हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಕೆಟ್ಟ ನಡವಳಿಕೆಗಳಿಂದ ಬಿಡುಗಡೆ
Daily Manna

ಕೆಟ್ಟ ನಡವಳಿಕೆಗಳಿಂದ ಬಿಡುಗಡೆ

Thursday, 25th of July 2024
2 0 329
Categories : ನಡವಳಿಕೆಯ (Attitude) ಬಿಡುಗಡೆ (Deliverance)
ನೀವು ನಿಮ್ಮ ಜೀವಿತವನ್ನು  ಕರ್ತನಾದ ಯೇಸುಕ್ರಿಸ್ತನಿಗೆ ಒಪ್ಪಿಸಿಕೊಟ್ಟ ಕೂಡಲೇ ನೀವು ನಿಮ್ಮಲ್ಲಿರುವ ಕೆಟ್ಟ ಅಥವಾ ನಟರಾತ್ಮಕ ನಡವಳಿಕೆಗಳಿಂದ ಬಿಡುಗಡೆ ಹೊಂದಿಕೊಳ್ಳಬೇಕು.

ಇಂದಿನ ಕಾಲಮಾನದಲ್ಲಿ ಪ್ರಚಲಿತವಿರುವ ಕೆಲವು ಸಾಮಾನ್ಯವಾದ ನಕರಾತ್ಮಕ ನಡವಳಿಕೆಗಳಾಗುವೆಂದರೆ:

1. ಮತ್ತೊಬ್ಬರೊಡನೆ ಹೋಲಿಸಿಕೊಳ್ಳುವುದು 
ನಿಮ್ಮ ಕುರಿತು ನೀವೇ ಕೆಟ್ಟದಾಗಿ ಯೋಚಿಸಿಕೊಳ್ಳಲು ಇರುವ ಸುಲಭವಾದ ಮತ್ತು ಅತ್ಯಂತ ಸಾಮಾನ್ಯವಾದ  ಮಾರ್ಗವೆಂದರೆ ನಿಮ್ಮನ್ನು ಇತರರೊಟ್ಟಿಗೆ ಹೋಲಿಸಿಕೊಂಡು ನೋಡಿಕೊಳ್ಳುವುದು.ಇದು ಇನ್ನೊಬ್ಬರನ್ನು ನೋಡಿ ಕಲಿತುಕೊಳ್ಳುವುದು ಅಥವಾ ಬೆಳೆಯುವುದು ಎಂದೂ ಅರ್ಥೈಸಿಕೊಳ್ಳಬಹುದು. ಆದರೆ ಬಹುತೇಕರು ಈ ಹೋಲಿಕೆಯ ಸುಳಿಯಲ್ಲಿ ಸಿಲುಕಿ ಖಿನ್ನತೆಗೆ ಒಳಗಾಗುತ್ತಾರೆ ಮತ್ತು ಅಸುರಕ್ಷತೆಯನ್ನು ಅನುಭವಿಸುತ್ತಾರೆ. ಕೆಲವೊಮ್ಮೆ ಆ ಇತರ ವ್ಯಕ್ತಿಗಳ ಕುರಿತು ಹೊಟ್ಟೆಕಿಚ್ಚು ಪಡಲು ಆರಂಭಿಸುತ್ತಾರೆ ಮತ್ತು ಎಲ್ಲರೂ ತಮಗೆ ವಿರೋಧವಾಗಿಯೇ ಇದ್ದಾರೆ ಎಂದು ಅಂದುಕೊಳ್ಳಲು ಆರಂಭಿಸುತ್ತಾರೆ. ಆದರೆ ಆರೋಗ್ಯಕರವಾದ ಮನಸ್ಥಿತಿ ಯಾವುದೆಂದರೆ ಒಬ್ಬರ ಉನ್ನತಿಯನ್ನು ನೋಡಿ ಅವರ ಪರಿಶ್ರಮವನ್ನು ಪ್ರಶಂಸಿಸಿ ಅವರ ಮಾರ್ಗಗಳನ್ನು ಅನುಸರಿಸಲು ಮನಸು ಮಾಡುವಂತದ್ದಾಗಿದೆ.

2. ಮತ್ತೊಬ್ಬರನ್ನು ದೂಷಿಸುವುದು:
 ಸೂರ್ಯನ ಕೆಳಗಿರುವ ಮತ್ತೊಬ್ಬ ವ್ಯಕ್ತಿಯನ್ನು ದೂಷಿಸುವಂತಹ ದೋಷವು ಸಾಮಾನ್ಯವಾಗಿ ಪ್ರಚಲಿತವಿರುವ ಮತ್ತೊಂದು ನಕರಾತ್ಮಕ ನಡವಳಿಕೆಯಾಗಿದೆ. ಕೆಲವೊಮ್ಮೆ ನೀವು ಇದರಲ್ಲಿ ಎಷ್ಟು ಮುಳುಗಿ ಹೋಗಿದ್ದೀರಿ ಎನ್ನುವ ಪರಿವೇ ನಿಮಗೆ ಇರುವುದಿಲ್ಲ. ನೀವು ಆಡುವ ಪ್ರತಿಯೊಂದು ಮಾತುಗಳು ಪರಿಣಾಮ ಬೀರುವಂಥದ್ದು ಎಂಬುದನ್ನು ನೆನಪಿಡಿರಿ.

3. ನಿರ್ಲಕ್ಷ ಭಾವದ ನಡವಳಿಕೆ:
ಈ ನಿರ್ಲಕ್ಷ್ಯತೆಯ ನಡವಳಿಕೆ ಎಂದರೇನು ? ನೀವು ಎಂದಾದರೂ ಯಾರಾದರೂ ತಮಗೆ ಏನಾದರೂ ಸಮಸ್ಯೆಯಾಗಿ ಪ್ರಾರ್ಥನೆಯ ಅವಶ್ಯಕತೆ ಇದ್ದಾಗ ಮಾತ್ರ ನಡುರಾತ್ರಿಯಲ್ಲಿಯೇ ಕರೆ ಮಾಡಿ ತಮಗಾಗಿ ಪ್ರಾರ್ಥಿಸಿ ಎಂದು ಹೇಳುವ ಜನರನ್ನು ನೋಡಿದ್ದೀರಾ?ಅವರು ಈ ಲೋಕದ ಎಲ್ಲಾ ಜನರಿಗೂ ತಮ್ಮ ಪ್ರಾರ್ಥನಾ ಮನವಿಗಳನ್ನು ಕಳುಹಿಸಿಕೊಡುತ್ತಾರೆ. ಆದಾಗಿಯೂ ಬೇರೆಯವರಿಗೆ ತುರ್ತು ಪ್ರಾರ್ಥನೆಯ ಅಗತ್ಯವಿದ್ದರೆ ಅವರ ಸಂದೇಶಕ್ಕೆ ಪ್ರತಿಕ್ರಿಯೆ ಕೂಡ ನೀಡದೇ ಅವರದೇ ಆದ ವ್ಯವಹಾರಗಳಲ್ಲಿ ಮಗ್ನರಾಗುತ್ತಾರೆ.

ತುರ್ತು ಸಮಯದಲ್ಲಿ ಅಥವಾ ಮುಖ್ಯವಾದ ಪರಿಸ್ಥಿತಿಗಳಲ್ಲಿ ಇತರರು ಸಹಾಯ ನೀಡಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಕೆಲವರಂತೂ ಕೈ ಎತ್ತುವುದಿರಲಿ ಬೆರಳೂ ಕೂಡ ಎತ್ತಲು   ಚಿಂತಿಸುವುದಿಲ್ಲ ಇಂತಹ ಮನೋಭಾವವನ್ನು ನಿರ್ಲಕ್ಷ ನಡವಳಿಕೆ ಎಂದು ವರ್ಣಿಸಲಾಗುತ್ತದೆ.

4. ಗತಿಸಿ ಹೋದ ಕಾಲದ ಕುರಿತೇ ನಿರಂತರವಾಗಿ ಮೆಲಕು  ಹಾಕುತ್ತಿರುವುದು:
 ಹಿಂದಿನ ದಿನಗಳ ಅನುಭವದಿಂದ ಪಾಠ ಕಲಿತುಕೊಳ್ಳುವುದು ಒಳ್ಳೆಯದೇ. ಆದರೆ ಆ ಗತ ಕಾಲದಲ್ಲಿಯೇ  ಸಿಕ್ಕಿಹಾಕಿಕೊಳ್ಳುವುದು ಅದರಲ್ಲೇ ನಿರಂತರವಾಗಿ ಬದುಕುವುದು ಒಳ್ಳೆಯದಲ್ಲ.ಹಿಂದೆ ನಡೆದು ದ್ದನ್ನು  ಬದಲಾಯಿಸಲು ನಮ್ಮಿಂದ ಸಾಧ್ಯವಿಲ್ಲ. ಆದರೆ ಇನ್ನು ಮುಂದೆ ಏನಾಗಬೇಕಿದೆ ಅದನ್ನು ನಾವು ರೂಪಿಸಿಕೊಳ್ಳಬಹುದು ಮತ್ತು ಅದರ ಮೇಲೆ ಪ್ರಭಾವ ಬೀರಲೂಬಹುದು.

ಈ ನಡವಳಿಕೆಗಳು ಹೇಗೆ ರೂಪುಗೊಳ್ಳುತ್ತವೆ

ನಡವಳಿಕೆಗಳು ಸಾಮಾನ್ಯವಾಗಿ ಅನುಭವಗಳ ಪರಿಣಾಮವಾಗಿ ಅಥವಾ ವೀಕ್ಷಣೆಯ ( ಯಾರದೋ ಕುರಿತು ಓದುವಂಥದ್ದು ಸಹ ಇದು ಒಳಗೊಂಡಿರುತ್ತದೆ) ಮೂಲಕ ರೂಪಗೊಳ್ಳುತ್ತದೆ. ಆದ್ದರಿಂದ ನಾವಿಲ್ಲಿ ನಕರಾತ್ಮಕ ಪ್ರಭಾವ ಬೀರದಂತೆ ಎಚ್ಚರಿಕೆ ವಹಿಸಬೇಕು. ನಕರಾತ್ಮಕತೆಯನ್ನು ನಿಮ್ಮ ಜೀವಿತದಲ್ಲಿ ನೆಲೆಗೊಳ್ಳಲು ನಿರಂತರವಾಗಿ ನೀವು ಅನುಮತಿಸುತ್ತಿದ್ದರೆ ಬೇಗನೆ ನೀವು ಆ ಕೆಟ್ಟ ನಡವಳಿಕೆಗಳ ಪರಿಣಿತರಾಗಿ ಬಿಡುವಿರಿ. ಅದಕ್ಕಾಗಿಯೇ "ಸೈತಾನನಿಗೆ ಸ್ಥಳಾವಕಾಶ ಕೊಡಬೇಡಿ (ಅವನಿಗೆ ಎಷ್ಟು ಮಾತ್ರವೂ ಅವಕಾಶ ಕೊಡಬೇಡಿ)" ಎಂದು ಸತ್ಯವೇದ ನಮ್ಮನ್ನು ಎಚ್ಚರಿಸುತ್ತದೆ. " (ಎಫಸ್ಸೆ 4:27). ಹಾಗಾಗಿ ಯಾವಾಗಲೂ ದೇವರ ವಾಕ್ಯದಲ್ಲಿ ನೆಲೆಗೊಳ್ಳುವಂಥದ್ದು ನಿಮ್ಮನ್ನು ನಕಾರಾತ್ಮಕ ನಡವಳಿಕೆಯಿಂದ ಬಿಡುಗಡೆಗೊಳಿಸಿ ಸಕಾರಾತ್ಮಕ ಆಲೋಚನೆಗಳನ್ನು ರೂಪಿಸಿಕೊಳ್ಳುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

"ನಾವು‭ ನಮ್ಮ ನಡವಳಿಕೆಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷವಿುಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು."(1 ಯೋಹಾನನು1:9).ನಕರಾತ್ಮಕ ನಡವಳಿಕೆಯಿಂದ ಬಿಡುಗಡೆಯನ್ನು ಹೊಂದಲು ಇದುವೇ ಮೊದಲ ಹೆಜ್ಜೆಯಾಗಿದೆ.

ಮುಂದಿನ ಹೆಜ್ಜೆ ನೀವು "ಆತ್ಮದಲ್ಲಿ ನೂತನವಾಗುವಂತದ್ದಾಗಿದೆ." (ಎಫಸ್ಸೆ 4:23). ದೇವರ ವಾಕ್ಯಗಳನ್ನು ಧ್ಯಾನಿಸುವ ಮೂಲಕ ನಮ್ಮ ದೈನಂದಿನ ಜೀವಿತದಲ್ಲಿ ಅದರ ಮೌಲ್ಯಗಳನ್ನು ತತ್ವಗಳನ್ನು ನಾವು  ಅಳವಡಿಸಿಕೊಳ್ಳಬೇಕು.

ನಕರಾತ್ಮಕ ನಡವಳಿಕೆಗಳನ್ನು ತಕ್ಷಣವೇ ಪರಿಹರಿಸಿಕೊಳ್ಳದೆ ಹೋದರೆ ಮುಂದೆ ಅದು ಒಬ್ಬ ವ್ಯಕ್ತಿಯ ದೈಹಿಕ ಆರೋಗ್ಯ ಸಂತೋಷ ಮತ್ತು ಯೋಗ ಕ್ಷೇಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ.
Confession
ಯೇಸುವಿನ ನಾಮದಲ್ಲಿ ನಾನು ಕ್ರಿಸ್ತನ ಮನಸ್ಸನ್ನು ನಡವಳಿಕೆಗಳನ್ನು ಹೊಂದಿಕೊಂಡಿದ್ದೇನೆ, ಆಮೇನ್.


Join our WhatsApp Channel


Most Read
● ದಿನ 34:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ‭‭ಕ್ರಿಸ್ತನಲ್ಲಿ ಅರಸರೂ ಯಾಜಕರೂ..
● ಯೇಸು ಕುಡಿದ ದ್ರಾಕ್ಷಾರಸ
● ನೀವು ಯುದ್ಧರಂಗದಲ್ಲಿರುವಾಗ: ಒಳನೋಟ
● ದೇವರ ವಾಕ್ಯವನ್ನು ಹೊಂದಿಕೊಳ್ಳಿರಿ.
● ಗೌರವಿಸುವ ಜೀವಿತ ಜೀವಿಸಿ
● ಪ್ರಾರ್ಥನಾ ಹೀನತೆ ಎಂಬ ಪಾಪ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login