हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಪುರುಷರು ಏಕೆ ಪತನಗೊಳ್ಳುವರು -1
Daily Manna

ಪುರುಷರು ಏಕೆ ಪತನಗೊಳ್ಳುವರು -1

Wednesday, 8th of May 2024
0 0 507
Categories : ಜೀವನದ ಪಾಠಗಳು (Life Lessons)
ಸತ್ಯವೇದವು ಎಂದಿಗೂ ಮನುಷ್ಯರು ಮಾಡಿದ ಪಾಪವನ್ನು ಬಚ್ಚಿಡುವುದಿಲ್ಲ. ಆದ್ದರಿಂದಲೇ ಅವರ ತಪ್ಪುಗಳಿಂದ ನಾವೇಷ್ಟೋ ಪಾಠಗಳನ್ನು ಇಂದು ಕಲಿಯಬಹುದಾಗಿದೆ ಮತ್ತು ಅಂತ ನಾಶನದ ಹಳ್ಳಗಳಿಂದ ತಪ್ಪಿಸಿ ಕೊಳ್ಳಬಹುದಾಗಿದೆ.

 ಹೌವಾರ್ಡ್ ಹೆಂಡ್ರಿಕ್ ರವರು ನೈತಿಕವಾಗಿ ವೈಫಲ್ಯವನ್ನು ಅನುಭವಿಸಿದ್ದಂತ 237 ಕ್ರೈಸ್ತ ಪುರುಷರ(ಬಹುಷಃ ಕ್ರೈಸ್ತ ನಾಯಕರ) ಘಟನೆಗಳನ್ನು ಅಧ್ಯಯನಿಸಿದ್ದರು. ಅವರು ಅದರಲ್ಲಿ ಕಂಡುಕೊಂಡ ಒಂದು ಸಾಮಾನ್ಯ ಅಂಶವೆಂದರೆ : ಇವರಲ್ಲಿ ಒಬ್ಬರೂ ಸಹ ಮತ್ತೊಬ್ಬರೊಂದಿಗೆ ಜವಾಬ್ದಾರಿಯುತ ಸಂಬಂಧವನ್ನು ಇರಿಸಿಕೊಂಡಿರಲಿಲ್ಲ.

ಅವರು ಸರ್ವೇ ಮಾಡಿದ 237 ನಿದರ್ಶನಗಳಿಂದ ಈ ಕೆಳಕಂಡ ಫಲಿತಾಂಶ ಹೊರಬಂದಿತು...

ಆ 237 ವ್ಯಕ್ತಿಗಳಲ್ಲಿ 
 81 ಪ್ರತಿಶತ ವ್ಯಕ್ತಿಗಳು ದೇವರ ಸನ್ನಿಧಾನದಲ್ಲಿ ಪ್ರಾರ್ಥನೆಯಲ್ಲಿ ಸಮಯ ಕಳೆಯುತ್ತಿರಲಿಲ್ಲ.

 57 ಪ್ರತಿಶತ ವ್ಯಕ್ತಿಗಳು ಅತಿಯಾಗಿ ಸೇವೆಯಲ್ಲೇ ನಿರತರಾಗಿದ್ದು ಸರಿಯಾಗಿ ವಿರಾಮವನ್ನು ತೆಗೆದುಕೊಳ್ಳಲಿಲ್ಲ.

 45 ಪ್ರತಿಶತ ವ್ಯಕ್ತಿಗಳು ಅತ್ಯಂತ ಸವಾಲಿನಿಸುವ ಪರಿಸ್ಥಿತಿಗಳಲ್ಲಿ ಬಿದ್ದು ಹೋದರು.

42 ಪ್ರತಿಶತ ವ್ಯಕ್ತಿಗಳು ಬದಲಾವಣೆಗೆ ತಮ್ಮನ್ನು ಹೊಂದಿಸಿಕೊಳ್ಳದೇ ಬಿದ್ದು ಹೋದರು.

37 ಪ್ರತಿಶತ ವ್ಯಕ್ತಿಗಳು ಅವರಿಗೆ ಪ್ರಮುಖ ಎನಿಸುವಂತಹ ವಿಜಯದ ಹಿಂದೆ ಓಡಿ ಹೋದರು.

30 percent ವ್ಯಕ್ತಿಗಳು ಅವರ ಜೀವಿತ ಸರಾಗವಾಗಿ ಸಾಗುತ್ತಿದ್ದರಿಂದಲೇ ಬಿದ್ದು ಹೋದರು.

ಒಬ್ಬರು ಒಮ್ಮೆ ಹೀಗೆ ಹೇಳಿದ್ದಾರೆ " ಬೇರೆಯವರ ತಪ್ಪುಗಳಿಂದ ಪಾಠ ಕಲಿಯಿರಿ ನಿಮ್ಮ ತಪ್ಪುಗಳಿಂದ ಪಾಠ ಕಲಿಯುವಷ್ಟು ವರ್ಷಗಳವರೆಗೆ ನೀವು ಬದುಕಲು ಸಾಧ್ಯವಿಲ್ಲ " ಎಂದು.ನಾನಿದಕ್ಕೆ ಇನ್ನೊಂದು ಸೇರಿಸಿ ಹೇಳುತ್ತೇನೆ. ಅದೇನೆಂದರೆ,  "ನಾವು ಮಾಡಿದ ತಪ್ಪುಗಳಿಂದ ಪಾಠ ಕಲಿಯುವಂಥದ್ದು ಒಳ್ಳೆಯದೆ ಆದರೆ ಅದೊಂದು ಬಹಳ ನೋವಿನ ಅನುಭವದ ಪಾಠ ಕಲಿಯುವ ರೀತಿ ಆಗಿದೆ"

ಸತ್ಯವೇದವು ದೇವರನ್ನು ಸೇವಿಸಲು ಶ್ರಮಿಸಿ, ನಂತರ ತಮ್ಮ ಹಾದಿಗಳಲ್ಲಿ ಮುಗ್ಗರಿಸಿದ ಅನೇಕ ಜನರ ಸ್ವಭಾವಗಳ ಅಧ್ಯಯನವನ್ನು ನಮ್ಮ ಮುಂದೆ ಇಡುತ್ತದೆ

"ಅವರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ; ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಬುದ್ಧಿವಾದಗಳಾಗಿ ಬರೆದವೆ. "‭‭ (1 ಕೊರಿಂಥದವರಿಗೆ‬ ‭10:11)

ನೆನಪಿಡಿ...
 ದೇವರ ಹೃದಯಕ್ಕೆ ಒಪ್ಪುವ ಮನುಷ್ಯನು (ದಾವೀದನು) ಬಿದ್ದು ಹೋಗಿದ್ದರೆ
 ಇಡೀ ಲೋಕದಲ್ಲಿ ಜ್ಞಾನಿಯಾದ ವ್ಯಕ್ತಿಯು (ಸೋಲೋಮನನು) ಬಿದ್ದು ಹೋಗಿದ್ದರೆ
 ಅತ್ಯಂತ ಬಲಿಶಾಲಿಯಾದ ವ್ಯಕ್ತಿಯು (ಸಂಸೋನನು) ಬಿದ್ದು ಹೋಗಿದ್ದರೆ 

ಇನ್ನು ನಾವು ಬೀಳಲು ಸಾಧ್ಯವಿಲ್ಲ ಎನ್ನಲು ನಾವು ಇನ್ನೆಷ್ಟರವರು?

 "ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ."(‭‭1 ಕೊರಿಂಥದವರಿಗೆ‬ ‭10:12‬)

ಇತಿಹಾಸವನ್ನು ನೋಡಿ ಪಾಠವನ್ನು ಕಲಿಯದಿದ್ದರೆ ನಾವು ಖಂಡಿತವಾಗಿಯೂ ಅವುಗಳನ್ನೇ ಪುನರಾವರ್ತಿಸುವ ಹಾದಿಯಲ್ಲಿದ್ದೇವೆ ಎಂದರ್ಥ ಎಂಬ ಒಂದು ಮಾತಿದೆ. ಇನ್ನೊಬ್ಬರ ತಪ್ಪಿನಿಂದ ನಾವು ಪಾಠ ಕಲಿಯುವುದರಿಂದ ಆಗುವ ಪ್ರಯೋಜನವೇನೆಂದರೆ ನಾವೂ ಸಹ ಸರಿಯಾಗಿ ಹೆಜ್ಜೆಗಳನ್ನಿಡದೇ ಹೋದರೆ ಅದೇ ಜಾಗದಲ್ಲಿ ಬೀಳುತ್ತೇವೆ ಎಂಬುದನ್ನು ನಾವು ಬೇಗನೇ ಮನವರಿಕೆ ಮಾಡಿಕೊಂಡಿರುತ್ತೇವೆ.

 "ಮರುವರುಷ ಅರಸರು ಯುದ್ಧಕ್ಕೆ ಹೊರಡುವ ಸಮಯದಲ್ಲಿ ದಾವೀದನು ಯೋವಾಬನನ್ನೂ ತನ್ನ ಸೇವಕರನ್ನೂ ಎಲ್ಲಾ ಇಸ್ರಾಯೇಲ್ಯರನ್ನೂ ಯುದ್ಧಕ್ಕೆ ಕಳುಹಿಸಿದನು. ಇವರು ಹೋಗಿ ಅಮ್ಮೋನಿಯರ ಪ್ರಾಂತಗಳನ್ನು ಹಾಳುಮಾಡಿ ರಬ್ಬಕ್ಕೆ ಮುತ್ತಿಗೆಹಾಕಿದರು. ದಾವೀದನು ಯೆರೂಸಲೇವಿುನಲ್ಲಿಯೇ ಇದ್ದನು."(‭‭2 ಸಮುವೇಲನು‬ ‭11:1‬).
ಈ ಒಂದು ದೇವರ ವಾಕ್ಯವು ಅದು ದಾವೀದನು ಯುದ್ಧ ರಂಗದಲ್ಲಿ ಇರಬೇಕಾದ ಸಮಯವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಆದರೂ ದಾವಿದನು ತನಗೆ ತಾನೇ ಸಮಜಾಯಿಸಿ ಕೊಟ್ಟುಕೊಂಡು ಯುದ್ಧಕ್ಕೆ ಹೋಗದೆ ಅರಮನೆಯಲ್ಲೇ ಉಳಿದನು. ದಾವಿದನು ಒಂದು ತಪ್ಪಾದ ಜಾಗದಲ್ಲಿ ಇದ್ದದ್ದಂತೂ ಸ್ಪಷ್ಟ.

ಎಷ್ಟು ಬಾರಿ ಮಾತನ್ನು ನಮಗೆ ನಾವು ಹೇಳಿಕೊಂಡಿದ್ದೇವೆ? ಭಾನುವಾರದ ಬೆಳಗಿನ ಸಮಯದಲ್ಲಿ ದೇವರಮನೆಯಲ್ಲಿ ಇರಬೇಕು. ಆದರೆ ಆಗುವುದಿಲ್ಲ  ನಮಗೆ ಸಮಜಾಯಿಸಿ ನೀಡಲು ಅದೆಷ್ಟೋ ಕಾರಣಗಳಿರುತ್ತವೆ, (ದಾವಿದನಿಗೂ ಸಹ ಹಾಗೆಯೇ ಇತ್ತೇನೋ)ಆದರೆ ನೋಡಿರಿ ಇದುವೇ ದಾವೀದನು ತನ್ನ ಪತನದ ಹಾದಿಗೆ ಇಟ್ಟ ಪ್ರಥಮ ಹೆಜ್ಜೆಯಾಗಿತ್ತು.

ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಇರುವಂತದ್ದು ಆತನ ಸಂರಕ್ಷಣೆ ಮತ್ತು ದಯೆ ಅಡಿಯಲ್ಲಿ ನಾವು ಇರುವಂತೆ ಮಾಡುತ್ತದೆ ಹಾಗೆ ತಪ್ಪಾದ ಸ್ಥಳದಲ್ಲಿ ಇರುವಂತದ್ದು ಒಂದು ದೊಡ್ಡ ದುಃಖಕ್ಕೂ ನೋವಿಗೂ ಕಾರಣವಾಗುತ್ತದೆ
Prayer
ತಂದೆಯೇ, ನಿನ್ನ ಚಿತ್ತವಿರುವ ಸ್ಥಳದಲ್ಲಿ- ಸಮಯದಲ್ಲಿ ನಾವಿರುವಂತೆ ನಮ್ಮ ಹೆಜ್ಜೆಗಳನ್ನು ಯಾವಾಗಲೂ ಮಾರ್ಗದರ್ಶಿಸು ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇವೆ ತಂದೆಯೇ ಆಮೆನ್.


Join our WhatsApp Channel


Most Read
● ತಪ್ಪು ಆಲೋಚನೆಗಳು
● ಕ್ಷಮಿಸದಿರುವುದು
● ಬಲವಾದ ಮೂರುಹುರಿಯ ಹಗ್ಗ
● ಆರಾಧನೆ : ಸಮಾಧಾನಕ್ಕಿರುವ ಕೀಲಿ ಕೈ
● ದಿನ 01:40 ದಿನಗಳ ಉಪವಾಸ ಹಾಗೂ ಪ್ರಾರ್ಥನೆ
● ಭಾವನಾತ್ಮಕ ರೋಲರ್ ಕೋಸ್ಟರ್ ಗೆ ಬಲಿಪಶು.
● ಅಶ್ಲೀಲತೆಯಿಂದ ಬಿಡುಗಡೆ ಕಡೆಗಿನ ಪಯಣ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login