हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ದಿನ 01:40 ದಿನಗಳ ಉಪವಾಸ ಹಾಗೂ ಪ್ರಾರ್ಥನೆ
Daily Manna

ದಿನ 01:40 ದಿನಗಳ ಉಪವಾಸ ಹಾಗೂ ಪ್ರಾರ್ಥನೆ

Monday, 11th of December 2023
1 1 474
Categories : ಉಪವಾಸ ಮತ್ತು ಪ್ರಾರ್ಥನೆ (Fasting and prayer)
" ದೇವರೇ , ನೀನೇ ನನ್ನ ದೇವರು; ನಾನು ನಿನ್ನ ದರ್ಶನವನ್ನು ಕುತೂಹಲದಿಂದ ಎದುರು ನೋಡುತ್ತೇನೆ. ನೀರಿಲ್ಲದೆ ಒಣಗಿದ ಭೂಮಿಯಲ್ಲಿದ್ದವನು ನೀರಿಗಾಗಿಯೋ ಎಂಬಂತೆ ನನ್ನ ಆತ್ಮವು ನಿನಗಾಗಿ ಆತುರಗೊಳ್ಳುತ್ತದೆ ; ಶರೀರವು ಕಂದಿಹೋಗುತ್ತದೆ. ನಿನ್ನ ಮಂದಿರದಲ್ಲಿ ನಾನು ನಿನ್ನ ಮಹತ್ತನ್ನೂ ಪ್ರಭಾವವನ್ನು ಕಂಡ ಪ್ರಕಾರ ಈಗಲೂ ಕಾಣಬೇಕೆಂದು ಅಪೇಕ್ಷಿಸುತ್ತೇನೆ. ನಿನ್ನ
 ಪ್ರೇಮಾನುಭವವು ಜೀವಕ್ಕಿಂತಲು ಶ್ರೇಷ್ಠ: ನನ್ನ ಬಾಯಿ ನಿನ್ನನ್ನು ಕೀರ್ತಿಸುವುದು.(ಕೀರ್ತನೆ 63:1-3)

ನೀವು ಕರ್ತನಾದ ಯೇಸು ಕ್ರಿಸ್ತನನ್ನು ಗಂಭೀರವಾಗಿ ಅನುಸರಿಸಬೇಕು ಎಂದುಕೊಂಡಿದ್ದೀರಾ?
"ಆತನಾದರೋ ಅರಣ್ಯ ಪ್ರದೇಶಗಳಿಗೆ ಹೋಗಿ ದೇವರ ಪ್ರಾರ್ಥನೆಯನ್ನು ಮಾಡುತ್ತಿದ್ದನು."( ಲೂಕ 5:16) ಮತ್ತು "ಪ್ರಾರ್ಥನೆ ಮಾಡುವುದಕ್ಕೆ ಏಕಾಂತವಾಗಿ ಬೆಟ್ಟವನ್ನು ಹತ್ತಿದನು ಮತ್ತು ಹೊತ್ತು ಮುಳುಗಿದ ಮೇಲೆ ಒಬ್ಬನೇ ಅಲ್ಲಿ ಇದ್ದನು" ( ಮತ್ತಾಯ 14:23) 
 ಒಬ್ಬ ವಂಚಕನಾದ ಯಾಕೋಬನು " ಇಸ್ರಾಯೇಲ್ , ದೇವರ ಸಂಗಡ ಹೋರಾಡಿ ಗೆದ್ದವನು ಎಂದು ಹೇಗೆ ಎನಿಸಿಕೊಂಡನು? ( ಆದಿಕಾಂಡ 
32:28 ಓದಿ) ಸತ್ಯವೇದ ಹೇಳುತ್ತದೆ " ಯಾಕೋಬನು ಒಂಟಿಗನಾಗಿ ಹಿಂದೆ ನಿಂತಿರಲು ಯಾರೋ ಒಬ್ಬ ಪುರುಷನು ( ದೇವದೂತನು) ಬೆಳಗಾಗುವ ತನಕ ಅವನ ಸಂಗಡ ಹೋರಾಡಿದನು" ( ಆದಿ 32:24)

ಹೇಗೆ ವಿವಾಹಿತ ದಂಪತಿ ಗಳಿಗೆ ಏಕಾಂತದ ಸಾoಗತ್ಯವಿಲ್ಲದಿದ್ದರೆ
ಅವರ ನಡುವಿನ ಸಂಬಂಧವು 'ಹದ'ಗೆಡುತ್ತಾ ಹೋಗುತ್ತದೋ, ಹಾಗೆಯೇ ನಮ್ಮ ಹಾಗೂ ಕ್ರಿಸ್ತನ ನಡುವಿನ ಆತ್ಮಿಕವಾದ ಸಂಬಂಧವು ನಾವು ಕರ್ತನಿಗಾಗಿ ಸಮಯವನ್ನು ಮೀಸಲಿಡದೆ ಆತನೊಂದಿಗೆ ಸಮಯವನ್ನು ಕಳೆಯದಿದ್ದರೆ ದುರ್ಬಲವಾಗುತ್ತಾ ಹೋಗುತ್ತದೆ . ಚಿತ್ತ
ಚಾಂಚಲ್ಯದ ಈ ದಿನಮಾನಗಳಲ್ಲಿ ಕರ್ತನಿಗೆ ಆದ್ಯತೆ ನೀಡುವುದು ಆತ್ಯಗತ್ಯ ವಿಚಾರವಾಗಿದೆ.

 ಕರ್ತನೊಂದಿಗೆ ಏಕಾಂತದಲ್ಲಿರುವುದು ಹೇಗೆ?
1.ಪ್ರಾರ್ಥನೆಗಾಗಿ ನಿಮ್ಮ ಸಮಯವನ್ನು ಪ್ರತ್ಯೇಕಿಸಿ ಕೊಳ್ಳಿ.
ದಾನಿಯೇಲನಿಗೆ ದಿನಕ್ಕೆ ಮೂರಾವರ್ತಿ ಪ್ರಾರ್ಥನೆ ಮಾಡುವ ಅಭ್ಯಾಸವಿತ್ತು. 
" ಶಾಸನಕ್ಕೆ ರುಜುವಾದದ್ದು ದಾನಿಯೇಲನಿಗೆ ತಿಳಿದಾಗ ಅವನು ತನ್ನ ಮನೆಗೆ ಹೋಗಿ ಯೆರುಸಲೆಮಿನ ಕಡೆಗೆ ಕದವಿಲ್ಲದ ಕಿಟಕಿಗಳುಳ್ಳ ತನ್ನ ಮಹಡಿಯ ಕೋಣೆಯಲ್ಲಿ ಯಥಾ ಪ್ರಕಾರ ದಿನಕ್ಕೆ ಮುರಾವರ್ತಿ ಮೊಣಕಾಲೂರಿ ತನ್ನ ದೇವರಿಗೆ ಪ್ರಾರ್ಥನೆ ಮಾಡಿ ಸ್ತೋತ್ರ ಸಲ್ಲಿಸಿದನು." ( ದಾನಿ 6:10-11). ಉಪವಾಸ ಕಾಲದಲ್ಲಿ ನೀವು ಗುಣಮಟ್ಟದ ಸಮಯವನ್ನು ಕರ್ತನೊಂದಿಗೆ ಒಂಟಿಯಾಗಿಯೂ ,ಏಕಾಂತವಾಗಿಯೂ  , ಅನ್ಯೋನ್ಯವಾಗಿಯೂ  ಕಳಿಯುತ್ತಿದ್ದಿರಿ ಎಂಬುದನ್ನು  ಖಚಿತ ಪಡಿಸಿಕೊಳ್ಳಿ .

ಯೆರೆಮಿಯನು ಬರೆಯುತ್ತಾನೆ "..ನೀನು ನನ್ನ ಮೇಲೆ 
ಕೈಯಿಟ್ಟಿದ್ದರಿಂದ ಒಂಟಿಗನಾಗಿ ಕೂತೆನು... "(ಯೆರೆ. 15:17)
 
2) ಆರಾಧನೆ ಹಾಗೂ ಸ್ತುತಿ
ನಾವು ಕರ್ತನ ಪ್ರಸನ್ನತೆಯೊಳಗೆ ಪ್ರವೇಶಿಸಲು ಕೃತಜ್ಞತಾ -ಸ್ತುತಿಗಳು ಪ್ರೋತ್ಸಾಹಿಸುತ್ತದೆ.
" ಕೃತಜ್ಞತಾ ಸ್ತುತಿಯೊಡನೆ ಆತನ ಮಂದಿರ ದ್ವಾರಗಳಿಗೆ ಕೀರ್ತನೆಯೊಡನೆ ಆತನ ಅಂಗಳಗಳಿಗು ಬನ್ನಿರಿ; ಆತನ ಉಪಕಾರವನ್ನು ಸ್ಮರಿಸಿರಿ. ಆತನ ನಾಮವನ್ನು ಕೊಂಡಾಡಿರಿ"( ಕೀ. 100:4)
ಆರಾಧನೆಯಲ್ಲಿ ನಾವು ಕರ್ತನ ಸಾರ್ವಬೌಮತ್ವ ಹಾಗೂ ಒಳ್ಳೆಯತನವನ್ನು ಅಂಗಿಕರಿಸುತ್ತೇವೆ. ಸಂದರ್ಭ ಎಂತದ್ದೇ  ಇರಲಿ ನಾವು ಕರ್ತನೆಡೆಗೆ ನಮ್ಮ ಹೃದಯ ವನ್ನು ತೆರೆದುಕೊಂಡು ಇರಬೇಕು. ಕೃತಜ್ಞತಾ ಸ್ತುತಿ ಸಮರ್ಪಣೆ ಗಳು ನಮ್ಮ ದೃಷ್ಟಿಯನ್ನು, ಗಮನವನ್ನು ನಮ್ಮ ಅಗತ್ಯತೆ ಗಳ ಕಡೆಯಿಂದ ಕರ್ತನ ಹಿರಿಮೆ ಹಾಗೂ ಮಹಿಮೆಯ ಕಡೆಗೆ ವರ್ಗಾಯಿಸುತ್ತದೆ. ನಾವು ಉಪವಾಸ ಹಾಗೂ ಪ್ರಾರ್ಥನೆ ತೊಡಿಗಿದ್ದಾಗಲೂ ಸಹ ನಮ್ಮ ಆತ್ಮವನ್ನು ನಂಬಿಕೆ ಹಾಗೂ ವಿಶ್ವಾಸದಿಂದ ಪೋಷಿಸುತ್ತದೆ.

3) ಆತ್ಮೀಕ ಪ್ರಾರ್ಥನೆಗಳು
ಪ್ರಾರ್ಥನೆಯಲ್ಲಿ ಎರಡು ವಿಧ
1. ಮಾನಸಿಕ ಪ್ರಾರ್ಥನೆ ಹಾಗೂ
2. ಆತ್ಮೀಕ  ಪ್ರಾರ್ಥನೆ.

 ಮಾನಸಿಕವಾಗಿ ಪ್ರಾರ್ಥಿಸುವುದು ಎಂದರೆ ನೀವು  ಪ್ರಜ್ಞಾಪೂರ್ವಕವಾಗಿ ಪ್ರಾರ್ಥಿಸುವುದು. ಆತ್ಮಿಕ ಪ್ರಾರ್ಥನೆ ಎಂದರೆ ನೀವು ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವುದು.
"ಯಾಕೆಂದರೆ ನಾನು ವಾಣಿಯಲ್ಲಾಡುತ್ತಾ ದೇವರನ್ನು ಪ್ರಾರ್ಥಿಸಿದರೆ ನನ್ನಾತ್ಮವು ಪ್ರಾರ್ಥಿಸುವುದೇ ಹೊರತು ನನ್ನ ಬುದ್ಧಿ ನಿಷ್ಫಲವಾಗಿರುವುದು. ಹಾಗಾದರೆನು? ನಾನು ಆತ್ಮದಿಂದ ಪ್ರಾರ್ಥಿಸುವೆನು ,ಬುದ್ಧಿಯಿಂದಲೂ ಪ್ರಾರ್ಥಿಸುವೆನು ಆತ್ಮದಿಂದ ಹಾಡುವೆನು, ಬುದ್ಧಿಯಿಂದಲೂ ಹಾಡುವೆನು" (1ಕೊರಿ.14:14-15)

ಆತ್ಮೀಕ ಪ್ರಾರ್ಥನೆಯು ನಮ್ಮ ಬೌದ್ಧಿಕ ಮಿತಿಗಳನ್ನು ಮೀರಿ ದೇವರೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ, ಉಪವಾಸದ ಸಮಯದಲ್ಲಿ ಆಳವಾದ ಆತ್ಮೀಕ ಅನ್ಯೋನ್ಯತೆಯನ್ನು ಸೃಷ್ಟಿಸುತ್ತದೆ
 
4) ಅಧ್ಯಯನ ಹಾಗೂ ಧರ್ಮಗ್ರಂಥಗಳ
 ಹುಡುಕುವಿಕೆ
ನೀವು ವಾಕ್ಯವನ್ನು ಓದುವಾಗ ಕರ್ತ ನೊಂದಿಗೆ ನೇರವಾದ ಸಹಭಾಗಿತ್ವದಲ್ಲಿ ಇರುತ್ತೀರಿ. ವಾಕ್ಯವೇ ದೇವರಾಗಿದ್ದಾನೆ ,ನಾವು ಕರ್ತನ ವಾಕ್ಯವನ್ನು ಓದುವ ಅನುಭವ ನಾವು ಒಬ್ಬರ ಕೂಡ ಒಬ್ಬರು ಮಾತನಾಡುವುದಕ್ಕೆ ಸಮವಾಗಿದೆ.
ನಾವು ಕರ್ತನ ವಾಕ್ಯದಲ್ಲಿ ಮುಳುಗುವುದು ಎಂದರೆ ನಮ್ಮ ವಿಚಾರ ಹಾಗೂ ಆಲೋಚನೆಗಳನ್ನು ಕರ್ತನೊಂದಿಗೆ ಸರಿಯಾಗಿ ಜೋಡಿಸಿ ಸರಿಪಡಿಸಿಕೊಳ್ಳುವಂತದ್ದು ಮಾತ್ರವಲ್ಲದೆ ನಮ್ಮನ್ನು ಆತ್ಮಿಕವಾಗಿಯೂ  ಬಲಪಡಿಸುತ್ತದೆ ಹಾಗೂ ಸಿದ್ದಗೊಳಿಸುತ್ತದೆ ಉಪವಾಸ ಹಾಗೂ ಪ್ರಾರ್ಥನೆಯ ಸಮಯದಲ್ಲಿ ವಾಕ್ಯದ ಮೇಲೆ ಅವಲಂಬಿತರಾಗಿರಿ, ವಾಕ್ಯವೇ ನಿಮ್ಮ ಮಾರ್ಗದರ್ಶಿಯಾಗಿರಲಿ,ವಾಕ್ಯವು ನಿಮ್ಮ ಆತ್ಮಿಕ ಪಯಣವನ್ನು ಪ್ರಕಾಶಗೊಳಿಸಲಿ  ಹಾಗೂ ಸಮೃದ್ಧಿ ಗೊಳಿಸಲಿ.

ಕರ್ತನೊಡನೆ ಏಕಾಂತವಾಗಿ ಕಳೆಯುವುದರ ಪ್ರಯೋಜನಗಳು.
1. ರಹಸ್ಯಗಳು ಪ್ರಕಟವಾಗುವುದು.
ಸರ್ವಜ್ಞಾನಿಯಾಗಿರುವ ಕರ್ತನ ಸಂಗಡ ನೀವು ಒಂಟಿಯಾಗಿ ಕಳೆಯುವಾಗ ನೀವು ನಿರ್ಲಕ್ಷಿಸಲ್ಪಟ್ಟವರಾಗಿ ಉಳಿಯುವುದಿಲ್ಲ.
"ಆತನು ಅಗಾದ ವಿಷಯಗಳನ್ನು ಗೂಡಾರ್ಥಗಳನ್ನು ಬಯಲಿಗೆ ತರುತ್ತಾನೆ. ಕಗ್ಗತ್ತಲೆಯಲ್ಲಿ ಅಡಗಿರುವುದು ಆತನಿಗೆ (ಗೋಚರ) ತೇಜಸ್ಸು ಆತನಲ್ಲೇ ನೆಲೆಗೊಂಡಿದೆ" (ದಾನಿಯೇಲ 2:22)

2. ನೀವು ಸಬಲರಾಗುತ್ತೀರಿ.
 ನೀವು ಕರ್ತನೊಡನೆ ಏಕಾಂತವಾಗಿ ಸಮಯವನ್ನು ಕಳೆಯುವಾಗ ದೈಹಿಕವಾಗಿ ಹೊಸ ಬಲವನ್ನು ಹೊಂದುವುದಲ್ಲದೆ ಆತ್ಮಿಕವಾಗಿ ಕರ್ತನಾತ್ಮದಿಂದ ತುಂಬಿಸಲ್ಪಟ್ಟವರಾಗಿ ಆನಂದ ಪಡುತ್ತೀರಿ.
 ಯೆಶಾಯ 40:31 ರ ಪ್ರಕಾರ "ಯೆಹೋವನನ್ನು ನಿರೀಕ್ಷಿಸುವವರು ಹೊಸ ಬಲವನ್ನು ಹೊಂದುವರು ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು (ಏರುವರು )ಓಡಿ ದಣಿಯರು ,ನಡೆದು ಬಳಲರು"
ಕೀರ್ತನೆ 68 :35 ಹೇಳುತ್ತದೆ ,"ಇಸ್ರಾಯೇಲರ ದೇವರು ತನ್ನ ಪ್ರಜೆಗೆ ಬಲ ಪರಾಕ್ರಮಗಳನ್ನು ದಯಪಾಲಿಸುವನು".ಎಂದು.

3. ನೀವು ಪವಿತ್ರಾತ್ಮನಿಂದ ತುಂಬಿಸಲ್ಪಡುತ್ತೀರಿ;
 "ಮಧ್ಯಪಾನ ಮಾಡಿ ಮತ್ತರಾಗಬೇಡಿರಿ; ಅದರಿಂದ ಪಟಿಂಗತನವು ಹುಟ್ಟುತ್ತದೆ .ಆದರೆ ಪವಿತ್ರಾತ್ಮ 
ಭರಿತರಾಗಿರ್ರಿ "( ಎಫಸ್ಸ 5:18)ನೀವು ಕರ್ತನಾತ್ಮನಿಂದ ತುಂಬಿದವರಾಗಿದ್ದಾಗ ನಿಮ್ಮ ಜೀವನ ಪವಿತ್ರಾತ್ಮನಿಂದ ಆಳವಾಗಿ ಪ್ರಭಾವಿತವಾಗಿರುತ್ತದೆ .

4. ನೀವು ಕರ್ತನ ಸಹಭಾಗಿತ್ವದಲ್ಲಿರುವಾಗ ಸುರಿಸಲ್ಪಡುವ ಅಭಿಷೇಕವು ಸೈತಾನನ ನೊಗವನ್ನು ಮುರಿಯುತ್ತದೆ.
"ಆ ದಿನದಲ್ಲಿ ಅವರು ಹೊರಿಸಿದ ಹೊರೆಯು ನಿಮ್ಮ ಬೆನ್ನಿನಿಂದಲೂ ಕೂಡಿದ ನೊಗವು ಕತ್ತಿನಿಂದಲೂ ತೊಲಗುವವು ;ನೀವು ಪ್ರುಷ್ಟರಾದ (ಅಭಿಶಿಕ್ತ)
 ಕಾರಣ ನೊಗವು ಮುರಿದು ಹೋಗುವುದು"
 (ಯೆಶಾಯ 10:27)

5. ನೀವು ಕರ್ತನ ಸ್ವಾರೂಪ್ಯಕ್ಕೆ ಬದಲಾಗುತ್ತೀರಿ.
ನಾವೆಲ್ಲರೂ ಮುಸುಕು ತೆಗೆದಿರುವ ಮುಖದಿಂದ ಕರ್ತನ ಪ್ರಭಾವವನ್ನು ದರ್ಪಣದಲ್ಲಿ ಕಾಣಿಸುತ್ತದೆ ಎಂಬಂತೆ ದೃಷ್ಟಿಸುವವರಾಗಿದ್ದು ಪ್ರಭಾವದಿಂದ ಅಧಿಕ ಪ್ರಭಾವಕ್ಕೆ ಹೋಗುತ್ತಾ ಆ ಪ್ರಭಾವದ ಸ್ವಾರಪ್ಯ ಉಳ್ಳವರೇ ಆಗುತ್ತೇವೆ
 (2 ಕೊರಿ 3:18)

ನೀವು ಕರ್ತನಿಗೆ ಸಂಪೂರ್ಣವಾಗಿ ನಿಮ್ಮ ಹೃದಯವನ್ನು ಸಮರ್ಪಿಸಿರಿ ಹಾಗೂ ಆತನಿಗಾಗಿ ನಿಮ್ಮ ಅಮೂಲ್ಯ ಸಮಯವನ್ನು ಮೀಸಲಿಡಿ. ನೀವು ಕರ್ತನಲ್ಲಿ ಆಳವಾಗಿ ಬೆಳೆಯಲು ಇವೆರಡೇ ನಿಬಂಧನೆಗಳು.
Prayer
ನಿಮ್ಮ ಹೃದಯ ಅಂತರಾಳದಿಂದ ಬರುವವರೆಗೂ ಪುನರಾವರ್ತಿಸುತ್ತಾ ಇರಿ ಆನಂತರವೇ ಮತ್ತೊಂದು ಪ್ರಾರ್ಥನಾ ಕ್ಷಿಪಣಿಯ ಕಡೆಗೆ ಸಾಗಿರಿ ಪ್ರತಿ ಪ್ರಾರ್ಥನಾ ಅಂಶದೊಡನೆ ಒಂದು ನಿಮಿಷ ಪುನರಾವರ್ತಿಸಿ ವ್ಯಕ್ತಿಗತ ಮಾಡಿಕೊಳ್ಳಿರಿ.

1."ದೇವರೇ ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸು ನನ್ನನ್ನು ನೂತನ ಪಡಿಸು" (ಕೀರ್ತನೆ 51:10)

2. ನಮ್ಮ ಹಾಗೂ ಯೇಸು ಕ್ರಿಸ್ತನ ನಡುವಿನ ಸಂಬಂಧದ ಮೇಲೆ ಪ್ರಭಾವ ಬೀರುವ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನು ,ಹತ್ತಿಕೊಳ್ಳುವ ಪಾಪವನ್ನು ನಾವು ಸಹ
ತೆಗೆದಿಡುವಕ್ಕೆ ಯೇಸು ನಾಮದಲ್ಲಿ ಸಹಾಯ ಮಾಡಿ.

4. ನನ್ನ ಕಣ್ಣು ತೆರೆ ಆಗ ನಿನ್ನ ಧರ್ಮಶಾಸ್ತ್ರದ ಅದ್ಭುತಗಳನ್ನು ಯೇಸು ನಾಮದಲ್ಲಿ ಕಂಡುಕೊಳ್ಳುವೆನು (ಕೀರ್ತನೆ 119:18)

5. ಆತನು ನಮ್ಮ ಮೇಲೆ ಅತಿಶಯವಾದ ಕೃಪೆಯನ್ನು ಇಡುವುದರಿಂದ ನಾವು ನಮ್ಮ ಪರಲೋಕದ ತಂದೆಯೊಡನೆ ಯೇಸು ನಾಮದಲ್ಲಿ ಪಾಲುಗಾರನಾಗುತ್ತೇನೆ. (ಯಾಕೋಬ 4:6)

6. ಓ ದೇವರೇ!
 ನನ್ನ ಆತ್ಮವನ್ನು ಬಲಗೊಳಿಸು (ಅಪೋಸ್ತಲರ ಕೃತ್ಯಗಳು 1:8)

7. ನನ್ನ ಆತ್ಮೀಯ ಬಲವನ್ನು ಬರಿದು ಮಾಡುತ್ತಿರುವ ಯಾವುದೇ ಆಗಲಿ ಯೇಸು ನಾಮದಲ್ಲಿ ನಾಶ ಹೊಂದಲಿ (ಯೋಹಾನ 10:10)

8. ನನ್ನನ್ನು ದೇವರ ಕಡೆಯಿಂದ ಲೋಕದ ಕಡೆಗೆ ಎಳೆಯುತ್ತಿರುವ ಸಕಲ ವಿಧವಾದ ಹಣದಾಸೆಯನ್ನು ಯೇಸು ನಾಮದಲ್ಲಿ ನಾನು ಎಳೆದು ಬಿಸಾಡುತ್ತೇನೆ.

9. ತಂದೆಯೇ, ನಾನು ನಿಮ್ಮ ಪ್ರೀತಿಯಲ್ಲಿಯು ಹಾಗೂ ಜ್ಞಾನದಲ್ಲಿಯೂ ಅಭಿವೃದ್ಧಿ ಹೊಂದಬೇಕೆಂದು ಯೇಸು ಕ್ರಿಸ್ತನ ನಾಮದಲ್ಲಿ ಬೇಡುತ್ತೇನೆ.

10. ದೇವರೇ, ನನ್ನನ್ನು ಜ್ಞಾನದಲ್ಲಿಯೂ, ಶ್ರೇಷ್ಠತೆಯಲ್ಲಿಯೂ ಹಾಗೂ ಮನುಷ್ಯರ ದಯೆಯಲ್ಲಿಯೂ ಬೆಳೆಸಿರಿ ಎಂದು ಯೇಸುವಿನ ನಾಮದಲ್ಲಿ ಬೇಡುತ್ತೇನೆ. (ಲೂಕ 2:52)

11. ಕರ್ತನೇ ನನ್ನೆಲ್ಲಾ ಸವಾಲುಗಳನ್ನು ಜಯಿಸಲು ನನ್ನ ನಂಬಿಕೆಯನ್ನು ಬಲಪಡಿಸು ಹಾಗೂ ನಾನು ನಿಮ್ಮ ವಾಗ್ದಾನಗಳಲ್ಲಿ ಸ್ಥಿರವಾಗಿ ನೆಲೆ ನಿಲ್ಲುವಂತೆ ಕೃಪೆ ಮಾಡು ಎಂದು ಯೇಸು ಕ್ರಿಸ್ತನ ನಾಮದಲ್ಲಿ ಬೇಡಿಕೊಳ್ಳುತ್ತೇನೆ.
(2ತಿಮೋಥೆ 4:7)

12. ತಂದೆಯೇ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಮ್ಮ ಹೃದಯಗಳನ್ನು ಕಾಯಲಿ ಎಂದು ಯೇಸುಕ್ರಿಸ್ತನ ನಾಮದಲ್ಲಿ ಬೇಡಿಕೊಳ್ಳುತ್ತೇನೆ .(ಫಿಲಿಪ್ಪಿ 4:7).

Join our WhatsApp Channel


Most Read
● ಅಭಿಷೇಕಕ್ಕಿರುವ ಪ್ರಪ್ರಥಮ ಶತೃ
● ದೇವರು ನನಗಿಂದು ಒದಗಿಸುತ್ತಾನೋ?
● ಕ್ರಿಸ್ತನ ಮೂಲಕ ಜಯಶಾಲಿಗಳು
● ಮರೆತುಹೋದ ಆಜ್ಞೆ.
● ಆತ್ಮವಂಚನೆ ಎಂದರೇನು? -I
● ಎಲ್ಲಿ ಸ್ತುತಿಸ್ತೋತ್ರವೋ ಅಲ್ಲಿ ದೇವರು ನೆಲೆಸಿರುತ್ತಾನೆ. 
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login