हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಎತ್ತಲ್ಪಡುವಿಕೆ ಮತ್ತು ರೋಶ್ ಹಸನ್ನ
Daily Manna

ಎತ್ತಲ್ಪಡುವಿಕೆ ಮತ್ತು ರೋಶ್ ಹಸನ್ನ

Sunday, 29th of September 2024
4 1 390
Categories : ಎತ್ತಲ್ಪಡುವಿಕೆ (Rapture)
ಸತ್ಯವೇದವು ನಿರ್ದಿಷ್ಟವಾಗಿ ಯಾವಾಗ ಎತ್ತಲ್ಪಡುವಿಕೆ ಸಂಭವಿಸುತ್ತದೆ ಎಂದು ಹೇಳಿಲ್ಲ. 
"ಇದಲ್ಲದೆ ಆ ದಿನದ ವಿಷಯವಾಗಲಿ ಆ ಗಳಿಗೆಯ ವಿಷಯವಾಗಲಿ ನನ್ನ ತಂದೆಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು; ಮಗನಿಗೂ ತಿಳಿಯದು."(ಮಾರ್ಕ 13:32)

ಎತ್ತಲ್ಪಡವಿಕೆ ಸಂಭವಿಸುತ್ತದೆಯೇ? ಇಲ್ಲವೇ? ಎಂಬುದರ ಕುರಿತು ಯಾವುದೇ ಚರ್ಚೆ ಇಲ್ಲ. ಈ ಪ್ರಶ್ನೆಗೆ ಉತ್ತರ ಸತ್ಯವೇದದಲ್ಲಿ ಸ್ಪಷ್ಟವಾಗಿದೆ. ಆದರೆ ಎತ್ತಲ್ಪಡವಿಕೆ ಯಾವಾಗ ನಡೆಯುತ್ತದೆ ಎಂಬುದರ ಕುರಿತು ಆ ಘಟನೆಯ ನಿಖರವಾದ ಸಮಯವೂ ಯಾರಿಗೂ ತಿಳಿದಿಲ್ಲ. ಕರ್ತನಾದ ಯೇಸು ಇದನ್ನು ಲೂಕನ ಸುವಾರ್ತೆಯಲ್ಲಿ ಧೃಡ ಪಡಿಸುತ್ತಾನೆ.

"ನೀವು ಸಹ ಸಿದ್ಧವಾಗಿರ್ರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ ಅಂದನು."(ಲೂಕ 12:40)
ಮತ್ತಾಯ 24:6-7 ರಲ್ಲಿ ಕರ್ತನಾದ ಯೇಸು ವಿವಿಧ ಗುರುತುಗಳ ಕುರಿತು ಮಾತನಾಡಿದ್ದು, ಕರ್ತನ ಆಗಮನ ಯಾವಾಗ ಎಂದು ತಿಳಿಯಲು ಇದರಿಂದ  ನಾವು ಪ್ರಯತ್ನಿಸಬಹುದು.

"ಇದಲ್ಲದೆ ಯುದ್ಧಗಳಾಗುವದನ್ನೂ ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳನ್ನೂ ನೀವು ಕೇಳಬೇಕಾಗಿರುವದು. ಕಳವಳಪಡದಂತೆ ನೋಡಿಕೊಳ್ಳಿರಿ; ಯಾಕಂದರೆ ಹಾಗಾಗುವದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ. [7] ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಭೂಕಂಪಗಳು ಆಗುವವು;"(ಮತ್ತಾಯ 24:6-7)

ನಾವಿಂದು ಜೀವಿಸುತ್ತಿರುವ ಈ ಕಾಲದಲ್ಲಿಯೇ ಹೆಚ್ಚಿನ ಸೂಚನೆಗಳನ್ನು ನಡೆಯುತ್ತಿರುವುದನ್ನು ನಾವು ಕಾಣಬಹುದಾಗಿದೆ. ಆದ್ದರಿಂದ ಕರ್ತನ ಆಗಮನಕ್ಕೆ ಇನ್ನು  ಹೆಚ್ಚು ಸಮಯ ಉಳಿದಿಲ್ಲ ಎಂಬುದನ್ನು ನಾವು ನಿರೀಕ್ಷಿಸಬಹುದು. ಈ ಎತ್ತಲ್ಪಡುವಿಕೆ ಯಾವಾಗ ಆಗುತ್ತದೆ ಎಂಬುದಕ್ಕೆ ಸತ್ಯವೇದವು ಮತ್ತೊಂದು ಆಸಕ್ತಿದಾಯಕ ಸುಳಿವನ್ನು ನೀಡುತ್ತದೆ. ಅದುವೇ ಕರ್ತನು ನೇಮಿಸಿದ ಹಬ್ಬಗಳು. ಆತನ ಆಗಮನದ ಸಮಯದಲ್ಲಿ ಪವಿತ್ರ ಸಭೆಯು ಘೋಷಣೆ ಕೂಗುವ ಸಮಯವಾಗಿರುತ್ತದೆ.
 (ಯಾಜಕಾ ಕಾಂಡ 23:4)

ಕರ್ತನ ಏಳು ಹಬ್ಬಗಳು ಹೀಗಿವೆ 
  1. ಪಸ್ಕ ಹಬ್ಬ 
  2. ಹುಳಿ ಇಲ್ಲದ ರೊಟ್ಟಿ ಮುರಿಯುವ ಹಬ್ಬ 
  3. ಪ್ರಥಮ ಫಲ ಅರ್ಪಿಸುವ ಹಬ್ಬ 
  4. ಪಂಚಶತ್ತಾಮ  ಹಬ್ಬ 
  5. ತುತ್ತೂರಿಗಳ ಹಬ್ಬ 
  6. ದೋಷ ಪರಿಹಾರಕ ದಿನ 
  7. ಪರ್ಣಶಾಲೆಗಳ ಹಬ್ಬ 
ಈ ಏಳು ಹಬ್ಬಗಳಲ್ಲಿ ಮೊದಲ ನಾಲ್ಕನ್ನು ಕರ್ತನಾದ ಯೇಸು ನೆರವೇರಿಸಿದನು.

  1. ಪಕ್ಕ ಹಬ್ಬದಲ್ಲಿ ದೇವರ ಕುರಿಮರಿಯಾಗಿ ಯೇಸು ಬಲಿಯಾದನು.
  2. ಯೇಸುವಿನ ಹೂಣುವಿಕೆ ಹುಳಿಯಿಲ್ಲದ ರೊಟ್ಟಿಯ ಹಬ್ಬ.
  3. ಯೇಸುವಿನ ಪುನರುತ್ಥಾನವು ಪ್ರಥಮ ಫಲದ ಜಾತ್ರೆಯಾಗಿದೆ.
  4. ಪವಿತ್ರಾತ್ಮನ ಆಗಮನ ದಿನವು ಪಂಚಶತ್ತಾಮ ಹಬ್ಬ ವಾಗಿದೆ.
ಅತ್ಯಂತ ಆಸಕ್ತಿದಾಯಕ ವಿಷಯವೇನೆಂದರೆ ಯೇಸುವಿನ ಶಿಲುಬೆ ಮರಣ,  ಹೂಣುವಿಕೆ, ಪುನರುತ್ಥಾನ ಮತ್ತು ಪವಿತ್ರಾತ್ಮನ ಆಗಮನ ಎಲ್ಲವೂ ಈ ಹಬ್ಬಗಳನ್ನು ಆಚರಿಸಬೇಕಾದ ನಿಖರವಾದ ದಿನಗಳಲ್ಲೇ ಸಂಭವಿಸಿದೆ.

ಇನ್ನು ಮೂರು ಜಾತ್ರೆಗಳು ನೆರವೇರಬೇಕಾಗಿದೆ.
  1. ತುತ್ತೂರಿಗಳ ಹಬ್ಬ 
  2. ದೋಷ ಪರಿಹಾರಕ  ದಿವಸ 
  3. ಪರ್ಣಶಾಲೆಗಳ ಜಾತ್ರೆ
"ದೇವರು ನೋಹನನ್ನು ನೆನಪಿಸಿಕೊಂಡಾಗ"
( ಆದಿ ಕಾಂಡ 8:1)ಎಂದರೆ, ದೇವರು ಅವನನ್ನು ಮರೆತಿದ್ದಾನೆ ಎಂದು ಶಾಸ್ತ್ರವು ಹೇಳುತ್ತಿಲ್ಲ. ಬದಲಾಗಿ ನೋಹನ ವಿದೇಯತೆ ದೆಸೆಯಿಂದ ಅವನ ಪರವಾಗಿ ದೇವರು ಮಾತನಾಡುವ ಸಮಯ ಬಂದಿದೆ ಎಂಬುದಾಗಿ ದೇವರ ವಾಕ್ಯ ಹೇಳುತ್ತಿದೆ ಅಷ್ಟೇ. ಆತನ ನೋಹನ ಪರವಾಗಿ ಮಾತನಾಡಲು ಆರಂಭಿಸಿದಾಗ, ಪ್ರವಾಹದ ನೀರು ಕಡಿಮೆಯಾಗಲು ಆರಂಭಿಸಿತು. ವಿಚಿತ್ರವೆಂದರೆ ನೋಹನು ತನ್ನ  ನಾವೆಯ ಬಾಗಿಲನ್ನು ತೆರೆದು ಭೂಮಿಯ ಮೇಲೆ ನೋಡಿದ ದಿನವೂ ಸಹ "...ಮೊದಲ ತಿಂಗಳ ಮೊದಲ ದಿನ..." ( ಆದಿ 8:13). ಈ ನಿರ್ದಿಷ್ಟ ದಿನವನ್ನೇ ತುತ್ತೂರಿಯ ದಿನವೆಂದು ಕರೆಯಲಾಗಿದೆ. ಈ ತುತ್ತೂರಿಯ  ಹಬ್ಬವನ್ನು ಯಹೂದ್ಯರು ತಮ್ಮ ವರ್ಷದ ಆರಂಭ ದಿನ " ರೋಷ್ ಹಸನ್ನತ್" ಎಂದು ಕರೆಯುತ್ತಾರೆ.

ಚಂದ್ರನ ಹಂತಗಳು
path

ರೋಷ ಹಸನವು ಅಮಾವಾಸ್ಯೆಯಂದು ಜರಗುವಂತ ಏಕೈಕ ಹಬ್ಬದ ದಿನವಾಗಿದೆ. ಯಹೂದ್ಯರ ಕ್ಯಾಲೆಂಡರ್ ಚಂದ್ರಮಾನ ವಾಗಿರುವ ಕಾರಣ ಈ ಹಬ್ಬವು ನಮ್ಮ ಹಾಗೂ ಯಹುದ್ಯರ ಕ್ಯಾಲೆಂಡರ್ ನಲ್ಲಿಯೂ ಏಕ ರೀತಿಯಾಗಿರುವುದಿಲ್ಲ. 2024ರ ರೋಷ ಹಸನ್ನ ಅಕ್ಟೊಬರ್ 2ರ ಸಂಜೆ ಆರಂಭವಾಗಿ ಅಕ್ಟೊಬರ್ 4ರ ಸಂಜೆ ಕೊನೆಗೊಳ್ಳುತ್ತದೆ.

"ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಬೇಕು - ಏಳನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನಿಮಗೆ ಸಂಪೂರ್ಣ ವಿರಾಮವಿರಬೇಕು. ಅದನ್ನು ತುತೂರಿಗಳ ಧ್ವನಿಯಿಂದ ಪ್ರಕಟಪಡಿಸಬೇಕು. ದೇವಾರಾಧನೆಗಾಗಿ ಸಭೆಕೂಡಬೇಕು."(ಯಾಜಕಕಾಂಡ 23:24).

ತುತ್ತೂರಿಗಳ ಹಬ್ಬದ ದಿನದಂದು ತುತ್ತೂರಿಯನ್ನು ಊದಲಾಗುತ್ತದೆ. ಸತ್ಯವೇದ ವಿದ್ವಾಂಸರು ಸಭೆಯ ಎತ್ತಲ್ಪಡವಿಕೆಯು ತುತ್ತೂರಿ ಹಬ್ಬದ ದಿನದಂದು ಆಗಬಹುದೆಂದು ದೀರ್ಘಕಾಲದಿಂದಲೂ ಲೆಕ್ಕಿಸಿದ್ದಾರೆ.

"ಕೇಳಿರಿ, ಇದುವರೆಗೆ ಗುಪ್ತವಾಗಿದ್ದ ಸಂಗತಿಯನ್ನು ನಿಮಗೆ ತಿಳಿಸುತ್ತೇನೆ - ನಾವೆಲ್ಲರೂ ನಿದ್ರೆ ಹೋಗುವದಿಲ್ಲ; ಆದರೆ ಕಡೇ ತುತೂರಿಯ ಧ್ವನಿಯಾಗುವಾಗ ನಾವೆಲ್ಲರು ಒಂದು ಕ್ಷಣದಲ್ಲೇ ರೆಪ್ಪೆ ಬಡಿಯುವಷ್ಟರೊಳಗಾಗಿ ಮಾರ್ಪಡುವೆವು. ತುತೂರಿಯು ಊದಲಾಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ಮಾರ್ಪಡುವೆವು." ಎಂದು ಅಪೋಸ್ತಲನಾದ ಪೌಲನು ಬರೆಯುತ್ತಾನೆ (1 ಕೊರಿಂಥದವರಿಗೆ 15:51-52)

ಪ್ರತಿ ವರ್ಷವೂ ಯಹೂದಿಯರು ತುತ್ತೂರಿ ಹಬ್ಬವನ್ನು ಆಚರಿಸುತ್ತಾರೆ. ತುತ್ತೂರಿ ಹಬ್ಬ ಹತ್ತಿರ ಬಂದಾಗಲೆಲ್ಲಾ ಅವರ ಭಾವನೆಗಳು ಉತ್ತುಂಗಕ್ಕೇರುತ್ತವೆ. ಎತ್ತಲ್ಪಡುವಿಕೆಯು ಯಾವಾಗ ಸಂಭವಿಸಬಹುದು ಎಂದು ನಮಗೆ ತಿಳಿದಿಲ್ಲ. ಆದರೆ ಒಂದು ವಿಷಯ ಖಚಿತವಾಗಿದೆ ಇದು ತುತ್ತೂರಿನ ಹಬ್ಬದ ದಿನದಂದು ನಡೆಯುತ್ತದೆಎಂದು. ನಮ್ಮ ಕೆಲಸ ಅದಕ್ಕಾಗಿ ಸಿದ್ಧವಾಗಿರುವುದು ಅಷ್ಟೇ.


Prayer
(ಪ್ರತಿಯೊಂದು ಪ್ರಾರ್ಥನಾ ಕ್ಷಿಪಣಿಯನ್ನು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತಸುತ್ತಲೇ ಇರಿ. ಆನಂತರವೇ ಮುಂದಿನದಕ್ಕೆ ತೆರಳಿರಿ. ಪ್ರತಿಯೊಂದು ಪ್ರಾರ್ಥನೆಯನ್ನು ನಿಮ್ಮ ವೈಯಕ್ತಿಕ ಪ್ರಾರ್ಥನೆಗಳಾಗಿ ಮಾಡಿಕೊಳ್ಳಿ. ಪ್ರತಿ ಪ್ರಾರ್ಥನೆಯ ಅಂಶವನ್ನು ಕನಿಷ್ಠ ಒಂದು ನಿಮಿಷವಾದರೂ ಪ್ರಾರ್ಥನೆ ಮಾಡಿರಿ)

 1) ತಂದೆಯೇ ಯಾರೊಬ್ಬರಾದರೂ ನಾಶವಾಗುವುದು ನಿಮ್ಮ ಚಿತ್ತವಲ್ಲಾ. ಅದಕ್ಕಾಗಿ ಯೇಸುನಾಮದಲ್ಲಿ ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ.

 2) ತಂದೆಯೇ, ಯೇಸು ನಾಮದಲ್ಲಿ ನಿಮ್ಮ ಜ್ಞಾನ ವಿವೇಕ ಹಾಗೂ ಪ್ರಕಟಣೆಯ ಆತ್ಮವನ್ನು ------(ವ್ಯಕ್ತಿಯ ಹೆಸರುಗಳನ್ನು ಉಲ್ಲೇಖಿಸಿ) ಅನುಗ್ರಹಿಸಿ

 3) ಕರ್ತನನ್ನು ಸ್ವೀಕರಿಸದಂತೆ ------(ವ್ಯಕ್ತಿಯಹೆಸರನ್ನು ಹೇಳಿ ) ಮನಸ್ಸನ್ನು ಮಂಕುಗೊಳಿಸುತ್ತಿರುವ ಪ್ರತಿಯೊಂದು ಶತ್ರುವಿನ ಭದ್ರಕೋಟೆಗಳು ಯೇಸು ನಾಮದಲ್ಲಿ ನೆಲಕಚ್ಚಲಿ.

4). ಕರ್ತನೇ ನಿಮ್ಮ ಬೆಳಕು -----(ವ್ಯಕ್ತಿಯ ಹೆಸರನ್ನು ಹೇಳಿ) ಮೇಲೆ ಬೆಳಗಲಿ. ಅವರನ್ನು ರಕ್ಷಿಸು ಓ ಕರ್ತನೆ.


Join our WhatsApp Channel


Most Read
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ದೇವರ ಪ್ರೀತಿಯನ್ನು ಅನುಭವಿಸುವುದು
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ
● ನಂಬಿಕೆಯ ಮೂಲಕ ಕೃಪೆಯನ್ನು ಪಡೆದುಕೊಳ್ಳುವುದು
● ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ?
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ಆತ್ಮನ ಸುರಿಸಲ್ಪಡುವಿಕೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login