Daily Manna
2
1
452
ಕೊರತೆಯಿಲ್ಲ
Saturday, 2nd of March 2024
Categories :
ನಿಬಂಧನೆ (Provision)
ಸಮೃದ್ಧಿ (Prosperity)
"ಇನ್ನೂ ಆತನು ಹೇಳಿದ್ದೇನಂದರೆ - ಒಬ್ಬಾನೊಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು.12ಅವರಲ್ಲಿ ಕಿರಿಯವನು ತಂದೆಗೆ - ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು ಎಂದು ಕೇಳಿಕೊಳ್ಳಲು ತಂದೆಯು ಬದುಕನ್ನು ಅವರಿಗೆ ಹಂಚಿಕೊಟ್ಟನು. 13ಸ್ವಲ್ಪ ದಿವಸದ ಮೇಲೆ ಆ ಕಿರೀಮಗನು ಎಲ್ಲಾ ಕೂಡಿಸಿಕೊಂಡು ದೂರದೇಶಕ್ಕೆ ಹೊರಟು ಹೋಗಿ ಅಲ್ಲಿ ಪಟಿಂಗನಾಗಿ ಬದುಕಿ ತನ್ನ ಆಸ್ತಿಯನ್ನು ಸೂರೆಮಾಡಿಬಿಟ್ಟನು.14ಹೀಗೆ ಅವನು ಎಲ್ಲಾ ಹಾಳುಮಾಡಿಕೊಂಡ ಮೇಲೆ ಆ ದೇಶದಲ್ಲೆಲ್ಲಾ ಘೋರವಾದ ಬರ ಬಂದು ಏನೂ ಗತಿಯಿಲ್ಲದವನಾದನು."(ಲೂಕ 15:11-14).
ತಪ್ಪಿ ಹೋದ ಮಗನು ತನ್ನ ತಂದೆಯ ಮನೆಯಲ್ಲಿರುವ ಅಷ್ಟು ದಿನವೂ ಅವನೆಂದಿಗೂ ಕೊರತೆಯನ್ನು ಅನುಭವಿಸಿರಲಿಲ್ಲ. ಅಲ್ಲಿ ಎಲ್ಲವೂ ಸಮೃದ್ಧಿ ಕರವಾಗಿತ್ತು. ಆದಾಗಿಯೂ ಅವನು ತನ್ನ ತಂದೆಯ ಮನೆಯನ್ನು ಬಿಟ್ಟು ಹೋದ. ಇದಾದ ಮೇಲೆ ಅವನು ಕೊರತೆಯನ್ನು ಅನುಭವಿಸಲು ಆರಂಬಿಸಿದನು .
ದಾವಿದನು ಈ ನಿಯಮವನ್ನು ಅರ್ಥ ಮಾಡಿಕೊಂಡಿದ್ದನು. ಆದ್ದರಿಂದಲೇ ಅವನು ತನ್ನ ಕೀರ್ತನೆಗಳಲ್ಲಿ "ಕರ್ತನು ನನ್ನ ಕುರುಬನು ಕೊರತೆ ಪಡೆನು" ಎಂದು ಬರೆದನು (ಕೀರ್ತನೆಗಳು 23:1)
ಈ ಅಂಶದಲ್ಲಿ ಎಲ್ಲಿಯವರೆಗೂ ಕರ್ತನು ದಾವಿದನನ್ನು ನಡೆಸುತ್ತಿದ್ದನೋ ಅಲ್ಲಿಯವರೆಗೂ ಅವನಿಗೆ ಎಂದಿಗೂ ಯಾವುದಕ್ಕೂ ಕೊರತೆಯಾಗಲಿಲ್ಲ. ದಾವೀದನು ಇನ್ನೊಂದು ವಾಕ್ಯವನ್ನು ಹೀಗೆ ಬರೆಯುತ್ತಾನೆ
"ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು; ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರಿಗೆ ಯಾವ ಮೇಲಿಗೂ ಕಡಿಮೆಯಿಲ್ಲ."(ಕೀರ್ತನೆಗಳು 34:10)
ಒಬೇದೊದೋಮ ಎಂಬ ಇನ್ನೊಬ್ಬ ವ್ಯಕ್ತಿ ಇದ್ದನು.
ಕರ್ತನ ಮಂಜೂಷವನ್ನು ಮೂರು ತಿಂಗಳುಗಳ ಕಾಲ ಅವನು ಅವನ ಮನೆಯಲ್ಲಿಟ್ಟುಕೊಂಡಿದ್ದನು. ಇದು ನಡೆಯುವವರೆಗೂ ಅವನ ವಿಷಯ ಯಾರಿಗೂ ತಿಳಿದಿರಲಿಲ್ಲ. ಅವನು ಕರ್ತನ ಮಂಜೂಷವನ್ನು ತನ್ನ ಮನೆಯಲ್ಲಿ ಮೂರು ತಿಂಗಳುಗಳ ಕಾಲ ಇಟ್ಟುಕೊಂಡಾಗ ಅವನನ್ನೂ ಮತ್ತು ಅವನ ಮನೆಗೆ ಸಂಬಂಧಪಟ್ಟ ಎಲ್ಲವನ್ನೂ ಕರ್ತನು ಬಹಳವಾಗಿ ಆಶೀರ್ವದಿಸಿದನು. ಇದು ಅರಸನಾದ ದಾವಿದನ ಕಿವಿಗೆ ಮುಟ್ಟುವಷ್ಟು ದೊಡ್ಡ ವಿಚಾರವಾಗಿತ್ತು.
ಈ ಕಡೆಯ ಕಾಲದಲ್ಲಿ ನಾವು ಈ ರಹಸ್ಯವನ್ನು ಅರಿತುಕೊಳ್ಳಬೇಕು. ಅದೇನೆಂದರೆ ಕರ್ತನ ಪ್ರಸನ್ನತೆಯೂ ನಮ್ಮನ್ನು ಎಲ್ಲಾ ಕೊರತೆಗಳಿಂದಲೂ ಕ್ಷಾಮದಿಂದಲೂ ದೂರ ಉಳಿಯುವಂತೆ ಮಾಡುತ್ತದೆ. ನಾವು ಹಿಂದೆಂದಿಗಿಂತಲೂ ಹೆಚ್ಚಾಗಿ ಕರ್ತನನ್ನೇ ಅಂಟಿಕೊಂಡಿರಬೇಕು. ಆಗ ಕೊರತೆ ಎಂಬುದಾಗಲೀ, ಸಾಕಾಗದು ಎಂಬ ಪದವಾಗಲಿ ಎಂದಿಗೂ ನಮ್ಮ ಮನೆಯ ಬಾಗಿಲನ್ನು ತಟ್ಟುವುದೇ ಇಲ್ಲ
Confession
ಕರ್ತನೇ ನನ್ನ ಕುರುಬನು ಆದ್ದರಿಂದ ನನ್ನ ಜೀವಿತದಲ್ಲಿ ಯಾವುದಕ್ಕೂ ನಾನು ಕೊರತೆ ಪಡುವುದಿಲ್ಲ ( ಇದನ್ನು ಯಾವಾಗಲೂ ನಿಯಮಿತವಾಗಿ ಹೇಳುತ್ತಲೇ ಇರಿ)
Join our WhatsApp Channel

Most Read
● ಇದು ನಿಜಕ್ಕೂ ಮುಖ್ಯವಾದ ಸಂಗತಿಯಾ?● ದಿನ 39 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಸಭೆಯಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳುವುದು
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು - ಭಾಗ 1
● ನಿಮ್ಮ ಸಂಪರ್ಕವನ್ನು ಕಳೆದುಕೊಳ್ಳಬೇಡಿರಿ
● ಸ್ಥಿರತೆಯಲ್ಲಿರುವ ಶಕ್ತಿ
Comments