೂಮಿಯ ಮೇಲೆ ಹೇರಳವಾದ ಜೀವನವನ್ನು ಅನುಭವಿಸಬಹುದು. ನಿಮ್ಮ ಜೀವನದಲ್ಲಿ ಯೇಸು ಕ್ರಿಸ್ತನನ್ನು ಸ್ವೀಕರಿಸಲು ನೀವು ಬಯಸಿದರೆ, ಕೆಳಗಿನ ಪ್ರಾರ್ಥನೆಯನ್ನು ಜೋರಾಗಿ ಹೇಳಿ ಮತ್ತು ನೀವು ಹೇಳುವ ಪ್ರತಿಯೊಂದು ಪದವನ್ನು ಅರ್ಥೈಸಿಕೊಳ್ಳಿ:
ಪ್ರೀತಿಯ ಕರ್ತನಾದ ಯೇಸು,
ನಿನ್ನನ್ನು ನನ್ನ ಕರ್ತನು, ನನ್ನ ದೇವರು ಮತ್ತು ರಕ್ಷಕ ಎಂದು ಒಪ್ಪಿಕೊಳ್ಳಲು ನಾನು ನಿಮ್ಮ ಮುಂದೆ ತಲೆಬಾಗುತ್ತೇನೆ. ನಾನು ನಿನ್ನ ಮುಂದೆ ನನ್ನ ಹೃದಯವನ್ನು ವಿನಮ್ರಗೊಳಿಸುತ್ತೇನೆ. ನೀನು ದೇವರ ಮಗ ಎಂದು ನಾನು ನಂಬುತ್ತೇನೆ. ನನ್ನ ಪಾಪಗಳಿಗಾಗಿ ನೀನು ಮರಣ ಹೊಂದಿದೆ. ನಿಮ್ಮನ್ನು ಸಮಾಧಿ ಮಾಡಲಾಯಿತು ಮತ್ತು ತಂದೆಯಾದ ದೇವರು ನಿಮ್ಮನ್ನು ಸತ್ತವರೊಳಗಿಂದ ಎಬ್ಬಿಸಿದನು.
ನಿನ್ನನ್ನು ನೋಯಿಸಲು ನಾನು ಮಾಡಿದ ಎಲ್ಲಾ ಸಂಗತಿಗಳಿಗಾಗಿ ನಾನು ವಿಷಾದಿಸುತ್ತೇನೆ. ನನ್ನ ಮೇಲೆ ಕರುಣಿಸು. ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸು. ನನ್ನ ಹೃದಯದಲ್ಲಿ ಬನ್ನಿ ಮತ್ತು ನನ್ನ ಜೀವನದ ಪ್ರತಿಯೊಂದು ಸನ್ನಿವೇಶಕ್ಕೂ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಿ.
ನಿಮ್ಮ ವಾಕ್ಯಕ್ಕೆ (ಸತ್ಯವೇದಕ್ಕೆ)ವಿರುದ್ಧವಾದ ಎಲ್ಲಾ ಚಟುವಟಿಕೆಗಳು ಮತ್ತು ನಂಬಿಕೆಗಳನ್ನು ನಾನು ತ್ಯಜಿಸುತ್ತೇನೆ. ನಾನು ಇಂದಿನಿಂದ ಕರ್ತನಾದ ಯೇಸುವೇ ನಿಮ್ಮನ್ನೇ ಹಿಂಬಾಲಿಸುತ್ತೇನೆ. ನಿನ್ನ ಅಮೂಲ್ಯ ರಕ್ತದಿಂದ ನನ್ನನ್ನು ಶುದ್ಧೀಕರಿಸು. ನನ್ನನ್ನು ತುಂಬಿಸಿ ಮತ್ತು ನಿನ್ನ ಪವಿತ್ರಾತ್ಮನಿಂದ ನನ್ನನ್ನು ಮುದ್ರೆ ಮಾಡಿರಿ.
ನಾನೊಬ್ಬ ನೂತನ ಸೃಷ್ಟಿ. ಪೂರ್ವ ಸ್ಥಿತಿ ಕಳೆದುಹೋಗಿವೆ; ಈಗ ಎಲ್ಲಾ ವಿಷಯಗಳನ್ನು ಯೇಸುವಿನ ಹೆಸರಿನಲ್ಲಿ ನೂತನವಾಗಿ ಮಾರ್ಪಟ್ಟಿವೆ. ಆಮೆನ್
ಗಮನಿಸಿ: ನೀವು ಈ ಪ್ರಾರ್ಥನೆಯನ್ನು ಪ್ರಾಮಾಣಿಕವಾಗಿ ಪ್ರಾರ್ಥಿಸಿದರೆ, ನೀವು ಈಗ ದೇವರ ಕುಟುಂಬದ ಸದಸ್ಯರಾಗಿದ್ದೀರಿ ಮತ್ತು ಪರಲೋಕದಲ್ಲಿ ಪೌರತ್ವವನ್ನು ಪಡೆದಿದ್ದೀರಿ. ಕರ್ತನಾದ ಯೇಸು ಕ್ರಿಸ್ತನು ನಿಮಗೆ ನಿತ್ಯಜೀವವನ್ನು ಕೊಟ್ಟಿದ್ದಾನೆ.
Join our WhatsApp Channel