Daily Manna
2
1
176
ದೇವರ 7 ಆತ್ಮಗಳು: ತಿಳುವಳಿಕೆಯ ಆತ್ಮ
Wednesday, 20th of August 2025
Categories :
ದೇವರ ಆತ್ಮ ( Spirit of God)
" ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಪ್ರಭಾವಸ್ವರೂಪನಾದ ತಂದೆಯೂ ಆಗಿರುವಾತನು ತನ್ನ ವಿಷಯವಾಗಿ ತಿಳುವಳಿಕೆಯನ್ನು ಕೊಟ್ಟು ಇದುವರೆಗೆ ಗುಪ್ತವಾಗಿದ್ದ ಸತ್ಯಾರ್ಥಗಳನ್ನು ತಿಳುಕೊಳ್ಳುವ ಜ್ಞಾನವುಳ್ಳ ಆತ್ಮವನ್ನು ನಿಮಗೆ ದಯಪಾಲಿಸಬೇಕೆಂದು ಪ್ರಾರ್ಥಿಸುತ್ತೇನೆ. ಆತನು ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ...(ಎಫೆಸ 1:17-18)
ಎಫೆಸದ ಕ್ರೈಸ್ತರಿಗಾಗಿ ಪೌಲನು ಮಾಡಿದ ಪ್ರಾರ್ಥನೆಯ ವಿಷಯವನ್ನು ಗಮನಿಸಿ: “ನಿಮ್ಮ ತಿಳುವಳಿಕೆಯ ಕಣ್ಣುಗಳು ಜ್ಞಾನೋದಯದಿಂದ ಬೆಳಗಲಿ.” ಇದು ತಿಳುವಳಿಕೆಯ ಆತ್ಮನ ಕಾರ್ಯಾಚರಣೆಯಾಗಿದೆ. ಆತನು ನಿಮ್ಮನ್ನು ಯಾವ ನಿರೀಕ್ಷೆಯಿಂದ ಕರೆದಿದ್ದಾನೋ ಮತ್ತು ಆ ತನ್ನ ಭಕ್ತರಿಗೆ (ಆತನ ಪವಿತ್ರ ವ್ಯಕ್ತಿಗಳಲ್ಲಿ) ದೊರಕುವ ಆತನ ಮಹಿಮೆಯ ಬಾಧ್ಯತೆಯು ಎಷ್ಟು ಶ್ರೀಮಂತವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕೆಂದೂ ಅರ್ಥಮಾಡಿಕೊಳ್ಳಬೇಕೆಂದೂ ನಿಮಗೆ ಸಹಾಯ ಮಾಡುವವನು ಆತನೇ (ಎಫೆಸ 1:18 ವರ್ಧಿತ)
"ನೀವು ದೇವರ ಪ್ರೀತಿಯಲ್ಲಿ ನೆಲೆಗೊಂಡು ನಿಂತು ಅದರ ಅಗಲ ಉದ್ದ ಎತ್ತರ ಆಳ ಎಷ್ಟೆಂಬದನ್ನು ದೇವಜನರೆಲ್ಲರೊಂದಿಗೆ ಗ್ರಹಿಸಲೂ ಜ್ಞಾನಕ್ಕೆ ಮೀರುವ ಕ್ರಿಸ್ತನ ಪ್ರೀತಿಯನ್ನು ತಿಳುಕೊಳ್ಳಲೂ ಪೂರ್ಣಶಕ್ತರಾಗಿದ್ದು ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆ ನಿಮಗೆ ದಯಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ". (ಎಫೆಸ 3:18-19)
ಎಫೆಸದ ಕ್ರೈಸ್ತರು ಕ್ರಿಸ್ತನ ಪ್ರೀತಿಯ ಆಳ ಮತ್ತು ಶಕ್ತಿಯನ್ನು ಇನ್ನೂ ಅರ್ಥಮಾಡಿಕೊಳ್ಳದ ಅಥವಾ ತಿಳಿದಿರದ ಕಾರಣ ಕ್ರಿಸ್ತನ ಪ್ರೀತಿ ಎಷ್ಟು ಅಗಲ, ಎಷ್ಟು ಉದ್ದ, ಎಷ್ಟು ಎತ್ತರ ಮತ್ತು ಎಷ್ಟು ಆಳವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದು ಅಪೊಸ್ತಲ ಪೌಲನ ಈ ಪ್ರಾರ್ಥನೆಯನ್ನು ಮಾಡಿದನು.
ಅವರಿಗೆ ಸೈದ್ಧಾಂತಿಕ ಜ್ಞಾನ ಮತ್ತು ತಿಳುವಳಿಕೆ ಇತ್ತು ಆದರೆ ತಿಳುವಳಿಕೆಯ ಆತ್ಮ ಮತ್ತು ಜ್ಞಾನದ ಆತ್ಮವು ಅವರ ಜೀವನದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದರ ಪ್ರಾಯೋಗಿಕ ವಾಸ್ತವತೆಯನ್ನು ಅವರು ಹೊಂದಿರಲಿಲ್ಲ.
ನಾನು ವಿವರಿಸಲು ಅನುಮತಿಸಿ: ಇಂದು, ಅನೇಕರು ತಮ್ಮ ಮೂಲಕ ಕಾರ್ಯನಿರ್ವಹಿಸುತ್ತಿರುವ ಆತ್ಮನ ವರಗಳನ್ನು ಹೊಂದಿರಬಹುದು ಆದರೆ ವಾಕ್ಯದ ತಿಳುವಳಿಕೆಯನ್ನು ಹೊಂದಿರುವುದಿಲ್ಲ. ಅವರು ತಿಳುವಳಿಕೆಯ ಆತ್ಮದಿಂದ ತುಂಬಲ್ಪಡುವಂತೆ ಪ್ರಾರ್ಥಿಸುವುದು ತುಂಬಾ ಅಗತ್ಯವಾಗಿದ್ದು ಇದರಿಂದಾಗಿ ಅವರು ಇತರ ಸಂತರೊಂದಿಗೆ ಕ್ರಿಸ್ತನ ಪ್ರೀತಿಯ ಬಲವನ್ನು ಇತರರ ಮೇಲೆ ಯೂ ಮತ್ತು ಅವರಲ್ಲಿಯೂ ಕಾರ್ಯಮಾಡುವುದನ್ನು ಅರ್ಥಮಾಡಿಕೊಳ್ಳಬಹುದು.
ಆತ್ಮನ ಅಭಿಷೇಕವು ವಿಭಿನ್ನ ಸಮಯಗಳಲ್ಲಿ ಮತ್ತು ವಿಭಿನ್ನ ರೀತಿಯಲ್ಲಿ ನಮ್ಮ ಮೇಲೆ ಬರುವಂತದ್ದಾಗಿದೆ ಆದರೆ ನಾವು ಆತ್ಮನ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು. ನಂತರ ಆತನು(ಯೇಸು) ಅವರ ಮೇಲೆ ತನ್ನ ಶ್ವಾಸವನ್ನು ಊದಿ, ಇಗೋ “ಪವಿತ್ರಾತ್ಮವನ್ನು ತಕ್ಕೊಳ್ಳಿರಿ." ಎಂದನು (ಯೋಹಾನ 20:22)
"ಮತ್ತು ಸರ್ವಶಕ್ತನ ಶ್ವಾಸದಿಂದ ಅವನಿಗೆ ತಿಳುವಳಿಕೆ ಬರುತ್ತದೆ. (ಯೋಬ 32:8) ನೋಡಿ,
ಕರ್ತನಾದ ಯೇಸು ತನ್ನ ಶಿಷ್ಯರ ಮೇಲೆ ಊದಿ, “ಪವಿತ್ರಾತ್ಮವನ್ನು ಸ್ವೀಕರಿಸಿ” ಎಂದು ಹೇಳಿದಾಗ, ಆತನು ಅವರಿಗೆ ನಿಜವಾಗಿಯೂ ತಿಳುವಳಿಕೆಯ ಆತ್ಮವನ್ನು ಕೊಟ್ಟನು ಮತ್ತು ಅವರ ಮನಸ್ಸುಗಳು ಶಾಸ್ತ್ರಗಳನ್ನು ಅರ್ಥಮಾಡಿಕೊಳ್ಳಲು ಅಭಿಷೇಕಿಸಲ್ಪಟ್ಟವು.
ಒಂದು ದಿನ ಯೇಸು ಜನರಿಗೆ ಬೋದಿಸುತ್ತ" ಕೇಳಿರಿ! ಬಿತ್ತುವವನು ಬಿತ್ತುವದಕ್ಕೆ ಹೊರಟನು. ಬಿತ್ತುವಾಗ ಕೆಲವು ಬೀಜ ದಾರಿಯ ಮಗ್ಗುಲಲ್ಲಿ ಬಿದ್ದವು; ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು..." ಎಂದು ಹೇಳಿದನು (ಮಾರ್ಕ್ 4:3-4 )
ನಂತರ, ಈ ದೃಷ್ಟಾಂತವನ್ನು ತನ್ನ ಶಿಷ್ಯರಿಗೆ ವಿವರಿಸುವಾಗ, ದಾರಿಯ ಪಕ್ಕದಲ್ಲಿ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿ ಅದನ್ನು ಅರ್ಥಮಾಡಿಕೊಳ್ಳದವರನ್ನು ಪ್ರತಿನಿಧಿಸುತ್ತವೆ ಮತ್ತು ಅವರು ಅದನ್ನು ಅರ್ಥಮಾಡಿಕೊಳ್ಳದ ಕಾರಣ, ಸೈತಾನನು ತಕ್ಷಣವೇ ಬಂದು ಅವರ ಹೃದಯದಿಂದ ವಾಕ್ಯವನ್ನು ಕದ್ದುಕೊಂಡು ಹೋದನು ಎಂದು ಅವರಿಗೆ ಪ್ರಕಟ ಪಡಿಸಿದನು. (ಮತ್ತಾಯ 13:18-19)
ಆದ್ದರಿಂದ ತಿಳುವಳಿಕೆ ಎಷ್ಟು ಮುಖ್ಯ ಎಂದು ಈಗ ನಿಮಗೆ ಅರ್ಥವಾಗಿದೆ. ನೀವು ರಾಜ್ಯದ ವಾಕ್ಯವನ್ನು ಕೇಳಿ ಅದನ್ನು ಅರ್ಥಮಾಡಿಕೊಳ್ಳಲು ನಿರ್ಲಕ್ಷಿಸಿದಾಗ, ನೀವು ಅದನ್ನು ನಿಮ್ಮ ಹೃದಯದಿಂದ ಕದ್ದುಕೊಂಡು ಹೋಗಲು ಸೈತಾನನಿಗೆ ಅವಕಾಶ ನೀಡುತ್ತಿದ್ದೀರಿ. ಅದಕ್ಕಾಗಿಯೇ ನಿಮ್ಮ ಜೀವನದಲ್ಲಿ ತಿಳುವಳಿಕೆಯ ಆತ್ಮವು ಕಾರ್ಯನಿರ್ವಹಿಸಬೇಕು. ಆತನು ಒಬ್ಬನೇ.
Bible Reading: Jeremiah 28-29
Prayer
ಪವಿತ್ರಾತ್ಮನೇ ಬನ್ನಿ. ಯೇಸುನಾಮದಲ್ಲಿ ನನ್ನನ್ನು ನೂತನ ಅಭಿಷೇಕ ದಿಂದ ತುಂಬಿಸಿ. ಪವಿತ್ರಾತ್ಮನೇ ನನ್ನನ್ನು ಆಶೀರ್ವದಿಸಿ, ಶಾಸ್ತ್ರಗಳನ್ನು ಅರ್ಥಮಾಡಿಕೊಳ್ಳುವಂತೆ ನನ್ನ ಮನೋನೇತ್ರವನ್ನು ಬೆಳಗಿಸಿ. ದೇವರ ಪವಿತ್ರಾತ್ಮನೇ, ನನ್ನ ಜೀವನದ ಸಂದರ್ಭಗಳಿಗೆ ಬೇಕಾದ ವಾಕ್ಯಗಳನ್ನು ಅನ್ವಯಿಸಿಕೊಳ್ಳುವಂತೆ ನನಗೆ ಸಹಾಯ ಮಾಡಿ. ಆಮೆನ್.
Join our WhatsApp Channel

Most Read
● ಪಾಪದ ಕುಷ್ಠರೋಗದೊಂದಿಗೆ ವ್ಯವಹರಿಸುವುದು.● ಮೊಗ್ಗು ಬಿಟ್ಟಂತಹ ಕೋಲು
● ಕ್ಷಮಿಸದಿರುವುದು
● ದೇವರನ್ನು ವೈಭವೀಕರಿಸಿ ಮತ್ತು ನಿಮ್ಮ ನಂಬಿಕೆಯನ್ನು ಉತ್ತೇಜನಪಡಿಸಿಕೊಳ್ಳಿ.
● ದೇವರಿಗೆ ಮೊದಲಸ್ಥಾನ ನೀಡುವುದು #3
● ಕೃತಜ್ಞತೆಯ ಯಜ್ಞ
● ಕ್ರಿಸ್ತನ ಮೂಲಕ ಜಯಶಾಲಿಗಳು
Comments