हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಎದುರಾಗುವ ವಿರೋಧಗಳನ್ನು ನಂಬಿಕೆಯಿಂದ ಎದುರಿಸುವುದು.
Daily Manna

ಎದುರಾಗುವ ವಿರೋಧಗಳನ್ನು ನಂಬಿಕೆಯಿಂದ ಎದುರಿಸುವುದು.

Friday, 5th of July 2024
3 2 516
Categories : ಹಿಂಸೆ ( Persecution)
ಸತ್ಯವೇದದಲ್ಲಿ, ಯೆರುಸಲೇಮಿನ ಪೌಳಿಗೋಡೆಯನ್ನು ಕಟ್ಟುವ ಒಂದು ಸ್ಮರಾಣಾರ್ಥಕ  ಕಾರ್ಯವನ್ನು ಕೈಗೊಂಡಂತಹ ನಾಯಕನಾಗಿ ನೆಹೆಮಿಯಾನು ನಿಲ್ಲುತ್ತಾನೆ. ಅವನು ಅರಸನಾದ ಅರ್ತಷಸ್ತನಿಂದ ಅನುಮತಿಯನ್ನು ಹೊಂದಿದವನಾಗಿ ಒಂದು ದೈವಿಕ ಉದ್ದೇಶ ಮತ್ತು ನಿರ್ಣಯದೊಂದಿಗೆ ಈ ಕಾರ್ಯವನ್ನು ಆರಂಭಿಸುತ್ತಾನೆ. ಆದಾಗಿಯೂ ಮುರಿದು ಬಿದ್ದ ಪೌಳಿ ಗೋಡೆಗಳನ್ನು ಪುನಃ ಕಟ್ಟಲು ಅವನು ಭಾರಿ ವಿರೋಧವನ್ನು ಎದುರಿಸಿದರೂ ಅದನ್ನು ನಿಲ್ಲಿಸದೆ ಶ್ರದ್ಧೆಯಿಂದ ಕೆಲಸ ಮಾಡುತ್ತಾನೆ. ಅನೇಕ ಎದುರಾಳಿಗಳ ವಿರೋಧದ ನಡುವೆಯೂ ತನ್ನ ದೇವರ ಮೇಲೆ ನೆಹಮಿಯನಿಗಿದ್ದ ಅಚಲವಾದ ನಂಬಿಕೆ ಹಾಗೂ ಕರ್ತವ್ಯದ ಬದ್ಧತೆಯಿಂದಾಗಿ ಅವನು 52 ದಿನದೊಳಗಾಗಿ ಅವನ ಕಾರ್ಯವನ್ನು ಪೂರೈಸಲು ದೇವರೂ ಅವನನ್ನು ಬಲಗೊಳಿಸಿದನು. (ನೆಹಮಿಯ 4 ನ್ನು ನೋಡಿರಿ)

 ದೇವರು ನಮ್ಮನ್ನು ಕರೆದ ಕರೆಯನ್ನು ನಾವು ಪೂರೈಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವಾಗ ನಾವು ವಿರೋಧಗಳನ್ನು ನಿರೀಕ್ಷಿಸಲೇಬೇಕಾಗುತ್ತದೆ. ಈ ಪ್ರತಿರೋಧಗಳೆಲ್ಲಾ ನಾವು ದೇವರ ಚಿತ್ತಕ್ಕೆ ವಿರೋಧವಾಗಿರುವ ಕಾರ್ಯವನ್ನು ಮಾಡುತ್ತಿದ್ದೇವೆ, ಅದರಿಂದಲೇ ಬಂದಿವೆ ಎಂಬುದನ್ನು ಸೂಚಿಸುವುದಿಲ್ಲ ಬದಲಾಗಿ ಅದು ನಾವು ನಿಖರವಾಗಿ ಮಾಡಬೇಕಾದ ಕಾರ್ಯವಿದೇ ಆಗಿದೆ ಎಂದು ದೃಢೀಕರಿಸುವಂತಹ ಸೂಚನೆಯಾಗಿರುತ್ತದೆ. ವಿರೋಧಗಳು ಎಲ್ಲಿಂದ ಬೇಕಾದರೂ ಬರಬಹುದು. ಆದರೆ ಅವೆಲ್ಲವುಗಳಿಂತಲೂ ನಮ್ಮನ್ನು ನಡೆಸುವ ದೇವರು ಮಹತ್ವವುಳ್ಳವನಾಗಿದ್ದಾನೆ ಎಂಬುದರಲ್ಲಿ ನಾವು ಸಾಂತ್ವನ ಹೊಂದಬಹುದು. ಕೀರ್ತನೆ 147:5 ನಮಗೆ ಹೇಳುವಂತೆ "ನಮ್ಮ ಕರ್ತನು ದೊಡ್ಡವನೂ ಪರಾಕ್ರವಿುಯೂ ಆಗಿದ್ದಾನೆ; ಆತನ ಜ್ಞಾನವು ಅಪರಿವಿುತವಾಗಿದೆ."

ಅಪೋಸ್ತಲನಾದ ಪೌಲನು ಸಹ ಮೊದಲಿಗನಾಗಿ ತನ್ನ ಸೇವೆಯಲ್ಲಿ ಈ ಎಲ್ಲಾ ವಿರೋಧಗಳನ್ನು ಅನುಭವಿಸಿದ್ದಾನೆ. ಅವನು ಎಫೆಸದಲ್ಲಿ ಮಾಡಿದ ಕಾರ್ಯಗಳ ಮೇಲೆ ಬೆಳಕು ಚೆಲ್ಲುತ್ತಾ "ಯಾಕಂದರೆ ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭವು ನನಗುಂಟು ಮತ್ತು ವಿರೋಧಿಗಳು ಬಹಳ ಮಂದಿ ಇದ್ದಾರೆ." ಎಂದು ಬರೆಯುತ್ತಾನೆ (1 ಕೊರಿಂಥದವರಿಗೆ 16:9) ಅವಕಾಶಗಳು ವಿರೋಧಗಳು ಒಂದರ ನಂತರ ಒಂದು ಬರುತ್ತಲೇ  ಇರುತ್ತವೆ ಎಂಬುದನ್ನು ಪೌಲನು ಅರಿತವನಾಗಿದ್ದನು. ನಾವು ಯಾವಾಗ ಬಿಡುಗಡೆಯ ಅಂಚಿನಲ್ಲಿ ಇರುತ್ತೇವೆಯೋ ಆ ಸಮಯದಲ್ಲಿಯೇ ಈ ಎಲ್ಲ  ಪ್ರತಿರೋಧಗಳನ್ನು ನಿರೀಕ್ಷಿಸಬಹುದು.

ಸೇವೆಯಲ್ಲಿ ಪೌಲನು ಎದುರಿಸಿದ ಅಸಾಮಾನ್ಯವಾದ  ಸವಾಲುಗಳು ಸತ್ಯವೇದದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಅವನು  ಕೊರಡೆಗಳಿಂದ ಹೊಡೆಸಿಕೊಂಡನು. ತಲೆಕೆಳಗಾಗಿ ನೇತು ಹಾಕಿ ಪಾದಗಳಿಗೆ ಚಾವಟಿಗಳಿಂದ ಹೊಡೆಸಿಕೊಂಡನು. ಸುವಾರ್ತಾ ಪ್ರಯಾಣದಲ್ಲಿ ಅವನಿದ್ದ ಹಡಗು ಅನೇಕ ಬಾರಿ ಒಡೆದು ಹೋಗಿತ್ತು. ದುಷ್ಟಮೃಗಗಳಿಂದ ದಾಳಿಗೆ ಒಳಗಾದನು. ಸೆರೆಮನೆಗೆ ಹಾಕಲ್ಪಟ್ಟನು ಮತ್ತು ಕಲ್ಲೆಸೆದು ಅವನನ್ನು ಕೊಲ್ಲಲೂ  ನೋಡಿದ್ದರು. ಇಂತಹ ಅನೇಕ ಕಠಿಣವಾದ ಸಂಕಷ್ಟಗಳನ್ನು ಪೌಲನು ಹಾದುಹೋಗಿದ್ದನು.
(2ಕೊರಿಯಂತೆ 11:23-27)  ಉಕ್ಕಿ ಬರುವಂತ ಈ ಎಲ್ಲಾ ಅಡೆತಡೆಗಳ ಮಧ್ಯದಲ್ಲೂ  ಅವನಲಿದ್ದ  ದೃಢ ಮನೋಭಾವ ಮತ್ತು ಅಚಲವಾದ ನಂಬಿಕೆಯು ಅವನನ್ನು ಮುನ್ನಡೆಯುವಂತೆ ಪ್ರೇರೆಪಣೆ ಮಾಡುತ್ತಿತ್ತು. ಅವನಿಗೆ ಉಂಟಾಗುವ ಎಲ್ಲಾ ಉಪದ್ರವಗಳು ಅವನನ್ನು ತಡೆದು ಹಿಂದಿಕ್ಕುತ್ತಿದ್ದರೂ  ತನ್ನನ್ನು ಚೇತರಿಸಿಕೊಂಡು ಮುಂದುವರಿಯುತ್ತಿದ್ದ ಅವನ ಮನೋಭಾವವು ನಿಜಕ್ಕೂ ನಮಗೆ ಅನುಕರಣೆಮಾಡಲು ಯೋಗ್ಯವಾದದ್ದು.

ನಾವು ವಿರೋಧಗಳನ್ನು ಎದುರುಗೊಂಡಾಗ ನಾವು ನಿರ್ಣಾಯಕವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆಗ  ನಾವು ಹಿಂದೆ ಸರಿದುಕೊಳ್ಳುತ್ತೇವಾ? ಅಥವಾ ಬಿಟ್ಟುಕೊಡುತ್ತೇವಾ? ಅಥವಾ ಪೌಲನ ರೀತಿಯ ಮನೋಭಾವವನ್ನು ಅಳವಡಿಸಿಕೊಂಡು ಸವಾಲುಗಳನ್ನು ಎದುರಿಸುತ್ತೇವಾ?

[ಜಯಶಾಲಿಗಳಾದವರಿಗೆ ಇರುವ ಬಹುಮಾನದ ಕುರಿತು ಸತ್ಯವೇದ ನಮಗೆ ಹೇಳುತ್ತದೆ.
"ನಾನು ಜಯಹೊಂದಿ ನನ್ನ ತಂದೆಯೊಡನೆ ಸಿಂಹಾಸನದಲ್ಲಿ ಕೂತುಕೊಂಡೆನು; ಹಾಗೆಯೇ ಜಯಹೊಂದುವವನನ್ನು ನನ್ನೊಡನೆ ಸಿಂಹಾಸನದಲ್ಲಿ ಕೂತುಕೊಳ್ಳುವಂತೆ ಮಾಡುವೆನು."ಎಂದು ಪ್ರಕಟಣೆ 3: 21ರ ವಾಕ್ಯ ನಮಲ್ಲಿ ಭರವಸೆಯನ್ನು ತುಂಬುತ್ತದೆ.

ದೇವರ ದೃಷ್ಟಿಯಲ್ಲಿ ಯಶಸ್ಸನ್ನು ವಿರೋಧಗಳ ಅನುಪಾತದ ಅಳೆಯಲಾಗುವುದಿಲ್ಲ. ಆದರೆ ಅದನ್ನು ಜಯಿಸಲು ನಾವು ಪ್ರದರ್ಶಿಸುವ ನಮ್ಮ ಪರಿಶ್ರಮ ಮತ್ತು ನಂಬಿಕೆಯಿಂದ ಅಳೆಯಲಾಗುತ್ತದೆ.

ನೆಹಮಿಯನ ಚರಿತ್ರೆಯು ವಿರೋಧಗಳನ್ನು ಎದುರಿಸಲು ಮಾಡಬೇಕಾದ ಕಾರ್ಯಗಳ ಮೌಲ್ಯವುಳ್ಳ ಪಾಠಗಳನ್ನು ನಮಗೆ ಕಲಿಸುತ್ತದೆ. ಯೆರುಸಲೆಮಿನ ಪೌಳಿ ಗೋಡೆಗಳ ದುರವಸ್ಥೆಯ ಕುರಿತು ಕೇಳಿದಾಗ ನೆಹೆಮಿಯಾನ ಮೊದಲ ಪ್ರತಿಕ್ರಿಯೆ ಉಪವಾಸ ಮತ್ತು ಪ್ರಾರ್ಥನೆಗಳ ಮೂಲಕ ದೇವರ ಮಾರ್ಗದರ್ಶನವನ್ನು ಕೋರಿಕೊಳ್ಳುವುದಾಗಿತ್ತು.( ನೆಹಮಿಯ 1:4-11) ಪೌಳಿಗೋಡೆಯ  ನಿರ್ಮಾಣದ ಕಾಲದುದ್ದಕ್ಕೂ ಅವನು ದೇವರ ಮೇಲೆಯೇ  ಅವಲಂಬಿತನಾಗಿದ್ದನು. ತನ್ನ ಶತ್ರುಗಳಿಂದ ಬೆದರಿಕೆಗಳು, ಪರಿಹಾಸ್ಯಗಳು ಬರುವಾಗ ನೆಹೆಮಿಯಾನು ಅದಕ್ಕಾಗಿ ಪ್ರಾರ್ಥಿಸಿದನು.‭
"ನಮ್ಮ ದೇವರೇ ಕೇಳು; ಅವರು ನಮ್ಮನ್ನು ಎಷ್ಟು ಹೀಯಾಳಿಸುತ್ತಾರೆ! ಈ ನಿಂದೆಯನ್ನು ಅವರ ತಲೆಯ ಮೇಲೆಯೇ ಬರಮಾಡು. ಅವರು ದೇಶಭ್ರಷ್ಟರಾಗಿ ಸೂರೆ ಹೋಗುವಂತೆ ಮಾಡು."(ನೆಹೆಮೀಯ 4:4). ನೆಹೆಮಿಯಾನು  ಕಾವಲುಗಾರರನ್ನು ನೇಮಿಸುವ ಮೂಲಕ ಪೌಳಿ ಗೋಡೆಯ ಕೆಲಸ ಮಾಡುವವರ ಕೈಗಳನ್ನು  ಬಲಪಡಿಸಿದನು ಮತ್ತು "...ನಮ್ಮ ದೇವರು ನಮಗೋಸ್ಕರ ಯುದ್ಧ ಮಾಡುವನು " ಎಂಬ ಭರವಸೆಯ ಮಾತುಗಳಿಂದ ಅವರನ್ನು ಉತ್ತೇಜನಗೊಳಿಸಿದನು.(ನೆಹಮಿಯ 4:20)

ನೆಹೆಮಿಯಾನ  ಕಾರ್ಯ ತಂತ್ರದ ಮತ್ತು ಪ್ರಾರ್ಥನಾ ಪರತ್ವದ ವಿಧಾನವು ನಂಬಿಕೆಯನ್ನು ಕ್ರಿಯೆಗಳೊಂದಿಗೆ  ಸಂಯೋಜಿಸುವ ಪ್ರಾಮುಖ್ಯತೆಯನ್ನು ನಮಗೆ ಕಲಿಸಿಕೊಡುತ್ತದೆ. ಯಾವುದೇ ಕಾರಣಕ್ಕೂ ತಾನು ಕೈ ಹಾಕಿದ ಕೆಲಸವನ್ನು ನಿಲ್ಲಿಸಲು ನೆಹಮಿಯನು  ಅನುವು ಮಾಡಿಕೊಡಲಿಲ್ಲ. ಆದರೆ ಆ ಕೆಲಸಗಳನ್ನು ಪೂರೈಸಲು ಕೆಲವೊಂದು ಯೋಜನೆಗಳನ್ನು ಅಳವಡಿಸಿಕೊಂಡನು. ಹಾಗೆಯೇ, ನಾವು ಸಹ ಯಾವುದೇ ಅಡೆತಡೆಗಳನ್ನು ಜಯಿಸಲು ಬೇಕಾದ ಬಲವನ್ನು ಜ್ಞಾನವನ್ನು ದೇವರು ನಮಗೆ ಒದಗಿಸುತ್ತಾನೆ ಎಂದು ನಂಬುವ ಮೂಲಕ ನಾವು ನಮ್ಮ ಕರೆಯಲ್ಲಿ ಸ್ಥಿರವಾಗಿ ನಿಲ್ಲಬೇಕು.

 ನಾವು ನಮ್ಮ ಜೀವಿತದಲ್ಲಿಯೂ ನಮ್ಮ ದೇವರ ಉದ್ದೇಶಗಳನ್ನು ಪೂರೈಸಲು ಪ್ರಯತ್ನಿಸುವಾಗ ನಿಸ್ಸಂದೇಹವಾಗಿ ವಿರೋಧಗಳನ್ನು ಎದುರಿಸಬೇಕಾಗುತ್ತದೆ. ಅದು ಟೀಕೆಯ ರೂಪದಲ್ಲೂ ಅಥವಾ ಅಡೆತಡೆಗಳ ರೂಪದಲ್ಲೂ ಅಥವಾ ವೈಯಕ್ತಿಕವಾದ ಪರಿಶೋಧನೆಗಳ ರೂಪದಲ್ಲೂ ಬರಬಹುದು. ಆಗ ನಾವು ನೆಹೆಮಿಯಾನ ಮತ್ತು ಪೌಲನ ಉದಾಹರಣೆಗಳಿಂದ ಬಲಹೊಂದಬಹುದು. ದೃಢವಾದ ನಂಬಿಕೆಯನ್ನು ಕಾಪಾಡಿಕೊಳ್ಳುವ ಮೂಲಕ ದೇವರ ಮಾರ್ಗದರ್ಶನವನ್ನು ಹುಡುಕುವ ಮೂಲಕ ಮತ್ತು ದೃಢ ಸಂಕಲ್ಪದಿಂದ ನಾವು ಯಾವುದೇ ರೀತಿಯ ಪ್ರತಿಕೂಲತೆಗಳನ್ನು ಜಯಿಸಬಹುದಾಗಿದೆ.

ನಂಬಿಕೆಯ ಪ್ರಯಾಣವು ಯಾವಾಗಲೂ ಸುಗಮವಾಗಿರುವುದಿಲ್ಲ. ಆದರೆ ನಮಗೆ ಒದಗುವ ಪ್ರತಿಕೂಲತೆಗಳಿಂದ ನಮ್ಮ ನಿಜವಾದ ಗುಣವು ಬಹಿರಂಗಗೊಳ್ಳುತ್ತದೆ. "ನಿಮ್ಮ ಯಶಸ್ಸನ್ನು ನಿಮ್ಮ ಸಾಧನೆಗಳ ಮೂಲಕ ಅಳಿಯಲಾಗುವುದಿಲ್ಲ. ಆದರೆ ನೀವು ಜಯಿಸಿದ ವಿರೋಧಗಳಿಂದ ಅಳಿಯಲಾಗುತ್ತದೆ" ಎಂದು ಒಮ್ಮೆ ಒಬ್ಬರು ಹೇಳಿದ್ದಾರೆ. ಆದ್ದರಿಂದ ನಾವು ಸವಾಲುಗಳನ್ನು ಸ್ವೀಕರಿಸೋಣ. ದೇವರು ನಮ್ಮ ಕಡೆ ಇದ್ದರೆ ನಾವು ಜಯಶಾಲಿಗಳಾಗಿ ಹೊರಹೊಮ್ಮುತ್ತೇವೆ ಎಂಬುದನ್ನು ತಿಳಿದುಕೊಳ್ಳೋಣ.
Prayer
ತಂದೆಯೇ, ನನಗೆ ಎದುರಾಗುವ  ಪ್ರತಿಯೊಂದೂ ದೈತ್ಯ ಶಕ್ತಿಯನ್ನು, ನನಗೆ ಎದುರಾಗಿ ನಿಂತಿರುವಂತಹ ಪ್ರತಿಯೊಂದು ಪರ್ವತಗಳನ್ನು ಜಯಿಸುವ ನಿನ್ನ ಬಲವನ್ನು ನನಗೆ ಅನುಗ್ರಹಿಸು. ನೀನು ಉನ್ನತ ಮಟ್ಟದ ಮಹಿಮೆಗೆ ನನ್ನನ್ನು ಕೊಂಡೊಯ್ಯುತ್ತಿರುವುದಕ್ಕಾಗಿ ನಿನಗೆ ಸ್ತೋತ್ರ. ನಿನ್ನ ವಾಕ್ಯದ ಮೇಲೆಯೇ ನಾನು ನಿಲ್ಲುವಂತೆ ನನ್ನನ್ನು  ಬಲಪಡಿಸು ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ, ಆಮೆನ್.


Join our WhatsApp Channel


Most Read
● ನಡೆಯುವುದನ್ನು ಕಲಿಯುವುದು
● ಇದು ಕೇವಲ ಸಾಂದರ್ಭಿಕವಾಗಿ ಹೇಳುವ ಶುಭಾಶಯವಲ್ಲ
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವರಿಗೇ ಪ್ರಥಮ ಸ್ಥಾನ ನೀಡುವುದು.#1
● ನಿಮ್ಮ ಮೇರೆಯಲ್ಲಿಯೇ ಇರಿ
● ನಮ್ಮ ಹಿಂದಿರುವ ಉರಿಯುವ ಸೇತುವೆಗಳು
● ತಡೆಗಳನ್ನೊಡ್ಡುವ ಗೋಡೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login