ಅಪೋಸ್ತಲರಾದ ವಿಜಯ್ ಪಾರ್ಸೆಕರ್ ರವರಿಂದ ನಡೆಸಲ್ಪಟ್ಟ
ದುಬೈನ ವರ್ಡ್ ರಿವೈವಲ್ ಇಂಟರ್ನ್ಯಾಷನಲ್ ಚರ್ಚ್ ನ ವಾರ್ಷಿಕೋತ್ಸವ ಸಮಾರಂಭಕ್ದಲ್ಲಿ ಸಭೆಯನ್ನು ನಡೆಸಿಕೊಡಲು ಪಾಸ್ಟರ್ ಮೈಕೆಲ್ ರವರನ್ನು ಆಹ್ವಾನಿಸಿದ್ದರು.
ಪಾಸ್ಟರ್ ಮೈಕೆಲ್ ಮತ್ತು ಪಾಸ್ಟರ್ ಅನಿತಾ ಅವರುಗಳಿಗೆ UAE ಯ ಬಾವುಟವನ್ನು ಶಾಲಿನಂತೆ ಹೊದಿಸಿ ಸಮಾರಂಭದಲ್ಲಿ ಸನ್ಮಾನಿಸಲಾಯಿತು.ಆರನೇ ವರ್ಷದ ಮೈಲಿಗಲ್ಲು ನಿಜಕ್ಕೂ ಸಭೆಯ ಸಾಧನೆಗೆ ದ್ಯೋತಕವಾಗಿದೆ. ಮತ್ತು ವರ್ಲ್ಡ್ ರಿವೈವಲ್ ಇಂಟರ್ ನ್ಯಾಷನಲ್ ಚರ್ಚ್ ಈ ಸಂಭ್ರಮವನ್ನು ಆಚರಿಸಲು ಅದರದ್ದೇ ಆದ ಕಾರಣಗಳು ಅದಕ್ಕೆ ಇವೆ. ಇದುವರೆಗೂ ಅವರನ್ನು ಆಶೀರ್ವಧಿಸಿದ ದೇವರು ಇನ್ನೂ ಮುಂದೆಯೂ ಇನ್ನು ಹೆಚ್ಚಾಗಿ ಆಶೀರ್ವಧಿಸಲೆಂದು ನಾವು ಪ್ರಾರ್ಥಿಸುತ್ತೇವೆ. (1ಸಮುವೇಲ 7:12)
ಪಾಸ್ಟರ್ ಮೈಕೆಲ್ ರವರು ಸಭೆಯನ್ನು ವರ್ಲ್ಡ್ ರಿವೈವಲ್ ಇಂಟರ್ ನ್ಯಾಷನಲ್ ಚರ್ಚ್ ನಲ್ಲಿ ನಡೆಸಿಕೊಟ್ಟರು.
ಅನೇಕರು ಪ್ರವಾದನೆಗಳನ್ನು,ಬಿಡುಗಡೆಯ ಆಶೀರ್ವಾದವನ್ನೂ ಹೊಂದಿಕೊಂಡರು.
ಪಾಸ್ಟರ್ ಮೈಕೆಲ್ ರವರು " ಸ್ವಸ್ಥತೆನೀಡುವ ಗಾಯಳು " ಎಂಬ ಶೀರ್ಷಿಕೆಯ ತಮ್ಮ ಶಕ್ತಿಯುತವಾದ ಪ್ರಸಂಗದಿಂದ ನೆರೆದ ಜನಸಮೂಹವನ್ನು ಸೆರೆಹಿಡಿದರು.
ಪ್ರವಾದನೆಗಳು ಬಹಳ ಮುಕ್ತವಾಗಿ ಹೊರಹೊಮ್ಮತ್ತಿದ್ದವು. ಅನೇಕರು ದೇವರ ಮನುಷ್ಯನ ಕರಾರುವಕ್ಕಾದ ಪ್ರವಾದನೆಗಳಿಗೆ ದಿಗ್ಬ್ರಮೆಗೊಂಡರು. ಆ ಪ್ರದೇಶದಲ್ಲಿ ಪವಿತ್ರಾತ್ಮನ ಚಲನೆಯು ಶಕ್ತಿಯುತವಾಗಿತ್ತು.
ಅಸಂಖ್ಯಾತ ವ್ಯಕ್ತಿಗಳು ಪವಿತ್ರಾತ್ಮನಿಂದ ಆದ ದೈವೀಕ ಅನುಭೂತಿಯನ್ನು ಅನುಭವಿಸಿದರು
ಕಟ್ಟುಗಳು ಮುರಿಯಲ್ಪಟ್ಟವು
ಜನರು ಬಿಡುಗಡೆಯನ್ನು ಹೊಂದಿದರು
ಅಪೋಸ್ತಲರಾದ ವಿಜಯ್ ರವರ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಈ ಒಂದು ವಾರ್ಷಿಕೋತ್ಸವ ಸಂಭ್ರಮವು ಅಪೋಸ್ತಲ ವಿಜಯ್ ರವರಿಂದ ರಚಿಸಲ್ಪಟ್ಟ "ಗಾಡ್ ಇನ್ ಮಿ" ಎಂಬ ಮಹತ್ತರವಾದ ಪುಸ್ತಕದ ಅನಾವರಣಕ್ಕೂ ಸಾಕ್ಷಿಯಾಯಿತು.
ಈ ಪುಸ್ತಕವು ಅಪೋಸ್ತಲ ವಿಜಯ್ ರವರ ಆತ್ಮೀಕ ಪಯಣ ಮತ್ತು ನಮ್ಮೊಳಗಿರುವ ದೇವರ ಪ್ರಸನ್ನತೆ ಎಂಬ ವಿಷಯ ಕುರಿತು ಅವರಿಗಾದ ಪ್ರಕಟಣೆಗಳ ಹೂರಣವನ್ನು ಒಳಗೊಂಡಿದೆ.
ಪಾಸ್ಟರ್ ಮೈಕೆಲ್ ಹಾಗೂ ಅಪೋಸ್ತಲ ವಿಜಯ್ ರವರುಗಳು "ಗಾಡ್ ಇನ್ ಮಿ" ಪುಸ್ತಕವನ್ನು ಬಿಡುಗಡೆ ಮಾಡಿದರು.
ಈ ಪುಸ್ತಕದ ಬಿಡುಗಡೆಯ ಸಮಯದಲ್ಲಿ ಪಾಸ್ಟರ್ ಮೈಕೆಲ್ ರವರು ಅಪೋಸ್ತಲ ವಿಜಯ್ ರವರನ್ನು ಕುರಿತು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಹಾಗೆ ಪುಸ್ತಕ ಬರೆಯುವುದರ ಹಿಂದಿರುವ ಅವರ ಪರಿಶ್ರಮ ಹಾಗೂ ಆ ಪುಸ್ತಕ ಒಳಗೊಂಡ ವಸ್ತು ವಿಷಯಕುರಿತು ಪ್ರಶಂಶೆ ವ್ಯಕ್ತಪಡಿಸಿದರು.
ಪಾಸ್ಟರ್ ಮೈಕೆಲ್ ರವರು "ಗಾಡ್ ಇನ್ ಮಿ" ಪುಸ್ತಕದೊಳಗಿಂದ ಮುಖ್ಯಾಂಶಗಳನ್ನು ಓದಿದರು.
ಅದೊಂದು ಆನಂದಭರಿತವಾದ, ಆತ್ಮಜಾಗೃತಿ ಮೂಡಿಸುವ ಮತ್ತು ಸಹೋದರ ಸಾಮರಸ್ಯ ಮೂಡಿಸುವ ಕಾರ್ಯಕ್ರಮವಾಗಿತ್ತು. ಅದು ಕೇವಲ ಚರ್ಚಿನ ಮೈಲಿಗಲ್ಲನ್ನು ಸಂಭ್ರಮಿಸುವ ಕಾರ್ಯಕ್ರಮವಾಗಿರಲಿಲ್ಲ ಆದರೆ ಅದು ಆ ಸಭೆಯ ಸುಸ್ಥಿರತೆ ಮತ್ತು ಆ ಸಭೆಯವರ ಕದಲಿಸಲಾರದ ನಂಬಿಕೆಗೆ ಸಾಕ್ಷಿಭೂತವೂ ಆಗಿತ್ತು.
ಪಾಸ್ಟರ್ ಮೈಕೆಲ್ ಮತ್ತು ಅವರ ಕುಟುಂಬವು ಅಪೋಸ್ತಲ ವಿಜಯ್ ಅವರ ಕುಟುಂಬದ ಜೊತೆಗಿತ್ತು.
ಈ ಒಂದು ಸುವಾರ್ತಾ ಕೂಟದ ಯಶಸ್ಸಿಗಾಗಿ ಉಪವಾಸ ಮತ್ತು ಪ್ರಾರ್ಥನೆ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
ನಿಮಗಾಗಿ ಅತ್ಯಧಿಕ ಬಹುಮಾನ ಇಡಲ್ಪಟ್ಟಿದೆ. (ರೋಮಾ 4:12).
ಈ ರೀತಿಯ ಸುವಾರ್ತೆಯ ಕೂಟಗಳು ಯಶಸ್ವಿ ಯಾಗಲು ನಿಮ್ಮ ನಿಸ್ವಾರ್ಥ ಪರಿಶ್ರಮಗಳೇ ಮುಖ್ಯ ಪಾತ್ರ ವಹಿಸುತ್ತದೆ ಎಂಬುದು ನಿಸ್ಸಂದೇಹ.
Join our WhatsApp Channel
ಅನಿಸಿಕೆಗಳು