Daily Manna
1
0
163
ದೇವರ 7 ಆತ್ಮಗಳು: ಆಲೋಚನೆ ನೀಡುವ ಆತ್ಮ
Thursday, 21st of August 2025
Categories :
ದೇವರ ಆತ್ಮ (Spirit of God)
"ಆಸ್ಯಸೀಮೆಯಲ್ಲಿ ವಾಕ್ಯವನ್ನು ಹೇಳಬಾರದೆಂದು ಪವಿತ್ರಾತ್ಮನು ತಡೆದದ್ದರಿಂದ ಅವರು ಫ್ರುಗ್ಯ ಗಲಾತ್ಯ ಸೀಮೆಯನ್ನು ಹಾದುಹೋಗಿ ಮೂಸ್ಯಕ್ಕೆ ಎದುರಾಗಿ ಬಂದಾಗ ಬಿಥೂನ್ಯಕ್ಕೆ ಹೋಗುವ ಪ್ರಯತ್ನಮಾಡಿದರು. ಅಲ್ಲಿಯೂ ಯೇಸುವಿನ ಆತ್ಮನು ಅವರನ್ನು ಹೋಗಗೊಡಿಸಲಿಲ್ಲ." (ಅ.ಕೃ. 16:6-7)
ಪವಿತ್ರಾತ್ಮನು "ಅವರನ್ನು ಹೋಗಗೊಡಿಸಲಿಲ್ಲ" ಎಂದು ಹೇಳುವುದನ್ನು ಗಮನಿಸಿ. ಪೌಲ ಮತ್ತು ಅವನ ಸಹಚರರು ಏಷ್ಯಾದಲ್ಲಿ ಸುವಾರ್ತೆ ಸಾರಬೇಕೆಂದು ಹೋಗಲು ಬಯಸಿದ್ದರು, ಆದರೆ ಪವಿತ್ರಾತ್ಮನು ಅವರನ್ನು ನಿರ್ಬಂಧಿಸಿದನು ಇದು ಆಲೋಚನೆ ನೀಡುವ ಆತ್ಮ . (ಅ.ಕೃ. 11:11-12)
ಇಲ್ಲಿ ಅಪೊಸ್ತಲ ಪೇತ್ರನು ಚರ್ಮಕಾರನಾದ ಸೀಮೋನನ ಮನೆಯಲ್ಲಿ ಕೊರ್ನೇಲ್ಯನ ಮನೆಗೆ ಹೋಗಲು ಹೇಳುತ್ತಿದ್ದಾಗ ಆಲೋಚನೆ ಆತ್ಮನು ಅವನನ್ನು ಹೇಗೆ ನಡೆಸಿದನು ಎಂಬುದನ್ನು ವಿವರಿಸುತ್ತಾನೆ.
"ಯೆಹೋವನು ನನಗೆ ಆಲೋಚನೆಯನ್ನು ಹೇಳಿ ಕೊಡುತ್ತಾನೆ; ಆತನನ್ನು ಕೊಂಡಾಡುವೆನು. ರಾತ್ರಿ ಸಮಯಗಳಲ್ಲಿ ನನ್ನ ಅಂತರಾತ್ಮವು ನನ್ನನ್ನು ಬೋಧಿಸುತ್ತದೆ." ಎಂದು
ಕೀರ್ತನೆ 16:7 ರಲ್ಲಿ ದಾವೀದ ಹೇಳುವ ಮಾತುಗಳನ್ನು ನೆನಪಿಡಿ
ಆಲೋಚನೆಯ ಆತ್ಮವು ನಿಮಗೆ ಏನು ಮಾಡಬೇಕೆಂದು ಮತ್ತು ಏನು ಮಾಡಬಾರದು ಎಂದು ಹೇಳಿಕೊಡುವವನಾಗಿದ್ದಾನೆ. ನಿಮ್ಮ ಎಲ್ಲಾ ವ್ಯವಹಾರಗಳಲ್ಲಿಯೂ ಆತನು ನಿಮ್ಮನ್ನು ನಿರ್ದೇಶಿಸುವವನಾಗಿದ್ದಾನೆ.
ನೀವು ತಪ್ಪು ದಿಕ್ಕಿನಲ್ಲಿ ತಪ್ಪಿಹೋಗುವಾಗಲೂ, ಕರ್ತನ ಆಲೋಚನೆಯ ಆತ್ಮವು ನಿಮ್ಮನ್ನು ನಡೆಸುವಾಗ, "ಇಲ್ಲ, ಇದೇ ಮಾರ್ಗ; ಇದರಲ್ಲೇ ನಡೆಯಿರಿ" (ಯೆಶಾಯ 30:21 TLB) ಎಂದು ನಿಮ್ಮ ಹಿಂದೆ ಹೇಳುವ ಧ್ವನಿಯನ್ನು ನೀವು ಕೇಳುವಿರಿ.
"ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವದು; ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರವಿುಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬವು ಅವನ ಹೆಸರು". (ಯೆಶಾಯ 9:6)
ಬೈಬಲ್‌ನ ಈ ಭಾಗದ ಮೂಲ ಹೀಬ್ರೂ ಭಾಷಾಂತರವು "ಅದ್ಭುತ, ಆಲೋಚನಾ ಕರ್ತನು" ಎಂದು ಹೇಳುವುದಿಲ್ಲ, ಕಿಂಗ್ ಜೇಮ್ಸ್ ಆವೃತ್ತಿಯಲ್ಲಿ ಸೂಚಿಸಿದಂತೆ ಎರಡು ವಿಭಿನ್ನ ಹೆಸರುಗಳು. ಇದು ವಾಸ್ತವವಾಗಿ ಒಂದೇ ಸಂಯುಕ್ತ ಹೆಸರಾಗಿ ಓದುತ್ತದೆ: "ಅದ್ಭುತ ಆಲೋಚನಾ ಕರ್ತನು." ಪ್ರವಾದಿಯು ಕರ್ತನನ್ನು ವಿವರಿಸುವ "ಪರಾಕ್ರಮಿ ದೇವರು," " ಸಮಾಧಾನದ ಪ್ರಭು " ಮತ್ತು " ನಿತ್ಯನಾದ ದೇವರು" ಎಂಬ ಇತರ ಹೆಸರುಗಳು ಸಹ ದ್ವಿಗುಣಗೊಂಡಿರುವುದನ್ನು ನೀವು ಗಮನಿಸಬಹುದು. "ಅದ್ಭುತ ಸಲಹೆಗಾರ" ಎಂಬ ಹೆಸರಿನ ಅರ್ಥ "ಅಸಾಧಾರಣ ತಂತ್ರಗಾರ." ಆಲೋಚನಾ ಆತ್ಮನು ಅಸಾಧಾರಣ ತಂತ್ರಗಾರನಾಗಿದ್ದಾನೆ. ಅಂದರೆ ಆತನು ಸಾಮಾನ್ಯ ಮನಸ್ಸು ಅಥವಾ ಇಂದ್ರಿಯಗಳನ್ನು ಮೀರಿದವನು. ಆತನು ಅಲೌಕಿಕನಾದವನು. ಆತನನ್ನು ಗೊಂದಲಗೊಳಿಸಲಾಗುವುದಿಲ್ಲ.
ನೀವು ಎದುರಿಸುವ ಪ್ರತಿಯೊಂದು ಬಿಕ್ಕಟ್ಟಿನಿಂದ ಹೊರಬರುವ ಮಾರ್ಗ ಆತನಿಗೆ ತಿಳಿದಿದೆ. ನೀವು ಕತ್ತಲೆಯಿಂದ ಹೇಗೆ ಹೊರಬರಬಹುದು ಎಂಬುದು ಆತನಿಗೆ ತಿಳಿದಿದೆ; ನಿಮ್ಮನ್ನು ಹೇಗೆ ಯಶಸ್ವಿಗೊಳಿಸಬೇಕೆಂದು ಆತನಿಗೆ ತಿಳಿದಿದೆ. ಆತನು ನಿಮ್ಮ ಅಸಾಧಾರಣ ತಂತ್ರಗಾರನಾಗಿದ್ದು ಆತನು ನಿಮ್ಮೊಳಗೆ ವಾಸಿಸುತ್ತಾನೆ.
Bible Reading: Jeremiah 30-31
Prayer
ಭಾಗ್ಯಧಾಯಕನಾದ ಪವಿತ್ರಾತ್ಮನೇ, ನೀನು ನನ್ನ ಅದ್ಭುತ ಆಲೋಚನಾ ಕರ್ತನು; ನೀನು ನನ್ನ ಅಸಾಧಾರಣ ತಂತ್ರಜ್ಞನು ನಿನ್ನ ದೈವಿಕ ಸಲಹೆಯನ್ನು ನಾನು ಹೊಂದಿರುವುದರಿಂದ ನನ್ನ ಎಲ್ಲಾ ಯೋಜನೆಗಳು ಯೇಸುನಾಮದಲ್ಲಿ ಸಫಲ ಹೊಂದುತ್ತವೆ. ಆಮೆನ್.
Join our WhatsApp Channel

Most Read
● ಭಾವನಾತ್ಮಕ ರೋಲರ್ ಕೋಸ್ಟರ್ ಗೆ ಬಲಿಪಶು.● ನಿಮ್ಮ ದೌರ್ಬಲ್ಯಗಳನ್ನು ದೇವರಿಗೆ ಒಪ್ಪಿಸಿ
● ಅನ್ಯಭಾಷೆಯನ್ನಾಡುವುದು ಪ್ರಗತಿಯನ್ನು ತರುತ್ತದೆ.
● ದೇವರು ತಾಯಂದಿರನ್ನು ವಿಶೇಷವಾಗಿ ಇರಿಸಿದ್ದಾನೆ
● ಸಾಮಾನ್ಯ ಪಾತ್ರೆಗಳ ಮೂಲಕ ಮಹತ್ತರ ಕೆಲಸ
● ಧೈರ್ಯವಾಗಿರಿ.!
● ಯೇಸು ಈಗ ಪರಲೋಕದಲ್ಲಿ ಏನು ಮಾಡುತ್ತಿದ್ದಾನೆ?
Comments