Daily Manna
1
0
66
ಪವಿತ್ರಾತ್ಮನೊಂದಿಗೆ ಸಂವೇದನಶೀಲರಾಗಿ ವರ್ತಿಸುವುದು - 2
Thursday, 24th of July 2025
Categories :
Sensitivity to the Holy Spirit
ಪವಿತ್ರಾತ್ಮನೊಂದಿಗೆ ಸಂವೇದನಾ ಶೀಲತೆಯನ್ನು ಬೆಳೆಸಿಕೊಳ್ಳಲು ನಾವು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುವಾಗ, ಇತರರು ಒಪ್ಪಲು ಸಾಧ್ಯವಾಗದಂತ ವಿಷಯಗಳನ್ನು ನಾವು ಆತ್ಮನ ಕ್ಷೇತ್ರದಲ್ಲಿ ಕೇಳುತ್ತೇವೆ ಮತ್ತು ನೋಡುತ್ತೇವೆ.
ಒಳ್ಳೆಯ ಅವಕಾಶಗಳ ಬದಲಿಗೆ, ನಮಗೆ "ದೇವರ ಅವಕಾಶಗಳು" ಬರುತ್ತವೆ, ಅವುಗಳು ಕಾರ್ಯನಿರ್ವಹಿಸಿದಾಗ, ನಮ್ಮ ಜೀವನವು ಹೇರಳವಾದ ಫಲವನ್ನು ನೀಡುತ್ತದೆ, ಇದರಿಂದಾಗಿ ನಾವು ಆತನ ಪ್ರಬುದ್ಧ ಶಿಷ್ಯರು ಎಂದು ಪ್ರದರ್ಶಿಸಲ್ಪಡುತ್ತೇವೆ (ಯೋಹಾನ 15:8 TPT)
ಪವಿತ್ರಾತ್ಮನೊಂದಿಗೆ ಸಂವೇದನಾ ಶೀಲತೆಯನ್ನು ಬೆಳೆಸಿಕೊಳ್ಳಲು ಕೆಲವು ಮಹತ್ವದ ಕೀಲಿಗಳು ಇಲ್ಲಿವೆ
1. ಆತ್ಮನಲ್ಲಿ ಪ್ರಾರ್ಥಿಸಿ.
1 ಕೊರಿಂಥ 14:14 (ವರ್ಧಿತ): ನಾನು ಅನ್ಯ ಭಾಷೆಯಲ್ಲಿ ಪ್ರಾರ್ಥಿಸಿದರೆ, ನನ್ನೊಳಗಿನ ಪವಿತ್ರಾತ್ಮನ ಮೂಲಕ ನನ್ನ ಆತ್ಮವು ಪ್ರಾರ್ಥಿಸುತ್ತದೆ, ಹೊರತು ನನ್ನ ಬುದ್ದಿ ಅನುತ್ಪಾದಕವಾಗಿದೆ; ಅದು ಫಲವನ್ನು ನೀಡುವುದಿಲ್ಲ ಮತ್ತು ಯಾರಿಗೂ ಸಹಾಯ ಮಾಡುವುದಿಲ್ಲ. ನೀವು ನೋಡಿ, ಪವಿತ್ರಾತ್ಮನು ನನ್ನ ಆತ್ಮದಲ್ಲಿ ವಾಸಿಸುತ್ತಾನೆ. ನನ್ನ ಮಾನವ ವ್ಯಕ್ತಿಯೊಂದಿಗೆ ಆತನ ಮೊದಲ ಸಂಪರ್ಕವು ನನ್ನ ಬುದ್ದಿಯೊಂದಿಗೆ ಅಲ್ಲ ಆದರೆ ನನ್ನ ಆತ್ಮದೊಂದಿಗೆ. ನಿಯಮಿತವಾಗಿ ಅನ್ಯಭಾಷೆಗಳಲ್ಲಿ ಪ್ರಾರ್ಥಿಸುವುದು ನನ್ನ ಆತ್ಮೀಕ ಮನುಷ್ಯನು ಸಂವೇದನಶೀಲತೆ ನನಗೆ ಸಹಾಯ ಮಾಡುತ್ತದೆ. ಮತ್ತು ಪವಿತ್ರಾತ್ಮನು ನನ್ನ ಆತ್ಮದಲ್ಲಿ ಇರುವುದರಿಂದ, ನಾನು ಅನ್ಯಭಾಷೆಗಳಲ್ಲಿ ಪ್ರಾರ್ಥಿಸುವ ಮೂಲಕ ಆತನಿಗೆ ಸಂವೇದನಾಶೀಲನಾಗುತ್ತೇನೆ.
2. ದೇವರ ಹೃದಯದೊಂದಿಗೆ ಸಂವೇದನಶೀಲರಾಗಿ ವರ್ತಿಸಲು ಸಹಾಯ ಮಾಡಬೇಕೆಂದು ಬೇಡಿಕೊಳ್ಳಿರಿ.
“ಬೇಡಿಕೊಳ್ಳಿ, ಅದು ನಿಮಗೆ ಕೊಡಲ್ಪಡುವುದು; ಹುಡುಕಿರಿ, ಅದು ನಿಮಗೆ ಸಿಗುವುದು; ತಟ್ಟಿರಿ, ಅದು ನಿಮಗೆ ತೆರೆಯಲ್ಪಡುವುದು. ಯಾಕಂದರೆ ಬೇಡುವ ಪ್ರತಿಯೊಬ್ಬನೂ ಹೊಂದಿಕೊಳ್ಳುತ್ತಾನೆ, ಮತ್ತು ಹುಡುಕುವವನಿಗೆ ಸಿಕ್ಕುತ್ತದೆ, ಮತ್ತು ತಟ್ಟುವವನಿಗೆ ತೆರೆಯಲ್ಪಡುತ್ತದೆ. (ಮತ್ತಾಯ 7:7-8)
ಬೇಡುವ ಮೂಲಕ ನೀವು ಅನೇಕ ವಿಷಯಗಳನ್ನು ಪಡೆಯಬಹುದು. ಹಲವು ಬಾರಿ, ನಾವು ಬೇಡದೇ ಹೋದ ಕಾರಣ ನಮಗೆ ಏನೂ ಸಿಗುವುದಿಲ್ಲ (ಯಾಕೋಬ 4:3).
3. ಆತನೊಂದಿಗೆ ಸಮಯ ಕಳೆಯಿರಿ
ಯಾವುದೇ ಸಂಬಂಧವು ಸಮಯ ಕೊಡುವುದನ್ನು ನಿರೀಕ್ಷಿಸುತ್ತದೆ. ದೇವರೊಂದಿಗಿನ ಅನ್ಯೋನ್ಯತೆಯು ಆದ್ಯತೆಯ ವಿಷಯವಾಗಿದೆ. ಜೀವನದಲ್ಲಿ ನೀವು ಯಾವುದಕ್ಕೆ ಹೆಚ್ಚು ಬೆಲೆ ಕೊಡುತ್ತೀರಿ? ನೀವು ನಿಮ್ಮ ದಿನವನ್ನು ಮರುಕ್ರಮಗೊಳಿಸಬೇಕಾಗಬಹುದು, ಕೆಲವು ಸಮಯ ನಿರ್ವಹಣಾ ಕೌಶಲ್ಯಗಳನ್ನು ಕಲಿಯಬೇಕಾಗಬಹುದು, ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸ್ವಲ್ಪ ಸಮಯದವರೆಗೆ ಆಫ್ ಮಾಡಬೇಕಾಗಬಹುದು ಮತ್ತು ಒತ್ತಾಯಪೂರ್ವಕವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಬೇಕಾಗಬಹುದು.
ನಿಮ್ಮ ಸಮಯಕ್ಕೆ ನೀವು ಜವಾಬ್ದಾರರಾಗಿರುತ್ತೀರಿ ಮತ್ತು ಪ್ರತಿಯೊಂದು ಬದಲಾವಣೆಯು ಗುಣಮಟ್ಟದ ನಿರ್ಧಾರದಿಂದ ಪ್ರಾರಂಭವಾಗುತ್ತದೆ.
4. ದೇವರ ಉಪಸ್ಥಿತಿಯನ್ನು ಅಭ್ಯಾಸ ಮಾಡಿ
ಆತನ ಉಪಸ್ಥಿತಿಯ ಅರಿವನ್ನು ಬೆಳೆಸಿಕೊಳ್ಳಿ. ದಿನವಿಡೀ ಆತನೊಂದಿಗೆ ಮಾತನಾಡಿ. ಮಾರ್ಗದರ್ಶನ, ಅನುಗ್ರಹ ಮತ್ತು ನಿಮಗೆ ಬೇಕಾದುದನ್ನು ಆತನಿಂದ ಕೇಳಿಕೊಳ್ಳಿ. ಆತನಿಗೆ ಧನ್ಯವಾದ ಹೇಳಿ, ಆತನನ್ನು ಸ್ತುತಿಸಿ, ನಿಮ್ಮ ಹೃದಯದಲ್ಲಿ ಆತನನ್ನು ಮಹಿಮೆಪಡಿಸಿ. ನೀವು ಏನನ್ನಾದರೂ ತಿನ್ನುವ ಅಥವಾ ಕುಡಿಯುವ ಮೊದಲು ಪ್ರಾರ್ಥಿಸಿ. ನೀವು ವಾಹನ ಚಲಾಯಿಸುವ ಮೊದಲು ಪ್ರಾರ್ಥಿಸಿ ಇತ್ಯಾದಿ. ಇದು ನಿಮ್ಮ ಆಲೋಚನೆಗಳು ಮತ್ತು ನಿಮ್ಮ ಜೀವನವನ್ನು ರೂಪಿಸುತ್ತದೆ.
5. ಪವಿತ್ರತೆಯನ್ನು ಅನುಸರಿಸಿ
ಪವಿತ್ರವಾದ ಆತ್ಮವುಳ್ಳವನಾಗಿದ್ದು ಸತ್ತಮೇಲೆ ಜೀವಿತನಾಗಿ ಎದ್ದು ಬಂದ ಮಹತ್ಕಾರ್ಯದಿಂದ ದೇವಕುಮಾರನೆಂದು ನಿರ್ಣಯಿಸಲ್ಪಟ್ಟವನೂ ಆಗಿದ್ದಾನೆ. (ರೋಮನ್ನರು 1:4)
ಗಮನಿಸಿ, ಆತನನ್ನು 'ಪವಿತ್ರವಾದ ಆತ್ಮ' ಎಂದು ಕರೆಯಲಾಗುತ್ತದೆ. ನಿಮ್ಮ ಜೀವನದಲ್ಲಿ ಪವಿತ್ರಾತ್ಮನನ್ನು ಆಕರ್ಷಿಸಲು ನೀವು ಬಯಡುವುದಾದರೆ, ನೀವು ನಿಮ್ಮನ್ನು ಹೆಚ್ಚು ಹೆಚ್ಚು ಪವಿತ್ರಗೊಳಿಸಿಕೊಳ್ಳಬೇಕು. ಆತನನ್ನು ಮೆಚ್ಚಿಸದ ಅಥವಾ ನಿಮ್ಮನ್ನು ಭಕ್ತಿವೃದ್ಧಿಪಡಿಸದ ಚಟುವಟಿಕೆಗಳನ್ನು ಬಿಟ್ಟುಬಿಡಿ. ಆತನನ್ನು ದುಃಖಿಸುವ ಕೆಲಸಗಳನ್ನು ಉದ್ದೇಶಪೂರ್ವಕವಾಗಿ ಮಾಡಬೇಡಿ. ನೀವು ನಿಜವಾಗಿಯೂ ಯಾರನ್ನಾದರೂ ಪ್ರೀತಿಸುತ್ತಿದ್ದರೆ, ನೀವು ಹಾಗೆ ಮಾಡುವುದಿಲ್ಲವೇ?
"...ಪವಿತ್ರಾತ್ಮನಿಗೆ ಅನುಸಾರವಾಗಿ ಜೀವಿಸುವವರು ಆತ್ಮನು ಏನು ಬಯಸುತ್ತಾನೋ ಅದರ ಮೇಲೆ ತಮ್ಮ ಮನಸ್ಸನ್ನು ಕೇಂದ್ರೀಕರಿಸುತ್ತಾರೆ." (ರೋಮನ್ನರು 8:5)
ದೇವರ ಪ್ರವಾದಿಯೊಬ್ಬರು ಹೇಳಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ, "ನಾವು ನಿರಂತರವಾಗಿ ಪವಿತ್ರಾತ್ಮನೊಂದಿಗೆ ಸಂಪರ್ಕದಲ್ಲಿರಲು ಬಯಸಿದರೆ, ನಮ್ಮ ಜೀವನಶೈಲಿಯೂ ಆತನೊಂದಿಗೆ ಹೊಂದಿಕೆಯಾಗಬೇಕು. ನಾವು ಆತನೊಂದಿಗೆ ಸಾಮರಸ್ಯದಿಂದಿರಬೇಕು."
Bible Reading: Song of Solomon 5-8 ; Isaiah 1
Prayer
ತಂದೆಯೇ, ನನ್ನೊಂದಿಗೆ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರೂ ನನ್ನ ಮೂಲಕ ನಿಮ್ಮ ಆತ್ಮನ ಶಕ್ತಿಯನ್ನು ಅನುಭವಿಸಲಿ ಎಂದು ಯೇಸುನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ. ಆಮೆನ್. (ಇದನ್ನು ದಿನವಿಡೀ ಪ್ರಾರ್ಥಿಸುತ್ತಾ ಇರಿ)
Join our WhatsApp Channel

Most Read
● ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು -2● ಸರಿಯಾದವುಗಳ ಮೇಲೆ ಲಕ್ಷ್ಯವಿಡಿರಿ
● ಕರ್ತನು ಎಂದಿಗೂ ಕೈ ಬಿಡುವುದಿಲ್ಲ
● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
● ಅತ್ಯುನ್ನತವಾದ ರಹಸ್ಯ
● ಅಪ್ಪನ ಮಗಳು - ಅಕ್ಷಾ
● ಸಾಲದಿಂದ ಹೊರಬನ್ನಿ : ಕೀಲಿಕೈ #2
Comments