हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಪರಲೋಕದ ವಾಗ್ದಾನ
Daily Manna

ಪರಲೋಕದ ವಾಗ್ದಾನ

Monday, 7th of October 2024
2 1 390
Categories : ಪರಲೋಕ (Heaven)
ನಾವು ಎಲ್ಲೋ ಒಂದು ಕಡೆ ಶಾಶ್ವತವಾಗಿ ಬದುಕುತ್ತೇವೆ ಎಂಬ ಭಾವನೆಯು ಮಾನವ ಇತಿಹಾಸದಲ್ಲಿನ  ಪ್ರತಿಯೊಂದು ನಾಗರಿಕತೆಯಲ್ಲಿಯೂ  ರೂಪುಗೊಂಡಿದೆ.

ನಾನು ಈಜಿಪ್ಟಿಗೆ ಭೇಟಿ ನೀಡಿದಾಗ ಈಜಿಫ್ಟಿನ ಪಿರಮಿಡ್ ಗಳಲ್ಲಿ  ಲೇಪನಗಳಿಂದ ಸುತ್ತಿಟ್ಟ ದೇಹಗಳ ಪಕ್ಕದಲ್ಲಿ ಅವರಿಗೆ ಭವಿಷ್ಯ ಲೋಕದಲ್ಲಿ ಬೇಕಾಗುವ ಮಾರ್ಗದರ್ಶಕ ನಕ್ಷೆಗಳನ್ನು ಇರಿಸಲಾಗಿದ್ದನ್ನು ನೋಡಿದ್ದೇನೆ. ಇದನ್ನು ಅಲ್ಲಿನ ಒಬ್ಬ ಗೈಡ್ ನನಗೆ ವಿವರಿಸಿದನು. ಈಗಲೂ ಕೂಡ ಅವರು ಅದನ್ನೇ ನಂಬುತ್ತಾರೆ.

ರೋಮ್ ಇಟಲಿಯಲ್ಲಿ ಯೇಸುವಿನ ರಕ್ತಸಾಕ್ಷಿಯಾಗಿ ಸತ್ತವರ ದೇಹಗಳನ್ನು ರೋಮನ್ ಶೈಲಿಯ ಕ್ಯಾಟಾಕಾಂಬ್ಸ್ ಗಳಲ್ಲಿ ಸಮಾಧಿ ಮಾಡಲಾಗಿದೆ. ಈ ಕ್ಯಾಟಾಕಾಂಬ್ಸ್ಗಳ ದಿನಾಂಕವು ಎರಡನೇ ಶತಮಾನದ ದಿನಗಳಾಗಿವೆ. ಈ ಕ್ಯಾಟಕಾಂಬ್ಸ ಗಳ ಗೋಡೆ ಮೇಲೆ ಸುಂದರವಾದ ಪ್ರದೇಶಗಳು, ಮಕ್ಕಳು ಆಡುತ್ತಿರುವಂತಹ ಚಿತ್ರಣಗಳು ಮತ್ತು ಜನರು ಸಂತೋಷವಾಗಿ ಭೋಜನಕೂಟದಲ್ಲಿ ಪಾಲ್ಗೊಳ್ಳುತ್ತಿರುವಂತಹ ಅನೇಕ ಚಿತ್ರಗಳನ್ನು ಬಿಡಿಸಲಾಗಿದೆ.

ಕೆಲವು ವರ್ಷಗಳ ಹಿಂದೆ ನಾನು ಪ್ರಾರ್ಥಿಸುತ್ತಿರುವಾಗ ಪರಲೋಕದ ದರ್ಶನವಾಗಿ ಅದರಲ್ಲಿ ಪರಲೋಕದಲ್ಲಿರುವ ಕಟ್ಟಡಗಳನ್ನು ಕಂಡೆನು. ಈ ಕಟ್ಟಡಗಳು ಬೃಹದಾಕಾರವಾಗಿದ್ದು ಅದರ ಹೊರ ಮೇಲ್ಮೈ ಪ್ರಕಾಶಮಾನವಾಗಿ ಹೊಳೆಯುತ್ತಿತ್ತು. ಅದೊಂದು ಪಟ್ಟಣದ ಹಾಗಿತ್ತು. ಒಂದು ನಿರ್ದಿಷ್ಟ ರೀತಿಯ ಪ್ರಕಾಶವು ಪಟ್ಟಣದಲ್ಲೆಲ್ಲಾ ಹರಡಿತ್ತು.

ಈಗ ಕೆಲವರಿಗೆ ಇವೆಲ್ಲವೂ ಕಲ್ಪನಾ ಕಥೆಗಳಂತೆ ಅನಿಸಬಹುದು ಆದರೆ ಇವೆಲ್ಲವೂ ವಾಕ್ಯಧಾರಿತವಾಗಿದೆ.

"ನನಗಂತೂ ಬದುಕುವದಂದರೆ ಕ್ರಿಸ್ತನೇ, ಸಾಯುವದು ಲಾಭವೇ.ಈ ಎರಡರ ನಡುವೆ ಸಿಕ್ಕಿಕೊಂಡಿದ್ದೇನೆ; ಇಲ್ಲಿಂದ ಹೋಗಿಬಿಟ್ಟು ಕ್ರಿಸ್ತನ ಜೊತೆಯಲ್ಲಿರಬೇಕೆಂಬದೇ ನನ್ನ ಅಭಿಲಾಷೆ, ಅದು ಉತ್ತಮೋತ್ತಮ;"ಎಂದು ಅಪೋಸ್ತಲನಾಥ ಪೌಲನು ಫಿಲಿಪ್ಪಿಯವರಿಗೆ ಬರೆಯುತ್ತಾನೆ. (ಫಿಲಿಪ್ಪಿಯವರಿಗೆ 1:21, 23)

"ಹೀಗಿರುವದರಿಂದ ನಾವು ಯಾವಾಗಲೂ ಧೈರ್ಯವುಳ್ಳವರಾಗಿದ್ದೇವೆ.
ಇದನ್ನು ಆಲೋಚಿಸಿ ನಾವು ಧೈರ್ಯವುಳ್ಳವರಾಗಿದ್ದು ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿರುವದೇ ಉತ್ತಮವೆಂದು ಎಣಿಸುತ್ತೇವೆ."(2 ಕೊರಿಂಥದವರಿಗೆ 5:6, 8)

 ಇಲ್ಲಿ ಇದನ್ನು ಓದುತ್ತಿರುವ ಬಹುತೇಕರು ಯಾವುದೋ ಒಂದು ಸಮಯದಲ್ಲಿ ನಿಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿರಬಹುದು. ಈಗ ಅವರೆಲ್ಲರೂ ಉತ್ತಮ ಜಾಗದಲ್ಲಿ ಇಂದು ಇದ್ದಾರೆ ಎಂದು ನಾವೆಲ್ಲರೂ ನಂಬಿ ಭರವಸೆ ಇಡುವವರಾಗಿದ್ದೇವೆ.ಕೆಲವೊಮ್ಮೆ ಭಯ ಮತ್ತು ಸಂದೇಶಗಳು ನಮ್ಮೊಳಗೆ ಚಿಗುರೊಡೆದು  "ನಾವು ಎಂದಾದರೂ ಈ ಸ್ಥಳವನ್ನು ಸೇರುತ್ತೇವಾ" ಎಂದು ಆಶ್ಚರ್ಯ ಪಡುತ್ತೇವೆ.

ಪ್ರಾನ್ಸ್ ನ ದೊರೆ ಲೂಯಿಸ್ XIV ತನ್ನ ಉಪಸ್ಥಿತಿಯಲ್ಲಿ "ಸಾವು" ಎಂಬ ಪದವನ್ನು ಯಾರೂ  ಸಹ ಎಚ್ಚರಿಸಬಾರದು ಎಂಬ ಕಾನೂನನ್ನು ಜಾರಿಗೆ ತಂದನು. ಅವನಿಗೆ ಸಾವಿನ ಭಯ ಅಷ್ಟಿತ್ತು. 

ಕರ್ತನಾದ ಯೇಸು ಈ ಸಮಸ್ಯೆಯನ್ನು ಉದ್ದೇಶಿಸಿ "ದೇವರನ್ನು ನಂಬಿರಿ ನನ್ನನ್ನೂ ನಂಬಿರಿ" ಎಂದನು.

ಇಲ್ಲಿ ಕರ್ತನು ನೀವು ದೇವರನ್ನು ನಂಬುತ್ತಿರಿ ಸರಿ ಆದರೆ ನೀವು ತನ್ನನ್ನೂ  ನಂಬಬೇಕು ಏಕೆಂದರೆ ತಂದೆ ಬಳಿಗೆ ಹೋಗಲು ನಾನೇ ಮಾರ್ಗವಾಗಿದ್ದೇನೆ ಎಂದು ಒತ್ತಿ ಹೇಳುತ್ತಿದ್ದಾನೆ.

ನಂತರ "ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ. ನನ್ನ ತಂದೆಯ ಮನೆಯಲ್ಲಿ ಬಹಳ ಬಿಡಾರಗಳು ಅವೆ; ಇಲ್ಲದಿದ್ದರೆ ನಿಮಗೆ ಹೇಳುತ್ತಿದ್ದೆನು; ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗುತ್ತೇನಲ್ಲಾ. ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ಧಮಾಡಿದ ಮೇಲೆ ತಿರಿಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಯಾಕಂದರೆ ನಾನಿರುವ ಸ್ಥಳದಲ್ಲಿ ನೀವು ಸಹ ಇರಬೇಕು." ಎಂದು ಹೇಳುವ ಮೂಲಕ ಯೇಸು ಅವರಿಗೆ ಶಾಶ್ವತವಾದ ಮನೆಯ ಆಶ್ವಾಸನೆಯನ್ನು ಕೊಟ್ಟನು (ಯೋಹಾನ 14:1-3)

ಗಮನಿಸಿ: ಕರ್ತನಾದ ಯೇಸುವು ತಾನು ಎಲ್ಲಿಗೆ ಹೋಗುತ್ತಿದ್ದಾನೆ ಮತ್ತು ನಮಗಾಗಿ ಏನನ್ನು ಸಿದ್ಧಪಡಿಸುತ್ತಿದ್ದಾನೆ ಎಂದು ಹೇಳಲು ಮನೆ, ಮಹಲು, ಸ್ಥಳದಂತಹ ಸಾಮಾನ್ಯ ಲೋಕ ಪದಗಳನ್ನು ಇಲ್ಲಿ ಬಳಸಿದ್ದಾನೆ. ಆತನು ತನ್ನ ಶಿಷ್ಯರಿಗೆ (ಅಂದರೆ ನನಗೂ ಮತ್ತು ನಿಮಗೂ) ನಾವು ಎಲ್ಲಿಗೆ ಹೋಗಬಹುದು, ಅಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ವಿವರಿಸಲು ಆತನು ಬಯಸಿದನು.

ಪರಲೋಕದ ವಾಗ್ದಾನವು ಒಂದು ಪ್ರಮುಖ ವಾಗ್ದಾನವಾಗಿದೆ. ಇಂದು ಮನೆಯಲ್ಲಿಯೇ ಆಗಿರಲಿ  ಅಥವಾ ಆಸ್ಪತ್ರೆಯಲ್ಲಿಯೇ  ಆಗಲಿ, ಹಾಸಿಗೆ ಹಿಡಿದು ಮಲಗಿ ಸಾವನ್ನು ಎದುರಿಸುತ್ತಿರುವವ ಬಹುಪಾಲು ಜನರಿಗೆ ಇದು ಸಾಂತ್ವನ ಮತ್ತು ಭರವಸೆಯನ್ನು ತಂದುಕೊಡುತ್ತದೆ. ಪರಲೋಕವು ನಿಜವಾದ ಸ್ಥಳವಾಗಿದೆ ಅದು ಶಾಶ್ವತ ನಿವಾಸವಾಗಿದೆ.
Prayer
ಕರ್ತನಾದ ಯೇಸುವೇ ನೀನು ದೇವಕುಮಾರನು ಮತ್ತು ದೇವರನ್ನು ಸೇರಲು ನಮಗಿರುವ ಏಕೈಕ ಮಾರ್ಗವೂ ಆಗಿದ್ದೀಯ. ನಾನು ನಿನ್ನನ್ನು ಕರ್ತನಾಗಿ ರಕ್ಷಕನಾಗಿ ಸ್ವೀಕರಿಸುತ್ತೇನೆ. ನನಗಾಗಿ ಶಿಲುಬೆಯ ಮೇಲೆ ನೀನು ಮಾಡಿದ ಅಮೂಲ್ಯ ತ್ಯಾಗಕ್ಕಾಗಿ ನಿನಗೆ ಸ್ತೋತ್ರ ಕರ್ತನೆ. ಕರ್ತನೇ ನಾನು ನಿನ್ನನ್ನು ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಲು ಬಯಸುತ್ತೇನೆ. ಈ ಕೃಪೆಯನ್ನು ನಿನ್ನಲ್ಲೇ ಬೇಡುತ್ತೇನೆ ಆಮೇನ್.


Join our WhatsApp Channel


Most Read
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - II
● ಬೇಸರ - ಮುಕ್ತ ಜೀವನವನ್ನು ನಡೆಸುವುದು
● ದಿನ 03 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೇವರ ಕೃಪೆಯನ್ನು ಸೇದುವುದು
● ಸ್ತ್ರೀ ಪುರುಷರು ಏಕೆ ಪತನಗೊಳ್ಳುವರು- 5
● ಶ್ರೇಷ್ಠತೆಯ ಬೆನ್ನಟ್ಟುವಿಕೆ.
● ಮನುಷ್ಯನ ಹೃದಯ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login