हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಯುದ್ಧಕ್ಕಾಗಿ ತರಬೇತಿ.
Daily Manna

ಯುದ್ಧಕ್ಕಾಗಿ ತರಬೇತಿ.

Monday, 19th of February 2024
3 1 545
Categories : ಆತ್ಮಿಕ ಯುದ್ಧ (Spiritual warfare)
"ದಾವೀದನು ಕೀಷನ ಮಗನಾದ ಸೌಲನಿಗೆ ಹೆದರಿ ಚಿಕ್ಲಗಿನಲ್ಲಿ ಅಡಗಿಕೊಂಡಿದ್ದಾಗ [2] ಬಿಲ್ಲುಗಾರರೂ ಎಡಬಲ ಕೈಗಳಿಂದ ಕಲ್ಲುಗಳನ್ನೂ ಬಾಣಗಳನ್ನೂ ಎಸೆಯಬಲ್ಲವರೂ ಆಗಿದ್ದು ಯುದ್ಧದಲ್ಲಿ ಸಹಾಯಮಾಡುವದಕ್ಕಾಗಿ ಅವನ ಬಳಿಗೆ ಬಂದ ರಣವೀರರ ಪಟ್ಟಿ."(‭‭1 ಪೂರ್ವಕಾಲವೃತ್ತಾಂತ‬ ‭12:1‭-‬2‬)

ದಾವೀದನ ಹಿಂಬಾಲಕರಿಗೆ ಇದ್ದಂಥ ಒಂದು ಬಹುಮುಖ್ಯ ಅರ್ಹತೆ ಎಂದರೆ ಅವರಲ್ಲಿನ ಯುದ್ಧ ಮಾಡುವ ಸಾಮರ್ಥ್ಯ. ಅವರು ಎಡಗೈ ಮತ್ತು ಬಲಗೈ ಎರಡರಿಂದಲೂ ಹೇಗೆ ಕಲ್ಲುಗಳನ್ನು ಎಸೆಯಬೇಕು ಎಂಬುದನ್ನು ಕಲಿತಿದ್ದರು.

 ನೀವು ಎಂದಾದರೂ ಚೆಂಡನ್ನು ಎಸೆದಿದ್ದೀರಾ. ನೀವು ಸದಾ ಉಪಯೋಗಿಸುವ ಕೈಯಿಂದ ನೀವು ಗುರಿ ಇಟ್ಟು ಚೆಂಡನ್ನು ಎಸೆಯಬಲ್ಲಿರಿ ಎಂಬುದು ನಿಮಗೆ ಗೊತ್ತು. ಆದರೆ ಅದಕ್ಕೆ ವಿರುದ್ಧವಾದ ಕೈಯಿಂದ ಅಷ್ಟೇ ಪರಿಣಾಮಕಾರಿಯಾಗಿ ನೀವು ಹಾಗೆ ಎಸೆಯಲು ಆಗುವುದಿಲ್ಲ. ಅದು ನಿಮಗೆ ಕಷ್ಟಕರವಾದುದು. ಆದರೆ ದಾವಿದನ ಜೊತೆಗಿದ್ದ ರಣವೀರರು ಎರಡು ಕೈಗಳಲ್ಲೂ ಸಮಬಲದಲ್ಲಿ ಅಷ್ಟೇ ಪರಿಣಾಮಕಾರಿಯಾಗಿ ಕಲ್ಲುಗಳನ್ನು ಎಸೆಯುವ ಸಾಮರ್ಥ್ಯ ಹೊಂದಿದ್ದರು. ಈ ಒಂದು ಕೌಶಲ್ಯತೆಯನ್ನು ಬೆಳೆಸಿಕೊಳ್ಳಲು ಅವರು ಅನೇಕ ತಿಂಗಳು ಕಾಲ ತರಬೇತಿ ಪಡೆದಿದ್ದಿರಬಹುದು.


ನಾವು ಸಹ ಈ ರೀತಿ ಯುದ್ಧ ತರಬೇತಿಯನ್ನು ಪಡೆಯಬೇಕು. ಆದರೆ ಶಾರೀರಿಕ ರೀತಿಯಲ್ಲಿ ಹೋರಾಡಲು ಅಲ್ಲ,ಆತ್ಮಿಕ ರೀತಿಯಲ್ಲಿ ಹೋರಾಡಲು. ಯಾವ ಆತ್ಮಿಕ ಅಸ್ತ್ರಗಳನ್ನು ಯಾವಾಗ ಹೇಗೆ ಬಳಸಬೇಕು ಎಂಬ ತರಬೇತಿಯ ಅವಶ್ಯಕತೆ ನಮಗಿದೆ.ಸರಿಯಾದ ಕೌಶಲ್ಯತೆಯಿಂದ ಆತ್ಮಿಕ ಅಧಿಕಾರದಿಂದ ಉಪಯೋಗಿಸುವಂತಹ ದೇವರ ವಾಕ್ಯವು ಹರಿತವಾದ ಖಡ್ಗದಂತಿರುತ್ತದೆ

"ನಂಬಿಕೆಯ ಮೂಲಕ ಅವರು ರಾಜ್ಯಗಳನ್ನುಸ್ವಾಧೀನಮಾಡಿಕೊಂಡರು; ನೀತಿಯನ್ನು ನಡಿಸಿದರು; ವಾಗ್ದಾನಗಳನ್ನು ಪಡಕೊಂಡರು; [34] ಸಿಂಹಗಳ ಬಾಯಿ ಕಟ್ಟಿದರು; ಬೆಂಕಿಯ ಬಲವನ್ನು ಆರಿಸಿದರು; ಕತ್ತಿಯ ಬಾಯಿಗೆ ತಪ್ಪಿಸಿಕೊಂಡರು; ನಿರ್ಬಲರಾಗಿದ್ದು ಬಲಿಷ್ಠರಾದರು; ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು; ಪರರ ದಂಡುಗಳನ್ನು ಓಡಿಸಿಬಿಟ್ಟರು."(ಇಬ್ರಿಯರಿಗೆ‬ ‭11:33‭-‬34‬ )

ಸೂಕ್ತವಾದ ಸಮಯಕ್ಕೆ ಸೂಕ್ತವಾದ ದೇವರ ವಾಕ್ಯದ ಬಳಕೆಯು ಅತ್ಯದ್ಭುತವಾದ ಬಿಡುಗಡೆಯನ್ನು ಸ್ವಸ್ತತೆಯನ್ನು ತರಬಲ್ಲದು ಹೇಗೂ ನಾವು ದೇವರ ವಾಕ್ಯವನ್ನು ಅರಿತುಕೊಂಡು ಆತ್ಮನಲ್ಲಿ ನಡೆಯುವಾಗ ಅದನ್ನು ನಮ್ಮ ಆತ್ಮೀಕಾ ಯುದ್ಧದಲ್ಲಿ ಬಳಸಿಕೊಳ್ಳಬಹುದು

ನಾವು ಪರಿಣಾಮಕಾರಿಯಾದ ಪ್ರಾರ್ಥನಾ ವೀರರಾಗಲು ನಾವು ನಮ್ಮ ಮನಸ್ಸನ್ನು ತರಬೇತಿಗೊಳಿಸಿ ಏಕಾಗ್ರತೆಯಲ್ಲಿ ನೆಲೆಗೊಳಿಸಿಕೊಳ್ಳಬೇಕು.ಆಗ ನಮ್ಮ ಪ್ರಾರ್ಥನೆಯು  ಆತ್ಮವನ್ನು ತೂರಿಹೋಗುವಂಥ ಲೇಸರ್ ಕಿರಣದಂತಾಗುತ್ತದೆ. ಈ ದಿನಮಾನಗಳಲ್ಲಿ- ಈ ಯುಗದಲ್ಲಿ ಕರ್ತನಾದ ಯೇಸುವು ನಮ್ಮನ್ನು ಆತ್ಮೀಕವಾಗಿ ಹೋರಾಡಲು ಕರೆದಿದ್ದಾನೆ ಮತ್ತು ನಾವು ಜಯಶಾಲಿಗಳಾಗಲು ಮತ್ತು ಕಾರ್ಯ ಸಾಧಿಸಲು ಇರುವಂತಹ ತರಬೇತಿಯು ತುಂಬಾ ಕಠಿಣವಾದದ್ದಾಗಿದೆ

ನೀವು ವಾಕ್ಯವನ್ನು ಅರಿತವರಾಗಿದ್ದು ಅದನ್ನು ಕುಶಲತೆಯಿಂದ ಬಳಸಬೇಕು ಮತ್ತು ನಾವು ಕರೆಯಲ್ಪಟ್ಟ ಆತ್ಮಿಕ ವಿಚಾರಗಳ ಮೇಲೆ ನಮ್ಮ ಲಕ್ಷವನ್ನು ಕೇಂದ್ರೀಕರಿಸುವಂತಹದ್ದನ್ನು ಕಲಿಯಬೇಕು. ದಾವೀದನ ರಣವೀರರನ್ನು ನಮಗೆ ಸ್ಪೂರ್ತಿಯಾಗಿ ತೆಗೆದುಕೊಳ್ಳೋಣ ಮತ್ತು ಅಂಧಕಾರ ಶಕ್ತಿಗಳ ಮೇಲೆ ಗುರಿಯಿಟ್ಟು ಹೋರಾಡುವ ಹಾಗೆ ಶ್ರದ್ಧೆಯಿಂದ ತರಬೇತಿ ಹೊಂದೋಣ
Confession
ನನ್ನ ಶರಣನಾದ ಯಹೋವನಿಗೆ ಕೊಂಡಾಟವಾಗಲಿ ಆತನು ನನ್ನ ಕೈಗಳಿಗೆ ಯುದ್ಧ ವಿದ್ಯೆಯನ್ನು ನನ್ನ ಬೆರಳುಗಳಿಗೆ ಕಾಳಗವನ್ನು ಕಲಿಸಿದ್ದಾನೆ.


Join our WhatsApp Channel


Most Read
● ಕರ್ತನೊಂದಿಗೆ ನಡೆಯುವುದು
● ಅಪರಾಧಗಳಿಗಿರುವ ಪರಿಪೂರ್ಣ ಪರಿಹಾರ.
● ನಿಮ್ಮ ಮಾರ್ಗದರ್ಶಕರು ಯಾರು - II
● ಇತರರೊಂದಿಗೆ ಸಮಾಧಾನದಿಂದ ಜೀವಿಸಿರಿ
● ನಿಮ್ಮ ಮಾರ್ಗದರ್ಶಕರು ಯಾರು - |
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
● ರೂಪಾಂತರ ಹೊಂದಲು ಇರುವ ಸಾಮರ್ಥ್ಯ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login