हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ದೇವರ ಆಲಯದಲ್ಲಿರುವ ಸ್ತಂಭಗಳು
Daily Manna

ದೇವರ ಆಲಯದಲ್ಲಿರುವ ಸ್ತಂಭಗಳು

Tuesday, 7th of May 2024
4 3 297
Categories : ಜಯಿಸುವವನು (Overcomer)
"ಯಾವನು ಜಯ ಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ನಿಲ್ಲಿಸುವೆನು; ಅವನು ಇನ್ನು ಮುಂದೆ ಅದರೊಳಗಿಂದ ಹೋಗುವದೇ ಇಲ್ಲ.."(‭‭ಪ್ರಕಟನೆ‬ ‭3:12‬).

ಪ್ರಕಟಣೆ 3:12ರಲ್ಲಿ ಕರ್ತನಾದ ಯೇಸು "ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ನಿಲ್ಲಿಸುವೆನು"ಎಂದು ಜಯ ಹೊಂದುವರಿಗಾಗಿ ಒಂದು ಸುಂದರವಾದ ವಾಗ್ದಾನವನ್ನು ಮಾಡುತ್ತಾನೆ. ಸ್ತಂಭಗಳು ಶಕ್ತಿಗೂ, ಸುಭದ್ರತೆಗೂ ಮತ್ತು ಸಹಿಷ್ಣುತೆಗೂ ಚಿಹ್ನೆಯಾಗಿದೆ. ದೇವರ ಆತ್ಮೀಕ ಆಲಯದಲ್ಲಿ ಸ್ತಂಭವಾಗುವುದರ ಕುರಿತ ಗೂಡಾರ್ಥಗಳನ್ನು ಈಗ ತಿಳಿದುಕೊಳ್ಳೋಣ.

ಹಳೆ ಒಡಂಬಡಿಕೆಯಲ್ಲಿ ಯೆರುಸಲೆಮ್ನಲ್ಲಿದ್ದಂತಹ ದೇವಾಲಯವು ಅನೇಕ ಸ್ತಂಭಗಳಿಂದ ಸಿಂಗರಿಸಲ್ಪಟ್ಟ ಒಂದು ಭವ್ಯವಾದ ಕಟ್ಟಡವಾಗಿತ್ತು. ಈ ಸ್ತಂಭಗಳು ಪ್ರಾಯೋಗಿಕವಾದ ಹಾಗೂ ಸೂಚಕವಾದ ಉದ್ದೇಶಗಳನ್ನು ತಿಳಿಸುತ್ತಿತ್ತು. ಈ ಸ್ತಂಭಗಳು ಆ ಭವ್ಯವಾದ ಕಟ್ಟಡಕ್ಕೆ ಆಧಾರವಾಗಿತ್ತು  ಮತ್ತು ಅದೇ ಸಮಯದಲ್ಲಿ ತನ್ನ ಜನರ ಮಧ್ಯೆ ಇದ್ದಂತಹ ಅಚಲವಾದ ದೇವರ ಪ್ರಸನ್ನತೆಯನ್ನು  ಪ್ರತಿನಿಧಿಸುತ್ತಿತ್ತು.1ಅರಸು 7:21ರಲ್ಲಿ ನಾವು ಯಾಕೀನ್ (ಯೆಹೋವನು ಸ್ಥಿರಪಡಿಸಿದ್ದು) ಮತ್ತು ಬೋವಜ್ (ಆತನಲ್ಲಿ ಬಲವಿದೆ) ಎಂಬ ಎರಡು ಸ್ತಂಬಗಳ ಬಗ್ಗೆ ಓದುತ್ತೇವೆ.

ವಿಶ್ವಾಸಿಗಳಾಗಿ ನಾವು ಜೀವ ಸ್ವರೂಪನಾದ ದೇವರ ಆಲಯವಾಗಿದ್ದೇವೆ. (1ಕೊರಿಯಂತೆ 3:16), ಆತ್ಮಿಕವಾದ ಕಟ್ಟಡವನ್ನು ಕಟ್ಟಲು ಜೀವವುಳ್ಳ ಕಲ್ಲುಗಳಾಗಿ ಒಂದರ ಜೊತೆ ಒಂದಾಗಿ ಕಟ್ಟಲ್ಪಡುತ್ತಾ ಇದ್ದೇವೆ (1ಪೇತ್ರ 2:5). ಕರ್ತನಾದ ಯೇಸುವು ಜಯಶಾಲಿಗಳನ್ನು ದೇವರ ಆಲಯದಲ್ಲಿ ಸ್ತಂಭವಾಗಿ ನಿಲ್ಲಿಸುವೆನು ಎಂಬ ವಾಗ್ದಾನ ಮಾಡುವಾಗ ಆತನು ಆತನ ರಾಜ್ಯದ ನಿತ್ಯತ್ವದ ಸುಭದ್ರತೆಯನ್ನು ಮತ್ತು ಮಹತ್ವವನ್ನು ಕುರಿತು ಹೇಳುತ್ತಿದ್ದಾನೆ ಎಂದರ್ಥ. ಸ್ತಂಭಗಳನ್ನು ಸುಲಭವಾಗಿ ಕದಲಿಸಲಾಗಲೀ ಸ್ಥಳಾಂತರಿಸಲಾಗಲೀ ಆಗುವುದಿಲ್ಲ.ಅವು ಸ್ಥಿರವಾಗಿ ನಿಂತಿರುತ್ತವೆ ಮತ್ತು ಎಂತಹವುದೇ ಪ್ರತಿಕೂಲಗಳನ್ನು ಎದುರಿಸುತ್ತವೆ.

ದೇವರ ಆಲಯದ ಸ್ತಂಭವಾಗಿ ಕೆಲವು ಜವಾಬ್ದಾರಿಕೆಗಳು ಸಹ ಇರುತ್ತವೆ. ಸ್ತಂಭವಾಗಿ ನಾವು ಇತರರನ್ನು ನಂಬಿಕೆಯಲ್ಲಿ ಬಲಪಡಿಸುವುದಕೋಸ್ಕರವೂ ಉತ್ತೇಜನ ಪಡಿಸುವುದಕೋಸ್ಕರವೂ ಕರೆಯಲ್ಪಟ್ಟಿದ್ದೇವೆ.
ನಾವು ಸ್ಥಿರತೆಗೂ -ಸಹಿಷ್ಣುತೆಗೂ ಮಾದರಿಯಾಗಿದ್ದು ಕದಲಿಸಲಾರದ ಅಸ್ತಿವಾರವಾದ ಕ್ರಿಸ್ತನನ್ನು ಅವರಿಗೆ ತೋರ್ಪಡಿಸುವವರಾಗಿರಬೇಕು.ಗಲಾತ್ಯ 2:9 ಯಾಕೋಬ, ಕೇಫ ಹಾಗೂ ಯೋಹಾನರನ್ನು ಆದಿ ಸಭೆಯ ಸ್ತಂಭಗಳೆಂದು ಕರೆದು, ಸುವಾರ್ತೆಯ ಸತ್ಯವನ್ನು ಎತ್ತಿ ಹಿಡಿಯುವುದರ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಇಂದು ನೀವು ದೇವರ ಆಲಯದಲ್ಲಿ ಹೇಗೆ ಸ್ತಂಭವಾಗಿರಬಲ್ಲಿರಿ? ಕರ್ತನಾದ ಯೇಸು ಕ್ರಿಸ್ತನೆಂಬ ಭದ್ರವಾದ ಅಡಿಪಾಯದ ಮೇಲೆ ಭರವಸದಿಂದ ಇರುವ ಮೂಲಕ ನಿಮ್ಮ ಜೀವಿತವನ್ನು ಕಟ್ಟಿಕೊಳ್ಳಲಾರಂಬಿಸಿ. ಆತನ ವಾಕ್ಯದಲ್ಲಿ ಸಮಯವನ್ನು ಕಳೆಯುವುದರ ಮೂಲಕ ಆತನು ನಿಮ್ಮನ್ನು ಬಲಪಡಿಸುವುದಕ್ಕೂ ನಿಮ್ಮನ್ನು ಸ್ಥಿರಪಡಿಸುವುದಕ್ಕೂ ನಿಮ್ಮನ್ನು ಒಪ್ಪಿಸಿ ಕೊಡಿ. ನಂಬಿಕೆಯ ಪಯಣದಲ್ಲಿ ಇತರರನ್ನು ಉತ್ತೇಜಿಸುವ ಹಾಗೂ ಆಸರೆಯಾಗುವ ಅವಕಾಶಗಳನ್ನು ಎದುರು ನೋಡಿರಿ.
ಮಾತಿನಲ್ಲಿಯೂ ಕೃತ್ಯದಲ್ಲಿಯೂ ನಿಮ್ಮ ನಂಬಿಕೆಯನ್ನು ಜೀವಿತದಲ್ಲಿ ಅಳವಡಿಸಿಕೊಳ್ಳಿರಿ.
Prayer
 ಸರ್ವಶಕ್ತನಾದ ದೇವರೇ, ನಿನ್ನ ಆಲಯದಲ್ಲಿ ನಮ್ಮನ್ನು ಸ್ತಂಭವಾಗಿ ನಿಲ್ಲಿಸುತ್ತೇನೆ ಎಂದು ನೀನು ಹೇಳಿರುವ ವಾಗ್ದಾನಕ್ಕಾಗಿ ಸ್ತೋತ್ರ. ಜೀವನದ ಎಂತಹದೇ ಬಿರುಗಾಳಿಗೆ ಕದಲದಂತೆ ನಿನ್ನ ನಂಬಿಕೆಯಲ್ಲಿ ದೃಢವಾಗಿ ನಿಲ್ಲುವಂತೆ ನನಗೆ ಸಹಾಯ ಮಾಡು. ನಿನ್ನಲ್ಲಿ ಮಾತ್ರ ದೊರಕುವ ನಿರೀಕ್ಷೆಗೆ ಮೂಲನಾದಂತಹ ನಿನ್ನ ಕಡೆಗೇ ಜನರನ್ನು ನಡೆಸುವಂತಹ, ಅವರನ್ನು ನಂಬಿಕೆಯಲ್ಲಿ ಬೆಂಬಲಿಸುವಂತಹ ಹಾಗೂ ಬಲಗೊಳಿಸುವ ಸಾಧನವಾಗಿ ನನ್ನನ್ನು ಉಪಯೋಗಿಸು ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ, ಆಮೆನ್.


Join our WhatsApp Channel


Most Read
● ಮೂರು ಆಯಾಮಗಳು
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - II
● ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದ -I
● ಅದು ನಿಮಗೆ ಮುಖ್ಯವಾದ್ದದಾದರೆ, ಅದು ದೇವರಿಗೂ ಮುಖ್ಯವೇ.
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - III
● ಅಧರ್ಮಗಳ ಆಳ್ವಿಕೆಯ ಬಲವನ್ನು ಮುರಿಯುವುದು - I
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login