ಶಾಲೋಮ್
ಯೋಮ್ ಕಿಪ್ಪೋರ್ ಎಂದರೇನು?
ಯೋಮ್ ಕಿಪ್ಪೋರ್ ಎಂಬುದು ಯಹೂದ್ಯರ ಕ್ಯಾಲೆಂಡರ್ ನಲ್ಲಿಯೇ ಅತ್ಯಂತ ಪವಿತ್ರವಾದ ದಿನವಾಗಿದೆ
ಯಾಜಕಕಾಂಡಾದ 16ನೇ ಅಧ್ಯಾಯದಲ್ಲಿ ಈ ಒಂದು ದಿನದ ಸತ್ಯವೇದ ಆಧಾರಿತ ವಿವರಣೆ ಯನ್ನು ನಾವು ಕಾಣಬಹುದು. ಆ ದಿನದಲ್ಲಿಯೇ ಮಹಾಯಾಜಕನಾದಂತವನು ತನ್ನ ಜನರೆಲ್ಲರ ಪಾಪ ದೋಷ ನಿವಾರಣಾರ್ಥ ವಾಗಿ ಪ್ರಾಯಶ್ಚಿತ್ತ ಯಜ್ಞಾರ್ಪಣೆಯನ್ನು ತೆಗೆದುಕೊಂಡು ಅತೀ ಪರಿಶುದ್ಧ ಸ್ಥಳಕ್ಕೆ ಪ್ರವೇಶಿಸುವ ದಿನವಾಗಿದೆ. ಈ ಒಂದು ದಿನವು ದೇವರಿಂದ ಕ್ಷಮೆಯನ್ನು ಎದುರುನೋಡುವ, ದೇವರೊಟ್ಟಿಗೂ ಮನುಷ್ಯರೊಟ್ಟಿಗೂ ತನ್ನ ಸಂಬಂಧವನ್ನು ಸರಿಪಡಿಸಿಕೊಳ್ಳಲು ತ್ವರೆ ಪಡುವಂತ ಒಬ್ಬನ ಕಾರ್ಯವನ್ನು ಪ್ರತಿಬಿಂಬಿಸುತ್ತದೆ.
ಯೋಮ್ ಕಿಪ್ಪೋರ್ ನ ಪ್ರವಾದನಾ ಮಹತ್ವವೇನು?
ಯೋಮ್ ಕಿಪ್ಪೋರ್ ಎಂಬುದು ಪ್ರವಾದನಾ ಪ್ರಾಮುಖ್ಯತೆ ಯನ್ನು ಹೊಂದಿದ್ದು ಮಹತ್ವವುಳ್ಳ ಐತಿಹಾಸಿಕ ಘಟನೆಗಳನ್ನೂ ಮೀರಿ ಗಮನಹರಿಸುವಂತೆ ಮಾಡುತ್ತದೆ. ತುತ್ತೂರಿಯ ಹಬ್ಬವು (ರೋಶ್ ಹಾಶನ್ನಹ್)ಸಭೆಯ ಎತ್ತಲ್ಪಡಿಕೆಗೂ ಹಾಗೆ ಯೋಮ್ ಕಿಪ್ಪುರ್ ಯೇಸುವಿನ ಎರಡನೇ ಬರೋಣಕ್ಕೂ ಸೂಚನೆಯಾಗಿದೆ ಎಂಬುದು ಬಹುತೇಕ ತತ್ವ ವಿದ್ವಾಂಸರ ಅಭಿಪ್ರಾಯ.
ಈ ಎರಡೂ ಘಟನೆಗಳ ನಡುವೆ ಇರುವ ಹತ್ತು ದಿನದ ಅಂತರವು ಪ್ರಕಟಣೆ ಗ್ರಂಥದಲ್ಲಿ ಬರೆದಿರುವ ಹತ್ತು ದಿನದ ಸಂಕಟಗಳ ಕಾಲಕ್ಕೆ ರೂಪಕವಾಗಿರಬಹುದು.
ಜೆಕರ್ಯ 12:10 ಭವಿಷ್ಯದಲ್ಲಿ ಇಸ್ರಾಯೇಲ್ಯರು ತಾವು ಇರಿದವನನ್ನು ದಿಟ್ಟಿಸಿ ನೋಡುವರು ಇದ್ದ ಒಬ್ಬ ಮಗನನ್ನು ಕಳೆದುಕೊಂಡಂತೆ ಅವನಿಗಾಗಿ ಗೋಳಾಡುವರು ಎಂದು ಉಲ್ಲೇಖಿಸಿದೆ. ಈ ಒಂದು ಅಂಶವು ಯೋಮ್ ಕಿಪ್ಪೋರ್ ಆತ್ಮದಿಂದಾಗಿ ಜನರಲ್ಲಿ ಪರಿವರ್ತನೆ ಮತ್ತು ಪಶ್ಚಾತ್ತಾಪವೆಂಬ ಆತ್ಮನ ಕ್ರಿಯೆಗಳುಂಟಾಗುವುದು ಬಹು ನಿಶ್ಚಯ ಎಂಬುದು ಮನದಟ್ಟಾಗುತ್ತದೆ.
ಪ್ರವಾದನಾ ರೂಪದಲ್ಲಿ ಹೇಳುವುದಾದರೆ ಪ್ರಾಯಶ್ಚಿತ್ತ ಯಜ್ಞ ದಿನ (ಯೋಮ್ ಕಿಪ್ಪೋರ್ ಎಂದು ಕರೆಯಲ್ಪಡುವ ದಿನವು) ಮನುಕುಲವು ಯೇಸುವೇ ನಿಜವಾದ ಮೆಸ್ಸಿಯನು ಎಂದು ಮನದಟ್ಟು ಮಾಡಿಕೊಳ್ಳುವ ಅಂತ್ಯ ಬಿಂದುವಾಗಿ ಕಾರ್ಯ ಮಾಡುತ್ತದೆ.ಆಗ ಈ ಒಂದು ಪ್ರಾಯಶ್ಚಿತ್ತ ಯಜ್ಞವು ವಿಶ್ವ ವ್ಯಾಪಕತ್ವದ ದೃಷ್ಟಿ ಕೋನವನ್ನು ಪಡೆದುಕೊಳ್ಳುತ್ತದೆ.
ಹಾಗಾದರೆ ಇದಕ್ಕಾಗಿ ನಾವು ಏನು ಮಾಡಬೇಕು?
ಈ 2023ನೇ ವರ್ಷದ ಯೋಮ್ ಕಿಪ್ಪುರ್ ಹಬ್ಬವು ಬರುವ ಸೆಪ್ಟೆಂಬರ್ 25ಕ್ಕೆ ಬೀಳುತ್ತದೆ. ವಿಶ್ವಾದೆಲ್ಲೆಡೆಯ ಸಹಸ್ರಾರು ಯಹೂದ್ಯ ಜನರು ಈ ದಿನದಲ್ಲಿ ಉಪವಾಸ ಮತ್ತು ಪ್ರಾರ್ಥನೆ ನಿರತರಾಗಿರುತ್ತಾರೆ. ಅವರಿಗೆ ತಿಳಿದೋ ತಿಳಿಯದೆಯೋ ಪವಿತ್ರಾತ್ಮನನ್ನು ಕುಂದಿಸುವವರಾಗುತ್ತಾರೆ.
- ನಾವು ಯಹೂದ್ಯರ ರಕ್ಷಣೆಗಾಗಿ ಪ್ರಾರ್ಥಿಸುವಾಗ ಕರ್ತನು ನಿಜವಾಗಿಯೂ ಅದನ್ನು ನೆನಪಿಸಿಕೊಂಡು ನಮ್ಮ ಮುಂದಿನ ಪೀಳಿಗೆಯನ್ನು ಆಶೀರ್ವಧಿಸುತ್ತಾನೆ (ಆದಿ 12:1-2).
- ನಾವು ಹೀಗೆ ಪ್ರಾರ್ಥನೆ ಮಾಡುವಾಗ ಯೆಶಾಯ 62:6-7 ರಲ್ಲಿ ಯೆರುಸಲೆಮಿನ ಪೌಳಿ ಗೋಡೆ ಕಾವಲು ಗಾರರಿಗೆ ದೇವರು ಕೊಟ್ಟ ಪ್ರವಾದನಾ ಆಜ್ಞೆಯನ್ನು ನಾವು ನೆರವೇರಿಸುವವರಾಗುತ್ತೇವೆ.
- ನಾವು ಯಹೂದ್ಯರ ರಕ್ಷಣೆಗಾಗಿ ಪ್ರಾರ್ಥಿಸುವಾಗ ನಮ್ಮ ಸಭೆಗಳಲ್ಲಿ ಪಟ್ಟಣಗಳಲ್ಲಿ ದೇಶಗಳಲ್ಲಿ ಮಹತ್ತರ ವಾದ ಬಿಡುಗಡೆಯೂ ಅದ್ಭುತಗಳೂ-ಸೂಚಕ ಕಾರ್ಯಗಳೂ ಉಂಟಾಗುತ್ತವೆ.
Join our WhatsApp Channel
ಅನಿಸಿಕೆಗಳು