" ನಾನು ಗರ್ಭದ್ವಾರವನ್ನು ತೆರೆದ ಮೇಲೆ ಪ್ರಸವಿಸಗೊಡದೆ ಹೋದೇನೋ ಎಂದು ಯೆಹೋವನು ಹೇಳುತ್ತಾನೆ. ಪ್ರಸವಮಾಡಿಸುವವನಾದ ನಾನು ಗರ್ಭವನ್ನು ಮುಚ್ಚೇನೋ ಎಂದು ನಿನ್ನ ದೇವರು ನುಡಿಯುತ್ತಾನೆ."(ಯೆಶಾಯ 66:9)
ಗರ್ಭ ಧರಿಸಿರುವಂತೆ ಬಿದ್ದಂತ ಕನಸುಗಳು ಧನಾತ್ಮಕ ಮತ್ತು ಋಣಾತ್ಮಕ ಎರಡೂ ರೀತಿಯ ಅರ್ಥವನ್ನು ಕೊಡುತ್ತದೆ
ಧನಾತ್ಮಕವಾಗಿ ನೋಡುವುದಾದರೆ ಅದರರ್ಥ ಗರ್ಭಧರಿಸಿರುವಂಥದ್ದು ಒಂದು ನೂತನ ಜನ್ಮವನ್ನು, ನಿರೀಕ್ಷಣೆಯನ್ನು, ಸಿದ್ಧತೆಯನ್ನು, ಕಾಯುವಿಕೆಯನ್ನು ಅಥವಾ ದರ್ಶನವು ಸಾಕಾರಗೊಳ್ಳುವ ಪ್ರಕ್ರಿಯೆಯನ್ನು ಸೂಚಿಸುತ್ತದೆ.
ಉದಾಹರಣೆಗೆ ಮದುವೆಯಾದ ಒಬ್ಬ ಸ್ತ್ರೀಯು ತಾನು ಗರ್ಭದರಿಸಿದಂತೆ ಕನಸು ಕಂಡರೆ ನಿಜಜೀವಿತದಲ್ಲಿ ಆಕೆ ಆದಷ್ಟು ಬೇಗ ಒಂದು ಮಗುವಿಗೆ ಜನ್ಮ ನೀಡಬಹುದು ಎಂದು ಅರ್ಥವಿರಬಹುದು.
ಆದಾಗಿಯೂ ಋಣಾತ್ಮಕವಾಗಿ ಹೇಳುವುದಾದರೆ ಶರೀರದ ಇಚ್ಚೆಗಳು ಗರ್ಭ ಧರಿಸಿ ಗರ್ಭದರಿಸುತ್ತವೆ ಅಥವಾ ಪಾಪವು ಬೆಳೆಯುತ್ತಿದೆ ಎಂಬುದನ್ನು ಸೂಚಿಸಬಹುದು. ಉದಾಹರಣೆಗೆ ಒಬ್ಬ ಒಂಟಿಯಾದ ಸ್ತ್ರೀಯು ಗರ್ಭದರಿಸಿದಂತೆ ಕನಸನ್ನು ಕಂಡರೆ ಸರಿಯಾಗಿ ನೋಡುವುದಾದರೆ ಆಕೆಯು ಗರ್ಭವನ್ನು ಧರಿಸಬಾರದು ಆದರೂ ಆಕೆಯ ಗರ್ಭ ಧರಿಸಿದ್ದಾಳೆಂದರೆ ಅದು ಕೆಡಕನ್ನು ಗರ್ಭದರಿಸಿದ್ದಾಳೆ ಎಂದರ್ಥ. ಮತ್ತೆ ಈ ವಿಚಾರವನ್ನು ವಿವೇಚನೆಗೆ ಒಳಪಡಿಸಬೇಕಾದದ್ದು ಅಗತ್ಯವಿದೆ.
"ನನ್ನ ಶತ್ರುವು ಕೆಡುಕನ್ನು ಹೆರಬೇಕೆಂದು ಪ್ರಸವ ವೇದನೆಯಲ್ಲಿದ್ದಾನೆ; ಅವನು ಹಾನಿಯನ್ನು ಹಡೆಯುವೆನೆಂದು ನೆನಸಿಕೊಂಡರೂ ಶೂನ್ಯವನ್ನೇ ಹೆತ್ತನು ನೋಡಿರಿ." (ಕೀರ್ತನೆಗಳು 7:14)
"ಆಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ."(ಯಾಕೋಬನು 1:15)
Join our WhatsApp Channel
Related Items