Daily Manna
2
0
137
ನಿಮ್ಮ ನಿಜವಾದ ಮೌಲ್ಯವೇನೆಂದು ಸಂಶೋಧಿಸಿ ತಿಳಿದುಕೊಳ್ಳಿರಿ
Wednesday, 19th of November 2025
"ನಾವು ಆತನ ಮೇರುಕೃತಿ; ಸತ್ಕಾರ್ಯಗಳನ್ನು ಮಾಡುವದಕ್ಕಾಗಿಯೇ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟೆವು. ನಾವು ಸತ್ಕಾರ್ಯಗಳನ್ನು ನಡಿಸುವವರಾಗಿ ಬದುಕಬೇಕೆಂದು ದೇವರು ನಮ್ಮನ್ನು ಮೊದಲೇ ನೇವಿುಸಿದನು." (ಎಫೆಸ 2:10, NLT)
ಸಾಮಾಜಿಕ ಸ್ಥಾನಮಾನ, ವೃತ್ತಿಜೀವನದ ಯಶಸ್ಸು ಮತ್ತು ಇತರರ ಅನುಮೋದನೆಯಿಂದ ಮೌಲ್ಯವನ್ನು ಅಳೆಯುವ ಜಗತ್ತಿನಲ್ಲಿ, ನೀವು ಸಾಕಷ್ಟು ಉತ್ತಮವಾಗಿಲ್ಲ ಎಂದು ಭಾವಿಸುವುದು ಸುಲಭ. ಬಹುಶಃ ನೀವು ಕೇಳುವ ಅತ್ಯಂತ ಜೋರಾದ ಧ್ವನಿಗಳು ನೀವು ಅಸಮರ್ಪಕರು, ಅನರ್ಹರು ಅಥವಾ ಮುಖ್ಯವಲ್ಲದವರು ಎಂದು ಹೇಳುತ್ತಿರಬಹುದು. ಆದರೆ ಇಂದು, ನಮ್ಮ ಹೃದಯಗಳನ್ನು ಉನ್ನತ ಸತ್ಯದ ಮೇಲೆ ಇರಿಸೋಣ: ನೀವು ಆತನ ಮೇರುಕೃತಿ ಎಂದು ಹೇಳುವ ನಮ್ಮ ಪರಲೋಕದ ತಂದೆಯ ದೃಢವಾದ ಮಾತುಗಳಾಗಿವೆ. ನೀವು ಎಂದಾದರೂ ಒಂದು ನಿಮಿಷ ಅನುಮೋದನೆಯ ಉತ್ತುಂಗವನ್ನು ಮತ್ತು ಮುಂದಿನ ನಿಮಿಷ ನಿರಾಕರಣೆಯ ಕೀಳರಿಮೆಯನ್ನು ಅನುಭವಿಸಿದ್ದೀರಾ? ಇದು ಭಾವನಾತ್ಮಕ ವಿನಾಶವನ್ನು ಉಂಟುಮಾಡುವ ರೋಲರ್ ಕೋಸ್ಟರ್ ಸವಾರಿಯಾಗಿದೆ.
"ಖಂಡಿತವಾಗಿಯೂ ಮನುಷ್ಯನ ಭಯವು ಒಂದು ಉರುಲಾಗಿರುವುದು; ಯೆಹೋವ ದೇವರಲ್ಲಿ ಭರವಸವಿಡುವವನು, ಸಂರಕ್ಷಣೆ ಹೊಂದುವನು.."ಎಂದು ಜ್ಞಾನೋಕ್ತಿ 29:25 ಹೇಳುತ್ತದೆ,. ನಾವು ಇತರರಲ್ಲಿ ನಮ್ಮ ಸ್ವ-ಮೌಲ್ಯವನ್ನು ಹುಡುಕಿದಾಗ, ನಾವು ಮಾನವ ಭಾವನೆ ಮತ್ತು ತೀರ್ಪಿನ ಅಸ್ಥಿರತೆಗೆ ನಮ್ಮನ್ನು ಒಳಪಡಿಸಿಕೊಳ್ಳುತ್ತೇವೆ.
ಉಬ್ಬರವಿಳಿತಗಳಂತೆ ಏರಿಳಿತಗೊಳ್ಳುವ ಮಾನವ ಅಭಿಪ್ರಾಯಗಳಿಗಿಂತ ವಿಭಿನ್ನವಾಗಿ, ದೇವರಿಗೆ ನಮ್ಮ ಕುರಿತಾಗಿ ಇರುವ ದೃಷ್ಟಿಕೋನವು ಸ್ಥಿರವಾಗಿರುತ್ತದೆ." ನೀನು ನನ್ನನ್ನು ಅದ್ಭುತವಾಗಿಯೂ, ವಿಚಿತ್ರವಾಗಿಯೂ ರಚಿಸಿದ್ದರಿಂದ, ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು, ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ." ಎಂದು ಕೀರ್ತನೆಗಾರನು ಕೀರ್ತನೆ 139:14 ರಲ್ಲಿ ಘೋಷಿಸುತ್ತಾನೆ, ದೇವರು, ಒಬ್ಬ ಶ್ರೇಷ್ಠ ಕಲಾವಿದನಾಗಿದ್ದು, ಉದ್ದೇಶಪೂರ್ವಕತೆ ಮತ್ತು ಕಾಳಜಿಯಿಂದ ನಮ್ಮನ್ನು ಹೆಣೆದಿದ್ದಾನೆ. ದೇವರ ದೃಷ್ಟಿಯಲ್ಲಿ ನಮ್ಮ ಮೌಲ್ಯದ ಅತ್ಯಂತ ಗಮನಾರ್ಹ ಅಂಶವೆಂದರೆ ನಮ್ಮ ವಿಮೋಚನೆಯ ಪ್ರಕಟಣೆಯಾಗಿದೆ.
"ಆದರೆ ನಾವು ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ದೃಢಪಡಿಸಿದ್ದಾನೆ."ಎಂದು ರೋಮನ್ನರು 5:8 ನಮಗೆ ಹೇಳುತ್ತದೆ. ನೀವು ಮರಣಕ್ಕೆ ಯೋಗ್ಯರಾಗಿದ್ದಿರಿ ಆದರೆ ನೀವು ವಿಮೋಚನೆಗೊಂಡ ನಂತರ, ನೀವು ಕ್ಷಮಿಸಲ್ಪಟ್ಟು ಸ್ವತಂತ್ರರಾಗಿದ್ದೀರಿ." ದೇವರು ನಮ್ಮನ್ನು ಅಂಧಕಾರದ ಅಧಿಪತ್ಯದಿಂದ ಬಿಡಿಸಿ ತನ್ನ ಪ್ರಿಯ ಕುಮಾರನ ಸಾಮ್ರಾಜ್ಯಕ್ಕೆ ಸೇರಿಸಿದನು. ಈ ಕುಮಾರನಲ್ಲಿ ನಮ್ಮ ಪಾಪಗಳು ಕ್ಷಮಿಸಲ್ಪಟ್ಟು ನಮಗೆ ವಿಮೋಚನೆಯಾಯಿತು."ಎಂದು ಕೊಲೊಸ್ಸೆ 1:14 ಹೇಳುತ್ತದೆ.
ದೇವರು ನಮ್ಮನ್ನು ಸೃಷ್ಟಿಸಿ ಗುರಿಯಿಲ್ಲದೆ ಎಲ್ಲೋ ಅಲೆದಾಡಲಿ ಎಂದು ಬಿಡಲಿಲ್ಲ." ಇವರಿಗೆ ಒಳ್ಳೆಯದಾಗಲಿ, ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ." ಎಂದು ಯೆರೆಮೀಯ 29:11 ನಮಗೆ ಭರವಸೆ ನೀಡುತ್ತದೆ, ದೇವರು ನಮ್ಮನ್ನು ಒಂದು ಅನನ್ಯ ಉದ್ದೇಶಕ್ಕಾಗಿ ಸಂಕೀರ್ಣವಾಗಿ ರಚಿಸಿದ್ದಾನೆ ಮತ್ತು ನಾವು ಈ ದೈವಿಕ ಯೋಜನೆಯೊಂದಿಗೆ ನಮ್ಮನ್ನು ಹೊಂದಿಸಿಕೊಂಡಾಗ ನಾವು ನಿಜವಾಗಿಯೂ ನಮ್ಮ ಭರಿಸಲಾಗದ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತೇವೆ.
ಹಾಗಾದರೆ, ನಮ್ಮ ನಿಜವಾದ ಮೌಲ್ಯವನ್ನು ಕಂಡುಕೊಳ್ಳಲು ನಾವು ಎಲ್ಲಿಗೆ ತಿರುಗಿ ಹೋಗಬೇಕು? ದೇವರ ಸಾನಿಧ್ಯವನ್ನು ಹೊರತುಪಡಿಸಿ ಬೇರೆ ಯಾವುದನ್ನೂ ನೋಡಬೇಡಿ. "ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು; ನಿನ್ನಲ್ಲಿ ಉಲ್ಲಾಸಿಸೇ ಉಲ್ಲಾಸಿಸುವನು; ತನ್ನ ಪ್ರೀತಿಯಲ್ಲಿ ನಿನ್ನ ಜೀವನವನ್ನು ನೂತನಗೊಳಿಸುವನು; ನಿನ್ನಲ್ಲಿ ಆನಂದಿಸಿ ಹರ್ಷಧ್ವನಿಗೈಯುವನು." ಎಂದು ಚೆಫನ್ಯ 3:17 ಹೇಳುತ್ತದೆ,
Bible Reading: Acts 8-9
Prayer
ಪರಲೋಕದ ತಂದೆಯೇ, ನನ್ನ ಮೌಲ್ಯವನ್ನು ನಿನ್ನಲ್ಲಿ ಮಾತ್ರ ಕಂಡುಕೊಳ್ಳುವಂತೆ ನನಗೆ ಅವಕಾಶ ಮಾಡಿಕೊಡು. ನಾನು ಸಾಕಷ್ಟು ಒಳ್ಳೆಯವನಲ್ಲ ಎಂದು ಹೇಳುವ ಧ್ವನಿಗಳನ್ನು ಮೌನಗೊಳಿಸಿ ನಾನು ನಿನ್ನಯ ಮೇರುಕೃತಿಯಾಗಿದ್ದೇನೆ ಮತ್ತು ನಿನ್ನ ಉದ್ದೇಶಕ್ಕಾಗಿ ರಚಿಸಲಾಗಿದ್ದೇನೆ ಎಂಬ ಭರವಸೆಯಿಂದ ನನ್ನನ್ನು ತುಂಬು. ಯೇಸುನಾಮದಲ್ಲಿ ಬೇಡಿದ್ದೇನೆ, ಆಮೆನ್.
Join our WhatsApp Channel
Most Read
● ಲೈಂಗಿಕ ಪ್ರಲೋಭನೆಯನ್ನು ಜಯಿಸುವುದು ಹೇಗೆ?● ಸ್ವಸ್ಥ ಬೋಧನೆಯ ಪ್ರಾಮುಖ್ಯತೆ
● ವರ್ಗಗಳು : ದೇವರ ಹೆಸರುಗಳು
● ಭಾನುವಾರದ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗುವುದು ಹೇಗೆ
● ನೀವು ಪ್ರಾರ್ಥಿಸುವಿರಿ ಆತನು ನಿಮಗೆ ಕಿವಿಗೊಡುವನು
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ಪ್ರಬುದ್ಧತೆಯು ಜವಾಬ್ದಾರಿಯಿಂದ ಆರಂಭವಾಗುತ್ತದೆ.
Comments
