"ಅವನು(ಅಬ್ರಾಹಾಮನು) ಇವುಗಳನ್ನೆಲ್ಲಾ ತೆಗೆದುಕೊಂಡು ಬಂದು ಪಶುಗಳನ್ನು ಕಡಿದು ಎರಡೆರಡು ಹೋಳುಮಾಡಿ ತುಂಡಿಗೆ ತುಂಡನ್ನು ಎದುರಾಗಿ ಇಟ್ಟನು; ಪಕ್ಷಿಗಳನ್ನು ಮಾತ್ರ ಕಡಿಯಲಿಲ್ಲ."(ಆದಿಕಾಂಡ 15:10)
ನಾವು ಈ ದೇವರವಾಕ್ಯದಲ್ಲಿ ಅಬ್ರಾಹಾಮನು ಎಲ್ಲಾ ಪ್ರಾಣಿಗಳನ್ನು ಹೋಳು ಮಾಡಿ ತುಂಡರಿಸಿ ಇಟ್ಟನು ಆದರೆ ಪಕ್ಷಿಗಳನ್ನು ಹಾಗೆಯೇ ಸಂಪೂರ್ಣವಾಗಿ ಯಜ್ಞವಾಗಿ ಸಮರ್ಪಿಸಿದನು ಎಂಬುದಾಗಿ ನೋಡಬಹುದು.
ಸತ್ಯವೇದದಲ್ಲಿ ಪಕ್ಷಿಗಳು ಯಾವಾಗಲೂ ಧನಾತ್ಮಕವಾಗಿಯೇ ಬಿಂಬಿಸಲ್ಪಡುವುದಿಲ್ಲ.
ಯೋಸೆಫನು ಭಕ್ಷ್ಯಗಾರನಿಗೆ ಅವನ ಕನಸಿನ ಅರ್ಥ ಹೇಳುವಾಗ ಹಕ್ಕಿಯು ತಲೆಯ ಮೇಲಿನ ಬುಟ್ಟಿಯಲ್ಲಿದ್ದ ರೊಟ್ಟಿಯನ್ನು ತಿಂದು ಬಿಟ್ಟವು ಎಂಬುದಕ್ಕೆ ಫರೋಹನು ಆ ಭಕ್ಷ್ಯಗಾರನ ತಲೆಯನ್ನು ತೆಗೆಸುವನು ಹಕ್ಕಿಗಳು ಬಂದು ಅದನ್ನು ತಿನ್ನುವವು ಎಂಬುದಾಗಿ ಅರ್ಥ ಹೇಳಿದನು ಅದು ಹಾಗೆಯೇ ಆಯಿತು. (ಆದಿಕಾಂಡ 40:17-22).
ಹೊಸ ಒಡಂಬಡಿಕೆಯ ಬೀಜ ಬಿತ್ತುವನ ಸಾಮ್ಯದಲ್ಲಿ ಬೀಜ ಬಿತ್ತುತ್ತಲೇ ಆಕಾಶದ ಪಕ್ಷಿಗಳು ಬಂದು ಅವುಗಳನ್ನು ತೆಗೆದುಕೊಂಡು ಹೋಗಿಬಿಟ್ಟವು. ಹಾಗೆಯೇ ಮನುಷ್ಯನ ಹೃದಯದಲ್ಲಿ ಬಿತ್ತಲ್ಪಟ್ಟ ದೇವರ ವಾಕ್ಯಗಳನ್ನು ಸೈತಾನನು ತೆಗೆದುಕೊಂಡು ಹೋಗಿಬಿಡುವನು ಎಂದು ಸೈತಾನನ್ನು ಕುರಿತು ಯೇಸುಸ್ವಾಮಿಯು ಆ ಹಕ್ಕಿಗಳಿಗೆ ಅವನನ್ನು (ಪಕ್ಷಿಗಳು) ಹೋಲಿಸಿ ಇಲ್ಲಿ ಹೇಳಿದ್ದಾನೆ.(ಮಾರ್ಕ್ 4:1-20). ಪಕ್ಷಿಗಳು ಬೀಜಗಳನ್ನು ತಿನ್ನುತ್ತಿರುವಂತಹ ಕನಸು ನಿಮ್ಮ ಹೃದಯದಲ್ಲಿರುವ ದೇವರ ವಾಕ್ಯವನ್ನು ಕದ್ದುಕೊಳ್ಳುವಂತದ್ದನ್ನು ಪ್ರತಿನಿಧಿಸುತ್ತದೆ.
ಸತ್ಯವೇದದಲ್ಲಿ ಪಕ್ಷಿಗಳನ್ನು ದುರಾತ್ಮಗಳಿಗೆ ರೂಪಕವಾಗಿ ಸಹ ಬಳಸಲಾಗಿದೆ. (ಪ್ರಕಟಣೆ 18:2)
ಪಕ್ಷಿಗಳು ನಿಮ್ಮ ಮಾಂಸವನ್ನು ಕುಕ್ಕಿ ತಿನ್ನುವಂತೆ ಕನಸುಕಂಡರೆ ಅದರ ಅರ್ಥ ನೀವು ಶಾರೀರಿಕವಾಗಿ ಅಥವಾ ಶಾರೀರಿಕವಾದ ಶೋಧನೆಯಿಂದ ಅಥವಾ ಯಾವುದೋ ಒಂದು ಭೌತಿಕ ವಿಷಯಗಳಿಂದ ಕಷ್ಟಕ್ಕೊಳಗಾಗುವಿರಿ ಎಂಬುದನ್ನು ಸೂಚಿಸುತ್ತದೆ.
ನಿಮ್ಮ ಕನಸಿನಲ್ಲಿ ನೀವು ಪಕ್ಷಿಯು ನಿಮ್ಮ ಮನೆಯನ್ನು ಕುಕ್ಕಿ ತಿನ್ನುತ್ತಿರುವಂತೆ ಕಂಡರೆ ಅದು ನಿಮ್ಮ ಮನೆಯಲ್ಲಿನ ಯಾವುದೋ ಒಂದು ವಸ್ತು ಅಥವಾ ಒಬ್ಬ ವ್ಯಕ್ತಿಯು ಅವರದ್ದೇ ಆದ ಮಾರ್ಗದಲ್ಲಿ ನಡೆದು ಮುಂದೆ ಅದು ನಿಮಗೆ ಸಮಸ್ಯೆಯನ್ನು ಉಂಟು ಮಾಡಲಿರುವುದು ಎಂಬುದನ್ನು ಸೂಚಿಸುತ್ತದೆ.

Join our WhatsApp Channel
Related Items